ಆಫೀಸ್‌ಗೆ ಹೋಗ್ಬೇಕು, ಥತ್‌…!


Team Udayavani, Oct 23, 2019, 4:10 AM IST

office-ger

ಮಕ್ಕಳು ಶಾಲೆಗೆ ಹೋಗಲ್ಲ ಅಂತ ಹಠ ಮಾಡುತ್ತವಲ್ಲ, ಹಾಗೇ ದೊಡ್ಡವರ ಮನಸ್ಸೂ ಆಫೀಸಿಗೆ ಹೊರಟು ನಿಂತಾಗ ಹಠ ಮಾಡುತ್ತೆ. ಅದೂ, ಒಂದೆರಡು ತಿಂಗಳು ಕೆಲಸದಿಂದ ಬ್ರೇಕ್‌ ತಗೊಂಡು, ಪುನಃ ಕೆಲಸಕ್ಕೆ ಹೋಗುವುದಿದೆಯಲ್ಲ, ಅದು ಬಹಳ ಕಷ್ಟ. ಆ ಕಷ್ಟ ಇತ್ತೀಚೆಗೆ ನನಗೆ ಅನುಭವಕ್ಕೆ ಬಂತು. ಮದುವೆಯ ನಂತರ ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಎರಡು ತಿಂಗಳ ನಂತರ ಬೇರೊಂದೆಡೆ ಕೆಲಸಕ್ಕೆ ಹೊರಟು ನಿಂತಾಗ, ಅಳುವೇ ಬಂದುಬಿಟ್ಟಿತ್ತು.

ನನ್ನ ಅಳು ಮೋರೆ ನೋಡಿದ ಯಜಮಾನರು, ಮಗುವನ್ನು ಶಾಲೆಗೆ ಕಳಿಸುವಂತೆ ನನ್ನನ್ನು ಆಫೀಸ್‌ಗೆ ರೆಡಿ ಮಾಡತೊಡಗಿದರು. ಗಂಡ-ಹೆಂಡತಿ ಇಬ್ಬರೇ ಮನೆಯಲ್ಲಿ ಇರೋದ್ರಿಂದ, 8 ಗಂಟೆಗೂ ಮುಂಚೆ ಏಳುವ ಪರಿಪಾಟ ಇರಲಿಲ್ಲ. ಹೀಗಾಗಿ, ಮೊದಲ ದಿನ ಕೆಲಸಕ್ಕೆ ಹೊರಡುವಾಗ ಬೆಳಗ್ಗೆ 6ಕ್ಕೆ ಏಳಬೇಕಿದ್ದರೂ, ನಿದ್ರಾದೇವಿ ಇನ್ನೂ ಕಣ್ರೆಪ್ಪೆಯ ಮೇಲೇ ಇದ್ದಳು. ಕಷ್ಟಪಟ್ಟು ಆರೂವರೆಗೆ ಹಾಸಿಗೆ ಬಿಟ್ಟಿದ್ದೆ.

ಅಷ್ಟೊತ್ತಿಗೆ ಯಜಮಾನರೂ ಎದ್ದು ಬಂದು, ಮನೆಕೆಲಸದಲ್ಲಿ ನೆರವಾಗತೊಡಗಿದರು. ಸ್ನಾನಕ್ಕೆ ಬಿಸಿ ನೀರು ಕಾಯಲಿಟ್ಟು, ಕಾಫಿ ಮಾಡಿ, ಕರ್ಚೀಫ್, ಛತ್ರಿ, ಮೊಬೈಲ್‌ ಚಾರ್ಜರ್‌, ಪುಸ್ತಕ, ಪೆನ್ನು, ನೀರಿನ ಬಾಟಲಿ ಮುಂತಾದ ಅಗತ್ಯ ವಸ್ತುಗಳನ್ನು ವ್ಯಾನಿಟಿ ಬ್ಯಾಗೊಳಗೆ ತುಂಬಿದರು. ಇಷ್ಟರ ಮಧ್ಯೆ ಅವರೂ ಸ್ನಾನ, ಪೂಜೆ, ತಿಂಡಿ ಅಂತೆಲ್ಲಾ ಕೆಲಸ ಮುಗಿಸಿ ಆಫೀಸ್‌ಗೆ ಹೊರಡಲು ಅಣಿಯಾಗಬೇಕಿತ್ತು.

ಅವರ ಅವಸ್ಥೆಯನ್ನು ಕಂಡು ನನಗೆ ನಗು ಮತ್ತು ಪ್ರೀತಿ ಎರಡು ಒಟ್ಟೊಟ್ಟಿಗೇ ಬಂದವು. ಮಗಳಿಗೆ ಬಟ್ಟೆ ಇಸ್ತ್ರಿ ಮಾಡಿ ಶಾಲೆಗೆ ಸಿದ್ಧಗೊಳಿಸುವ ಅಪ್ಪನಂತೆ, ಶಾಲೆಗೆ ಹೊರಡುವ ಮಗಳಿಗೆ ತಿಂಡಿ ತಿನ್ನಿಸುವ ಅಮ್ಮನಂತೆ, ತಂಗಿಗೆ ಬೈಕ್‌ನಲ್ಲಿ ಡ್ರಾಪ್‌ ಕೊಡಲು ಆತುರಪಡುವ ಅಣ್ಣನಂತೆ… ಹೀಗೆ ಹಲವು ಬಂಧನಗಳ ಭಾವ ಗಂಡನಲ್ಲಿ ಕಾಣಿಸುತ್ತಿತ್ತು. “ಥ್ಯಾಂಕ್ಯೂ, ಯಜಮಾನ್ರೇ’… ಅಂತ ಹೇಳಿ ಆಫೀಸ್‌ಗೆ ಹೊರಟವಳ ಕಣ್ಣಲ್ಲಿ ನೀರಿತ್ತು.

ಅದು ಆನಂದಭಾಷ್ಪವಾ ಅಥವಾ ಆಫೀಸಿಗೆ ಹೋಗಬೇಕಲ್ಲಾ ಅನ್ನುವ ಸಂಕಟವಾ ಗೊತ್ತಾಗಲಿಲ್ಲ. ಸಂಜೆ ಶಾಲೆಯ ಬೆಲ್‌ ಹೊಡೆಯುವುದನ್ನೇ ಕಾಯುವ ಸ್ಕೂಲು ಹುಡುಗಿಯಂತೆ, ಆಫೀಸಿನಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದೆ. ಅಂತೂ ಇಂತೂ ಕಚೇರಿ ಮುಗಿಸಿ ಮನೆಗೆ ಬಂದಾಗ, ಕಾಫಿ ಲೋಟ ಹಿಡಿದು ಕಾಯುತ್ತಿದ್ದ ಯಜಮಾನರನ್ನು ನೋಡಿ, ದಿನದ ಆಯಾಸವೆಲ್ಲಾ ದೂರವಾಯ್ತು.

* ಗೋಪಿಕಾ

ಟಾಪ್ ನ್ಯೂಸ್

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

POLICE-5

Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್‌ ವಶ

6

Manipal: ಅಪಾಯಕಾರಿ ರೀತಿಯಲ್ಲಿ ಬೈಕ್‌ ಚಾಲನೆ; ಪ್ರಕರಣ ದಾಖಲು

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.