ಚೆಂದುಟಿಯ ಚೆಲುವು ಬೇಕಿದ್ದರೆ…
Team Udayavani, Jan 15, 2020, 4:12 AM IST
ಚಳಿಗಾಲದಲ್ಲಿ ಶೀತ ವಾತಾವರಣವು ತುಟಿಗಳನ್ನು ಬೇಗನೆ ಒಣಗಿಸುತ್ತದೆ. ಕಳೆಗುಂದಿದ ತುಟಿಗಳಿಂದಾಗಿ ಮುಖವು ನಿಸ್ತೇಜವಾಗಿ ಕಾಣಬಹುದು. ಹಾಗಾಗಿ, ಈ ಸಮಯದಲ್ಲಿ ತುಟಿಗಳ ಆರೈಕೆ ಮಾಡುವುದು ಅತ್ಯಗತ್ಯ. ಮೃದುವಾದ ಅಧರಗಳಿಗಾಗಿ ಈ ಸಲಹೆಗಳನ್ನು ಪಾಲಿಸಿ.
– ಮುಖದಂತೆ ತುಟಿಗಳಿಗೂ ಸ್ಕ್ರಬ್ ಮಾಡುವ ಅಗತ್ಯವಿದೆ. ಲಿಪ್ ಸ್ಕ್ರಬರ್ (ಮಾರ್ಕೆಟ್‌ನಲ್ಲಿ ಸಿಗುತ್ತದೆ), ಸತ್ತ ಚರ್ಮದ ಕೋಶಗಳನ್ನು ತೆಗೆಯುತ್ತದೆ. ನೆನಪಿಡಬೇಕಾದ ಅಂಶವೆಂದರೆ, ಸ್ಕ್ರಬರ್‌ನಿಂದ ತುಟಿಗಳನ್ನು ಗಟ್ಟಿಯಾಗಿ ಉಜ್ಜದೆ, ಲಘವಾಗಿ ಉಜ್ಜಿ, ನಂತರ ಲಿಪ್‌ಬಾಮ್ ಹಚ್ಚಿ.
-ಕಾಫಿ ಪುಡಿ ಮತ್ತು ಜೇನು ತುಪ್ಪವನ್ನು ಬೆರೆಸಿ ಸ್ಕ್ರಬ್ ತಯಾರಿಸಿ, ತುಟಿಗಳಿಗೆ ವೃತ್ತಾಕಾರವಾಗಿ ಮಸಾಜ್ ಮಾಡಿ. ಸ್ವಲ್ಪ ಹೊತ್ತಿನ ನಂತರ, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.
-ಚಳಿಗಾಲದ ತುಟಿಯ ಆರೈಕೆಯಲ್ಲಿ ಲಿಪ್‌ಬಾಮ್‌ನ ಪಾತ್ರ ಮಹತ್ವದ್ದು. ಅಂಗಡಿಯಲ್ಲಿ ಸಿಗುವ ಬಾಮ್‌ಗಳನ್ನಲ್ಲದೆ, ರೋಸ್ ವಾಟರ್, ತೆಂಗಿನೆಣ್ಣೆ, ಪೆಟ್ರೋಲಿಯಮ್ ಜೆಲ್ಲಿ ಮತ್ತು ಗ್ಲಿಸರಿನ್‌ಅನ್ನು ಸಮ ಪ್ರಮಾಣದಲ್ಲಿ ಬೆರೆಸಿ, ನಯವಾಗಿ ತುಟಿಗಳಿಗೆ ಸವರಿಕೊಳ್ಳಬಹುದು.
– ಹೆಚ್ಚು ನೀರು ಕುಡಿದು, ಚರ್ಮದ, ಆ ಮೂಲಕ ತುಟಿಗಳ ಆರೋಗ್ಯ ಕಾಪಾಡಿ.
-ಮಲಗುವ ಮುನ್ನ ಲಿಪ್‌ಸ್ಟಿಕ್ ತೆಗೆದು, ಲಿಪ್‌ಬಾಮ್ ಸವರಿಕೊಳ್ಳಿ.
-ತುಟಿಯನ್ನು ಆಗಾಗ ನಾಲಗೆಯಿಂದ ಸವರಿಕೊಳ್ಳಬೇಡಿ.
-ಬಾಯಿ ತೆರೆದು ಉಸಿರಾಡಬೇಡಿ. ಹಾಗೆ ಉಸಿರಾಡುವಾಗ, ಶುಷ್ಕ ಗಾಳಿಯು ತುಟಿಗಳ ಮೇಲೆ ಬೀಸುವುದರಿಂದ ಚರ್ಮ ಒಣಗುತ್ತದೆ.
-ಮೇಘನಾ ರೂಪೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.