ದೇವ್ರೆ, ಕೊಹ್ಲಿಯಂಥ ಹುಡ್ಗನ್ನ ಕೊಡಪ್ಪಾ!


Team Udayavani, Dec 13, 2017, 1:04 PM IST

13-31.jpg

ಸಾಮಾನ್ಯವಾಗಿ ಬದುಕಿನಲ್ಲಿ ಸಾಧನೆಗಳನ್ನು ಮಾಡಲು, ಅತಿ ಮುಖ್ಯವಾದ ಗುರಿಯನ್ನು ಈಡೇರಿಸಿಕೊಳ್ಳಲು ಜನರು ರೋಲ್‌ಮಾಡೆಲ್‌ಗ‌ಳನ್ನು ಹೊಂದಿರುತ್ತಾರೆ. ಆದರೆ, ಈಗೀಗ ಹೆಣ್ಮಕ್ಕಳು ಮದುವೆಯ ವಿಷಯದಲ್ಲೂ ರೋಲ್‌ ಮಾಡೆಲ್‌ ಅನ್ನು ಆರಿಸಿಟ್ಟುಕೊಳ್ಳುತ್ತಿದ್ದಾರೆ! ಹೆಣ್ಮಕ್ಕಳು ತಾವು ಮದುವೆಯಾಗಲಿರೋ ಹುಡುಗನ ಕುರಿತು ಕನಸು ಕಾಣುವುದು ಸಹಜವೇ. ಹುಡುಗ ತಮ್ಮ ರೋಲ್‌ ಮಾಡೆಲ್‌ ಥರ ಇರಬೇಕು, ಅವನನ್ನು ಗೆಳತಿಯರಿಗೆ ಪರಿಚಯಿಸುವಾಗ ಅವರು ಹೊಟ್ಟೆಯುರಿ ಪಟ್ಟುಕೊಂಡು ನಾಚಬೇಕು, ಹೀಗೇ ಏನೇನೋ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಈಗ ಹೆಣ್ಮಕ್ಕಳ ಕಣ್ಣಲ್ಲಿ ಚಾಲ್ತಿಯಲ್ಲಿರುವ ರೋಲ್‌ಮಾಡೆಲ್‌, ಕ್ರಿಕೆಟಿಗ ವಿರಾಟ್‌ ಕೊಹ್ಲಿ! ತಾವು ಮದುವೆಯಾಗಲಿರೋ ಹುಡುಗ ಕೊಹ್ಲಿ ಥರ ಇರಬೇಕು ಅಂತ ಹೆಣ್ಮಕ್ಕಳು ಯಾಕೆ ಆಶಿಸುತ್ತಾರೆ ಗೊತ್ತಾ?

1. ಕೊಹ್ಲಿಗೆ ಪಾಪು ಎಂದರೆ ತುಂಬಾ ಇಷ್ಟ!
ಹೆಣ್ಮಕ್ಕಳಿಗೆ ಮಕ್ಕಳನ್ನು ಕಂಡರೆ ತುಂಬಾ ಇಷ್ಟ. ಇದೇನು ಹೊಸ ಸಂಗತಿಯಲ್ಲ. ಎಲ್ಲರಿಗೂ ಗೊತ್ತಿರುವುದೇ. ಅದಕ್ಕೇ ಅವರಿಗೆ ಮಕ್ಕಳನ್ನು ಇಷ್ಟಪಡುವ ಗಂಡಸರನ್ನು ಕಂಡರೆ ವಿಶೇಷ ಪ್ರೀತಿ ಮತ್ತು ಮಮಕಾರ. ಅದಕ್ಕಿಂತ ಹೆಚ್ಚಾಗಿ ಸಾಮಾನ್ಯವಾಗಿ ಗಂಡಸು ಎಂದರೆ ಗಡಸು ದನಿಯ, ಒರಟು ಗಡ್ಡದ, ದಾಡಸಿ ವ್ಯಕ್ತಿತ್ವದ, ಕಲ್ಲುಹೃದಯದ ಮನುಷ್ಯ ಎಂಬ ಇಮೇಜು ಪ್ರಾಪ್ತವಾಗಿಬಿಟ್ಟಿದೆ. ಹಾಗಿರುವಾಗ ಅಂಥ ಪುರುಷನ ಒಳಗೂ ಸುಕೋಮಲ ಮನಸ್ಸಿದೆ ಎನ್ನುವುದನ್ನು ಆತ ಮಕ್ಕಳನ್ನು ಇಷ್ಟಪಡುವ ಸಂಗತಿ ತೋರಿಸುತ್ತದೆ.

2. ಮಹಿಳೆಯರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋದು ಗೊತ್ತು…
ಮಹಿಳೆಯರನ್ನು ಕಾಡಿಸುವ, ಪೀಡಿಸುವ, ಅನೇಕ ವಿಧಗಳಲ್ಲಿ ತಮ್ಮ ಸ್ವಾರ್ಥಕ್ಕೆ ಹೇಗೆ ಬಳಸಿಕೊಳ್ಳಬೇಕೆಂದು ಯೋಚಿಸುವ ಪುರುಷ ಪ್ರಪಂಚದಲ್ಲಿ, ಹೆಂಗಸರಿಗೆ ಗೌರವ ನೀಡುವ ಗಂಡಸರು ಎದ್ದು ಕಾಣುತ್ತಾರೆ. ಹುಡುಗಿಯರು ಅಂಥ ಪುರುಷರನ್ನು ಇಷ್ಟಪಡುವುದು ಸಹಜ. ಅನುಷ್ಕಾ ಶರ್ಮಾ ಸುತ್ತ ಗಾಸಿಪ್‌ ಎದ್ದಾಗ, ಆತ ಅದನ್ನು ನಿರ್ವಹಿಸಿದ ರೀತಿ ಇಲ್ಲಿ ನಿದರ್ಶನ.

3. ಪ್ರೀತಿ ಮಾಡಿದರೆ, ಜಗಕೆ ಹೆದರಬಾರದು…
ಕೋಟ್ಯಂತರ ಅಭಿಮಾನಿ ವೃಂದವನ್ನು ಹೊಂದಿದ ಖ್ಯಾತನಾಮರು ಅಭಿಮಾನಿಗಳನ್ನು ಓಲೈಸುವ, ತೃಪ್ತಿ ಪಡಿಸುವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಅಂದರೆ ಅಭಿಮಾನಿಗಳಿಗೆ ಇಷ್ಟವಾಗುವ ಹಾಗೆ ನಡೆದುಕೊಳ್ಳಬೇಕಾದ ಒತ್ತಡ ಇರುತ್ತದೆ. ಆದರೆ, ವಿರಾಟ್‌ ಹಾಗೆ ಮಾಡಲಿಲ್ಲ. ವಿರಾಟ್‌, ಅಂಕಣದಲ್ಲಿ ಫಾರ್ಮ್ ಕಳೆದುಕೊಂಡಾಗ ಆತನ ಅಭಿಮಾನಿಗಳು ಅದಕ್ಕೆಲ್ಲಾ ಗರ್ಲ್ಫ್ರೆಂಡ್‌ ಅನುಷ್ಕಾ ಶರ್ಮಾ ಕಾರಣ ಎಂದು ರಾದ್ಧಾಂತ ಎಬ್ಬಿಸಿದ್ದರು. ಆ ಸಮಯದಲ್ಲಿ ತನ್ನ ಅಭಿಮಾನಿ ವೃಂದವನ್ನು ಎದುರು ಹಾಕಿಕೊಂಡು ಗೆಳತಿ ಅನುಷ್ಕಾಳ ರಕ್ಷಣೆಗೆ ಧಾವಿಸಿದ್ದ. ತಮಗಾಗಿ ಜಗತ್ತಿನ ವಿರೋಧವನ್ನೇ ಕಟ್ಟಿಕೊಳ್ಳಲು ಸಿದ್ಧವಿರುವ ಪುರುಷರನ್ನು ಯಾವ ಹೆಣ್ಣು ತಾನೇ ಇಷ್ಟ ಪಡಲಾರಳು ಹೇಳಿ!?

4. ದುಃಸ್ಥಿತಿಯಲ್ಲೂ ಧೈರ್ಯಗುಂದದ ಧೀರ
ಮೇಲಿಂದ ಮೇಲೆ, ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಫ‌ಲಿತಾಂಶ ನೀಡುತ್ತಿರುವ ವಿರಾಟ್‌ ಮೇಲೆ ಅಭಿಮಾನಿಗಳಿಗೆ ಅಪಾರ ನಂಬಿಕೆ. ತಂಡದಲ್ಲಿ ಆತ ಇದ್ದರೆ ಅಂದಿನ ಪಂದ್ಯವನ್ನು ನಿಶ್ಚಿಂತೆಯಿಂದ, ನಿರಾತಂಕವಾಗಿ ಗೆಲುವು ನಮ್ಮದೇ ಎನ್ನುವ ಭರವಸೆಯೊಂದಿಗೆ ನೋಡುತ್ತಾರೆ ನಮ್ಮಲ್ಲನೇಕರು. ಏಕೆಂದರೆ, ಎಂಥ ದುಃಸ್ಥಿತಿ ಒದಗಿದರೂ ಸರಿಯೇ ತಂಡವನ್ನು ಅಪಾಯದಿಂದ ಪಾರು ಮಾಡುವ ಛಾತಿ ವಿರಾಟ್‌ಗಿದೆ ಎಂಬ ನಂಬಿಕೆಯೇ ಇದಕ್ಕೆ ಕಾರಣ. ಕೊಹ್ಲಿಯಂಥ ಹುಡುಗ ಬದುಕಿನಲ್ಲೂ ಅಂಥದ್ದೇ ಗಟ್ಟಿ ಇನ್ನಿಂಗ್ಸ್‌ ಕಟ್ಟಿಕೊಡಬಲ್ಲ ಎಂಬ ಭರವಸೆ ಹೆಣ್ಮಕ್ಕಳಿಗೆ.

5. ಫ್ಯಾಮಿಲಿ ನಂಟು ಬಿಡೋಲ್ಲ…
ಹೆಸರು- ಖ್ಯಾತಿ, ಹಣ ಸಿಗುತ್ತಿದ್ದಂತೆ ಮನಸ್ಸು ಬದಲಾಗಿಬಿಡುತ್ತದೆ. ಮನಸ್ಸು ಮಂಗನಾಗಿಬಿಡುತ್ತದೆ. ಖ್ಯಾತಿಯ ಮದ ಹತ್ತಿರದವರು ದೂರವಾಗುವಂತೆ ಮಾಡಿಬಿಡುತ್ತದೆ. ಆದರೆ, ವಿರಾಟ್‌ ಆ ಮದವನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಸರಳ ಸಂಗತಿಗಳೆಂದರೆ, ಈಗಲೂ ಆತನ ಮನ ಮಿಡಿಯುತ್ತದೆ. ಅಮ್ಮ ಎಂದರಂತೂ ಪಂಚಪ್ರಾಣ. ಅಮ್ಮನೊಂದಿಗೆ, ಗೆಳೆಯರೊಂದಿಗೆ, ಅಷ್ಟೇ ಏಕೆ, ತನ್ನ ಮುದ್ದಿನ ನಾಯಿಯೊಂದಿಗೆ ಸೆಲ್ಫಿ ತೆಗೆದು ಆ ಸಂಭ್ರಮವನ್ನು ಜಗತ್ತಿಗೇ ಹಂಚುತ್ತಾನೆ ಆತ.

6. ಸೆಲ್ಫಿಯೇ ಸುಖದ ಗುಟ್ಟು
ಇದು ಸೆಲ್ಫಿ ಜನರೇಷನ್‌. ವಿರಾಟ್‌ ಕೂಡಾ ಇದಕ್ಕೆ ಹೊರತಾಗಿಲ್ಲ. ಮ್ಯಾಚ್‌ ಮುಗಿದ ನಂತರ ಡ್ರೆಸ್ಸಿಂಗ್‌ ರೂಮಿನಲ್ಲಿ, ಸಹ ಆಟಗಾರರೊಂದಿಗೆ ಖುಷಿಯಿಂದಿರುವಾಗ… ಹೀಗೆ ಸೆಲ್ಫಿಗಳನ್ನು ತೆಗೆದು ಅಪ್‌ಲೋಡ್‌ ಮಾಡುವ ಕೊಹ್ಲಿಯನ್ನು ಕಂಡರೆ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಎಲ್ಲಾ ಫೋಟೋಗಳಲ್ಲೂ ಕೊಹ್ಲಿ ಚೆನ್ನಾಗಿಯೇ ಕಾಣುತ್ತಾರೆ. ಇದು ಸೆಲ್ಫಿ ತೆಗೆಯುವುದರಲ್ಲಿ ಆತನ ನೈಪುಣ್ಯತೆಯನ್ನು ತೋರುತ್ತದೆ. ಪತಿರಾಯರು ಸೆಲ್ಫಿ ಎಕ್ಸ್‌ಪರ್ಟುಗಳಾದರೆ, ಪತ್ನಿಯರಿಗೆ ಲಾಭ. ಸೆಲ್ಫಿಗಳಲ್ಲಿ ಚೆಂದ ಕಾಣಲು ಯಾವ ಹೆಣ್ಣು ತಾನೇ ಇಷ್ಟಪಡೋದಿಲ್ಲ! ಛಾಯಾಗ್ರಹಣದ ಅರಿವಿರುವ ಗಂಡಸರನ್ನು ಕಂಡರೆ ಹೆಂಗಸರಿಗೆ ವಿಶೇಷ ಪ್ರೀತಿ ಎನ್ನುವುದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ.

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.