ಅಜ್ಜಿಯರ ಪಾಠ ಶಾಲೆ
Team Udayavani, Jan 22, 2020, 5:39 AM IST
ಶಾಲೆ ಎಂದಕೂಡಲೇ ಮೊದಲು ನೆನಪಾಗೋದು, ಮಕ್ಕಳು. ಜುಟ್ಟು ಕಟ್ಟಿದ ಹುಡುಗಿಯರು, ಯೂನಿಫಾರ್ಮ್ ಚಡ್ಡಿ ತೊಟ್ಟ ಸಣ್ಣ ಹುಡುಗರು. ಆದರೆ, ಅಜ್ಜಿಯರೇ ವಿದ್ಯಾರ್ಥಿಗಳಾಗಿರುವ ಶಾಲೆಯ ಬಗ್ಗೆ ಗೊತ್ತಾ? ಅದು ಇರುವುದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪಂಗಾನ್ ಗ್ರಾಮದಲ್ಲಿ. ಅದರ ಹೆಸರು, “ಆಜಿಬೈಚಿ ಶಾಲೆ’, ಅಂದರೆ ಅಜ್ಜಿಯರ ಶಾಲೆ. ಈ ಶಾಲೆಗೆ ದಾಖಲಾಗಲು ಕನಿಷ್ಠ 60 ವರ್ಷ ಆಗಿರಲೇಬೇಕು. ವೃದ್ಧೆಯರಿಗಾಗಿ ಇರುವ ದೇಶದ ಏಕೈಕ ಶಾಲೆ ಇದು.
ವಯಸ್ಸಾದವರಿಗೆ ಕಲಿಯಲು ಆಸಕ್ತಿ ಎಲ್ಲಿರುತ್ತೆ ಅಂತ ಕೇಳಬೇಡಿ. ಈ ಶಾಲೆಯಲ್ಲಿ 60-90ರ ವಯೋಮಾನದ 40 ಅಜ್ಜಿಯರು ಕಲಿಯುತ್ತಿದ್ದಾರೆ. ಗುಲಾಬಿ ಬಣ್ಣದ ಸೀರೆ ತೊಟ್ಟು, ಸ್ಲೇಟು-ಬಳಪ-ಪುಸ್ತಕ ಇರುವ ಬ್ಯಾಗ್ ಹಿಡಿದು, ದಿನವೂ ತಪ್ಪದೆ ಶಾಲೆಗೆ ಬರುವ ಇವರ ಉತ್ಸಾಹ, ಮಕ್ಕಳನ್ನೇ ನಾಚಿಸುತ್ತದೆ. ಪ್ರತಿದಿನ ಮಧ್ಯಾಹ್ನ ಎರಡು ಗಂಟೆಗಳ ಕಾಲ ನಡೆಯುವ ಈ ತರಗತಿಯಲ್ಲಿ ಓದು, ಬರಹ, ಸರಳ ಲೆಕ್ಕಾಚಾರಗಳ ಜೊತೆಗೆ ಚಿತ್ರಕಲೆ, ಕ್ರಾಫ್ಟ್, ಗಾರ್ಡನಿಂಗ್ ಕೂಡಾ ಹೇಳಿಕೊಡಲಾಗುತ್ತದೆ. ಇತರೆ ಶಾಲೆಗಳಂತೆ, ಇಲ್ಲಿಯೂ ತರಗತಿ ಶುರುವಾಗುವ ಮೊದಲು ಪ್ರಾರ್ಥನೆ ಗೀತೆ ನಡೆಯುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಮೌಲ್ಯಮಾಪನಕ್ಕಾಗಿ ತಿಂಗಳಿಗೊಮ್ಮೆ ಕಿರು ಪರೀಕ್ಷೆ, ವಾರ್ಷಿಕ ಪರೀಕ್ಷೆ ಕೂಡಾ ನಡೆಸಲಾಗುತ್ತದೆ. ಮನೆಯ, ಹೊಲದ ಕೆಲಸ ಮುಗಿಸಿ ವೃದ್ಧೆಯರು ಶಾಲೆಗೆ ಬರುತ್ತಾರೆ.
“ನಾವು ಸಣ್ಣವರಿದ್ದಾಗ ಶಾಲೆಗೆ ಕಳಿಸಲಿಲ್ಲ. ಮದುವೆ, ಸಂಸಾರ ಅಂತ ಇಡೀ ಜೀವನವೇ ಕಳೆದು ಹೋಯ್ತು. ಈಗ ಮೊಮ್ಮಕ್ಕಳ ಕಾಲದಲ್ಲಿ ನಾವು ಓದುವಂತೆ ಆಗಿರುವುದು ಬಹಳ ಖುಷಿ ಕೊಡುತ್ತಿದೆ. ಈಗ ನಾವು ಹೆಬ್ಬೆಟ್ಟಿನ ಬದಲು ಸಹಿ ಹಾಕುತ್ತೇವೆ. ಸಣ್ಣಪುಟ್ಟ ಲೆಕ್ಕಾಚಾರಗಳು ಅರ್ಥವಾಗುತ್ತೆ. ಮಾಡುವುದು, ಪತ್ರಿಕೆ ಓದುವುದನ್ನು ಕಲಿತಿದ್ದೇವೆ. ಎಲ್ಲರೂ ನಮ್ಮದೇ ವಯಸ್ಸಿನವರಾದ್ದರಿಂದ ಮುಜುಗರ ಅನ್ನಿಸುವುದಿಲ್ಲ’- ಖುಷಿಯಿಂದ ಹೀಗನ್ನುತ್ತಾರೆ ಬೊಚ್ಚು ಬಾಯಿಯ ಅಜ್ಜಿಯರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Vijay Hazare Trophy: ಮಯಾಂಕ್ ಅಗರ್ವಾಲ್ ಶತಕದಾಟ; ಪಂಜಾಬ್ ಕೈನಿಂದ ಜಯ ಕಸಿದ ಕರ್ನಾಟಕ
Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.