ಆಫೀಸಿನಲ್ಲಿ ನಿಮ್ಗೆ ಅವರು ಕ್ಲೋಸಾ?
Team Udayavani, Mar 14, 2018, 6:21 PM IST
ಕಾಲು ಸೋತು ಧಸಕ್ ಎಂದು ಕುರ್ಚಿಯಲ್ಲಿ ಕುಸಿದು, ಅಳುತ್ತಾ ಕುಳಿತಳು. “ಸಾಯೋದಿಕ್ಕೆ ಹೊರಟ ನನ್ನಂಥವರನ್ನ ಬಹಳ ನೋಡಿರ್ತೀರಿ ಅಲ್ವಾ? ದಯವಿಟ್ಟು ನನಗೆ ಸಾಯುವ ಮಾರ್ಗವನ್ನು ತಿಳಿಸಿಕೊಡಿ, ಬದುಕಿಸಬೇಡಿ’ ಎಂದವಳೇ ಮತ್ತೆ ಅಳುವುದಕ್ಕೆ ಶುರು. ಇಂಥವರೊಂದಿಗೆ ಮಾತಾಡುವುದು ತಾಳ್ಮೆಯಲ್ಲ, ತಪಸ್ಸು. ಆ ಕ್ಷಣಕ್ಕೆ ಅವರಿಗೆ ತೃಪ್ತಿಯಾಗುವವರೆಗೆ ನಾವು ಅವರ ನೋವಿನ ಆಳವನ್ನು ಅರ್ಥಮಾಡಿಕೊಳ್ಳಬೇಕು. ಮನೋವೈದ್ಯರಾದ ವಿಕ್ಟರ್ ಫ್ರಾಂಕೆಲ… ಪ್ರಕಾರ, ಹತಾಶೆಯಲ್ಲಿದ್ದವರಿಗೆ ನಾವು ಸಮಯವನ್ನು ಮುಖ್ಯವಾಗಿ ನೀಡಬೇಕು.
ಇಂಥವರಿಗೆ ಜೀವನದ ಬಗ್ಗೆ ದ್ವೇಷವಿರುವುದಿಲ್ಲ. ಬದುಕಲು ಹೆಮ್ಮರದ ಮಹತ್ವಾಕಾಂಕ್ಷೆ. ಆದರೆ, ಕ್ಲಿಷ್ಟ ಪರಿಸ್ಥಿತಿಯಲ್ಲಿ ದಿಕ್ಕು ತೋಚದೆ, ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಕುಟುಂಬ, ಸ್ನೇಹಿತರು ಮತ್ತು ಆಫೀಸಿನಲ್ಲಿ ಎಲ್ಲರ ಮುಂದೆಯೂ ಇವಳು ಭಾವನಾತ್ಮಕ
ನಗ್ನತೆ (emotional nudity) ಒಳಗಾಗಿ ಈ ರೀತಿ ಪ್ರಲಾಪಿಸುತ್ತಾಳೆ. ಈಗ ಎಲ್ಲಾ ಕಳಕೊಂಡು ಶೂನ್ಯಭಾವ ಡಿಗ್ರಿಯಲ್ಲಿ ಚಿನ್ನದ ಪದಕ ಪಡೆದ ಬುದ್ಧಿವಂತೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಮನೆಯ ಸಾಲ ತೀರಿಸಲು ಯತ್ನಿಸುತ್ತಿದ್ದಳು. ಕೆಲಸದಲ್ಲಿ ಅಚ್ಚುಕಟ್ಟುತನ, ಚುರುಕು ಮತ್ತು ಕಲಾವಂತಿಕೆ ಸೇರಿ, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ನಾಲ್ಕೈದು ವರ್ಷಗಳಲ್ಲಿ ಬಹಳ ಬೇಗ ಬೆಳೆದಿದ್ದಳು. ಮಧ್ಯಮ ವರ್ಗದ ಹುಡುಗಿ, ಮದುವೆ ಗೊತ್ತಾದರೆ ಎಷ್ಟು ಸಾಲ ಮಾಡಬೇಕು ಎಂಬ ಲೆಕ್ಕವನ್ನೂ
ಹಾಕಿಕೊಂಡಿದ್ದಳು.
ಲಿಫ್ಟ್ನಲ್ಲಿ ಒಂದು ದಿನ ಮ್ಯಾನೇಜರ್ ಸಿಕ್ಕಿ, ಭೇಟಿಯಾಗಲು ತಿಳಿಸಿದ್ದಾರೆ. ಅತ್ಯಂತ ತಾಳ್ಮೆಯಿಂದ ಇವಳಿಗೆ ಸಮಯ ಕೊಟ್ಟು, ಇವಳ
ಯಶೋಗಾಥೆಯ ಕಥೆಗೆ ಕಿವಿಯಾದರು. ಇವಳಿಗೂ ಹುಮ್ಮಸ್ಸು ದುಪ್ಪಟ್ಟಾಯಿತು. ಪ್ರಾಜೆಕ್ಟ್ ಅನ್ನು ಯಶಸ್ವಿ ಮಾಡಿಕೊಟ್ಟಿದ್ದಕ್ಕೆ, ಚಿಕ್ಕ ಪ್ರೊಮೋಶನ್ ಕೂಡ ಸಿಕ್ಕಿತು.
ಆಫೀಸಿನಲ್ಲಿ ಮ್ಯಾನೇಜರ್ ಜೊತೆಗೆ ವೈಯಕ್ತಿಕ ಪರಿಚಯ ಯಾವಾಗಲೂ ಒಳ್ಳೆಯದಲ್ಲ. ವೈಯಕ್ತಿಕ ವಿಚಾರಗಳಿಗೆ ಹೋದಷ್ಟೂ ಕಿರಿಕಿರಿ ಜಾಸ್ತಿ. ಇವಳಿಗೂ ಕಿರಿಕಿರಿಯಾಗಿದೆ. ಆಫೀಸಿನ ನಿಯಮದ ಪ್ರಕಾರ, ಮ್ಯಾನೇಜರ್ ಜೊತೆಗೆ ವೈಯಕ್ತಿಕ ಸಂಬಂಧ ಹೊಂದಬಾರದೆಂದು ಗೊತ್ತಿದ್ದೂ ಇವಳು ಆತ್ಮೀಯವಾಗಿದ್ದರಿಂದ, ಇವಳು ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಾಗ, ಇವಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.
ಈಗಿನ ಕಾಲದಲ್ಲಿ ಮಹಿಳೆಯರಿಗೆ ಕೆಲಸದಷ್ಟೇ ಸಂಬಳವೂ ಅನಿವಾರ್ಯ. ಆದ್ದರಿಂದ ನಿಮ್ಮ ಕೆಲಸಕ್ಕೆ ಗೌರವ ಕೊಡಿ. ಕೆಲಸವನ್ನು ಬಿಟ್ಟು ಬೇರೆ ವಿಚಾರಗಳಿಗೆ, ಆಫೀಸಿನ ಗಾಸಿಪ್‌ಗೆ ಗಮನ ಕೊಡಬೇಡಿ. ಮ್ಯಾನೇಜರ್ ಎಷ್ಟೇ ಒಳ್ಳೆಯವರಾಗಿದ್ದರೂ ಕಾರಿನಲ್ಲಿ ಡ್ರಾಪ್
ತೆಗೆದುಕೊಳ್ಳುವ ಮುಂಚೆ ಯೋಚಿಸಿ. ಪ್ರಾಜೆಕ್ಟ್ ಪಾರ್ಟಿಗಳಲ್ಲಿ ಕುಡಿಯಬೇಡಿ. ನಿಮ್ಮ ಆಫೀಸಿನ ನಿಯಮಾವಳಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಪರಿಶ್ರಮದ ಹಿಂದೆ ನಿಮ್ಮ ಕುಟುಂಬವಿರುತ್ತದೆ. ಎಲ್ಲಾ ವಿಚಾರಗಳನ್ನೂ ಕುಟುಂಬದವರೊಂದಿಗೆ
ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಫೀಸಿನಲ್ಲೇ ಇರುವ ಮನೋವಿಜ್ಞಾನಿಗಳ ಸಲಹೆಯನ್ನೂ ಪಡೆಯಿರಿ.
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.