ಜಾಜಿಯ ಸೋಜಿಗ
Team Udayavani, Dec 26, 2018, 9:38 AM IST
ಜಾಜಿ ಹೂವನ್ನು ನೋಡದವರು, ಅದರ ಕಂಪಿಗೆ ಮಾರು ಹೋಗದವರು ಇಲ್ಲ. ಆದರೆ, ಆ ಗಿಡದ ಪ್ರತಿಯೊಂದು ಭಾಗವೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಜಾಜಿ ಹೂವಿನ ತವರೂರು ಭಾರತ. ಪೊದೆಯಾಗಿ ಹಬ್ಬುವ ಜಾಜಿ ಗಿಡವನ್ನು ಚಪ್ಪರದಲ್ಲಿ ಬೆಳೆಯಬಹುದು. ಈ
ಹೂವಿನಲ್ಲಿರುವ “ಇಂಡೋಲ’ ಎಂಬ ರಾಸಾಯನಿಕ ಪದಾರ್ಥ ಸುಗಂಧಕ್ಕೆ ಕಾರಣವಾಗಿದೆ. ಈ ಹೂವಿನ ಉಪಯೋಗಗಳು ಹೀಗಿವೆ…
* ಮಗುವಿಗೆ ಹಾಲುಣಿಸುವುದನ್ನು ಬಿಡಿಸಲು ಜಾಜಿ ಹೂವನ್ನು ಅರೆದು ಎದೆಗೆ ಲೇಪಿಸಿಕೊಳ್ಳಬಹುದು.
* ಮಕ್ಕಳಿಗೆ ಕಜ್ಜಿ-ತುರಿಕೆಗಳಾದಾಗ ಈ ಹೂವಿನ ಎಣ್ಣೆ ಹಚ್ಚಿದರೆ ಗುಣವಾಗುತ್ತದೆ.
* ಜಾಜಿ ಬಳ್ಳಿಯ ಎಲೆಯನ್ನು ಅಗಿದು ತಿಂದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ.
* ತಲೆಯಲ್ಲಿ, ಮೈಮೇಲೆ ಹುಳುಕಡ್ಡಿಗಳಾದರೆ, ಜಾಜಿ ಎಲೆಯ ರಸ ಹಚ್ಚಿ ತಿಕ್ಕಬೇಕು.
* ಅನಿಯಮಿತ ಮುಟ್ಟಿನ ಸಮಸ್ಯೆಗೆ, ಜಾಜಿ ಎಲೆಯ ರಸ, ಒಂದು ಚಿಟಿಕೆ ಕಾಳುಮೆಣಸಿನಪುಡಿ ಮತ್ತು ಜೇನುತುಪ್ಪ ಬೆರೆಸಿ ಬಳಸಬಹುದು.
* ದೀರ್ಘಕಾಲದ ಜ್ವರಕ್ಕೆ ಜಾಜಿ ಬೇರಿನ ಕಷಾಯ ಕೊಡಬಹುದು.
* ಜಾಜಿ ಹೂವಿನ ರಸ ತೆಗೆದು, ಬಟ್ಟೆಗೆ ಹಾಕಿ, ಕಣ್ಣಿನ ಮೇಲೆ ಒತ್ತಿಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ
* ವಸಡಿನಲ್ಲಿ ರಕ್ತ ಬರುತ್ತಿದ್ದರೆ ಜಾಜಿ ಎಲೆಯನ್ನು ಅಗಿದು ತಿನ್ನಬಹುದು.
* ಸುಟ್ಟ ಗಾಯಗಳಿಗೆ ಜಾಜಿ ಹೂವು ಅಥವಾ ಎಲೆಗಳಿಂದ ತಯಾರಿಸಿದ ಎಣ್ಣೆ ಲೇಪಿಸಿದರೆ ಗುಣವಾಗುತ್ತ
ಗಿರಿಜಾ ಎಸ್. ದೇಶಪಾಂಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.