ಕಲ್ಲು ಹೋಳಿಗೆ
Team Udayavani, Dec 4, 2019, 4:00 AM IST
ಕೆಲ ವರ್ಷಗಳ ಹಿಂದೆ ನಡೆದ ಘಟನೆ. ದೀಪಾವಳಿ ಹಬ್ಬಕ್ಕೆ ಹೋಳಿಗೆ- ಹೂರಣದ ತಯಾರಿ ನಡೆದಿತ್ತು. ಮನೆಯಲ್ಲಿ ಎಲ್ಲರೂ ಹೋಳಿಗೆ ಪ್ರಿಯರು. ಹಾಗಾಗಿ, ಒಂದು ಕೆ.ಜಿ ಬೇಳೆಯಿಂದ ಹೋಳಿಗೆ ಮಾಡೋಣ ಅಂದುಕೊಂಡಿದ್ದೆ. ಬೇಳೆಗೆ, ಬೆಲ್ಲ ಸೇರಿಸಿ ಗ್ರೈಂಡರ್‌ಗೆ ಹಾಕಿದಾಗ ಕರಕ್ ಕರಕ್ ಎಂಬ ಶಬ್ದ ಕೇಳಿ ಎದೆಯಲ್ಲಿ ಚಳಕ್ ಎಂದಿತು! ಬೆಲ್ಲದಲ್ಲಿ ಕಲ್ಲೇನಾದರೂ ಇತ್ತೇನೋ ಎಂಬ ಆತಂಕ ಶುರುವಾಯಿತು. ಪೂಜೆ- ನೈವೇದ್ಯ ಆಗದೆ ತಿಂದು ನೋಡುವಂತೆಯೂ ಇರಲಿಲ್ಲ. ಮತ್ತೂಮ್ಮೆ ಗ್ರೈಂಡರ್ ಆನ್ ಮಾಡಿದಾಗ, ಶಬ್ದ ಬರಲಿಲ್ಲ. ಏಲಕ್ಕಿ ಕಾಳುಗಳು ಒಡೆದ ಸದ್ದಿರಬೇಕು ಅಂತ ನನಗೆ ನಾನೇ ಸಮಾಧಾನ ಮಾಡಿಕೊಂಡೆ.
ಎಲ್ಲರಿಗೂ ಹೋಳಿಗೆ ತಿನ್ನುವ ತವಕ. ಎರಡು ಹೋಳಿಗೆ ರೆಡಿಯಾಗುತ್ತಿದ್ದಂತೆ ನೈವೇದ್ಯಕ್ಕೆ ರೆಡಿ ಮಾಡಿಕೊಂಡು, ಯಜಮಾನರು ಮತ್ತು ಮಕ್ಕಳು ಪೂಜೆಗೆ ಅಣಿಯಾದರು. ಪೂಜೆ ಮುಗಿಯುತ್ತಿದ್ದಂತೆ ಹೋಳಿಗೆ ಮಾಡಲೂ ಪುರುಸೊತ್ತಿಲ್ಲದಂತೆ ಮೊದಲು ಹೂರಣದ ಪಾತ್ರೆಗೇ ಕೈಹಾಕಿ ಒಂದು ಉಂಡೆ ಹೂರಣವನ್ನು ಬಾಯಿಗೆ ಹಾಕಿಕೊಂಡೇ ಬಿಟ್ಟರು ಮಕ್ಕಳು. ತಕ್ಷಣ ಮುಖ ಸಿಂಡರಿಸುತ್ತಾ, ಥೂ! ಮಮ್ಮಿà, ಕಲ್ಲು ಎಂದು ಸಿಂಕ್ ಬಳಿಹೋಗಿ ಉಗುಳಿ, ಬಾಯಿ ತೊಳೆದುಕೊಂಡು ಬಂದರು. ನಾನು ಅನುಮಾನಪಟ್ಟಂತೆಯೇ ಬೆಲ್ಲದಲ್ಲಿದ್ದ ಕಲ್ಲು ಹೂರಣವನ್ನು ಹಾಳು ಮಾಡಿತ್ತು. ಮತ್ತೆ ಬೇಳೆ ಬೇಯಿಸಿ ಹೂರಣ ತಯಾರಿಸೋಣ ಅಂದ್ರೆ ಆಗಲೇ ಊಟದ ಸಮಯವಾಗಿತ್ತು. ಹತ್ತು ನಿಮಿಷಕ್ಕೆ ಹೆಸರುಬೇಳೆ ಪಾಯಸ ರೆಡಿ ಮಾಡಿದ್ದಾಯಿತು. ಮೇನ್ ಮೆನುವಾದ ಹೋಳಿಗೆಯ ಬದಲಾಗಿ ಮತ್ತೇನು ಮಾಡಿದರೂ ಅದಕ್ಕೆ ಸರಿಸಾಟಿಯಾಗಲು ಸಾಧ್ಯವೆ? ಎಲ್ಲರೂ ಮುಖ ಧುಮ್ಮಿಸಿಕೊಂಡೇ ಊಟ ಮಾಡಿದರು.
ಸಂಜೆ ಮತ್ತೆ ಬೇರೆ ಬೆಲ್ಲ ತರಿಸಿ ಹೋಳಿಗೆ ಮಾಡುವಷ್ಟರಲ್ಲಿ ಹೈರಾಣಾಗಿದ್ದೆ. ಬೆಲ್ಲದಲ್ಲಿ ಕಲ್ಲಿದೆಯಾ ಅಂತ ಚೂರು ಗಮನ ಹರಿಸಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಅಂತ ನನ್ನನ್ನು ನಾನೇ ಬೈದುಕೊಂಡೆ. ಸಂಜೆ ಮಗಳು ದೇವರ ನೈವೇದ್ಯಕ್ಕೆ ಇಟ್ಟ ಹೋಳಿಗೆಯನ್ನು ಕೈಯಲ್ಲಿ ಹಿಡಿದು- ಮಮ್ಮಿ, ಈ ಕಲ್ಲು ಹೋಳಿಗೆಯನ್ನು ಹಸುವಿಗೆ ಹಾಕಿದರೆ ಅದು ತಿನ್ನುತ್ತದಾ? ಅಂತ ಕೇಳಿದಾಗ ಮನೆಮಂದಿಯೆಲ್ಲ ಮುಸಿಮುಸಿ ನಗಲು ಶುರುಮಾಡಿದರು.
-ನಳಿನಿ. ಟಿ. ಭೀಮಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.