ಸ್ಪೀಕಿಂಗ್ ಸ್ತ್ರೀ : ಭಗವಂತನನ್ನು ನೋಡುವುದು ಹೇಗೆ?


Team Udayavani, Aug 12, 2020, 4:15 PM IST

ಸ್ಪೀಕಿಂಗ್ ಸ್ತ್ರೀ :  ಭಗವಂತನನ್ನು ನೋಡುವುದು ಹೇಗೆ?

ಬಾಲಕ ಗೋಪಿಗೆ ದೇವರಲ್ಲಿ ತುಂಬಾ ಭಕ್ತಿ. ದೇವರನ್ನು ನೋಡಬೇಕೆಂಬ ಮಹದಾಸೆ. ದೇವರು ಹೇಗಿರಬಹುದು? ಆಕಸ್ಮಿಕವಾಗಿ ನನಗೆ ಕಂಡರೆ ನಾನು ಅವನನ್ನು ಗುರುತಿಸಲಾಗುವುದೇ? ಮುಂತಾಗಿ ಭಗವಂತನ ಬಗ್ಗೆ ಯೋಚಿಸುತ್ತಾ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು - ನಾನು ನಿನ್ನ ಜೊತೆಯಲ್ಲೇ ಇದ್ದೇನೆ ಎಂದು. ಆಗ ಗೋಪಿ, ಅದು ತನ್ನ ಭ್ರಮೆ ಇರಬಹುದು ಎಂದುಕೊಂಡ.

ಪುನಃ- “ನಾನು ನಿನ್ನ ಜೊತೆಯಲ್ಲೇ ಇದ್ದೇನೆ’; ಎಂದಿತು ಆ ಧ್ವನಿ. “ನೀನು ನನ್ನ ಜೊತೆಯಲ್ಲಿರುವೆ ಎನ್ನುವುದಕ್ಕೇನು ಸಾಕ್ಷಿ?’ ಎಂದ ಗೋಪಿ. “ನೀನು ಮೂರು ಹೆಜ್ಜೆಯಿಟ್ಟು, ಹಿಂದೆ ತಿರುಗಿನೋಡು’ ಎಂಬ ಉತ್ತರ ಬಂತು ಆ ಕಡೆಯಿಂದ. ಗೋಪಿ ಹಾಗೆಯೇ ಮಾಡಿದ. ಅವನ ಮೂರೂ ಹೆಜ್ಜೆಗಳ ಪಕ್ಕಪಕ್ಕದಲ್ಲಿಯೇ ಮೂರು ಹೆಜ್ಜೆಗಳಿದ್ದವು. ನಂತರ ಅವನು ಅದನ್ನು ಪರೀಕ್ಷಿಸಲು, ಪುನಃ ಹಾಗೆ ಮಾಡಿ ಖಚಿತಪಡಿಸಿಕೊಂಡ. ಗೋಪಿಗೆ ತುಂಬಾ ಸಂತೋಷವಾಯಿತು.

ಹೀಗಿರಲು ಒಂದು ದಿನ ಅವನು ತಿರುಗಿ ನೋಡಿದಾಗ ಅವನ ಹೆಜ್ಜೆಗಳ ಜೊತೆ ಬೇರೆ ಹೆಜ್ಜೆಗಳೇ ಇರಲಿಲ್ಲ. ಅವನಿಗೆ ತುಂಬಾ ದುಃಖವಾಯಿತು. “ನಾನೇನು ತಪ್ಪು ಮಾಡಿದೆ? ನನ್ನನ್ನು ನೀನೇಕೆ ಬಿಟ್ಟುಹೋದೆ? ನಾನು ನಿನ್ನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ’ ಎನ್ನುತ್ತಾ ಕುಳಿತ. ಆಗ ಅವನ ಮನದಾಳದಿಂದ- “ನಾನು ನಿನ್ನೊಳಗೇ ಇದ್ದೇನೆ’ ಎನ್ನುವ ಧ್ವನಿ ಕೇಳಿಸಿತು. “ನಾನು ನಿನ್ನನು ಹೇಗೆ ನೋಡಲಿ?’ ಎಂದು ಗೋಪಿ ಕೇಳಿದ. ಆಗ ಪುನಃ ಒಳಗಿನಿಂದ ಧ್ವನಿ ಬಂತು- “ಕಣ್ಣುಮುಚ್ಚಿ, ಹೊರಜಗತ್ತನ್ನು ಮರೆತು ನಿನ್ನೊಳಗೆ ನೀನು ನೋಡು. ಆಗ ನನ್ನನ್ನು ನೋಡಬಹುದು. ನಾನು ಎಲ್ಲೆಲ್ಲಿಯೂ ಇದ್ದೇನೆ’… “ಹಾಗಾದರೆ ನೀನು ಯಾರಿಗೂ ಏಕೆ ಕಾಣುವುದಿಲ್ಲ?’ ಗೋಪಿಗೆ ಇನ್ನೂ ಅನುಮಾನ. ಆಗ ಭಗವಂತ ಹೇಳಿದ- “ಕಸದರಾಶಿಯ ಮಧ್ಯದಲ್ಲಿ, ಅಮೂಲ್ಯ ರತ್ನವೊಂದನ್ನಿಟ್ಟು, ಸಾವಿರಾರು ದೀಪಗಳನ್ನೇ ಹಚ್ಚಿರಲಿ ಅಥವಾ ಸೂರ್ಯನ ಬೆಳಕೇ ಇರಲಿ, ಆ ರತ್ನವು ಕಾಣದು. ಹಾಗೆಯೇ ಮನದಲ್ಲಿ ದ್ವೇಷ- ಅಸೂಯೆ- ಅಸಮಾಧಾನ- ಅಹಂಕಾರಗಳು ತುಂಬಿಕೊಂಡಿದ್ದರೆ ಭಗವಂತನನ್ನ ಕಾಣಲು ಸಾಧ್ಯವಿಲ್ಲ. ನಿರ್ಮಲವಾದ ಮನಸ್ಸು, ನೋಡಬೇಕೆಂಬ ಹಂಬಲ, ಅದಕ್ಕನುಗುಣವಾದ ಸಾಧನೆಗಳಿದ್ದರೆ ನನ್ನನ್ನು ನೋಡಬಹುದು…’ ದೇವರನ್ನು ನೋಡುವುದೆಂತು ಎಂಬ ಬಗ್ಗೆ ನಮ್ಮೆಲ್ಲರಿಗೂ ಈ ಕಥೆ ಪಾಠವಾಗಲಿ.­

ಟಾಪ್ ನ್ಯೂಸ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

World Test Championship: ಪರ್ತ್‌ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ

Beirut ಮೇಲೆ ದಾಳಿ…ಇಸ್ರೇಲ್‌ ಮೇಲೆ 250 ರಾಕೆಟ್‌ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.