ಹೆಸರೊಳಗೆ ಎಲ್ಲಾ ಇದೆ


Team Udayavani, Jan 30, 2019, 12:30 AM IST

e-6.jpg

ವಿಟಮಿನ್‌ ಎ, ಬಿ, ಸಿ, ಇ ಹಾಗೂ ಅಧಿಕ ಖನಿಜಾಂಶಗಳನ್ನು ಒಳಗೊಂಡ ಧಾನ್ಯ ಹೆಸರುಕಾಳು. ಇದು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇರಿಸುತ್ತದೆ. ಜೀರ್ಣಶಕ್ತಿಯನ್ನು ವೃದ್ಧಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೆಸರುಕಾಳಿನಿಂದ ಸುಲಭವಾಗಿ ತಯಾರಿಸಬಹುದಾದ ಕೆಲವೊಂದು ಪಾಕವಿಧಾನಗಳು ಇಲ್ಲಿವೆ. 

1. ಹೆಸರುಕಾಳಿನ ಜ್ಯೂಸ್‌
ಬೇಕಾಗುವ ಸಾಮಗ್ರಿ:  ಹೆಸರುಕಾಳು-1 ಕಪ್‌, ತೆಂಗಿನತುರಿ-1/2 ಕಪ್‌, ಬೆಲ್ಲದ ತುರಿ-1/2 ಕಪ್‌, ಪುದಿನಾ ಸೊಪ್ಪು-8 ಕಡ್ಡಿ, ಏಲಕ್ಕಿ ಪುಡಿ-1/2 ಚಮಚ, ಲಿಂಬೆರಸ-1 ಚಮಚ, ಉಪ್ಪು-1/2 ಚಮಚ

ಮಾಡುವ ವಿಧಾನ: ಹೆಸರುಕಾಳನ್ನು ಐದು ಗಂಟೆ ನೆನೆಸಿ ಬಸಿದು, ತೆಂಗಿನಕಾಯಿ ತುರಿ, ಬೆಲ್ಲದ ತುರಿ, ಪುದಿನಾ ಸೊಪ್ಪು ಸೇರಿಸಿ ನುಣ್ಣಗೆ ಅರೆಯಿರಿ. ಆ ಮಿಶ್ರಣಕ್ಕೆ, ಏಲಕ್ಕಿ ಪುಡಿ, ಲಿಂಬೆರಸ, ಉಪ್ಪು ಸೇರಿಸಿ ಚೆನ್ನಾಗಿ ಕಲಕಿ. ಜ್ಯೂಸ್‌ ಹದಕ್ಕೆ ನೀರು ಬೆರೆಸಿ, ಕಲಕಿದರೆ ರುಚಿಯಾದ ಹೆಸರುಕಾಳಿನ ಜ್ಯೂಸ್‌ ಕುಡಿಯಲು ಸಿದ್ಧ. 

2. ಹೆಸರು ಕಾಳಿನ ಬಸ್ಸಾರು
ಬೇಕಾಗುವ ಸಾಮಗ್ರಿ:
ಹೆಸರು ಕಾಳು-2 ಕಪ್‌, ಅರಿಶಿನ-1/4 ಚಮಚ, ಹುಣಸೆ ರಸ-1/4 ಕಪ್‌, ರಸಂ ಪುಡಿ-3 ಚಮಚ, ಬೆಲ್ಲದ ತುರಿ-2 ಚಮಚ, ಉಪ್ಪು-ರುಚಿಗೆ ತಕ್ಕಷ್ಟು, ಎಣ್ಣೆ-4 ಚಮಚ, ಸಾಸಿವೆ-1 ಚಮಚ, ಇಂಗು-1/4 ಚಮಚ, ಜೀರಿಗೆ-1 ಚಮಚ, ತೆಂಗಿನ ತುರಿ-1/4 ಕಪ್‌, ಕೊತ್ತಂಬರಿ ಸೊಪ್ಪು-3 ಚಮಚ.

ಮಾಡುವ ವಿಧಾನ: ಹೆಸರುಕಾಳನ್ನು ನಾಲ್ಕು ಕಪ್‌ ನೀರು ಹಾಗೂ ಅರಿಶಿನ ಸೇರಿಸಿ ಬೇಯಿಸಿ. ನಂತರ ಶೋಧಿಸಿ, ಕಾಳು ಹಾಗೂ ಕಟ್ಟುಗಳನ್ನು ಬೇರೆಬೇರೆಯಾಗಿ ತೆಗೆದಿರಿಸಿ. ಹೆಸರುಕಾಳಿನ ಕಟ್ಟಿಗೆ, ಹುಣಸೆ ರಸ, ಬೆಲ್ಲದ ತುರಿ, ಉಪ್ಪು ಹಾಗೂ ರಸಂ ಪೌಡರ್‌ ಹಾಕಿ ಕುದಿಸಿ. ಸಾಸಿವೆ- ಇಂಗು- ಜೀರಿಗೆಗಳ ಒಗ್ಗರಣೆ ಹಾಕಿ, ತೆಂಗಿನ ತುರಿ ಹಾಗೂ ಕೊತ್ತಂಬರಿ ಸೊಪ್ಪು ಬೆರೆಸಿ ಅಲಂಕರಿಸಿದರೆ, ಬಸ್ಸಾರು ತಯಾರು. ಬೇಯಿಸಿದ ಹೆಸರುಕಾಳನ್ನು ಪಲ್ಯ ಇಲ್ಲವೇ ಸಾಂಬಾರ್‌ ಮಾಡಲು ಉಪಯೋಗಿಸಿ. 

3. ಹೆಸರು ಕಾಳು ಪರೋಟ
ಬೇಕಾಗುವ ಸಾಮಗ್ರಿ:
ಹೆಸರು ಕಾಳು-1/2 ಕಪ್‌, ಗೋಧಿ ಹಿಟ್ಟು-3 ಕಪ್‌, ಕೊತ್ತಂಬರಿ ಸೊಪ್ಪು-4 ಚಮಚ, ಗರಂ ಮಸಾಲೆ ಪುಡಿ-3 ಚಮಚ, ಜೀರಿಗೆ ಪುಡಿ-2 ಚಮಚ, ಎಣ್ಣೆ-1 ಕಪ್‌, ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಹೆಸರುಕಾಳನ್ನು ಬೇಯಿಸಿ, ಅರೆದು, ಗೋಧಿ ಹಿಟ್ಟು, ಅರ್ಧ ಕಪ್‌ ಎಣ್ಣೆ, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ ಪುಡಿ, ಜೀರಿಗೆ ಪುಡಿ, ಉಪ್ಪು, ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ನಂತರ ಹಿಟ್ಟಿನಿಂದ ಚಿಕ್ಕ ಉಂಡೆ ಮಾಡಿ, ಚಪಾತಿಯಾಕಾರದಲ್ಲಿ ಲಟ್ಟಿಸಿ. ಕಾವಲಿಯ ಮೇಲೆ, ಎಣ್ಣೆ ಇಲ್ಲವೇ ಬೆಣ್ಣೆ ಸವರಿ, ಎರಡೂ ಬದಿಗಳನ್ನು ಬೇಯಿಸಿದರೆ, ಹೆಸರುಕಾಳಿನ ಪರೋಟ ತಯಾರು. 

4. ಹೆಸರು ಕಾಳಿನ ಬರ್ಫಿ
ಬೇಕಾಗುವ ಸಾಮಗ್ರಿ:
ಮೊಳಕೆ ಕಟ್ಟಿದ ಹೆಸರು ಕಾಳು-1/2 ಕಪ್‌, ಸಕ್ಕರೆ-1/2 ಕಪ್‌, ತೆಂಗಿನ ತುರಿ-1 ಕಪ್‌, ಹಾಲು-1/2 ಕಪ್‌, ಏಲಕ್ಕಿ ಪುಡಿ-1/2 ಚಮಚ, ತುಪ್ಪ-1/2 ಕಪ್‌, ತುಪ್ಪದಲ್ಲಿ ಹುರಿದ ಗೋಡಂಬಿ ಮತ್ತು ಬಾದಾಮಿ. 

ಮಾಡುವ ವಿಧಾನ: ಮೊಳಕೆ ಕಟ್ಟಿದ ಹೆಸರುಕಾಳನ್ನು ಬೇಯಿಸಿ, ತರಿತರಿಯಾಗಿರುವಂತೆ ಅರೆಯಿರಿ. ಬಾಣಲೆಯಲ್ಲಿ ಮೂರು ಚಮಚ ತುಪ್ಪ ಕಾಯಿಸಿ, ಅರೆದಿಟ್ಟ ಹೆಸರುಕಾಳುಗಳನ್ನು ಹುರಿಯಿರಿ. ಅದಕ್ಕೆ, ತೆಂಗಿನತುರಿ, ಹಾಲು, ಸಕ್ಕರೆ ಸೇರಿಸಿ ಬಾಡಿಸಿ. ಆ ಮಿಶ್ರಣ ಗಟ್ಟಿಯಾಗುವವರೆಗೆ ನಡುನಡುವೆ ತುಪ್ಪ ಹಾಕಿ, ಮಗುಚುತ್ತಾ ಇರಿ. ಗಟ್ಟಿಯಾದ ಮೇಲೆ, ಏಲಕ್ಕಿ ಪುಡಿ, ಗೋಡಂಬಿ, ಬಾದಾಮಿ ತುಂಡುಗ‌ಳನ್ನು ಹಾಕಿ ಚೆನ್ನಾಗಿ ಬೆರೆಸಿ ಒಲೆಯಿಂದ ಕೆಳಗಿರಿಸಿ. ತುಪ್ಪ ಸವರಿದ ತಟ್ಟೆಗೆ ಮಿಶ್ರಣವನ್ನು ಸಮನಾಗಿ ಹರಡಿ. ತಣ್ಣಗಾದ ಮೇಲೆ, ಬೇಕಾದ ಆಕಾರದಲ್ಲಿ ಕತ್ತರಿಸಿ. 

5. ಹೆಸರು ಕಾಳಿನ ಕಟ್ಲೆಟ್‌
ಬೇಕಾಗುವ ಸಾಮಗ್ರಿ:
ಮೊಳಕೆ ಬಂದ ಹೆಸರು ಕಾಳು-1 ಕಪ್‌, ಬ್ರೆಡ್‌ ಸ್ಲೆ„ಸ್‌-6, ಅಕ್ಕಿ ಹಿಟ್ಟು-3 ಚಮಚ, ಹಸಿಮೆಣಸು- 6 ತುಂಡು, ಈರುಳ್ಳಿ-1/2 ಕಪ್‌, ಕೊತ್ತಂಬರಿ ಸೊಪ್ಪು, ತುರಿದ ಶುಂಠಿ-1 ಚಮಚ, ಗರಂ ಮಸಾಲ ಪುಡಿ-3 ಚಮಚ, ಉಪ್ಪು-ರುಚಿಗೆ, ಎಣ್ಣೆ-1/2 ಕಪ್‌, ಸಾಸಿವೆ, ಅರಿಶಿನ ಪುಡಿ, ಇಂಗು. 

ಮಾಡುವ ವಿಧಾನ: ಮೊಳಕೆ ಬಂದ ಹೆಸರು ಕಾಳುಗಳನ್ನು ಬೇಯಿಸಿ. ಬ್ರೆಡ್‌ ಸ್ಲೆ„ಸ್‌ಗಳನ್ನು ನೀರಿನಲ್ಲಿ ಅದ್ದಿ ತೆಗೆದು, ಕೈಯಿಂದ ಒತ್ತಿ ನೀರು ತೆಗೆದು, ಪುಡಿ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ-ಇಂಗು-ಅರಿಶಿನ ಹಾಕಿ ಒಗ್ಗರಣೆ ಕೊಡಿ. ಅದಕ್ಕೆ ಈರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಗರಂ ಮಸಾಲಾ ಹಾಕಿ ಚೆನ್ನಾಗಿ ಬಾಡಿಸಿ. ಪುಡಿ ಮಾಡಿಟ್ಟ ಬ್ರೆಡ್‌ಗೆ, ಬೇಯಿಸಿದ ಹೆಸರುಕಾಳು, ಬಾಡಿಸಿಟ್ಟ ತರಕಾರಿ, ಅಕ್ಕಿ ಹಿಟ್ಟು, ಉಪ್ಪು, ಶುಂಠಿ ಬೆರೆಸಿ ಚೆನ್ನಾಗಿ ಕಲಕಿ. ಈ ಮಿಶ್ರಣದಿಂದ ಲಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿ, ವಡೆಯ ಆಕಾರದಲ್ಲಿ ತಟ್ಟಿ. ಕಾವಲಿಯ ಮೇಲೆ ಎಣ್ಣೆ ಸವರಿ, ಎರಡೂ ಬದಿಯನ್ನು ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಕಟ್ಲೆಟ್‌ ರೆಡಿ. 

ಜಯಶ್ರೀ ಕಾಲ್ಕುಂದ್ರಿ, ಬೆಂಗಳೂರು

ಟಾಪ್ ನ್ಯೂಸ್

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

BBK11: ಕ್ಯಾಪ್ಟನ್‌ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಏಕದಿನ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

INDWvWIW: ದೀಪ್ತಿ ಶರ್ಮಾ ಆಲ್‌ ರೌಂಡ್‌ ಶೋ; ಸರಣಿ ಕ್ಲೀನ್‌ಸ್ವೀಪ್‌ ಮಾಡಿದ ವನಿತೆಯರು

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

‌Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’

Vishwaprabha Award 2025 to Actor Naveen D. Padil

Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.