ಅಧರಕ್ಕೆ ಕಹಿ ಉದರಕ್ಕೆ ಸಿಹಿ
Team Udayavani, Aug 8, 2018, 6:00 AM IST
ಏನು? ಹಾಗಲಕಾಯಿ ಪಲ್ಯವಾ? ಹಾಗಾದ್ರೆ ನನಗೆ ಊಟ ಬೇಡ, ಐನೂರ್ ರೂಪಾಯಿ ಕೊಡ್ತೀನಿ ಅಂದ್ರೂ ನಾನು ಹಾಗಲಕಾಯಿ ತಿನ್ನಲ್ಲ… ಹೀಗೆಲ್ಲ ಹೇಳುತ್ತಾ ಹಾಗಲಕಾಯಿಯಿಂದ ದೂರ ಓಡುವವರಿದ್ದಾರೆ. ಆದರೆ, ಎಲ್ಲರಿಗೂ ಗೊತ್ತಿರಲಿ; ಹಾಗಲಕಾಯಿಯಲ್ಲಿ ಇರುವಷ್ಟು ಔಷಧೀಯ ಗುಣ ಬೇರೆ ಯಾವ ತರಕಾರಿಯಲ್ಲಿಯೂ ಇಲ್ಲ. ಇದು ನಾಲಗೆಗೆ ಕಹಿಯಾದರೂ, ಆರೋಗ್ಯ ಹಾಗೂ ದೇಹದ ಪಾಲಿಗೆ ಸಿಹಿಯಾದ ತರಕಾರಿ. ಹಾಗಲಕಾಯಿ ಸೇವನೆಯಿಂದ ಮಧುಮೇಹವನ್ನಷ್ಟೇ ಅಲ್ಲ, ಜ್ವರ, ಶೀತ, ಕೆಮ್ಮು ಹಾಗೂ ಉದರ ಸಂಬಂಧಿ ರೋಗಗಳನ್ನೂ ನಿವಾರಿಸಿಕೊಳ್ಳಬಹುದು..
1. ಹಾಗಲಕಾಯಿ ಚಟ್ನಿಪುಡಿ
ಬೇಕಾಗುವ ಸಾಮಗ್ರಿ: ಕತ್ತರಿಸಿದ ಹಾಗಲಕಾಯಿ-1 ಕಪ್, ಕಡಲೆ ಬೀಜ-1 ಕಪ್, ಎಳ್ಳು-1/2 ಕಪ್, ಒಣಕೊಬ್ಬರಿ ತುರಿ -1 ಕಪ್, ಕರಿಬೇವಿನ ಎಲೆ-10-12, ಹುಣಸೆ ಹಣ್ಣು -2 ಇಂಚಿನಷ್ಟು, ಅಚ್ಚ ಖಾರದ ಪುಡಿ-1/2 ಕಪ್, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-1/2 ಕಪ್, ಸಾಸಿವೆ-1 ಚಮಚ, ಇಂಗು-1/4 ಚಮಚ.
ಮಾಡುವ ವಿಧಾನ: ಹಾಗಲಕಾಯಿ ಹೋಳುಗಳನ್ನು ಎಣ್ಣೆಯಲ್ಲಿ ಗರಿಗರಿ ಆಗುವವರೆಗೆ ಹುರಿದಿಡಿ. ಕಡಲೆ ಬೀಜ, ಎಳ್ಳು, ಒಣಕೊಬ್ಬರಿ ತುರಿ, ಅಚ್ಚ ಖಾರದ ಪುಡಿ, ಕರಿಬೇವಿನ ಸೊಪ್ಪನ್ನು ಸ್ವಲ್ಪ ಎಣ್ಣೆ ಹಾಕಿ ಬೇರೆಬೇರೆಯಾಗಿ ಹುರಿಯಿರಿ. ಈ ಸಾಮಗ್ರಿಗಳಿಗೆ, ಹುಣಸೆಹಣ್ಣು, ಉಪ್ಪು ಸೇರಿಸಿ ನುಣ್ಣಗೆ ಪುಡಿ ಮಾಡಿ. ಈ ಮಿಶ್ರಣಕ್ಕೆ, ಎಣ್ಣೆ ಕಾಯಿಸಿ, ಸಾಸಿವೆ-ಇಂಗಿನ ಒಗ್ಗರಣೆ ಹಾಕಿದರೆ, ರುಚಿಯಾದ, ಆರೋಗ್ಯಕರವಾದ ಹಾಗಲಕಾಯಿ ಚಟ್ನಿ ಪುಡಿ ರೆಡಿ.
2. ಹಾಗಲಕಾಯಿ ಗೊಜ್ಜು
ಬೇಕಾಗುವ ಸಾಮಗ್ರಿ: ಚಿಕ್ಕದಾಗಿ ಕತ್ತರಿಸಿದ ಹಾಗಲಕಾಯಿ -2 ಕಪ್, ಅಚ್ಚ ಖಾರದ ಪುಡಿ-2 ಚಮಚ, ತೆಂಗಿನ ತುರಿ-1/2 ಕಪ್, ಎಳ್ಳಿನ ಪುಡಿ-3 ಚಮಚ, ಹುರಿಗಡಲೆ ಪುಡಿ-3 ಚಮಚ, ಸಾಸಿವೆ-1/2 ಚಮಚ, ಬೆಲ್ಲದ ತುರಿ-4 ಚಮಚ, ಹುಣಸೆ ಹಣ್ಣು-1 ಇಂಚಿನಷ್ಟು, ಉಪ್ಪು-ರುಚಿಗೆ ತಕ್ಕಷ್ಟು,ಒಗ್ಗರಣೆಗೆ ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಅರಿಶಿನ-1/2 ಚಮಚ, ಒಣಮೆಣಸಿನಕಾಯಿ- 2, ಕರಿಬೇವಿನ ಎಲೆ-8
ಮಾಡುವ ವಿಧಾನ: ಹಾಗಲಕಾಯಿ ಹೋಳುಗಳನ್ನು ಉಪ್ಪು-ಅರಿಶಿನ ಸೇರಿಸಿದ ನೀರಿನಲ್ಲಿ ಒಂದು ಗಂಟೆ ನೆನೆಸಿ, ಬಸಿದು, ಎಣ್ಣೆಯಲ್ಲಿ ಹುರಿಯಿರಿ. ತೆಂಗಿನ ತುರಿ, ಹುಣಸೆ ಹಣ್ಣು, ಖಾರದ ಪುಡಿ, ಎಳ್ಳು ಪುಡಿ, ಸಾಸಿವೆ ಸೇರಿಸಿ ನುಣ್ಣಗೆ ಅರೆಯಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಅರಿಶಿನ-ಒಣ ಮೆಣಸು-ಕರಿಬೇವಿನ ಸೊಪ್ಪು ಹಾಕಿ ಒಗ್ಗರಣೆ ಮಾಡಿ. ಆ ಒಗ್ಗರಣೆಗೆ, ಅರೆದ ಮಸಾಲೆ, ಹಾಗಲಕಾಯಿ ಹೋಳುಗಳು, ಹುರಿಗಡಲೆ ಪುಡಿ, ಉಪ್ಪು, ಬೆಲ್ಲ ಸೇರಿಸಿ ಕುದಿಸಿದರೆ, ಹಾಗಲಕಾಯಿ ಗೊಜ್ಜು ರೆಡಿ.
3. ಹಾಗಲಕಾಯಿ ಮಸಾಲ
ಬೇಕಾಗುವ ಸಾಮಗ್ರಿ: ಹಾಗಲಕಾಯಿ 5-6, ಧನಿಯಾ ಪುಡಿ-2 ಚಮಚ, ಗರಮ್ ಮಸಾಲೆ ಪುಡಿ-3 ಚಮಚ, ಜೀರಿಗೆ ಪುಡಿ-1 ಚಮಚ, ಕತ್ತರಿಸಿದ ಟೊಮೆಟೊ-1/2 ಕಪ್, ಕತ್ತರಿಸಿದ ಈರುಳ್ಳಿ-1/2 ಕಪ್, ಒಣಮೆಣಸಿನಕಾಯಿ-2, ತೆಂಗಿನ ತುರಿ-1/2 ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು-1/4 ಕಪ್, ಅರಿಶಿನ-1/2 ಚಮಚ, ಎಣ್ಣೆ-1/2 ಕಪ್, ಸಾಸಿವೆ-1 ಚಮಚ, ಇಂಗು-1/4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಹಾಗಲಕಾಯಿಗಳನ್ನು ಸೀಳಿ, ತಿರುಳು, ಬೀಜ ತೆಗೆದು, ಕತ್ತರಿಸಿ ನೀರಿನಲ್ಲಿ ಬೇಯಿಸಿ. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ, ಹಾಗಲಕಾಯಿ ಹೋಳುಗಳನ್ನು ಬಾಡಿಸಿಡಿ.ಕತ್ತರಿಸಿದ ಟೊಮೆಟೊ, ಈರುಳ್ಳಿ, ಒಣಮೆಣಸು, ತೆಂಗಿನ ತುರಿಯನ್ನು ಸೇರಿಸಿ ನುಣ್ಣಗೆ ಅರೆಯಿರಿ. ಎಣ್ಣೆ ಕಾಯಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ತಯಾರಿಸಿ. ಒಗ್ಗರಣೆಗೆ ಅರೆದ ಮಿಶ್ರಣ, ಗರಮ್ ಮಸಾಲೆ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಕುದಿಸಿ. ನಂತರ, ಹಾಗಲಕಾಯಿ ಹೋಳುಗಳನ್ನು ಹಾಕಿ ಚೆನ್ನಾಗಿ ಕಲಕಿ ಒಲೆಯಿಂದ ಕೆಳಗಿರಿಸಿ. ತೆಂಗಿನ ತುರಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ, ಹಾಗಲಕಾಯಿ ಮಸಾಲಾ ತಯಾರು. ರೊಟ್ಟಿ, ಚಪಾತಿ ಜೊತೆ ತಿನ್ನಲು ಇದು ಬಲು ರುಚಿ.
4. ಹಾಗಲಕಾಯಿ ಪಕೋಡಾ
ಬೇಕಾಗುವ ಸಾಮಗ್ರಿ: ಹಾಗಲಕಾಯಿ ಬಿಲ್ಲೆಗಳು 10-12, ಕಡಲೆ ಹಿಟ್ಟು-2 ಕಪ್, ಅಕ್ಕಿ ಹಿಟ್ಟು-1/2 ಕಪ್, ಮೈದಾ ಹಿಟ್ಟು-2 ಚಮಚ, ಅಚ್ಚ ಖಾರದ ಪುಡಿ-2 ಚಮಚ, ಜೀರಿಗೆ-2 ಚಮಚ, ಇಂಗು-1/4 ಚಮಚ, ಅಡುಗೆ ಸೋಡಾ-1/4 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-ಕರಿಯಲು.
ಮಾಡುವ ವಿಧಾನ: ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಗೂ ಮೈದಾ ಹಿಟ್ಟುಗಳನ್ನು ಒಂದು ಟೀ ಚಮಚ ಬಿಸಿ ಎಣ್ಣೆ ಸೇರಿಸಿ ಕಲಸಿ. ಆ ಮಿಶ್ರಣಕ್ಕೆ ಉಪ್ಪು, ಅಚ್ಚ ಖಾರದ ಪುಡಿ, ಜೀರಿಗೆ, ಇಂಗು, ಸೋಡಾ ಸೇರಿಸಿ, ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ. ಹಾಗಲಕಾಯಿ ಬಿಲ್ಲೆಗಳನ್ನು ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ತೆಗೆದು, ಕಾಯಿಸಿದ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ.
5. ಹಾಗಲಕಾಯಿ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಸಿಪ್ಪೆ ತೆಗೆದು ಕತ್ತರಿಸಿದ ಹಾಗಲಕಾಯಿ ಹೋಳು-4 ಕಪ್, ಕತ್ತರಿಸಿದ ಲಿಂಬೆ ಹೋಳು-3 ಕಪ್, ಎಣ್ಣೆಯಲ್ಲಿ ಬಾಡಿಸಿದ ಹಸಿಮೆಣಸಿನಕಾಯಿ ತುಂಡು-15, ಉಪ್ಪು-1/2 ಕಪ್, ಅರಿಶಿನ-1 ಚಮಚ, ಲಿಂಬೆರಸ-1/2 ಕಪ್, ಅಚ್ಚ ಖಾರದ ಪುಡಿ-6 ಚಮಚ, ಮೆಂತ್ಯೆ ಪುಡಿ-3 ಚಮಚ, ಕತ್ತರಿಸಿದ ಕರಿಬೇವಿನ ಸೊಪ್ಪು-1/2 ಕಪ್, ಒಗ್ಗರಣೆಗೆ-ಎಣ್ಣೆ-3/4 ಕಪ್, ಸಾಸಿವೆ-3 ಚಮಚ, ಇಂಗು-1 ಚಮಚ.
ಮಾಡುವ ವಿಧಾನ: ಹಾಗಲಕಾಯಿ ಹೋಳು, ಲಿಂಬೆ ಹೋಳು, ಹಸಿಮೆಣಸಿನಕಾಯಿ ತುಂಡು, ಉಪ್ಪು, ಅರಿಶಿನ
ಸೇರಿಸಿ ಮಿಶ್ರಣ ಮಾಡಿ. ಆ ಮಿಶ್ರಣಕ್ಕೆ ಲಿಂಬೆರಸ, ಖಾರದ ಪುಡಿ, ಮೆಂತ್ಯದ ಪುಡಿ, ಕರಿಬೇವಿನ ಸೊಪ್ಪು ಸೇರಿಸಿ, ಚೆನ್ನಾಗಿ ಕಲಕಿ, ನಾಲ್ಕು ದಿನ ನೆನೆಯಲು ಬಿಟ್ಟರೆ, ಹಾಗಲಕಾಯಿಯ ಕಹಿ ಕಡಿಮೆಯಾಗುತ್ತದೆ. ನಂತರ ಎಣ್ಣೆ ಕಾಯಿಸಿ, ಸಾಸಿವೆ-ಇಂಗಿನ ಒಗ್ಗರಣೆ ಮಾಡಿ, ಈ ಮಿಶ್ರಣಕ್ಕೆ ಸೇರಿಸಿದರೆ, ಕಹಿ ಅನ್ನಿಸದ ಹಾಗಲಕಾಯಿ ಉಪ್ಪಿನಕಾಯಿ ತಯಾರು.
ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.