ಇದು ಆ ಕ್ಲಚ್ ಅಲ್ಲ!
Team Udayavani, Nov 1, 2017, 12:10 PM IST
ಹಣ, ಬೀಗದ ಕೀ, ಪೆನ್, ಕಾಡಿಗೆಯ ಪೆನ್ಸಿಲ್, ಲಿಪ್‌ಸ್ಟಿಕ್, ಮೊಬೈಲ್, ಎ.ಟಿ.ಎಂ ಕಾರ್ಡ್, ಮಾತ್ರೆ… ಹೀಗೆ ತುಂಬಾ ಅನಿವಾರ್ಯ ಮತ್ತು ಅತಿಮುಖ್ಯ ಅನ್ನಿಸುವ ವಸ್ತುಗಳನ್ನೆಲ್ಲ ಇಡಲು ಬಳಸುತ್ತಿರುವ ಅತಿ ಚಿಕ್ಕ ಪರ್ಸ್‌ನ ಹೆಸರೇ ಕ್ಲಚ್!
ಕ್ಲಚ್ ಎಂದಾಗ ಎಲ್ಲರೂ ವಾಹನದ ಕ್ಲಚ್ ಬಗ್ಗೆ ತೋಚಿಸುತ್ತಾರೆ. ಆದರೆ, ಫ್ಯಾಷನ್‌ಪ್ರಿಯರು ಪರ್ಸ್‌ಗಿಂತ ದೊಡ್ಡದಾದ ಮತ್ತು ಬ್ಯಾಗ್‌ಗಿಂತ ಚಿಕ್ಕದಾದ, ಚೊಕ್ಕದಾದ ಹಾಗು ಸ್ಟೈಲಿಶ್ ಆಗಿರುವ ವಸ್ತುವಿನ ಬಗ್ಗೆ ಯೋಚಿಸುತ್ತಾರೆ.
ವ್ಯಾನಿಟಿ ಬ್ಯಾಗ್‌ನಲ್ಲಿ ಕರವಸ್ತ್ರ, ಛತ್ರಿ, ನೀರಿನ ಬಾಟಲಿ, ಟಿಶ್ಯೂ, ಶಾಲು, ಜಾಕೆಟ್, ಲ್ಯಾಪ್‌ಟಾಪ್, ಈ ಎಲ್ಲವನ್ನೂ ಮಹಿಳೆಯರು ಹೋದಲ್ಲೆಲ್ಲಾ ಕೊಂಡು ಹೋಗಬೇಕಿರುವುದರಿಂದ, ಅಗತ್ಯ ವಸ್ತುಗಳನ್ನು ಇಡಲು ಕ್ಲಚ್ ಅನ್ನು ಉಪಯೋಗಿಸಲಾಗುತ್ತದೆ. ಹಣ, ಬೀಗದ ಕೈ, ಪೆನ್, ಕಾಡಿಗೆಯ ಪೆನ್ಸಿಲ್ ಅಥವಾ ಲಿಪ್‌ಸ್ಟಿಕ್, ಮೊಬೈಲ್ ಫೋನ್ ಮತ್ತು ಮಾತ್ರೆ (ಔಷಧಿ). ಇವಿಷ್ಟೂ ಚಿಕ್ಕದಾದ ಒಂದು ಪರ್ಸ್‌ನಲ್ಲಿ ಫಿಟ್ ಆಗುತ್ತವೆ. ಆ ಪರ್ಸ್‌ನ ಹೆಸರೇ “ಕ್ಲಚ್’.
ಮಖಮಲ್ ಕ್ಲಚ್: ಇವುಗಳಲ್ಲಿ ಬಣ್ಣ, ವಿನ್ಯಾಸ, ಆಕೃತಿ ಮತ್ತು ಸ್ಟೈಲ್ ಅಲ್ಲದೆ ಮಟೀರಿಯಲ್ಗೂ ಬೇಡಿಕೆ ಇದೆ. ದಿನನಿತ್ಯದ ಉಪಯೋಗಕ್ಕೆ ಬಳಸುವವರು ಇದರಲ್ಲಿ ವಾಟರ್ ಪ್ರೂಫ್ ಮಟೀರಿಯಲ್ ಅನ್ನು ಹೆಚ್ಚಾಗಿ ಆಯ್ಕೆ ಮಾಡುತ್ತಾರೆ. ಚಳಿಗಾಲ, ಮಳೆಗಾಲ, ಬೇಸಿಗೆ, ಹೀಗೆ ಎಲ್ಲಾ ಸಮಯದಲ್ಲೂ ಇಂತಹ ವಾಟರ್‌ಪ್ರೂಫ್ ಕ್ಲಚ್‌ಗಳು ಉಪಯೋಗಕ್ಕೆ ಬರುತ್ತವೆ.
ಇನ್ನು ಕೇವಲ ಮದುವೆ, ಪಾರ್ಟಿ ಅಥವಾ ಇತರ ಸಮಾರಂಭಗಳಲ್ಲಿ ಕ್ಲಚ್‌ಗಳನ್ನು ಬಳಸಲು ಇಚ್ಛಿಸುವವರು ಇವುಗಳಲ್ಲಿ ಹೆಚ್ಚಿನ ಅಲಂಕಾರ, ಬಣ್ಣ ಮತ್ತು ವಿನ್ಯಾಸಗಳನ್ನು ಆಯ್ಕೆ ಮಾಡುತ್ತಾರೆ. ತೊಟ್ಟ ಉಡುಪು ಅದ್ಧೂರಿಯದ್ದಾಗಿರುವುದರಿಂದ ಕೈಯಲ್ಲಿರುವ ಕ್ಲಚ್ ಕೂಡ ಉಡುಪಿಗೆ ಹೋಲುವಂಥ ಅಲಂಕಾರ ಹೊಂದಿರುತ್ತದೆ.
ಹಾಗಾಗಿ ಇವುಗಳಲ್ಲಿ ಕಲ್ಲು, ಮುತ್ತು, ಮಣಿ, ದಾರ, ಉಣ್ಣೆ, ಚಿನ್ನ- ಬೆಳ್ಳಿ ಅಥವಾ ಇತರ ಹೊಳೆಯುವ ವಸ್ತುಗಳನ್ನು ಅಲಂಕಾರಕ್ಕೆ ಉಪಯೋಗಿಸಲಾಗುತ್ತವೆ. ವೆಲ್ವೆಟ್ (ಮಖಮಲ್) ಬಟ್ಟೆಯಿಂದ ಹೊಲಿದ ಉಡುಪುಗಳು ಇದೀಗ ಫ್ಯಾಷನ್‌ನಲ್ಲಿ ಇಲ್ಲದಿದ್ದರೂ, ವೆಲ್ವೆಟ್ ಬಳಸಿ ಮಾಡಲಾದ ಆಕ್ಸೆಸರೀಸ್ ಟ್ರೆಂಡ್ ಆಗುತ್ತಲೇ ಇವೆ. ಆದ್ದರಿಂದ ಮಖಮಲ್ನ ಕ್ಲಚ್‌ಗಳು ಕೂಡ ಅಷ್ಟೇ ಟ್ರೆಂಡಿ.
ಹಳೆ ಬಟ್ಟೆ ಹೊಸ ಕ್ಲಚ್: ಫಾರ್ಮಲ್ ಉಡುಗೆಯ ಜೊತೆ ಲೆದರ್ (ಚರ್ಮ) ಅಥವಾ ಆರ್ಟಿಫಿಷಿಯಲ್ ಲೆದರ್‌ನ ಕ್ಲಚ್, ಪ್ಲಾಸ್ಟಿಕ್, ರಬ್ಬರ್ ಮುಂತಾದ ಮಟೀರಿಯಲ್ಗಳಿಂದ ಮಾಡಿದ ಕ್ಲಚ್‌ಗಳನ್ನೂ ಬಳಸಬಹುದು. ಇವೆಲ್ಲವುಗಳಲ್ಲಿ ಒಂದೇ ಬಣ್ಣ, ಅಥವಾ ಒಂದೆರಡು ಬಣ್ಣ, ಅಥವಾ ಸಿಕ್ಕಾಪಟ್ಟೆ ಬಣ್ಣವನ್ನೂ ಬಳಸಬಹುದು.
ಆದರೆ ಮುತ್ತು, ರತ್ನ, ಹೊನ್ನಿನಂಥ ಹೊಳೆಯುವ ಅಥವಾ ಜಗಮಗಿಸುವ ಅಲಂಕಾರಿಕ ವಸ್ತುಗಳು ಒಂದೋ ಇರಲೇಬಾರದು. ಇಲ್ಲವೇ ಬಹಳ ಕಡಿಮೆ ಇರಬೇಕು. ಅದೇ ಸಾಂಪ್ರದಾಯಿಕ ಉಡುಗೆಗಳ ಜೊತೆ ಪಳ ಪಳ ಹೊಳೆಯುವ ಕ್ಲಚ್‌ಗಳೇ ಅಂದ!
ನೋಡ್ಕೊಂಡ್ ತಗೊಳ್ಳಿ: ಕ್ಲಚ್‌ಗಳನ್ನು ಕೈಯಲ್ಲೇ ಹಿಡಿದು ಓಡಾಡುವುದರಿಂದ, ಕೈಯ ಬೆವರು ಅವುಗಳ ಮೇಲಿನ ಬಣ್ಣ ಬಿಡುವಂತೆ ಮಾಡಬಹುದು. ಇಲ್ಲವೆ, ಅವುಗಳ ಅಲಂಕಾರಿಕ ವಸ್ತುಗಳು ಎದ್ದು ಬರುವಂತೆ ಮಾಡಬಹುದು. ಆದ್ದರಿಂದ ಬಣ್ಣ ಬಿಡದ (ವಾಟರ್‌ಪ್ರೂಫ್), ಉತ್ತಮ ಗುಣಮಟ್ಟದ ಹಾಗು ದೃಢ ಕಸೂತಿ ಕೆಲಸ ಇರುವ ಕ್ಲಚ್‌ಗಳನ್ನೇ ಆಯ್ದು ಖರೀದಿಸಬೇಕು.
ರಸ್ತೆ ಬದಿಯ ಅಂಗಡಿಗಳಲ್ಲಾದರೆ ನೀವೇ ಸ್ವತಃ ನೋಡಿ, ಪರೀಕ್ಷಿಸಿ ಖರೀದಿ ಮಾಡಬಹುದು. ಆದರೆ ರಿಟರ್ನ್ ಪಾಲಿಸಿ ಇದ್ದರೂ ಆನ್‌ಲೈನ್ ಮೂಲಕ ಇವುಗಳನ್ನು ಪರೀಕ್ಷಿಸಲು ಸಾಧ್ಯವಿರುವುದಿಲ್ಲ. ಹಾಗಾಗಿ ಉತ್ತಮ ಬ್ರಾಂಡ್‌ನ ಕ್ಲಚ್‌ಗಳನ್ನು ಕೊಂಡುಕೊಳ್ಳುವುದು ಒಳಿತು.
* ಅದಿತಿಮಾನಸ ಟಿ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.