ಜೋಕ್ ಫಾಲ್ಸ್
Team Udayavani, May 16, 2018, 12:27 PM IST
ಒಂದು ಕೊಂಡರೆ ಒಂದು ಫ್ರೀ!
ಪತ್ರಿಕೆಯಲ್ಲಿ ಹೀಗೊಂದು ಜಾಹೀರಾತು ಪ್ರಕಟವಾಗಿತ್ತು- “ನೀವು ಮದ್ಯವ್ಯಸನಿಗಳೇ? ನಾವು ನಿಮಗೆ ಸಹಾಯ ಮಾಡುತ್ತೇವೆ. ಕೆಳಗಿನ ನಂಬರ್‌ಗೆ ಕರೆ ಮಾಡಿ’
ಫೋನ್ ಮಾಡುವಂತೆ ವೆಂಕೋಬನ ಹೆಂಡತಿ ಒಂದೇ ಸಮನೆ ಪೀಡಿಸಿದಳು. ಕಾಟ ತಡೆಯಲಾರದೆ ವೆಂಕೋಬ ಆ ನಂಬರ್‌ಗೆ ಫೋನ್ ಮಾಡಿದ. ಕರೆ ಸ್ವೀಕರಿಸಿದ ವ್ಯಕ್ತಿ, “ಸಾರ್, ನಮ್ಮ ಬಾರ್‌ನಲ್ಲಿ ಒಂದು ಕೊಂಡರೆ ಒಂದು ಉಚಿತ ಆಫರ್ ಇದೆ?’ ಎಂದ!
ಇದು ಸರಿಯೇ?
ಒಬ್ಬ ದರ್ಜಿ ತಪ್ಪು ಮಾಡಿದರೆ, ಅದು ಹೊಸ ಫ್ಯಾಷನ್ ಆಗುತ್ತದೆ.
ಒಬ್ಬ ವಿಜ್ಞಾನಿ ತಪ್ಪು ಮಾಡಿದರೆ, ಅದು ಹೊಸ ಸಂಶೋಧನೆ ಆಗುತ್ತದೆ.
ಒಬ್ಬ ಕೌರಿಕ ತಪ್ಪು ಮಾಡಿದರೆ, ಅದು ಹೊಸ ಸ್ಟೈಲ್ ಆಗುತ್ತದೆ.
ಒಬ್ಬ ಅಧ್ಯಾಪಕ ತಪ್ಪು ಮಾಡಿದರೆ, ಅದು ಹೊಸ ಥಿಯರಿ ಆಗುತ್ತದೆ.
ಆದರೆ ದೇವರೇ, ಒಬ್ಬ ವಿದ್ಯಾರ್ಥಿ ತಪ್ಪು ಮಾಡಿದರೆ ಮಾತ್ರ ಫೇಲ್ ಎಂಬ ರಿಸಲ್ಟ್ ಬರುತ್ತಲ್ಲ, ಅದು ಸರೀನಾ?
ಹಳೇ ಕಾಲದ್ದು
ಟೀಚರ್: ಭೂಮಿಯ ಮೇಲಿನ ಅತ್ಯಂತ ಪ್ರಾಚೀನ ಪ್ರಾಣಿ ಯಾವುದು?
ಕಿಟ್ಟಿ: ಝೀಬ್ರಾ
ಟೀಚರ್: ಅದು ಹೇಗೆ?
ಕಿಟ್ಟಿ: ಅದಿನ್ನೂ ಬ್ಲ್ಯಾಕ್ ಅಂಡ್ ವೈಟ್ ಜಮಾನದಲ್ಲೇ ಇದೆ.
ಅದು ನಾನಲ್ಲ!
ಹೆಂಡತಿ: ರೀ, ಈ ಮೊಬೈಲ್ ಯಾಕೋ ನಾನು ಹೇಳಿದಂತೆ ಕೇಳುತ್ತಿಲ್ಲ
ಗಂಡ: ಲೇ ಅದು ಮೊಬೈಲ್ ಕಣೇ, ನಿನ್ನ ಗಂಡ ಅಲ್ಲ!
ನಾನ್ಯಾರು ಗೊತ್ತಾ?
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಟ್ರೈನಿ ಆಗಿ ಗುಂಡ ಕೆಲಸಕ್ಕೆ ಸೇರಿದ. ಮೊದಲ ದಿನವೇ ಕಂಪನಿಯ ಇಂಟರ್‌ಕಾಮ್ ಬಳಸಿ ಕೆಫೆಟೇರಿಯಾಗೆ ಕಾಲ್ ಮಾಡಿ, “ಒಂದು ಕಪ್ ಕಾಫಿ ತನ್ನಿ’ ಎಂದು ಆರ್ಡರ್ ಮಾಡಿದ. ಆ ಕಡೆಯ ವ್ಯಕ್ತಿ, “ಏಯ್ ನೀನು ಯಾರಿಗೆ ಕಾಲ್ ಮಾಡಿದ್ದೀಯ ಅಂತ ಗೊತ್ತಾ?’ ಎಂದು ಸಿಟ್ಟಿನಲ್ಲಿ ಗುಡುಗಿದ. ಗುಂಡ “ಇಲ್ಲ’ಎಂದು ಹೇಳಿದ. ಆಗ ಆ ಕಡೆಯವ, “ಸ್ಟುಪಿಡ್, ನಾನು ಈ ಕಂಪನಿಯ ಸಿಇಓ ಮಾತಾಡ್ತಾ ಇರೋದು’ ಅಂದ. ಗುಂಡ ತುಂಬಾ ಗತ್ತಿನಲ್ಲಿ ಕೇಳಿದ, “ನೀನು ಸಿಇಓ ಆದರೆ, ನಾನ್ಯಾರು ಅಂತ ನಿನಗೆ ಗೊತ್ತಾ?’ ಆ ಕಡೆಯವ ಗಲಿಬಿಲಿಯಾಗಿ, ಇಲ್ಲ ಅಂದ. ಆಗ ಗುಂಡ, “ದೇವರೇ! ಸದ್ಯ, ನನ್ನ ಕೆಲಸ ಉಳಿಯಿತು’ ಅಂತ ಹೇಳಿ ಫೋನಿಟ್ಟು ಬಿಟ್ಟ.
ಸೆಂಟೆನ್ಸೂ ಕಲಿಸಿ…
ಕಂಪ್ಯೂಟರ್ ಟೀಚರ್‌ಗೆ ಫೋನ್ ಮಾಡಿದ ಕೀಚುವಿನ ತಂದೆ ಹೇಳಿದ್ದು- “ಮೇಡಂ, ನಮ್ಮ ಹುಡುಗನಿಗೆ ಎಂಎಸ್ ವರ್ಡ್ ಕಲಿಸಿದರಂತೆ. ಬೇಗ ಬೇಗ ಎಂಎಸ್ ಸೆಂಟೆನ್ಸ್ ಕೂಡ ಕಲಿಸಿಕೊಡಿ’
* ಸುಧಾಮಣಿ ಕೆ. ರಾವ್, ಬೆಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.