ತಲೇಲಿ ಹೇನಿದೆ…
Team Udayavani, Mar 4, 2020, 4:36 AM IST
ಶಾಲೆಗೆ ಹೋಗುವ ಹೆಣ್ಣುಮಕ್ಕಳ ತಲೆಯಲ್ಲಿ ಹೇನು ಇರುವುದು ಸಾಮಾನ್ಯ. ಅದರಿಂದ ಅವರಿಗೆ ತಲೆ ತುರಿಕೆಯಾದರೆ, ಅವರಮ್ಮನಿಗೆ ತಲೆನೋವು. ಮಗಳ ಕೂದಲು ಕತ್ತರಿಸಲೂ ಮನಸ್ಸು ಬರುವುದಿಲ್ಲ. ಹೇನುಗಳ ಕಾಟವನ್ನೂ ತಡೆಯಲಾಗುವುದಿಲ್ಲ. ಮಗಳ ತಲೆಯಿಂದ ತನ್ನ ತಲೆಗೆ ಹೇನು ದಾಟಿ ಬಿಟ್ಟರೆ ಅನ್ನುವ ಆತಂಕ ಬೇರೆ. ಆಗ ಏನು ಮಾಡಬಹುದು?
-ಬೇವಿನ ಸೊಪ್ಪನ್ನು ರುಬ್ಬಿ, ಒಂದು ಚಮಚ ಬಾದಾಮಿ ಎಣ್ಣೆ ಬೆರೆಸಿ, ಹೇರ್‌ಪ್ಯಾಕ್ ಹಾಕಿ. ಅರ್ಧ ಗಂಟೆ ನಂತರ ತಲೆ ತೊಳೆದು, ಕೂದಲು ಹಸಿಯಿರುವಾಗಲೇ ಸಣ್ಣ ಹಲ್ಲಿನ ಬಾಚಣಿಗೆಯಿಂದ ತಲೆ ಬಾಚಿ.
-ಶುಂಠಿಯ ರಸಕ್ಕೆ, ಒಂದು ಚಮಚ ಲಿಂಬೆ ರಸ ಬೆರೆಸಿ, ಕೂದಲಿನ ಬುಡಕ್ಕೆ ಹಚ್ಚಿ, ಸ್ನಾನ ಮಾಡಿ.
-ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ, ಅದರಲ್ಲಿ ಅರ್ಧ ತುಣುಕು ಕರ್ಪೂರವನ್ನು ಕರಗಿಸಿ, ತಲೆಗೆ ಹಚ್ಚಿ ಸ್ನಾನ ಮಾಡಿ.
-ತುಳಸಿ ಎಲೆಯ ರಸಕ್ಕೆ, ಕೊಬ್ಬರಿ ಎಣ್ಣೆ ಮತ್ತು ಲಿಂಬೆ ರಸವನ್ನು ಬೆರೆಸಿ, ತಲೆಗೆ ಹಚ್ಚಿ, ಸ್ವಲ್ಪ ಸಮಯದ ನಂತರ ಕೂದಲನ್ನು ಬಾಚಿ. ಆನಂತರ, ತಲೆಗೆ ಸ್ನಾನ ಮಾಡಿ.
-ಹುಳಿ ಮೊಸರಿಗೆ, ಲಿಂಬೆ ರಸ ಬೆರೆಸಿ, ಹೇರ್‌ಪ್ಯಾಕ್ ಹಾಕಿಕೊಳ್ಳಿ.
-ಹಾಗಲಕಾಯಿಯನ್ನು ರುಬ್ಬಿ, ಆ ರಸವನ್ನು ಕೂದಲಿನ ಬುಡಕ್ಕೆ ಲೇಪಿಸಿದರೆ ಹೇನು, ಸೀರು ನಿವಾರಣೆಯಾಗುತ್ತದೆ.
-ವಾರಕ್ಕೆರಡು ಬಾರಿ ಕೂದಲಿನ ಬುಡಕ್ಕೆ ಈರುಳ್ಳಿ ರಸ ಹಚ್ಚಿ ಸ್ನಾನ ಮಾಡಿದರೆ, ಹೇನು ಸಾಯುತ್ತದೆ.
-ಬೇವಿನ ಎಣ್ಣೆಯನ್ನು ತಲೆಗೆ ಹಚ್ಚಿ, ಸ್ನಾನ ಮಾಡಿ.
-ತಲೆ ಸ್ನಾನದ ನಂತರ ಕೂದಲು ಒದ್ದೆಯಿರುವಾಗಲೇ, ಬಾಚಿದರೆ ಹೇನುಗಳು ಸುಲಭವಾಗಿ ಉದುರುತ್ತವೆ.
-ಪ್ರತಿದಿನ ಶಾಲೆಯಿಂದ ಬಂದಕೂಡಲೇ, ಮಗುವಿನ ತಲೆ ಬಾಚಿ.
-ಮಕ್ಕಳ ಬಟ್ಟೆಯನ್ನು ದೊಡ್ಡವರ ಬಟ್ಟೆಯೊಂದಿಗೆ ಸೇರಿಸಬೇಡಿ.
-ವಾರಕ್ಕೆರಡು ಬಾರಿ ಮಕ್ಕಳಿಗೆ ತಲೆ ಸ್ನಾನ ಮಾಡಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.