ಓಡಿ ಬರುವ ಸೀರೆ!


Team Udayavani, Dec 12, 2018, 6:00 AM IST

get ilakal saree online

ನಾರಿಯರ ನೆಚ್ಚಿನ ಇಳಕಲ್ಲ ಸೀರೆ ಈಗ ಮರುಜನ್ಮ ಪಡೆದು, ಆನ್‌ಲೈನ್‌ ಒಳಗೆ ಹೋಗಿ, ಮಾರಾಟಕ್ಕೆ ಕುಳಿತಿದೆ. ಬುಕಿಂಗ್‌ ಮಾಡಿದ ಕೆಲವೇ ದಿನದಲ್ಲಿ ಮನೆ ಬಾಗಿಲಿಗೇ ಸೀರೆ ಬರುತ್ತದೆ. ಇದೇ ಆನ್‌ಲೈನ್‌ ಮಾರ್ಗವಾಗಿಯೇ ಇಳಕಲ್ಲ ಸೀರೆ ವಿದೇಶಕ್ಕೂ ದಾಟುತ್ತಿದೆ. ಈ ಆನ್‌ಲೈನ್‌ ಪ್ರಯೋಗಕ್ಕೆ ನಾಂದಿ ಹಾಡಿದವರು ವಿಜಯ ಕುಮಾರ ಗುಳೇದ…

“ಇಳಕಲ್‌ ಸೀರೆ ಉಟ್ಕೊಂಡು, ಮೊಣಕಾಲ್‌ಗ‌ಂಟ ಎತ್ಕೊಂಡು…’ ಎನ್ನುವ ಹಾಡನ್ನು ಕೌರವನೇ ರೊಮ್ಯಾಂಟಿಕ್‌ ಆಗಿ ಹಾಡಬೇಕಿಲ್ಲ. ಯಾರೇ ಸುಂದರಿ ಆ ಸೀರೆ ಉಟ್ಟರೂ, ಹಾಗೊಂದು ಹಾಡು ಹೃದಯದೊಳಗೆ ಆರ್ಕೇಸ್ಟಾವನ್ನೇ ನಡೆಸುತ್ತೆ. ಇಳಕಲ್ಲ ಸೀರೆಯ ವೈಯ್ನಾರವೇ ಒಂದು ರಾಗಲಹರಿ. ಈ ಹಾಡೇನೋ ಶಾಶ್ವತವಾಗಿ ನಮ್ಮ ಗೂಡೊಳಗೆ ಪ್ಲೇ ಆಗುತ್ತಿರಬಹುದು; ಆದರೆ, ಇಳಕಲ್‌ ಸೀರೆ ನೇಯುವ ನೇಕಾರರ ಮಗ್ಗಗಳ ಗಢ ಗಢ ಸದ್ದು ಮಾತ್ರ ಕೆಲ ದಿನಗಳಿಂದ ಎಲ್ಲೂ ಕೇಳಿಸುತ್ತಲೇ ಇಲ್ಲ!

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ, ಶಿರೂರು, ಅಮೀನಗಢ ಸೇರಿದಂತೆ ಇಳಕಲ್ಲ ಓಣಿ ಓಣಿಗಳಲ್ಲಿ ಒಂದು ಮೌನ ಆವರಿಸಿದೆ. ಅನೇಕ ನೇಕಾರರು ತಲೆತಲಾಂತರದಿಂದ ನಡೆಸಿಕೊಂಡು ಬಂದ ಮೂಲ ಉದ್ಯೋಗವನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇಲ್ಲಿ ನಿತ್ಯವೂ ತಯಾರುಗೊಳ್ಳುತ್ತಿದ್ದ ಇಳಕಲ್ಲ ರೇಷ್ಮೆ ಸೀರೆಗಳು ಗ್ರಾಮೀಣ ನಾರಿಯರ ಮನಸೂರೆಗೂಂಡರೂ, ಮಾರುಕಟ್ಟೆಯಲ್ಲಿ ಅವುಗಳಿಗೆ ಉತ್ತಮ ಬೇಡಿಕೆ ಇದ್ದರೂ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಾದ ಕಾರಣ, ನೇಕಾರಿಕೆಗೆ ತೆರೆಬಿದ್ದಿತ್ತು. ಆದರೆ, ಇಷ್ಟು ದಿನ ಗಢ ಗಢ ಸಪ್ಪಳವನ್ನು ನಿಲ್ಲಿಸಿದ ನೇಕಾರಣ್ಣ ಈಗ ಹೊಸ ಹುರುಪಿನೊಂದಿಗೆ ಮೇಲೆದ್ದಿದ್ದಾನೆ. ಅದಕ್ಕೆ ಕಾರಣ, ಇಳಕಲ್ಲ ಸೀರೆಯ ಆನ್‌ಲೈನ್‌ ಅವತಾರ!

ಬಣ್ಣದ ಗುಣ, ವಿನ್ಯಾಸವೇ ಇಳಕಲ್ಲ ಸೀರೆಯ ಬಿನ್ನಾಣ. ಸೀರೆ ಹರಿದರೂ ಬಣ್ಣ ಮಾಸುವುದಿಲ್ಲ ಎಂಬ ನಂಬಿಕೆ ನೀರೆಯರದ್ದು. ಆದರೆ, ಬದಲಾದ ಜಗತ್ತಿನಲ್ಲಿ ಬಹುತೇಕ ಮಹಿಳೆಯರು ಸೀರೆ ಆರಿಸಲು ಮಳಿಗೆಗಳಿಗೆ ಹೋಗಿ, ಗಂಟೆಗಟ್ಟಲೆ ಕೂರುವುದು ನಿಂತುಹೋಗಿದೆ. ಇದೆಲ್ಲವೂ ಆನ್‌ಲೈನ್‌ ಮಾರ್ಕೆಟಿಂಗ್‌ನ ಮಹಿಮೆ. ಈಗ ಇಳಕಲ್ಲ ಸೀರೆಯೂ ಮರುಜನ್ಮ ಪಡೆದು, ಆನ್‌ಲೈನ್‌ ಒಳಗೆ ಹೋಗಿ, ಮಾರಾಟಕ್ಕೆ ಕುಳಿತಿದೆ. ಬುಕಿಂಗ್‌ ಮಾಡಿದ ಕೆಲವೇ ದಿನದಲ್ಲಿ ಮನೆ ಬಾಗಿಲಿಗೇ ಸೀರೆ ಬರುತ್ತದೆ. ಇದೇ ಆನ್‌ಲೈನ್‌ ಮಾರ್ಗವಾಗಿಯೇ ಇಳಕಲ್ಲ ಸೀರೆ ವಿದೇಶಕ್ಕೂ ದಾಟುತ್ತಿದೆ.

ಸೀರೆಯೆಂಬ ಪ್ರಯೋಗ ಶಾಲೆ
ಬೇರೆ ಬೇರೆ ಲಕ್ಷುರಿ ಸೀರೆಗಳಂತೆ ಇಳಕಲ್ಲ ಸೀರೆಯೂ ಅಪ್‌ಡೇಟ್‌ ಆಗಿದೆ. ಅಂದಹಾಗೆ, ಇದು ಇಳಕಲ್ಲ ಜವಳಿ ಉದ್ಯಮಿ ವಿಜಯಕುಮಾರ ಗುಳೇದ ಅವರ ಹೊಸ ಆವಿಷ್ಕಾರ. ಈ ಸೀರೆ ಉದ್ಯಮದಲ್ಲಿ ಇವರು ಸಾಕಷ್ಟು ಹೊಸ ಪ್ರಯೋಗ ಮಾಡಿ, ಕೈಸುಟ್ಟುಕೊಂಡಿದ್ದರಂತೆ. ನಾಗಮುರಿಗೆ ಸೀರೆ ಸೆರಗು, ಸಾಟಿನ ದಡಿ ಮಾದರಿಯನ್ನು ಪರಿಚಯಿಸಿದಾಗ ಅವುಗಳನ್ನು ಮಾರುಕಟ್ಟೆಯಲ್ಲಿ ಕೇಳುವರೇ ಇಲ್ಲದಂತಾಗಿತ್ತು. ಇಷ್ಟೆಲ್ಲ ನಷ್ಟ ಅನುಭವಿಸಿದರೂ, ವಿಜಯ್‌ ಅವರು ಇಳಕಲ್ಲ ಸೀರೆಯ ಸೆರಗನ್ನು ಬಿಡಲೇ ಇಲ್ಲ. ಈಗ ಅವರ ಹೊಸ ಮಾರ್ಗವೇ, ಆನ್‌ಲೈನ್‌ ಮಾರಾಟ.

ಈಗ ಎಲ್ಲವೂ ಸಲೀಸು…
ಇತರೆ ಲಕ್ಷುರಿ ಸೀರೆಗಳೆಲ್ಲ ಆನ್‌ಲೈನ್‌ನಲ್ಲಿ ದರ್ಬಾರ್‌ ಮಾಡುತ್ತಿದ್ದುದನ್ನು ನೋಡಿದ ವಿಜಯ್‌, ತಾವೇಕೆ ಇಳಕಲ್ಲ ಸೀರೆಗೂ ಡಿಜಿಟಲ್‌ ವ್ಯಾಪಾರ ರೂಪ ನೀಡಬಾರದೆಂದು ನಿರ್ಧರಿಸಿ, ಈ ಸಾಹಸಕ್ಕೆ ಇಳಿದರಂತೆ. ಅಲ್ಲದೇ, ವಿವಿಧ ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲಿರುವ ಅನಿವಾಸಿ ಭಾರತೀಯರಿಂದ ಬೇಡಿಕೆ ಇದ್ದರೂ, ಇಳಕಲ್ಲ ಸೀರೆಯನ್ನು ಪೂರೈಸುವುದು ಕಷ್ಟವಾಗಿತ್ತು. ಅದೆಲ್ಲ ಈಗ ಸಲೀಸು ಎನ್ನುತ್ತಾರೆ ವಿಜಯ್‌.

ಪ್ರತಿ ವರ್ಷ 7- 8 ಸಾವಿರ ಸೀರೆಗಳನ್ನು ನೇಯ್ಗೆ ಮಾಡಿಸಿ, ಮಾರುವ ಇವರಿಗೆ ಈಗ ಕೆಲ ತಿಂಗಳಿಂದ ಆನ್‌ಲೈನ್‌ ಮಾರುಕಟ್ಟೆಯಿಂದಲೇ  2- 3 ಲಕ್ಷ ರೂ. ಆದಾಯ ಸಿಕ್ಕಿದೆ. ಇಳಕಲ್ಲ ಸೀರೆಯು ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೂ ಪೂರೈಕೆಯಾಗುತ್ತಿತ್ತು. ಈಗ ಆ ಬೇಡಿಕೆಗೆಲ್ಲ ವೇಗ ದಕ್ಕಿರುವುದು, ಇಳಕಲ್ಲ ಸೀರೆಯ ವ್ಯಾಪಾರಿಗಳಿಗೆ ಖುಷಿ ತಂದಿದೆ.

ವಿಮಾನದಲ್ಲಿ ಹಾರುವ ಸೀರೆ
ಇಳಕಲ್ಲ ಸೀರೆಯು ಜಗತ್ತಿನ ಸಿರಿವಂತ ದೇಶಗಳ ಮನೆಯ ಬಾಗಿಲನ್ನೂ ತಟ್ಟುತ್ತಿದೆ. ಸಿಂಗಾಪುರ, ಜರ್ಮನಿ, ಅಮೆರಿಕ, ಅರಬ್‌ ದೇಶಗಳು ಸೇರಿದಂತೆ, ಥಾಯ್ಲೆಂಡ್‌, ಶ್ರೀಲಂಕಾದಂಥ ಸಣ್ಣಪುಟ್ಟ ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಇಳಕಲ್ಲ ಸೀರೆ ಕಂಪ್ಯೂಟರಿನಲ್ಲಿಯೇ ತನ್ನ ಅಂದಚೆಂದ ತೋರಿಸಿ, ಆಸೆ ಹುಟ್ಟಿಸುತ್ತಿದೆ. ವಿದೇಶಗಳಲ್ಲಿನ ಗ್ರಾಹಕರಿಗೆ ಸ್ಪೀಡ್‌ಪೋಸ್ಟ್‌, ಸ್ವದೇಶಿ ಗ್ರಾಹಕರಿಗೆ ಕೊರಿಯರ್‌ ಮೂಲಕ ಸೀರೆ ತಲುಪಿಸುವ ಕೆಲಸವಾಗುತ್ತಿರುವುದು ಇದೇ ಮೊದಲು.

ಫೇಸ್‌ಬುಕ್‌- ವಾಟ್ಸಾಪ್‌ನಲ್ಲೂ ಬುಕಿಂಗ್‌
ಫೇಸ್‌ಬುಕ್‌, ವಾಟ್ಸಾಪ್‌, ಇನ್‌ಸ್ಟಗ್ರಾಮ್‌ನಲ್ಲಿ “ಪಿ.ಕೆ. ಗುಳೇದ್‌ ಇಳಕಲ್ಲ ಸ್ಯಾರೀಸ್‌’ ಅಂತ ಸರ್ಚ್‌ ಕೊಟ್ಟರೆ, ವಿಜಯಕುಮಾರ ಅವರ ಇಳಕಲ್ಲ ಸೀರೆಗಳ ಮಾಹಿತಿ ದೊರೆಯುತ್ತದೆ. ಇಷ್ಟವಾದ ಸೀರೆಗಳನ್ನು ಅಲ್ಲಿ ಬುಕ್‌ ಮಾಡಿದರೆ, ನಿಮ್ಮ ಮನೆ ಬಾಗಿಲಿಗೆ ಸೀರೆ ತಲುಪುತ್ತದೆ. ಕೈಮಗ್ಗದ ಸೀರೆಗಳಿಗೆ 9 ಸಾವಿರ ರೂ., ಪವರ್‌ ಲೂಮ್‌ನಿಂದ ನೇಯ್ದ ಸೀರೆಗೆ 500- 1000 ರೂ. ನಿಗದಿಪಡಿಸಲಾಗಿದೆ.

– ಪ್ರಶಾಂತ ಜಿ. ಹೂಗಾರ

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.