ಅವಳಿಗೂ ಒಂದು ದಿನ ಇರಬೇಕಿತ್ತು…
Team Udayavani, Sep 23, 2020, 8:27 PM IST
ಸಾಂದರ್ಭಿಕ ಚಿತ್ರ
ಬೆಳಗ್ಗೆ ಬೇಗನೆ ಎದ್ದು, ಅವತ್ತು ಮಾಡಬೇಕಿರುವ ಕೆಲಸಗಳನ್ನೆಲ್ಲಾ ನೆನಪಿಗೆ ತಂದುಕೊಂಡು, ನಂತರ ಮನೆಯ ಎಲ್ಲರನ್ನೂ ಎಬ್ಬಿಸುವುದರ ಮೂಲಕ ಅವಳ ಬೆಳಗು ಶುರುವಾಗುತ್ತದೆ.ಬೆಳಗಿನಿಂದ ಸಂಜೆಯವರೆಗೂ ಮನೆಯ ಎಲ್ಲರ ಬೇಕು- ಬೇಡಗಳನ್ನು ಗಮನಿಸುವುದು, ಯಾರಿಗೂ ಬೇಸರ ಆಗದಂತೆ ನೋಡಿಕೊಳ್ಳುವುದು, ಎಲ್ಲರಿಗೂ ಇಷ್ಟ ಆಗುವಂಥ ಅಡುಗೆ ಸಿದ್ಧಪಡಿಸುವುದು, ಬಟ್ಟೆ ಬರೆಗಳನ್ನು ಜೋಡಿಸಿಕೊಟ್ಟು, ಎಲ್ಲರನ್ನೂ ಅವರವರ ಕೆಲಸಗಳಿಗೆ ಕಳಿಸಿದ ಮೇಲೆಯೇ ಅವಳಿಗಿಷ್ಟು ವಿಶ್ರಾಂತಿ
ಸಿಗುವುದು. ಆ ಬಿಡುವಿನಲ್ಲಿ ಒಂದು ನಿರಾಳವಾದ ಉಸಿರು ಬಿಡುವವಳು. ತನಗೆ ಆಗುವ ಆಯಾಸದ ಬಗ್ಗೆ ಯಾರಿಗೂ ಹೇಳಿಕೊಳ್ಳದವಳು, ಮನೆಮಂದಿಯೆಲ್ಲಾ ಚೆನ್ನಾಗಿರಲಿ ಎಂದು ಪ್ರತಿ ಕ್ಷಣವೂ ಹಂಬಲಿಸುವವಳು, ಎಲ್ಲರೂ ಖುಷಿ ಪಡುವುದನ್ನುಕಂಡು ತನ್ನ ನೋವು ಮರೆತು ನಗುವವಳು- ಆಕೆ ಪ್ರತಿ ಮನೆಯ ಗೃಹಿಣಿ. ಬೆಳಗಿನಿಂದ ಸಂಜೆಯವರೆಗೂ ಯಂತ್ರದಂತೆ ದುಡಿಯುತ್ತಲೇ ಇರುವುದು ಅವಳಿಗೆ ಸಂತಸವನ್ನು ನೀಡುತ್ತದೆ ನಿಜ, ಆದರೆ, ತನ್ನ ಶ್ರಮವನ್ನು, ತನಗೆ ಆಗುವ ಕಷ್ಟವನ್ನು ಮನೆಯ ಜನರು ಅರ್ಥ ಮಾಡಿಕೊಳ್ಳಲಿ ಎಂಬ ಸಣ್ಣದೊಂದು ಆಸೆ ಕೂಡ ಆಕೆಗೆ ಇರುತ್ತದೆ. ಒಂದುದಿನವಾದರೂ ತಾನೂಎಲ್ಲಜವಾಬ್ದಾರಿಗಳಿಂದಹೊರತಾದ ಜೀವನ ನಡೆಸಬೇಕೆಂದು ಆಕೆ ಆಸೆ ಪಡುತ್ತಿರುತ್ತಾಳೆ. ವಾರದಲ್ಲಿ ಅಥವಾ ತಿಂಗಳಲ್ಲಿ ಒಂದು ದಿನ, ಗಂಡ ಅಥವಾ ಮಕ್ಕಳು- “ಇವತ್ತು ಒಂದು ದಿನ ನೀನು ಫ್ರೀಯಾಗಿ ಇದ್ದುಬಿಡು. ಇವತ್ತು ಇಡೀ ದಿನ ನಿನಗೆ ಬಿಡುವು. ಮನೆಯ ಎಲ್ಲಾ ಕೆಲಸ ವನ್ನೂ ನಾವು ಮಾಡುತ್ತೇವೆ. ತಿಂಡಿ,ಊಟ ಎಲ್ಲ ನಮ್ದೆ, ಆದರೆ ಏನು ಮಾಡಬೇಕು
ಎಂದು ಆರ್ಡರ್‌ಮಾಡುವ ಹಕ್ಕುನಿನ್ನದು’ಅಂದುಬಿಟ್ಟರೆ ಆ ತಾಯಿಯ ಹೃದಯ ಅದೆಷ್ಟು ಸಂತಸಪಡುತ್ತೋ… ಗೃಹಿಣಿಯ ಪ್ರಪಂಚ ತುಂಬ ಚಿಕ್ಕದು. ಗಂಡ ಮತ್ತು ಮಕ್ಕಳ ಪಾಲಿಗೆ ಹೊರಗಿನ ಪ್ರಪಂಚ ತೆರೆದುಕೊಂಡಿ ರುತ್ತದೆ. ಆದರೆ ಗೃಹಿಣಿಯ ಪಾಲಿಗೆ ಮನೆಯೇ ಪ್ರಪಂಚ ಆಗಿರುತ್ತದೆ. ಗಂಡನೋ, ಮಕ್ಕಳ್ಳೋ ಯಶಸ್ಸು ಪಡೆದರೆ, ಅದೇ ತನ್ನ ಯಶಸ್ಸು ಎಂದು ಆಕೆ ಹಿಗ್ಗುತ್ತಾಳೆ. ಇದನ್ನೆಲ್ಲಾ ಗಮನಿಸಿದಾಗಲೇ ಅನಿಸುತ್ತದೆ: ಅಮ್ಮನ ದಿನ, ಅಪ್ಪನ ದಿನ, ಮಹಿಳಾ ದಿನ… ಹೀಗೆ ಎಷ್ಟೊಂದು ದಿನಗಳು ಇವೆಯಲ್ಲ; ಹಾಗೆಯೇ, ಗೃಹಿಣಿಯರ ದಿನ ಅಂತಲೂ ಇದ್ದಿದ್ದರೆ ಚೆನ್ನಾಗಿರ್ತಾ ಇತ್ತೇನೋ..
-ಜ್ಯೋತಿ ರಾಜೇಶ್, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.