ಆರೋಗ್ಯವರ್ಧಕ ದಾಳಿಂಬೆ
Team Udayavani, Sep 25, 2019, 5:00 AM IST
ಕವಿಗಳು, ಸುಂದರ ದಂತಪಂಕ್ತಿಗಳನ್ನು ದಾಳಿಂಬೆ ಕಾಳಿಗೆ ಹೋಲಿಸಿ, ಕಾವ್ಯದ ಸೊಗಸನ್ನು ಮತ್ತಷ್ಟು ಹೆಚ್ಚಿಸುತ್ತಾರೆ. ದಾಳಿಂಬೆ ಕಾಳು ನಮ್ಮ ಆರೋಗ್ಯವನ್ನು, ಸೌಂದರ್ಯವನ್ನು ಕೂಡಾ ಹೆಚ್ಚಿಸುತ್ತದೆ. ದಾಳಿಂಬೆಯ ಕಾಳುಗಳು ಮಾತ್ರವಲ್ಲ, ಹಣ್ಣಿನ ಸಿಪ್ಪೆ ಮತ್ತು ಎಲೆಯೂ ಆರೋಗ್ಯಕರ ಮತ್ತು ಸೌಂದರ್ಯವರ್ಧಕ ಗುಣಗಳನ್ನು ಹೊಂದಿದೆ.
– ದಾಳಿಂಬೆ ಹಣ್ಣಿನ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
-ಈ ಹಣ್ಣಿನ ರಸದಲ್ಲಿ ಸಿಟ್ರಿಕ್ ಮತ್ತು ಮಾಲಿಕ್ ಆಮ್ಲ ಅಧಿಕವಾಗಿವೆ.
-ದಾಳಿಂಬೆ ಎಲೆಗಳನ್ನು ನುಣ್ಣಗೆ ಅರೆದು ಸುಟ್ಟ ಗಾಯಗಳಿಗೆ ಲೇಪಿಸುವುದರಿಂದ ಉರಿ ಕಡಿಮೆಯಾಗುತ್ತದೆ.
– ದಾಳಿಂಬೆ ಹಣ್ಣಿನ ರಸ ಸೇವಿಸುವುದರಿಂದ ಹೃದಯ ಹಾಗೂ ಮೂತ್ರಪಿಂಡಗಳ ಕೆಲಸ ಸರಾಗವಾಗುತ್ತದೆ.
-ದಾಳಿಂಬೆಯ ಚಿಗುರಿನಿಂದ ಹಲ್ಲುಜ್ಜಿದರೆ ಅಥವಾ ಬಾಯಲ್ಲಿ ಹಾಕಿಕೊಂಡು ಜಗಿದರೆ ಹಲ್ಲುನೋವು ಮತ್ತು ಒಸಡಿನ ರಕ್ತಸ್ರಾವ ನಿಯಂತ್ರಣಗೊಳ್ಳುವುದು.
-ದಾಳಿಂಬೆ ಕಾಳುಗಳನ್ನು ನುಣ್ಣಗೆ ಅರೆದು, ಉಗುರು ಬೆಚ್ಚಗಿನ ನೀರಿನಲ್ಲಿ ಕದಡಿ ಕುಡಿಯುವುದರಿಂದ ಆಮಶಂಕೆ, ಅತಿಸಾರ ಭೇದಿ ನಿಲ್ಲುತ್ತದೆ.
-ಒಂದು ಚಮಚದಷ್ಟು ದಾಳಿಂಬೆ ರಸಕ್ಕೆ ಅಷ್ಟೇ ಪ್ರಮಾಣದ ಜೇನುತುಪ್ಪ ಬೆರೆಸಿ ಪ್ರತಿನಿತ್ಯವೂ ಸೇವಿಸುತ್ತಿದ್ದರೆ ಕಣ್ಣಿನ ನರಗಳು ಶಕ್ತಿ ಪಡೆಯುತ್ತವೆ.
-ಎರಡು ಚಮಚದಷ್ಟು ದಾಳಿಂಬೆ ರಸಕ್ಕೆ ಒಂದು ಚಮಚದಷ್ಟು ಜೇನುತುಪ್ಪ ಬೆರೆಸಿ ಕುಡಿದರೆ ತಲೆನೋವು ಕಡಿಮೆಯಾಗುವುದು.
-ದಾಳಿಂಬೆ ಕಾಳುಗಳನ್ನು ತೆಗೆದ ನಂತರ ಉಳಿಯುವ ದಿಂಡನ್ನು ಬೇಯಿಸಿ ಕಷಾಯ ತಯಾರಿಸಿ, ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿದರೆ ಬಾಯಿ ಹುಣ್ಣು-ಗಂಟಲಿನ ಕಿರಿಕಿರಿ ಹೋಗುತ್ತದೆ.
-ದಾಳಿಂಬೆ ಹಣ್ಣಿನ ದಿಂಡನ್ನು ಬೇಯಿಸಿ, ಮೆಂತ್ಯೆಯ ಕಷಾಯದೊಂದಿಗೆ ಬೆರಸಿ 2 ಚಮಚದಷ್ಟು ಜೇನುತುಪ್ಪ ಬೆರೆಸಿ ಕುಡಿದರೆ ಆಮಶಂಕೆ ಗುಣವಾಗುತ್ತದೆ.
-ಹರ್ಷಿತಾ ಹರೀಶ್ ಕುಲಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.