ಗೃಹಿಣಿ ಏಕೆ ಮಲ್ಯನಿಗಿಂತ ಗ್ರೇಟ್ ಅಂದ್ರೆ…
Team Udayavani, Aug 9, 2017, 2:30 PM IST
ಮನೆಯ, ಗಂಡ ಮಾಡಿದ ಸಾಲ ತಿರಿಸಲು ಗೃಹಿಣಿ ನಾನಾ ಮಾರ್ಗಗಳನ್ನು ಕಂಡುಕೊಳ್ಳುತ್ತಾಳೆ. ಆಕೆ ಯಾವತ್ತೂ ಉದ್ಯಮಿ ವಿಜಯ ಮಲ್ಯ ಅವರಂತೆ ಸಾಲಕ್ಕೆ ಬೆನ್ನು ಹಾಕಿ ಪರಾರಿ ಆಗುವುದಿಲ್ಲ…
ಹುಡುಗಿಯರಿಗೆ ಶಾಪಿಂಗ್ ಹುಚ್ಚು ಜಾಸ್ತಿ, ಬಾಯ್‌ಫ್ರೆಂಡ್ ಹಣವನ್ನೆಲ್ಲ ಖರ್ಚು ಮಾಡ್ತಾರೆ ಅಂತೆಲ್ಲ ಅಪವಾದಗಳಿವೆ. ಅದು ನಿಜವೋ, ಸುಳ್ಳೋ… ಗೊತ್ತಿಲ್ಲ. ಆದರೆ, ಅದೇ ಹೆಣ್ಣು ಸಂಸಾರದ ಹೊಸ್ತಿಲನ್ನು ಪ್ರವೇಶಿಸಿದ ಬಳಿಕ, ಆಕೆಗೆ ಗೃಹಿಣಿಯ ಪಟ್ಟ ಸಿಗುತ್ತದೆ. ಜವಾಬ್ದಾರಿಯೊಂದು ಹೆಗಲೇರುತ್ತದೆ. ಉಳಿತಾಯದ ಕಡೆಗೆ ಹೆಚ್ಚು ಗಮನ ಕೊಡುವ ಆಕೆ, ಹಣ ಉಳಿಸುವಲ್ಲಿ ಎಕ್ಸ್‌ಪರ್ಟ್ ಆಗುತ್ತಾಳೆ. ರೂಪಾಯಿ- ರೂಪಾಯಿಗೂ ಲೆಕ್ಕಹಾಕಿ, ಗಂಡ ಮಾಡಿದ ಸಾಲವನ್ನೂ ತೀರಿಸುವಷ್ಟು ಸಮರ್ಥಳು ಆಕೆ.
ಅಷ್ಟಕ್ಕೂ ಗೃಹಿಣಿ ಸಾಲ ತೀರಿಸಲು ಬಳಸುವ ತಂತ್ರಗಳು ಯಾವುವು? ಮಾದರಿ ಗೃಹಿಣಿಯೊಬ್ಬಳು ಮನೆಯಲ್ಲಿ ಹೇಗೆಲ್ಲ ಉಳಿತಾಯ ಮಾಡ್ತಾಳೆ? ಇಲ್ಲಿದೆ ಮಾಹಿತಿ…
1. ಗೃಹಿಣಿ ತಿಂಗಳ ಖರ್ಚುವೆಚ್ಚದ ಪ್ಲಾನ್ ಅನ್ನು ರೂಪಿಸಿಕೊಳ್ಳುತ್ತಾಳೆ. ಮಕ್ಕಳ ಸ್ಕೂಲ್ ಫೀ, ಕಟ್ಟಬೇಕಾದ ಎಲ್ಲ ಬಗೆಯ ಬಿಲ್‌ಗಳು, ದೈನಂದಿನ ಖರ್ಚು- ಹೀಗೆ ತಿಂಗಳ ಎಲ್ಲ ವೆಚ್ಚವನ್ನೂ ಗಮನದಲ್ಲಿಟ್ಟುಕೊಂಡು ಒಂದು ಬಜೆಟ್ ತಯಾರಿಸಿಕೊಳ್ತಾಳೆ. ಅದರಲ್ಲಿ ಸೇವಿಂಗ್ಸ್‌ಗೂ (ಉಳಿತಾಯ) ಹಣ ಉಳಿಕೆಯಾಗುವಂತೆ ನೋಡಿಕೊಳ್ಳುತ್ತಾಳೆ.
2. ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ತಾಳೆ. ವೆಚ್ಚದ ಪಟ್ಟಿಯಲ್ಲಿ ದೈನಂದಿನ ಖರ್ಚನ್ನು ಬರೆದಿಡ್ತಾಳೆ. ಶಾಪಿಂಗ್ ಮಾಡುವಾಗ ಕಂಡ ಕಂಡ ವಸ್ತುಗಳನ್ನೆಲ್ಲ ಖರೀದಿಸಲು ಹೋಗುವುದಿಲ್ಲ. ಅವಶ್ಯಕ ವಸ್ತುಗಳನ್ನಷ್ಟೇ ಪಟ್ಟಿಮಾಡಿ, ಅತಿ ಅತ್ಯವಶ್ಯವಿರುವ ವಸ್ತುಗಳನ್ನಷ್ಟೇ ಖರೀದಿಸುತ್ತಾಳೆ.
3. ಹಾಗೆಯೇ ಖರೀದಿ ಮಾಡುವಾಗ ಎಚ್ಚರ ವಹಿಸುತ್ತಾಳೆ. ಮಾಲ್, ಅಂಗಡಿ, ಆನ್‌ಲೈನ್ ಶಾಪಿಂಗ್- ಹೀಗೆ ಎಲ್ಲ ಕಡೆಗಳಲ್ಲೂ ಉತ್ತಮ ಗುಣಮಟ್ಟ ಮತ್ತು ಬೆಲೆಯನ್ನು ತುಲನೆ ಮಾಡುತ್ತಾಳೆ. ಅಗ್ಗದ ಆದರೆ ಒಳ್ಳೆಯ ಗುಣಮಟ್ಟದ ವಸ್ತುಗಳನ್ನೇ ಖರೀದಿ ಮಾಡಿ, ತಿಂಗಳ ಸಾಮಾನುಗಳನ್ನು ಒಮ್ಮೆಗೇ ಖರೀದಿಸುತ್ತಾಳೆ. ಡಿಸ್ಕೌಂಟ್, ಆಫರ್‌ಗಳನ್ನು ಆಕೆ ಯಾವತ್ತೂ ಬಿಡೋದಿಲ್ಲ.
4. ಹೋಟೆಲ್ ಊಟಕ್ಕಿಂತ, ಮನೆಯ ಊಟ ಆರೋಗ್ಯಕ್ಕೆ ಹಿತ ಅಂತ ಗಂಡನಿಗೆ ಸಾವಿರ ಸಲ ಹೇಳಿ, ಅಲ್ಲೂ ಹಣ ಉಳಿಸುತ್ತಾಳೆ. ಆಟೋ, ಕ್ಯಾಬ್ ಅಂತ ಆಕೆ ನಂಬಿ ಕೂರುವುದಿಲ್ಲ. ಕೆಲವು ಕಡೆಗಳಿಗೆ ನಡೆದುಕೊಂಡೇ ಹೋಗುತ್ತಾಳೆ.
5. ಮಾದರಿ ಗೃಹಿಣಿ ಯಾವತ್ತೂ ಪತಿಯ ಗಳಿಕೆಯ ಶೇ.10ರಷ್ಟನ್ನು, ಬ್ಯಾಂಕಿನಲ್ಲಿ ಕಟ್ಟಲು ನಿರ್ಧರಿಸುತ್ತಾಳೆ. ಪ್ರಧಾನಮಂತ್ರಿ ಜನಧನ್ ಯೋಜನೆಯಂಂಥ ಸೇವಿಂಗ್ಸ್ ಖಾತೆಗಳನ್ನು ತೆಗೆದು, ಅಲ್ಲೂ ಉಳಿತಾಯ ಮಾಡುತ್ತಾಳೆ. ಧರಿಸುವ ಉಡುಪುಗಳು “ಬ್ರಾಂಡೆಡ್’ ಆಗಬೇಕೆಂದೇನೂ ಆಕೆ ಬಯಸುವುದಿಲ್ಲ. ಹಳೆಯ ಬಟ್ಟೆಯನ್ನು ತಾನು ಧರಿಸಿ, ಮಕ್ಕಳಿಗೆ ಹೊಸ ಬಟ್ಟೆ ಕೊಡಿಸುತ್ತಾಳೆ.
6. ಮನೆಯಲ್ಲಿ ಇದ್ದುಕೊಂಡು ಪೇಂಟಿಂಗ್, ಟೈಲರಿಂಗ್, ಕಸೂತಿ ಕಲೆಗಳನ್ನು ಕಲಿತು, ಅದರಿಂದ ಬದುಕಿನ ದಾರಿಯನ್ನೂ ಆಕೆ ಕಂಡುಕೊಳ್ಳಬಲ್ಲಳು.
7. ಸಣ್ಣಪುಟ್ಟ ವಿಚಾರಗಳನ್ನು ಆಕೆ ಗಮನದಲ್ಲಿಟ್ಟುಕೊಳ್ಳುತ್ತಾಳೆ: ಮೊಬೈಲಿಗೆ ಪೋಸ್ಟ್‌ಪೇಯ್ಡ ಕನೆಕ್ಷನ್ ಬದಲು ಪ್ರಿಪೇಯ್ಡ ಕನೆಕ್ಷನ್ ಹಾಕಿಸಿಕೊಳ್ಳುತ್ತಾಳೆ.
ರಾಜೇಶ್ವರಿ ಜಯಕೃಷ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.