ಸಂಪಾದನೆ ಕೊಡುವ ಸಂತೃಪ್ತಿಗೆ ಎಣೆಯಿಲ್ಲ…

ರುಚಿಯ ಅರಿವಿರದಿದ್ದರೆ ಅಭಿರುಚಿ ಬೆಳೆದೀತೆ?

Team Udayavani, Jun 5, 2019, 6:00 AM IST

earning

ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಗಂಡನ ಸಂಪಾದನೆಯ ಕಂತೆಯನ್ನು ತನ್ನ ಪರ್ಸಿನಲ್ಲಿಟ್ಟುಕೊಂಡು, ತಾನು ಬಹಳ ಅನುಕೂಲಸ್ಥೆ ಎಂಬಂತೆ ಬಿಂಬಿಸುವ ಮಹಿಳೆಯರ ಮೊಗದಲ್ಲಿ “ವೈಯಕ್ತಿಕವಾಗಿ ತಾನೇನೂ ಸಾಧಿಸಿಲ್ಲ’ ಎಂಬ ಬೇಗುದಿ ಕಾಣಿಸಿದರೆ, ಕೂಲಿ ಮಾಡುವ ಮಹಿಳೆಯು ತನ್ನ ಸಂಬಳದಲ್ಲೇ ಮಗುವಿಗೆ ಬಿಸ್ಕತ್ತು ಕೊಳ್ಳುವಾಗ ಆಕೆಯ ಮುಖದಲ್ಲಿ ಸಂತೃಪ್ತಿ ಉಕ್ಕುತ್ತಿರುತ್ತದೆ…

ಮೂರು ದಶಕಗಳ ಹಿಂದೆ, ಆಗ ತಾನೇ ಪದವಿ ಪಡೆದಿದ್ದ ನನಗೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಲಭಿಸಿತ್ತು. ಉದ್ಯೋಗದ ಅವಶ್ಯಕತೆ ಇದ್ದುದರಿಂದ ಕೆಲಸಕ್ಕೆ ಸೇರಿ ಹಾಗೂ ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೊಂದು ದಿನ ಸಂಜೆ ಆಗ ತಾನೇ ಆಫೀಸಿನಿಂದ ಮನೆಗೆ ಬಂದಾಗ, ಸ್ನೇಹಿತನ ಕುಟುಂಬದವರು ಮನೆಗೆ ಆಗಮಿಸಿದ್ದರು. ನನಗೂ ಸುಸ್ತಾಗಿದ್ದ ಕಾರಣ, ಮನೆಯಲ್ಲಿಯೇ ತಿಂಡಿ ಮಾಡುವ ಗೋಜಿಗೆ ಹೋಗದೆ, ಎಲ್ಲರಿಗೂ ಕಾಫಿಯ ಜೊತೆಗೆ ಬೇಕರಿಯಿಂದ ತಂದಿದ್ದ ಚಿಪ್ಸ್ ಹಾಗೂ ಸಮೋಸಾಗಳನ್ನು ತಟ್ಟೆಯಲ್ಲಿರಿಸಿದ್ದಾರೆ.

ಸಹಜವಾಗಿಯೇ, ಅತಿಥಿಗಳ ಚಿಕ್ಕ ಮಕ್ಕಳು ಖುಷಿಯಿಂದ ಕಣ್ಣರಳಿಸಿ ಸಮೋಸಾ ತಿನ್ನಲಾರಂಭಿಸಿದರು. ಆದರೆ, ಅವರಮ್ಮ ಮಾತ್ರ “ಬೇಕರಿ ತಿಂಡಿಗಳನ್ನು ನಮ್ಮ ಮಕಿಗೆ ಕೊಡಲ್ಲ. ಮನೇಲಿ ಮಾಡಿದ ತಿಂಡಿಗಳನ್ನ ಮಾತ್ರ ಕೊಡೋದು. ಇದನ್ನೆಲ್ಲ ತಿಂದರೆ ಹೊಟ್ಟೆ ಕೆಡ್ತದೆ. ನಮ್ಮೆಜಮಾನ್ರಿಗಂತೂ ಆಫೀಸಿನಿಂದ ಬರೋವಾಗ ನಾನು ಮನೇಲಿ ಇಲೇìಬೇಕು. ಮನೇಲಿ ಮಾಡಿದ ತಿಂಡೀನೇ ಕೊಡ್ಬೇಕು. ಅವರಾಗಿಯೇ ಎಂದೂ ಬಡಿಸ್ಕೊಂಡು ತಿನ್ನಲ್ಲ. ನಾನು ಕೆಲಸಕ್ಕೆ ಹೋಗಲ್ಲ. ಕೆಲ್ಸಕ್ಕೆ ಹೋಗೋ ಅವಶ್ಯಕತೆ ಇದೆ ಅಂತಲೂ ಅನ್ಸಿಲ್ಲ. ಇಬ್ರೂ ದುಡಿಯೋಕೆ ಹೊರಟರೆ ಮನೆ, ಮಕ್ಳನ್ನ ಗಮನಿಸೋರ್ಯಾರು?’ ಇತ್ಯಾದಿ ಅಂದರು.

ಅವರ ಮಾತುಗಳಲ್ಲಿ ಸ್ವಲ್ಪ ಮಟ್ಟಿಗೆ ನಿಜ ಇತ್ತಾದರೂ, ಅದನ್ನು ಪ್ರಸ್ತುತಪಡಿಸಿದ ರೀತಿಯಿಂದಾಗಿ ನನಗೆ ಅವಮಾನವಾದಂತಾಯ್ತು. ಉದ್ಯೋಗಕ್ಕೆ ಹೋಗುವ ಮಹಿಳೆಯರು ದುಡ್ಡಿಗೋಸ್ಕರ ಗೃಹಕೃತ್ಯಗಳನ್ನು ಗಮನಿಸದೆ, ಮನೆಮಂದಿಗೆ ಅಚ್ಚುಕಟ್ಟಾಗಿ ಅಡುಗೆ ಮಾಡಿ ಬಡಿಸದೆ ಇರುವವರು ಎಂಬಂತೆ ಬಿಂಬಿಸಿದ ಅವರ ಮಾತುಗಳು ನನ್ನನ್ನು ಚಿಂತನೆಗೆ ಹಚ್ಚಿದವು. ನಿಜವಾಗಿ ನೋಡಿದರೆ, ಉದ್ಯೋಗಸ್ಥ ಮಹಿಳೆಗೆ ಬೆಳಗ್ಗೆ ಬೇಗನೆ ಎದ್ದು, ಅಡುಗೆ ಕಡೆ ಗಮನಿಸಿ, ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಿ, ಬುತ್ತಿಚೀಲ ತುಂಬಿಸಿ, ತಾನೂ ಸಿದ್ಧಳಾಗಿ, ಒಂದಿಷ್ಟು ತಿಂದು ಆಫೀಸಿಗೆ ಹೊರಡುವ ಕೆಲಸದ ಒತ್ತಡವಿರುತ್ತದೆ. ಕೆಲಸದ ಜಾಗದಲ್ಲಿ ನಿಗದಿತ ಜವಾಬ್ದಾರಿಗಳನ್ನು ನಿರ್ವಹಿಸಿ, ಮನೆಗೆ ಬಂದೊಡನೆ ಪುನಃ ರಾತ್ರಿಯ ಅಡುಗೆ ಕೆಲಸ. ಒಟ್ಟಿನಲ್ಲಿ, ಉದ್ಯೋಗಸ್ಥ ಮಹಿಳೆಗೆ ವಿಶ್ರಾಂತಿಯೆಂಬುದು ಸ್ವಲ್ಪವಾದರೂ ಸಿಗುವುದಾದರೆ ಅದು ವಾರದ ರಜಾದಿನದಂದು ಮಾತ್ರ.

ಬಹುತೇಕ ಉದ್ಯೋಗಸ್ಥ ಮಹಿಳೆಯರು ದುಡ್ಡಿಗಾಗಿ ಮಾತ್ರ ಕೆಲಸಕ್ಕೆ ಹೋಗುವುದಿಲ್ಲ ಹಾಗೂ ತನ್ನ ಸಂಪಾದನೆಯನ್ನು ತಾನೊಬ್ಬಳೇ ಖರ್ಚು ಮಾಡುವುದಿಲ್ಲ. ಮನೆಯ ಎಲ್ಲಾ ಸದಸ್ಯರ ಖರ್ಚಿಗೆ ಹೆಗಲು ಕೊಡುವುದರ ಜೊತೆಗೆ, ಉದ್ಯೋಗದಿಂದಾಗಿ ಲಭಿಸುವ ಜ್ಞಾನ, ಸ್ಥಾನಮಾನ, ಆರ್ಥಿಕ ಸ್ವಾತಂತ್ರ ಹಾಗೂ ಆತ್ಮವಿಶ್ವಾಸವನ್ನು ಸಂತೋಷದಿಂದ ಅನುಭವಿಸುತ್ತಾಳೆ. ಉದ್ಯೋಗವು ಮಹಿಳೆಯ ವ್ಯಕ್ತಿತ್ವವಿಕಸನಕ್ಕೆ ಪೂರಕ. ಸಂಬಳದ ಮೊತ್ತ ಸಣ್ಣದಿರಲಿ, ದೊಡ್ಡದಿರಲಿ, ಆಫೀಸಿನಲ್ಲಾಗಲಿ ಅಥವಾ ಸ್ವಯಂ ಉದ್ಯೋಗವಾಗಲಿ, ಅಲ್ಪ ಮೊತ್ತವಾದರೂ, ಸ್ವಂತ ಸಂಪಾದನೆಯು ಕೊಡುವ ಆತ್ಮವಿಶ್ವಾಸಕ್ಕೆ ಬೆಲೆ ಕಟ್ಟಲಾಗದು. ಬದಲಾದ ಕಾರ್ಪೊರೇಟ್‌ ಜಗತ್ತಿನಲ್ಲಿ ಉದ್ಯೋಗದ ಸ್ಥಿರತೆ ಕಡಿಮೆಯಿರುವುದರಿಂದ ಪತಿ-ಪತ್ನಿ ಇಬ್ಬರೂ ದುಡಿದು, ಮನೆಕೆಲಸ ಹಾಗೂ ಮಕ್ಕಳ ಪಾಲನೆಗೆ ಸೂಕ್ತ ವ್ಯವಸ್ಥೆ ಮಾಡಿಕೊಂಡರೆ, ಈಗಿನ ಕಾಲದಲ್ಲಿ ಆರ್ಥಿಕ ನೆಮ್ಮದಿಯಿರುತ್ತದೆ.

ತಿಂಗಳಿಗೆ ಲಕ್ಷಗಟ್ಟಲೆ ದುಡಿಯುವ ಗಂಡನ ಸಂಪಾದನೆಯ ಕಂತೆಯನ್ನು ತನ್ನ ಪರ್ಸಿನಲ್ಲಿಟ್ಟುಕೊಂಡು ತಾನು ಬಹಳ ಅನುಕೂಲಸ್ಥೆ ಎಂಬಂತೆ ಬಿಂಬಿಸುವ ಮಹಿಳೆಯರ ಮೊಗದಲ್ಲಿ “ವೈಯಕ್ತಿಕವಾಗಿ ತಾನೇನೂ ಸಾಧಿಸಿಲ್ಲ’ ಎಂಬ ಒಳಮನಸ್ಸಿನ ಬೇಗುದಿ ಕಾಣಿಸಿದರೆ, ಕೂಲಿ ಮಾಡುವ ಮಹಿಳೆಯು ತನ್ನ ಸಂಬಳದಲ್ಲಿ ಮಗುವಿಗೆ ಬಿಸ್ಕತ್ತು ಕೊಳ್ಳುವಾಗ ಆಕೆಯ ಮುಖದಲ್ಲಿ ಸಂತೃಪ್ತಿ ಉಕ್ಕುತ್ತಿರುತ್ತದೆ. ಉದ್ಯೋಗದ ರುಚಿಯನ್ನು ಅರಿಯದಿದ್ದರೆ, ಸ್ವಂತ ಸಂಪಾದನೆಯ ಅಭಿರುಚಿ ಮೂಡಲು ಸಾಧ್ಯವೇ?

ಹೇಮಮಾಲಾ ಬಿ.

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.