ಜೋಪಾನ…ಇದು ಜೀವ ಮೂಡುವ ಸಮಯ
Team Udayavani, Jan 15, 2020, 4:18 AM IST
ಗರ್ಭಿಣಿಯರ ದೇಹ ಮತ್ತು ಮನಸ್ಸು, ಅತ್ಯಂತ ಸೂಕ್ಷ್ಮ. ಇನ್ನೊಂದು ಜೀವವನ್ನು ಒಡಲೊಳಗೆ ಇಟ್ಟುಕೊಂಡಿರುವ ಆ ಅವಧಿಯಲ್ಲಿ ಗರ್ಭಿಣಿಯು ತನ್ನ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಮಯದಲ್ಲಿ ದೇಹ ಮತ್ತು ಮನಸ್ಸಿನಲ್ಲಿ ಅನೇಕ ಬದಲಾವಣೆಗಳು ಆಗುವುದರಿಂದ, ಆಗಾಗ್ಗೆ ವೈದ್ಯಕೀಯ ಪರೀಕ್ಷೆ ಹಾಗೂ ಸಲಹೆಗಳನ್ನು ಪಡೆಯಬೇಕಾಗುತ್ತದೆ.
ಯೋಗ-ಧ್ಯಾನ-ವ್ಯಾಯಾಮ
-ಗರ್ಭಿಣಿಯರು ಪ್ರತಿನಿತ್ಯ ಯೋಗ, ಧ್ಯಾನ ಮಾಡಿದರೆ, ದೇಹದ ಜಡತ್ವ ಹೋಗಲಾಡಿಸಿ, ಮನಸ್ಸಿನ ಹಿಡಿತ ಸಾಧಿಸಲು ಸಾಧ್ಯ.
-ಮೊದಲ ಮೂರು ತಿಂಗಳು ಬಹಳ ಮಹತ್ವದ್ದಾಗಿದ್ದು,ಯೋಗಾಸನ ಮಾಡುವಾಗ ಬಹಳ ಜಾಗರೂಕರಾಗಿರಬೇಕು. ಈ ತ್ತೈಮಾಸಿಕದಲ್ಲಿ ಸರಳ ಉಸಿರಾಟದ ವ್ಯಾಯಾಮ, ವಿಶ್ರಾಂತಿ ಹಾಗೂ ಧ್ಯಾನ ಅನುಸರಿಸಬೇಕು. ಇವು ವಾಂತಿ, ತಲೆ ಸುತ್ತುವಿಕೆ, ಆಯಾಸ ಮುಂತಾದ ತೊಂದರೆಗಳನ್ನು ನಿವಾರಿಸಲು ಸಹಕಾರಿ.
-ಎರಡನೇ ಮತ್ತು ಮೂರನೇ ತ್ತೈಮಾಸಿಕ ಅವಧಿಯಲ್ಲಿ ಯೋಗಾಸನ ಮಾಡುವಾಗ ಮೆತ್ತನೆಯ ದಿಂಬು, ಕುಶನ್, ಕುರ್ಚಿಗಳನ್ನು ಬಳಸುವುದು ಆರಾಮದಾಯಕ. ಇವು ಗರ್ಭಿಣಿಯರಲ್ಲಿ ಕಂಡು ಬರುವ ಕಾಲು ಸೆಳೆತ, ಬೆನ್ನು ನೋವನ್ನು ನಿವಾರಿಸುತ್ತವೆ. ದೇಹದಲ್ಲಿ ರಕ್ತ ಸಂಚಾರವು ಸರಾಗವಾಗಿ, ಹೆರಿಗೆ ಸಂದರ್ಭದ ನೋವು ಕಡಿಮೆಯಾಗುವುದರ ಜತೆಗೆ ಸಹಜ ಹೆರಿಗೆಗೆ ಸುಲಭ ದಾರಿಯಾಗುತ್ತದೆ.
-ಗರ್ಭಿಣಿಯರು ಹೆಚ್ಚಿನ ಭಾರ ಎತ್ತುವ ಹಾಗೂ ಹೊಟ್ಟೆಯ ಮೇಲೆ ಮಲಗಿ ಮಾಡುವ ವ್ಯಾಯಾಮಗಳನ್ನು ಮಾಡಬಾರದು. ಕಷ್ಟವಿರುವ ಯಾವುದೇ ಭಂಗಿಗಳನ್ನು ಮಾಡುವ ಪ್ರಯತ್ನ ಬೇಡ.
-ಧ್ಯಾನ ಮಾಡುವುದರಿಂದ ಧನಾತ್ಮಕ ವಿಚಾರಗಳತ್ತ ಮನಸ್ಸು ಹರಿಯಲು ಸಾಧ್ಯವಾಗಿ ಒತ್ತಡವೂ ಕಡಿಮೆಯಾಗುತ್ತದೆ.
ಆಹಾರ ಕ್ರಮ
-ಗರ್ಭಿಣಿಯರಿಗೆ ಪ್ರತಿನಿತ್ಯ 200-300 ಗ್ರಾಂ ಕ್ಯಾಲರಿ ಶಕ್ತಿ ಹೆಚ್ಚಾಗಿ ಬೇಕಾಗಿರುತ್ತದೆ. ಸಸ್ಯಾಹಾರ ಕ್ರಮದಿಂದ ಹೆಚ್ಚಿನ ಪ್ರೋಟೀನ್ ಸಿಗುವುದರೊಂದಿಗೆ ದೇಹಕ್ಕೆ ಶಕ್ತಿಯೂ ದೊರಕುತ್ತದೆ.ಇದು ಮಗುವಿನ ಬೆಳವಣಿಗೆಗೂ ಸಹಕಾರಿ.
-ಕಬ್ಬಿಣಾಂಶದ ಆಹಾರಗಳ ಸೇವನೆಯಿಂದ ತಾಯಿಯಲ್ಲಿ ರಕ್ತ ಹೀನತೆ ನಿವಾರಿಸಬಹುದು.
-ಒಣಹಣ್ಣುಗಳು, ಧಾನ್ಯ, ಬೇಳೆ ಕಾಳುಗಳನ್ನು ಸೇವಿಸುವುದರಿಂದ ಸಾಕಷ್ಟು ಪೋಷಕಾಂಶ ದೊರಕುತ್ತದೆ.
-ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂಯುಕ್ತ ಆಹಾರಗಳು ಅವಶ್ಯಕವಾಗಿ ದೇಹಕ್ಕೆ ಸಿಗಬೇಕು.
-ಹಸಿರು ತರಕಾರಿಗಳು, ಹಾಲು, ಹಣ್ಣುಗಳನ್ನು ಸೇವಿಸಬೇಕು.
-ಹೆಚ್ಚಿನ ಪ್ರಮಾಣದಲ್ಲಿ ಎಳನೀರು, ಹಣ್ಣಿನ ರಸ, ಮಜ್ಜಿಗೆ ಕುಡಿಯುವುದರಿಂದ ವಾಂತಿ,ತಲೆ ಸುತ್ತುವಿಕೆ ನಿವಾರಿಸಬಹುದು.
-ಡಾ. ಶ್ರೀಲತಾ ಪದ್ಯಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.