ನಾನು ಯಾರು? ಯಾವ ಊರು?


Team Udayavani, Oct 14, 2020, 7:06 PM IST

ನಾನು ಯಾರು? ಯಾವ ಊರು?

ಸ್ವತಂತ್ರವಾಗಿ ಬದುಕುವ ರೀತಿಯನ್ನು ಮಗಳಿಗೆ ಹೇಳಿಕೊಡೋಣ, ಆ ನಿಟ್ಟಿನಲ್ಲಿ ಅವಳನ್ನು ಬೆಳೆಸೋಣ ಎಂದು ಹೆಚ್ಚಿನ ತಾಯಿ- ತಂದೆಯರು ಯೋಚಿಸುವುದೇ ಇಲ್ಲ. ಏಕೆಂದರೆ, ಮಗಳು ಕಷ್ಟ ಪಡುವುದನ್ನು ನೋಡಲು ಹೆತ್ತವರು ಇಷ್ಟಪಡುವುದಿಲ್ಲ.

ಬದುಕಿನ ಪ್ರತಿಯೊಂದು ಹಂತದಲ್ಲೂ ಹೆಣ್ಣು ಒಂದಲ್ಲ ಒಂದು ಬಗೆಯಕಷ್ಟಗಳನ್ನು ಎದುರಿಸುತ್ತಾಳೆ. ಕ್ರಮೇಣ,ಕಷ್ಟಗಳಿಗೆ ಮುಖಾಮುಖೀಯಾಗುವುದು, ಸವಾಲುಗಳ ಜೊತೆಗೆ ಸೆಣೆಸುವುದು ಅವಳಿಗೆ ಅಭ್ಯಾಸ ಆಗಿ ಬಿಡುತ್ತದೆ. ಸೋಲು ಅಥವಾ ಸಂಕಟ ಜೊತೆಯಾದಾಗ ಹೆಚ್ಚಿನಸಂದರ್ಭದಲ್ಲಿ, ನಾನು ಪಡಕೊಂಡು ಬಂದಿರೋದು ಇಷ್ಟೇ ಇರಬೇಕು. ಏನು ಮಾಡೋಕಾಗುತ್ತೆ ಅನ್ನುತ್ತಾ ಸುಮ್ಮನಾಗುತ್ತಾಳೆ. ಅಂಥವಳಿಗೆ ಭರಿಸಲಾಗದಂಥ ನೋವೊಂದು ಜೊತೆಯಾಗುವ ಸಂದರ್ಭ ಯಾವುದು ಗೊತ್ತೇ? ಮದುವೆಯ ನಂತರ ತನ್ನದೇ ಮನೆಯಲ್ಲಿ ಅತಿಥಿಯಾಗಿ ಉಳಿಯುವುದು

ಮಗಳ ರೂಮಿಗೆ ಬೀಗ… : ಯಾಕೆ ಗೊತ್ತೇ? ಅಷ್ಟೂ ದಿನ ಆಡುತ್ತಾ, ಹಾಡುತ್ತಾ, ಕುಣಿದು ಕುಪ್ಪಳಿಸುತ್ತಾ,ಕನಸು ಕಾಣುತ್ತಾ, ಕಲ್ಪನೆಗಳಲ್ಲಿ ಜೀಕುತ್ತಾ ಉಳಿದಿದ್ದ ಮನೆಯ ಮೇಲಿದ್ದ ಹೆಣ್ಣು ಮಗಳ ಹಕ್ಕು, ಅವಳ ಮದುವೆಯಾದ ಮರುಕ್ಷಣವೇ ಮಾಯವಾಗುತ್ತದೆ. ಎಷ್ಟೋ ಮನೆಗಳಲ್ಲಿ, ಮಗಳ ಮದುವೆಯಾದ ನಂತರ, ಅವಳು ಇರುತ್ತಿದ್ದ ರೂಮಿಗೆ ಬೀಗ ಹಾಕಿಸಿ ಬಿಡುತ್ತಾರೆ. ಅಥವಾ ಅದನ್ನು ಸ್ಟೋರ್‌ ರೂಮ್‌ ಎಂದು ಬದಲಿಸಿಬಿಡುತ್ತಾರೆ. ಆ ಮೂಲಕ, ಮಗಳು ಅಲ್ಲಿ ಉಳಿದಿದ್ದಳು ಎಂಬ ಸಂಗತಿ ಹೆಚ್ಚು ನೆನಪಿಗೆ ಬಾರದಂತೆ ಮನೆಮಂದಿ ನೋಡಿಕೊಳ್ಳುತ್ತಾರೆ. ಮುಂದೊಂದು ದಿನ ಆಕೆಯೇತವರು ಮನೆಗೆ ಬಂದರೂ, ತಾನಿದ್ದ ರೂಮಿಗೆ ತನ್ನಿಷ್ಟದಂತೆ ಹೋಗಲು, ಅಲ್ಲಿ ಉಳಿಯಲುಸಾಧ್ಯವಾಗುವುದಿಲ್ಲ. ಆಕೆಯ ಬಟ್ಟೆಗಳು, ಜೋಡಿಸಿಟ್ಟಿದ್ದ ವಸ್ತುಗಳು, ನೆನಪುಗಳು, ನಲಿವುಗಳು ಎಲ್ಲವೂ ಚದುರಿಹೋಗಿರುತ್ತವೆ. ತನ್ನದೇ ಮನೆಯಲ್ಲಿ ತಾನು ಅಪರಿಚಿತೆ ಎಂಬ ಭಾವ ಅವಳನ್ನು ಅಲುಗಾಡಿಸಿಬಿಡುತ್ತದೆ.”ಮಗಳೇ, ಒಂದು ವಿಷಯವನ್ನು ನೆನಪಲ್ಲಿ ಇಟ್ಕೋ. ನೀನು ಬೇರೆಯವರ ಮನೆ ಬೆಳಗುವ ದೀಪವಾಗಿ ಹೋಗುವವಳು’ ಎಂಬುದನ್ನು ಬಾಲ್ಯದ ದಿನಗಳಿಂದಲೂ ಹೆತ್ತವ್ವನೇ ಪದೇಪದೆ ಹೇಳಿರುತ್ತಾಳೆ. ಈಮನೆಯ ಹೊಸ್ತಿಲು ದಾಟಿ ಮತ್ತೂಂದು ಮನೆಗೆ ಆಸೆಯಿಂದ ಹೋದಾಗ- “ನೀನು ಬೇರೆ ಮನೆಯಿಂದ ಬಂದವಳು, ನೆನಪಿರಲಿ… ‘ ಎಂದು ಅತ್ತೆಯೂ ಸೂಚ್ಯವಾಗಿ ಹೇಳುತ್ತಾಳೆ. ಇಂಥ ಮಾತುಗಳಿಗೆಕಿವಿಯಾದಾಗ ಸ್ವಾಭಿಮಾನಿ ಹೆಣ್ಣುಮಕ್ಕಳನ್ನುಕಾಡುವ ಪ್ರಶ್ನೆ: “ನನ್ನ ಮನೆ ಯಾವುದು? ನನ್ನಊರು ಯಾವುದು? ನನ್ನ ಖಚಿತ ನೆಲೆ ಯಾವುದು?

ಅವನು ಚೆನ್ನಾಗಿದ್ದರೆ… : ಈ ಪ್ರಶ್ನೆಗೆ ಉತ್ತರಿಸುತ್ತಾ- ಗಂಡನ ಮನೆಯೇ ಹೆಂಡತಿಯ ಮನೆಯೂ ಆಗುತ್ತದೆ ಎಂದೇ ಎಲ್ಲರೂ ಹೇಳುತ್ತಾರೆ ನಿಜ. ಆದರೆ ಈ ಮಾತು ಎಷ್ಟರ ಮಟ್ಟಿಗೆ ಸತ್ಯ? ಹೆಣ್ಣೊಬ್ಬಳಿಗೆಗಂಡನ ಮನೆಯಲ್ಲಿ ಆತ ಬದುಕಿರುವವರೆಗೆಗೌರವ- ಮರ್ಯಾದೆ ಸಿಗುತ್ತದೆ ನಿಜ, ಆನಂತರ? ಗಂಡನ ಅನುಪಸ್ಥಿತಿಯಲ್ಲಿ ಹೆಚ್ಚಿನ ಮರ್ಯಾದೆ ಸಿಗುವುದಿಲ್ಲ ಎಂಬುದು ಆಗಾಗ್ಗೆ ರುಜುವಾಗುತ್ತಲೇ ಇರುತ್ತದೆ. ವಾಸ್ತವ ಹೀಗಿರುವಾಗ, ಗೌರವ ಸಿಗದ ಜಾಗವನ್ನು ನನ್ನ ಮನೆ ಎಂದು ಹೆಣ್ಣುಮಕ್ಕಳು ಒಪ್ಪುವುದಾದರೂ ಹೇಗೆ? “ನನ್ನ ಮಗಳು ಒಳ್ಳೆಯ ಮನೆ ಸೇರಲಿ ಎಂಬುದು ಹೆಚ್ಚಿನ ತಾಯಿ- ತಂದೆಯರ ಆಸೆ. ವಿಪರ್ಯಾಸವೇನು ಗೊತ್ತೆ? ಅಳಿಯನಾಗಿಸಿಗುವವನು ಆರ್ಥಿಕವಾಗಿ ಚೆನ್ನಾಗಿದ್ದರೆ ಮಾತ್ರ,ಮಗಳೂ ಚೆನ್ನಾಗಿ ಇರುತ್ತಾಳೆ, ಅವಳ ಬದುಕೂ ಚೆನ್ನಾಗಿರುತ್ತದೆ ಎಂದೇ ಎಲ್ಲ ಪೋಷಕರೂ ಯೋಚಿಸುತ್ತಾರೆ. ಸ್ವತಂತ್ರವಾಗಿ ಬದುಕುವ ರೀತಿಯನ್ನು ಮಗಳಿಗೆ ಹೇಳಿಕೊಡೋಣ, ಆ ನಿಟ್ಟಿನಲ್ಲಿ ಅವಳನ್ನು ಬೆಳೆಸೋಣ ಎಂದು ಹೆಚ್ಚಿನವರು ಯೋಚಿಸುವುದೇ ಇಲ್ಲ. ಏಕೆಂದರೆ, ಯಾವ ತಂದೆಯೂ ತನ್ನ ಮಗಳುಕಷ್ಟ ಪಡುವುದನ್ನು ನೋಡಲು ಬಯಸುವುದಿಲ್ಲ.

ಆದರೆ ಇಂದಿನ ದಿನಗಳಲ್ಲಿ ದುಡಿಮೆ ಮತ್ತು ಆರ್ಥಿಕ ಸ್ವಾತಂತ್ರ್ಯ ಅನಿವಾರ್ಯ ಮತ್ತು ಅಗತ್ಯ ಆಗಿದೆ. ಓದು ಮುಗಿಸಿದ ನಂತರಕೆಲಕಾಲವಾದರೂ ದುಡಿದರೆ ಒಂದಷ್ಟು ಅನುಭವ ಜೊತೆಯಾಗುತ್ತದೆ. ಹಣ ಸಂಪಾದನೆ, ಉಳಿತಾಯಕುರಿತು ಐಡಿಯಾ ಕೂಡ ಸಿಗುತ್ತದೆ. ಇಷ್ಟೆಲ್ಲಾ ಆಗುವುದರೊಳಗೆ 25ರ ಗಡಿ ದಾಟಿರುತ್ತದೆ. ಹೆಣ್ಣುಮಕ್ಕಳಿಗೆ 25 ವರ್ಷ ದಾಟಿತು ಎಂದರೆ ಅದನ್ನೇ ಒಂದು ಸಮಸ್ಯೆ ಅಂದುಕೊಂಡು ಕಣ್ಣೀರು ಹಾಕುವ ಪೋಷಕರು ನಮ್ಮ ನಡುವೆಯೇ ಇದ್ದಾರಲ್ಲ.25 ವರ್ಷ ತುಂಬುವ ಮೊದಲೇ ಮದುವೆ ಮಾಡಿಬಿಡಬೇಕು ಅನ್ನುವಕಾರಣದಿಂದಲೂ, ಹೆಣ್ಣು ಮಕ್ಕಳು ಆರ್ಥಿಕ ಮತ್ತು ಉದ್ಯೋಗಕ್ಷೇತ್ರದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗಿಲ್ಲ ಅನ್ನಬಹುದು

ಅಹಂಕಾರವಲ್ಲ, ಸ್ವಾಭಿಮಾನ :  ಇದನ್ನೆಲ್ಲಾ ನೋಡುತ್ತಲೇ ಇರುವ ಹೆಣ್ಣುಮಕ್ಕಳಿಗೆ ನನ್ನ ನೆಲೆ ಯಾವುದು? ಮನೆಗಳಲ್ಲಿ ನನಗಿರುವ ಬೆಲೆ ಎಂಥದು ಎಂಬ ಪ್ರಶ್ನೆ ಜೊತೆಯಾಗುವುದು ಸಹಜವೇ. ಸೂಕ್ಷ್ಮ ಮನಸ್ಸಿನ ಹೆಣ್ಣುಮಕ್ಕಳಾದರೆ, ನಮಗೆ ಎಲ್ಲಿಯೂ ನೆಲೆ ಇಲ್ಲ, ಬೆಲೆಯೂ ಇಲ್ಲ ಎಂದು ಕೊರಗುತ್ತಾ ಅದೇ ಚಿಂತೆಯಲ್ಲಿ ಬಿಕ್ಕಳಿಸುವುದೂ ಉಂಟು. ಇಂಥದೊಂದು ಭಾವ ಹೆಣ್ಣುಮಕ್ಕಳಿಗೆ ಬರಬಾರದು ಅಂದರೆ- ಮೊದಲು ನಿನ್ನಕಾಲು ಮೇಲು ನಿಲ್ಲುವುದನ್ನುಕಲಿ ಮಗಳೇ ಎಂದು ಹೇಳಿಕೊಡಬೇಕು. ಆ ಮೂಲಕ ಅವರನ್ನು ಸ್ವಾಭಿಮಾನಿಗಳನ್ನಾಗಿ ಮಾಡಬೇಕು. ಅಂದಹಾಗೆ, ಇಲ್ಲಿ ಹೆಣ್ಣುಮಕ್ಕಳಿಗೂ ಒಂದು ಜವಾಬ್ದಾರಿಯಿದೆ. ತಮ್ಮ ಬದುಕಿನ ಹಾದಿಯಕುರಿತು ಎಲ್ಲವನ್ನೂ ಹೆತ್ತವರೇ ನಿರ್ಧರಿಸಲಿ ಎಂದು ಸುಮ್ಮನೇ ಉಳಿಯುವುದು ಜಾಣರ ಲಕ್ಷಣವಲ್ಲ. ತಮ್ಮ ಸಾಮರ್ಥ್ಯವೇನು ಎಂಬುದನ್ನು ಹೆತ್ತವರಿಗೆ ತೋರಿಸುವ ಹಲವು ಅವಕಾಶಗಳು ಆಗಾಗ ಸಿಕ್ಕಿರುತ್ತವಲ್ಲ; ಆಗಲೇ ತಮ್ಮ ಆತ್ಮವಿಶ್ವಾಸದ ಪರಿಚಯವನ್ನು ಹೆತ್ತವರಿಗೆ ಮಾಡಿಕೊಡಬೇಕು. ಎಲ್ಲಿಯವರೆಗೆ ರಿಸ್ಕ್ ತೆಗೆದುಕೊಳ್ಳದೇ ಸೇಫ್ ಜೋನ್‌ನಲ್ಲಿ ಇರಲು ಬಯಸುತ್ತೇವೋ ಅಲ್ಲಿಯವರೆಗೂ ನಾವು ಬೆಳೆಯಲು ಸಾಧ್ಯವೇ ಇಲ್ಲ.­

ಬದುಕಿಗಿಂತ ಮನೆತನ ದೊಡ್ಡದಾ? :  ಆರ್ಥಿಕವಾಗಿ ಮತ್ತು ಉದ್ಯೋಗಿಯಾಗಿ ಅಳಿಯ ಚೆನ್ನಾಗಿದ್ದರೆ ಸಾಕು, ನಮ್ಮ ಮಗಳ ಭವಿಷ್ಯ ಮತ್ತು ಬದುಕು ಚೆನ್ನಾಗಿರುತ್ತದೆ ಎಂದುಯೋಚಿಸುವಕನ್ಯಾಪಿತೃಗಳು, ಅದೇಕಾರಣಕ್ಕೆ ಲಕ್ಷಾಂತರ ರೂಪಾಯಿಗಳನ್ನು ವರದಕ್ಷಿಣೆಯ ಅಥವಾಕೊಡುಗೆಯ ರೂಪದಲ್ಲಿ ನೀಡುತ್ತಾರೆ. ಅಥವಾ ಲಂಚ ಕೊಟ್ಟು ಅಳಿಯನಿಗೆ ನೌಕರಿ ಕೊಡಿಸುತ್ತಾರೆ. “ಮಗಳು ಚೆನ್ನಾಗಿದ್ದರೆ ಸಾಕು’ ಎಂಬ ಉದ್ದೇಶದಿಂದಲೇ ಹೀಗೆ ಮಾಡುತ್ತಾರೆ ನಿಜ. ಆದರೆ, ಅದೇ ಹಣಕೊಟ್ಟು ಮಗಳಿಗೆ ನೌಕರಿ ಕೊಡಿಸಬಾರದೇಕೆ?ಆಮೂಲಕ, ಮಗಳುಯಾರ ಹಂಗಿಲ್ಲದೆ ಸ್ವತಂತ್ರವಾಗಿ ಜೀವನ ಮಾಡುವಂತಾಗಲಿ ಎಂದುಯೋಚಿಸಬಾರದೇಕೆ? ನನ್ನ ಮಗಳಿಗೆ ಒಳ್ಳೆಯ ಗಂಡ, ಒಳ್ಳೆಯ ಅತ್ತೆ-ಮಾವ ಸಿಕ್ಕು ಆರಾಮಾಗಿ ಇದ್ದರೆ ಸಾಕು ಎಂದು ಬೇಡಿಕೊಳ್ಳುವ ಸಮಯದಲ್ಲೇ, ಅಳಿಯನನ್ನು ಮೀರಿಸುವ ಮಟ್ಟಕ್ಕೆ ನನ್ನ ಮಗಳು ಬೆಳೆಯಲಿ ಎಂದುಯೋಚಿಸುವುದಿಲ್ಲವಲ್ಲ, ಯಾಕೆ? ಹೆಣ್ಣು ಮಕ್ಕಳ ಬದುಕಿಗಿಂತ ಆಕೆ ಜೀವ ತೇಯುವ ಮನೆತನವೇ ದೊಡ್ಡದೇ?

 

ಮುನ್ನುಡಿ ಯಾಪಲಪರವಿ

 

ಟಾಪ್ ನ್ಯೂಸ್

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

governer

Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ

Bidar; ಗುತ್ತಿಗೆದಾರ ಸಚಿನ್‌ ಕೇಸ್;‌ ತನಿಖೆ ಆರಂಭಿಸಿದ ಸಿಐಡಿ ತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.