ಅಜ್ಜಿಯ ಸಂಸಾರದ ಸೀಕ್ರೆಟ್
Team Udayavani, Oct 19, 2017, 11:42 AM IST
ನಿಜವಾದ ಪ್ರೀತಿಗೆ ವಯಸ್ಸಿನ ಲೆಕ್ಕಾಚಾರ ಇರುವುದಿಲ್ಲ. ಮುಪ್ಪಿನ ಅಡ್ಡಿಯಂತೂ ಇಲ್ಲವೇ ಇಲ್ಲ. ಎಷ್ಟೇ ವರುಷ ಜಾರಿದರೂ ಪ್ರೀತಿ ಕಮ್ಮಿ ಆಗುವುದಿಲ್ಲ. ಇಂಥ ಪ್ರೀತಿ ಈಗ ಯುವ ಜೋಡಿಗಳಲ್ಲಿ ಕಾಣಸಿಗುತ್ತಿರುವುದು ಕಡಿಮೆ. ಅದೇ ವೃದ್ಧಾಪ್ಯದಂಚಿನಲ್ಲಿರುವ ಸಂಗಾತಿಗಳನ್ನು ನೋಡಿ. ಮುಪ್ಪಿನಲ್ಲೂ ಅವರ ಪ್ರೀತಿ ಯಾರಿಗೂ ಹೊಟ್ಟೆಕಿಚ್ಚು ತರಿಸುತ್ತದೆ.
ಕಣ್ಣೆದುರೆ ಇದ್ದ ಕನ್ನಡಕದ ಹುಡುಕಾಟ, ಅಂಗಿಗೆ ಗುಂಡಿ ಹಾಕಲು ಸೂಜಿಗೆ ದಾರ ಪೋಣಿಸುವಾಗ ಪಟ್ಟ ಫಜೀತಿ, ಸಕ್ಕರೆ ಕಾಯಿಲೆಯ ಅಜ್ಜಿ ಸ್ವೀಟ್ ತಿಂದು ಮೂತಿ ಒರೆಸಿ ಕೊಳ್ಳದೆ ತಾತನ ಕೈಗೆ ಸಿಕ್ಕಿಹಾಕಿಕೊಳ್ಳುವುದು. ನಿನ್ನೆ ಮೊನ್ನೆ ಉಳಿದಸಾಂಬಾರಿಗೆ ಹೊಸ ಟಚ್ ಕೊಟ್ಟು ತಾತನಿಗೆ ತಿನ್ನಿಸಿ ಯಮಾರಿಸುವ ಸೋಮಾರಿ ಅಜ್ಜಿ…
ಹೀಗೆ ವಾರ ಪೂರ್ತಿ ನಡೆದ ತಮ್ಮ ಸಂಗತಿಗಳನ್ನೆ ಲ್ಲ ವೀಕೆಂಡ್‌ನಲ್ಲಿ ಬರುವ ಮಕ್ಕಳು- ಮೊಮ್ಮಕ್ಕಳ ಮುಂದೆ ಹೇಳಿ ಪರಸ್ಪರ ಕಾಲೆಳೆದು ಮಜಾ ಮಾಡುತ್ತಾರೆ ಹಿರಿಯ ಜೀವಗಳು. ಬೇಕು ಬೇಕಂತಲೇ ಕ್ಯಾತೆ ತೆಗೆದು ಒಬ್ಬರಿಗೊಬ್ಬರು ರೇಗಿಸಿಕೊಂಡು ಖುಷಿಪಡುತ್ತಾರೆ.
ವಯಸ್ಸಾದ ಮೇಲೆ ಬದುಕೇ ಮುಗಿದು ಹೋಯ್ತು ಎಂದುಕೊಳ್ಳುವ ಬದಲು, ಅಲ್ಲಿಂದಲೇ ಜೀವನದ ಆರಂಭ ಎಂದು ತಿಳಿದುಕೊಂಡ ರೆ, ಇಂಥ ನೂರಾರು ಸಣ್ಣಪುಟ್ಟ ಖುಷಿಗಳು ಈ ಮಸ್ಸಂಜೆ ನಿಜ ಕ್ಕೂ ತಾಜಾ ಎನಿಸಿಕೊಳ್ಳುತ್ತದೆ. ಸಂಧ್ಯಾಕಾಲದ ಸುಖದಾಂಪತ್ಯಕ್ಕೆ ಇಲ್ಲೊಂದಿಷ್ಟು ಸೂತ್ರಗಳಿವೆ.
– ಇಬ್ಬರೂ ಜೋಡಿಯಾಗಿ ಆಗಾಗ್ಗೆ ಟ್ರಿಪ್ ಹೋಗುತ್ತಿರಿ. ಕಷ್ಟವಾದಲ್ಲಿ ಹತ್ತಿರದಲ್ಲಿರುವ ದೇವಾಲಯ, ಪಾರ್ಕ್, ಸಿನಿಮಾ, ಶಾಪಿಂಗ್- ಹೀಗೆ ಹಿತವೆನಿಸುವ ಸ್ಥಳಕ್ಕೆ ಒಟ್ಟಿಗೆ ಹೋಗಿ ಬನ್ನಿ.
– ಅಕ್ಕಪಕ್ಕದವರೊಂದಿಗೆ ಅಥವಾ ಮನೆಯವರೊಂದಿಗಿನ ಸಂಭಾಷಣೆಯಲ್ಲಿ ನಿಮ್ಮ ಸಂಗಾತಿಯನ್ನು ಕುರಿತು ರೇಗಿಸುವಂಥ ಮಾತುಗಳಿದ್ದರೆ, ಇಬ್ಬರ ಮಧ್ಯೆ ಇರುವ ಪ್ರೀತಿ ಹೆಚ್ಚುತ್ತದೆ.
– ಯವ್ವನದಲ್ಲಿ ಇಬ್ಬರೂ ಕಳೆದಿದ್ದ ಸುಂದರ ಕ್ಷಣಗಳನ್ನು ಆಗಾಗ್ಗೆ ಮೆಲುಕು ಹಾಕುತ್ತಿರಿ. ಅದರ ಮರುಸೃಷ್ಟಿಯನ್ನು ಮಾಡಿ, ಒಬ್ಬರಿಗೊಬ್ಬರು ಕಾಲೆಳಿಯಿರಿ.
– ಮಕ್ಕಳು ಮೊಮ್ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ.
– ಸಮಾಜ ಸೇವೆಯಲ್ಲಿ ಇಬ್ಬರೂ ತೊಡಗಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ದೊರಕಿದಂತಾಗುತ್ತದೆ.
– ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ವಯಸ್ಸಾಗಿಲ್ಲ ಎಂಬಂತೆ ಎಲ್ಲದರಲ್ಲೂ ಚುರುಕಿನಿಂದ ಕಾರ್ಯನಿರ್ವಹಿಸಿ. ಇದರಿಂದ ಯುವಕರಿಗೆ ಎನರ್ಜಿ ತುಂಬಿದಂತಾಗುತ್ತದೆ.
– ಮದುವೆ, ನಿಶ್ಚಿತಾರ್ಥ ಮುಂತಾದ ಶುಭಸಮಾರಂಭಗಳಲ್ಲಿ ಹಾಡುವ ಅಥವಾ ನೃತ್ಯ ಮಾಡುವ ಸಂದರ್ಭವಿದ್ದಲ್ಲಿ, ನಾಚಿಕೊಳ್ಳದೇ ಧೈರ್ಯವಾಗಿ ವೇದಿಕೆ ಬಳಸಿಕೊಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ