ತೂಗು ತಂತಿಯಲಿ ಕುಳಿತು…

ಹಸಿಬಟ್ಟೆ ಹಾಡಿದ ಮೇಘಮಲ್ಹಾರ

Team Udayavani, Jun 26, 2019, 5:00 AM IST

7

ಎರಡು ದಿನ ಬಿಸಿಲು ಬರದೇ, ಬಟ್ಟೆ ಒಣಗದೇ ಇದ್ದರೆ ಮನೆಯ ಪರಿಸ್ಥಿತಿ ಹೇಗಾಗುತ್ತದೆ ನೋಡಿ. ಮನೆ ತುಂಬಾ ಒದ್ದೆ ಬಟ್ಟೆ. ಸರಿಯಾಗಿ ಒಣಗದ ಬಟ್ಟೆಯಿಂದ ಬರುವ ಒಂಥರಾ ವಾಸನೆ, ಎಲ್ಲೆಂದರಲ್ಲಿ ಹಗ್ಗ ಕಟ್ಟಿ, ನೇತು ಹಾಕಿ ಬಟ್ಟೆ ಒಣಗಿಸುವ ಸಾಹಸದಲ್ಲಿ ಆಗಾಗ್ಗೆ ತಲೆಗೆ ತಾಗಿದಾಗ ಆಗುವ ಕಿರಿಕಿರಿ. ಅಬ್ಟಾ, ಅದರ ಅವಸ್ಥೆಯೇ!

ಅಂತೂ ಇಂತು ವರುಣನ ಕೃಪೆ ಭೂಮಿಯ ಮೇಲಾಗಿದೆ. ತುಸು ನಿಧಾನವಾದರೂ ಮಳೆರಾಯ ತನ್ನ ಇರುವಿಕೆಯನ್ನು ತೋರಿಸಲು ಪ್ರಾರಂಭಿಸಿದ್ದಾನೆ. ಬಿಸಿಲ ತಾಪ ತಾಳಲಾರದೆ, “ಮಳೆ ಯಾವಾಗ ಬರುತ್ತಪ್ಪಾ…’ ಎಂದು ಕಾಯುತ್ತಿದ್ದವರಿಗೆ ಈಗ ಮಳೆಯ ಮೇಲೆ ಕಿರಿಕಿರಿ ಶುರುವಾಗಿದೆ. ಮಳೆಯಿಂದ ಒಬ್ಬೊಬ್ಬರಿಗೂ ಒಂದೊಂದು ತೆರನಾದ ತೊಂದರೆ. ಕೃಷಿಕರಿಗೆ, ತಮ್ಮ ಬೆಳೆಗಳಿಗೆ ಮಳೆಯಿಂದ ತೊಂದರೆ ಆಗದಿರಲಿ ಎನ್ನುವ ಯೋಚನೆ, ಕೆಲಸಕ್ಕೆ ಹೋಗುವವರಿಗೆ ಬೆಳ್ಳಂಬೆಳಗ್ಗೆ ಮಳೆ ಸುರಿದರೆ ಮನೆಯಿಂದ ಹೊರಡಲು ಸೋಮಾರಿತನ. ವ್ಯಾಪಾರಿಗಳಿಗೆ, ಮಳೆ ಜೋರಾದರೆ ಜನ ಪೇಟೆಗೆ ಬರೋದಿಲ್ಲ, ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿ ಆದಾಯಕ್ಕೆ ಪೆಟ್ಟು ಬೀಳುತ್ತದೆ ಎಂಬ ಚಿಂತೆ. ರಜಾಮಜಾದ ಮೂಡ್‌ನಿಂದ ಶಾಲೆಗೆ ಹೆಜ್ಜೆ ಹಾಕಿದ ಮಕ್ಕಳಿಗೆ ಮಾತ್ರ ಮಳೆರಾಯ ಅಂದರೆ ಅಚ್ಚುಮೆಚ್ಚು. ಒಂದೆಡೆ ಮಳೆಯ ನೀರಲ್ಲಿ ಆಡೋ ಮಜಾ, ಮತ್ತೂಂದೆಡೆ ಕಳೆದಬಾರಿ ಮಳೆಯಿಂದಾಗಿ ಸಾಲುಸಾಲು ರಜೆ ಸಿಕ್ಕಿತ್ತು. ಈ ಬಾರಿಯೂ ಹಾಗೇ ಸಿಕ್ಕಿದರೆ ಎನ್ನುವ ಆಸೆ…

ಮಳೆರಾಯನೊಂದಿಗೆ ಹೀಗೆ ಒಬ್ಬೊಬ್ಬರದು ಒಂದೊಂದು ತೆರನಾದ ನಂಟು. ಆದರೆ, ಮನೆಯೊಳಗೆ ಬೆಚ್ಚಗೆ ಇರುವ ಹೆಂಗಳೆಯರ ತಲೆಬಿಸಿಯೇ ಬೇರೆ. ಅದ್ಯಾವುದು ಅಂತೀರಾ? ಅದೇ, ಒಗೆದ ಬಟ್ಟೆಗಳನ್ನು ಒಣಗಿಸೋದು ಹೇಗೆ ಅನ್ನೋದು!

ಅದೇನು ಮಹಾ ಕಷ್ಟದ ವಿಚಾರ ಅಂತ ಹುಬ್ಬೇರಿಸಬೇಡಿ. ಸಿಂಪಲ… ಆಗಿ ಕಂಡರೂ, ಅದು ತಲೆಕೆಡಿಸಿಕೊಳ್ಳಬೇಕಾದ ವಿಷಯವೇ. ಎರಡು ದಿನ ಬಿಸಿಲು ಬರದೇ, ಬಟ್ಟೆ ಒಣಗದೇ ಇದ್ದರೆ ಮನೆಯ ಪರಿಸ್ಥಿತಿ ಹೇಗಾಗುತ್ತದೆ ನೋಡಿ. ಮನೆ ತುಂಬಾ ಒದ್ದೆ ಬಟ್ಟೆ. ಸರಿಯಾಗಿ ಒಣಗದ ಬಟ್ಟೆಯಿಂದ ಬರುವ ಒಂಥರಾ ವಾಸನೆ, ಎಲ್ಲೆಂದರಲ್ಲಿ ಹಗ್ಗ ಕಟ್ಟಿ, ನೇತು ಹಾಕಿ ಬಟ್ಟೆ ಒಣಗಿಸುವ ಸಾಹಸದಲ್ಲಿ ಆಗಾಗ್ಗೆ ತಲೆಗೆ ತಾಗಿದಾಗ ಆಗುವ ಕಿರಿಕಿರಿ. ಅಬ್ಟಾ, ಅದರ ಅವಸ್ಥೆಯೇ! ಮನೆ ವಿಶಾಲವಾಗಿದ್ದರೆ ಕೆಲವು ದಿನ ಸುಧಾರಿಸಲು ಅಡ್ಡಿಯಿಲ್ಲ. ಚಿಕ್ಕ ಮನೆ, ಮನೆ ತುಂಬಾ ಜನ ಇದ್ದುಬಿಟ್ಟರಂತೂ, ಬಹುಪಾಲು ಭಾಗದಲ್ಲಿ ಬಟ್ಟೆಗಳೇ ತುಂಬಿ ತುಳುಕಾಡುವಂತೆ ಆಗದಿರದು.

ಇನ್ನು ಮನೆಯಲ್ಲಿ ಸಣ್ಣ ಪಾಪು ಇದ್ದರೆ ಕೇಳಬೇಕೆ? ಅದರ ಒಂದಿಷ್ಟು ಪುಟ್ಟ ಪುಟ್ಟ ಅಂಗಿ- ಪ್ಯಾಂಟ್‌, ಫ್ರಾಕ್‌ಗಳು ಎಲ್ಲೆಲ್ಲಿ ಜಾಗವಿದೆಯೋ ಅಲ್ಲಲ್ಲಿ ನೇತಾಡಿಕೊಂಡಿರುತ್ತವೆ. ಮಕ್ಕಳ ಯೂನಿಫಾರಂ, ಪುರುಷರ ಅಂಗಿ- ಪ್ಯಾಂಟ್‌ ಅನ್ನು ಬೆಚ್ಚಗೆ ಒಣಗಿಸಲೇಬೇಕಾದ ಅನಿವಾರ್ಯತೆ. ಆಗೊಮ್ಮೆ ಈಗೊಮ್ಮೆ ಫ‌ಂಕ್ಷನ್‌ಗೆ ಹಾಕೋ ಬೆಲೆಬಾಳುವ ಸೀರೆಯನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಲು ಸಾಧ್ಯವಾಗದೇ ಇದ್ದರೆ ಒಂಥರಾ ಕಿರಿಕಿರಿ. ಜೊತೆಗೆ ಮಳೆಗಾಲದಲ್ಲಿ ನಿತ್ಯ ಆಫೀಸು, ಕಾಲೇಜಿಗೆ ಧರಿಸಲು ಎಕ್ಸ್‌ಟ್ರಾ ಬಟ್ಟೆ ಬೇಕು. ಬೀರುವಿನಲ್ಲಿ ಇಟ್ಟ ಹಳೇ ಡ್ರೆಸ್‌ಗಳಿಗೂ ಡಿಮ್ಯಾಂಡ್‌ ಬರೋದೇ ಬಿಡದೆ ಸುರಿಯೋ ಮಳೆಯಿಂದಾಗಿ!

ಮನೆಯ ಗಂಡಸರು ತಮ್ಮ ಬಟ್ಟೆಗಳನ್ನು ತಾವೇ ತೊಳೆದರೂ, ಅದನ್ನು ಒಣಗಿಸಿ, ಮಡಚಿಡುವ ಪರಿಪಾಟಲು ಮಹಿಳೆಯದ್ದೇ. ಹೀಗಾಗಿ, ಮಳೆಗೆ ಹಿಡಿಶಾಪ ಹಾಕುತ್ತಾ, ತಮ್ಮದೇ ಐಡಿಯಾ ಬಳಸಿ ಬಟ್ಟೆ ಒಣಗಿಸುವ ಕಲೆಯನ್ನು ಆಕೆ ಕರಗತ ಮಾಡಿಕೊಂಡಿರುತ್ತಾಳೆ. ಕೆಲವು ಮನೆಗಳಲ್ಲಿ ಅಡುಗೆಕೋಣೆಯಲ್ಲಿ ಹಗ್ಗಗಳನ್ನು ಕಟ್ಟಿ, ಬಟ್ಟೆಗಳನ್ನು ನೇತು ಹಾಕಿರುವುದನ್ನು ನೋಡಿರಬಹುದು. ಅಡುಗೆ ಕೋಣೆ ಬೆಚ್ಚಗಿನ ತಾಣವಾದ್ದರಿಂದ, ಬಟ್ಟೆ ಬಹುಬೇಗ ಒಣಗುತ್ತದೆಂಬ ಉಪಾಯ ಆಕೆಯದು. ಅಜ್ಜಿ- ಮುತ್ತಜ್ಜಿಯರ ಕಾಲದ ಉಪಾಯವಿದು. ಆಗೆಲ್ಲ ಸೌದೆ ಒಲೆಗಳಿರುತ್ತಿದ್ದುದರಿಂದ, ಒಲೆಯ ಶಾಖದಿಂದ ಅಡುಗೆಮನೆ ಸದಾ ಬೆಚ್ಚಗಿರುತ್ತಿತ್ತು. ರಾತ್ರಿ ಫ್ಯಾನ್‌ ಹಾಕಿ ಮಲಗುವವರ ಜೊತೆಗೆ ಕೆಲವೊಂದಿಷ್ಟು ಡ್ರೆಸ್‌ಗಳೂ ಬೆಡ್‌ರೂಮ… ಸೇರಿಕೊಂಡು, ಬೆಚ್ಚಗಾಗಲು ಹೆಣಗುತ್ತವೆ. ಇನ್ನು ಅನ್ನ ಮಾಡಿದ ಕುಕ್ಕರ್‌ ಮೇಲೆ ಮಕ್ಕಳ ಒಂದೆರಡು ಪುಟ್ಟ ಅಂಗಿ ಹಾಕಿದರೆ ಒಣಗಿಸೋಕೆ ಅಡ್ಡಿ ಇಲ್ಲ. ಹಳ್ಳಿಗಳ ಕಡೆ, ಮಳೆ ನಿಂತಾಗ ತೆಂಗಿನಗರಿಯನ್ನು ಅಂಗಳದಲ್ಲಿ ಹಾಕಿ, ಅದರ ಮೇಲೆ ಬಟ್ಟೆ ಒಣಗಿಸುವುದೂ ಇದೆ. ಹೀಗೆ, ಮಳೆಗಾಲದಲ್ಲಿ ಬಟ್ಟೆ ಒಣಗಿಸಲು ನಾವು ಮಾಡುವ ಕಸರತ್ತುಗಳು ಒಂದಾ, ಎರಡಾ!?

– ವಂದನಾ ರವಿ ಕೆ.ವೈ.

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.