ಮನೆಯೇ ಸೌಂದರ್ಯಾಲಯ
Team Udayavani, Apr 29, 2020, 8:25 AM IST
ಸಾಂದರ್ಭಿಕ ಚಿತ್ರ
ಇನ್ನು ಸ್ವಲ್ಪ ದಿನಗಳಲ್ಲಿ ಎಲ್ಲ ಹೆಣ್ಣು ಮಕ್ಕಳ ನಿಜ ಬಣ್ಣ ಬಯಲಾಗುತ್ತದೆ. ಯಾಕಂದ್ರೆ, ಎಲ್ಲ ಬ್ಯೂಟಿ ಪಾರ್ಲರ್‌ಗಳು ಕ್ಲೋಸ್ ಆಗಿವೆಯಲ್ಲ- ಹೀಗೊಂದು ಜೋಕ್ ಎಲ್ಲ ಕಡೆ ಹರಿದಾಡುತ್ತಿದೆ. ಅದನ್ನು ಓದಿ, ನಕ್ಕು ಸುಮ್ಮನಾಗಿಬಿಡಿ. ಮನೆಯಲ್ಲಿಯೇ ಸಿಗುವ ಸಾಮಗ್ರಿಗಳಿಂದ, ಸೌಂದರ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಪಾರ್ಲರ್‌ನ ಫೇಶಿಯಲ್, ಮೆನಿಕ್ಯೂರ್, ಪೆಡಿಕ್ಯೂರ್ ಸೌಲಭ್ಯಗಳನ್ನು ಮನೆಯಲ್ಲಿಯೇ ಪಡೆಯುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
∙ ಲಿಂಬೆ ರಸಕ್ಕೆ ಸಕ್ಕರೆ/ ಜೇನುತುಪ್ಪ ಹಾಕಿ, ಅಂಟಾದ ಆ ಮಿಶ್ರಣದಿಂದ ಮಸಾಜ್ ಮಾಡಿದರೆ ಮುಖದ ಮೇಲಿನ ರೋಮ ಉದುರುತ್ತದೆ.
∙ ಚಿಟಿಕೆ ಅರಿಶಿಣಕ್ಕೆ ಸ್ವಲ್ಪ ಕಡಲೆ ಹಿಟ್ಟು ಬೆರೆಸಿ ಹಚ್ಚಿದರೆ, ತುಟಿಯ ಮೇಲಿನ ಕೂದಲ ಬೆಳವಣಿಗೆ ಕಡಿಮೆಯಾಗುತ್ತದೆ.
∙ ತಾಜಾ ಅಲೋವೆರಾ (ಲೋಳೆಸರ) ಜೊತೆಗೆ ಲಿಂಬೆರಸ, ರೋಸ್ ವಾಟರ್ ಬೆರೆಸಿ ಮುಖಕ್ಕೆ ಮಸಾಜ್ ಮಾಡಿ.
∙ ಹುಬ್ಬಿನ ಕೂದಲು ದಟ್ಟವಾಗಿ ಬೆಳೆದಿದ್ದರೆ, ಐ ಬ್ರೋ ಟ್ರಿಮ್ಮರ್/ ಪ್ಲಕರ್ ಬಳಸಿ ಹೆಚ್ಚಿನ ಕೂದಲನ್ನು ಮಾತ್ರ ತೆಗೆಯಿರಿ. ಹುಬ್ಬಿನ ಮೇಲೆ ಹಾಲಿನ ಕೆನೆ ಹಚ್ಚಿಕೊಂಡರೆ ಅಥವಾ ಕಾಡಿಗೆಯಿಂದ ಗೆರೆ ಎಳೆದುಕೊಂಡರೆ ಎಕ್ಸ್ ಟ್ರಾ ಕೂದಲನ್ನು ಗುರುತಿಸಲು ಸುಲಭವಾಗುತ್ತದೆ.
∙ ಹಾಲಿನ ಕೆನೆ ಹಚ್ಚಿ, ಪ್ರತಿನಿತ್ಯ ಮುಖಕ್ಕೆ ಮಸಾಜ್ ಮಾಡಿಕೊಳ್ಳಿ.
∙ ಪಪಾಯ ಹಣ್ಣಿನ ರಸದಿಂದ ಫೇಶಿಯಲ್ ಮಾಡಿಕೊಳ್ಳಬಹುದು.
∙ ಸೋಪ್/ ಫೇಸ್ ವಾಶ್ ಬದಲು, ಕಡಲೆಹಿಟ್ಟು ಬಳಸಿ ಮುಖ ತೊಳೆದುಕೊಳ್ಳಿ.
∙ ಕಡಲೆ ಹಿಟ್ಟು, ಮೊಸರು, ಅರಿಶಿನ, ಜೇನುತುಪ್ಪ, ರೋಸ್ ವಾಟರ್ ಮತ್ತು ಗಂಧದ ಪುಡಿಯನ್ನು ಬೆರೆಸಿ, ಮುಖಕ್ಕೆ ಮಸಾಜ್ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.
∙ ಬೆಚ್ಚಗಿನ ನೀರಿಗೆ ಕಲ್ಲುಪ್ಪು ಹಾಕಿ, ಅದರಲ್ಲಿ ಅಂಗಾಲನ್ನು ಮುಳುಗಿಸಿ ಕುಳಿತುಕೊಳ್ಳಿ. ಹೀಗೆ ಮಾಡಿದರೆ ಕಾಲಿನ ಸತ್ತ ಚರ್ಮಗಳು ದೂರಾಗಿ, ತ್ವಚೆ ಕೋಮಲವಾಗುತ್ತದೆ.
ಕಿವಿಮಾತು
∙ ಸ್ಕಿನ್ ಫಾಸ್ಟಿಂಗ್ ಮಾಡಲು ಇದು ಒಳ್ಳೆಯ ಸಮಯ. ಸ್ಕಿನ್ ಫಾಸ್ಟಿಂಗ್ ಅಂದರೆ, ವಾರಗಳ ಕಾಲ ರಾಸಾಯನಿಕ ಸೌಂದರ್ಯ ಉತ್ಪನ್ನಗಳನ್ನು ಬಳಸದೇ ಇರುವುದು. ಹಾಗೆ ಮಾಡುವುದರಿಂದ, ಚರ್ಮದ ಉಸಿರಾಟ ಸರಾಗವಾಗಿ ತ್ವಚೆಯ ಕಾಂತಿ ಹೆಚ್ಚುತ್ತದೆ.
∙ ಹೇರ್ ಡ್ರೈಯರ್ , ಹೇರ್ ಕಂಡಿಷನರ್ ಬಳಸಬೇಡಿ.
∙ ಪ್ರತಿನಿತ್ಯ ಕೂದಲಿಗೆ ಎಣ್ಣೆ ಹಚ್ಚಿದರೆ ಒಳ್ಳೆಯದು.
∙ ಮನೆಯಲ್ಲೇ ಇರುವುದರಿಂದ, ಬಾಯಾರಿಕೆ ಆಗದಿದ್ದರೂ ಹೆಚ್ಚೆಚ್ಚು ನೀರು ಕುಡಿಯಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.