ಜುಮುಕಿ ಕಮಾಲ್
Team Udayavani, May 30, 2018, 1:08 PM IST
ಸಣ್ಣ ಹುಡುಗಿ ಇದ್ದಾಗಿನಿಂದ ಗಮನಿಸ್ತಾ ಇದ್ದೇನೆ. ಈ ನೇತಾಡುವ ಜುಮುಕಿ ಹುಡುಗನ ನೋಟವನ್ನು ಪಟ್ಟಕ್ಕಂತ ಸೆಳೆದುಬಿಡುತ್ತೆ. ಅವನಿಗೆ ಯಾವ ಆಭರಣದ ಮೇಲೂ ಇಲ್ಲದ ಆಕರ್ಷಣೆ ಜುಮುಕಿ ಮೇಲ್ಯಾಕೆ..? ಕಿವಿಯಲ್ಲಿ ಲಾಸ್ಯವಾಗಿ ನೇತಾಡುವ ಲೋಲಕ, ಜುಮುಕಿ ಅಂದ್ರೆ ಹುಡುಗರಿಗೆ ಅದೇನೋ ಆಕರ್ಷಣೆ…
ಅವನು ತಂದು ಕೊಟ್ಟಿದ್ದ ಗಿಫ್ಟ್ ಬಾಕ್ಸ್ ಅನ್ನು ಒಡೆದು ನೋಡಿದಾಗ, ಸಣ್ಣ ನಗುವೊಂದು ಮೂಡಿತು. ಅದರಲ್ಲೇನಿತ್ತು ಅಂತೀರಾ? ಕಡುನೇರಳೆ ಬಣ್ಣದ ಮು¨ªಾದ ಜುಮುಕಿ ಜೋಡಿ. ಇಷ್ಟವಾಯ್ತು, ಹಾಕ್ಕೊಂಡೆ ನೋಡಿ ಕಿವಿಗೆ. ಅವ ಅದೆಷ್ಟು ಸಂತೋಷಪಟ್ಟ ಅಂದ್ರೆ, ಅರೆ! ಅದನ್ನ ಧರಿಸಿದ್ರೆ ಅಂಥಾ ಛೇಂಜಸ್ ಏನಪ್ಪಾ ಅವನಲ್ಲಿ..? ಜುಮುಕಿಗೆ ಗಂಟುಬಿದ್ದ ಗಂಡು ಮನಸಿನ ಸೈಕಾಲಜಿ ಅದೇನೋ… ಅದೀಗಲೂ ನನಗರ್ಥವಾಗದ ಮಿಲಿಯನ್ ಡಾಲರ್ ಪ್ರಶ್ನೆ.
ಸಣ್ಣ ಹುಡುಗಿ ಇದ್ದಾಗಿನಿಂದ ಗಮನಿಸ್ತಾ ಇದ್ದೇನೆ. ಈ ನೇತಾಡುವ ಜುಮುಕಿ ಹುಡುಗನ ನೋಟವನ್ನು ಪಟ್ಟಕ್ಕಂತ ಸೆಳೆದುಬಿಡುತ್ತೆ. ಅವನಿಗೆ ಯಾವ ಆಭರಣದ ಮೇಲೂ ಇಲ್ಲದ ಆಕರ್ಷಣೆ ಜುಮುಕಿ ಮೇಲ್ಯಾಕೆ..? ಕಿವಿಯಲ್ಲಿ ಲಾಸ್ಯವಾಗಿ ನೇತಾಡುವ ಲೋಲಕ, ಜುಮುಕಿ ಅಂದ್ರೆ ಹುಡುಗರಿಗೆ ಪ್ರಿಯ. ಅದೇನೋ ಆಕರ್ಷಣೆ. ದೇಗುಲದ ಗಂಟೆಯಂತಿರುವ ಲೋಲಕ, ಅದರ ಸುತ್ತಲೂ ಸುಂದರವಾಗಿ ಪೋಣಿಸಲ್ಪಟ್ಟ ಮುತ್ತಿನ ಮಣಿಗಳ ಅಲಂಕಾರ, ಮಾತಾಡುವಾಗ ಮುಖದ ಚಲನೆಯಲ್ಲಿ ಲಾಲಿತ್ಯದಿಂದ ತೂಗಾಡುವ ಜುಮುಕಿ ಅವನಿಗಿಷ್ಟ.
ಹಾಗೆ ನೋಡಿದರೆ, ನನ್ನ ಅಪ್ಪ, ದೊಡ್ಡಪ್ಪ, ಅಜ್ಜಂದಿರೂ ಓಲೆಪ್ರಿಯರೇ. ಅಮ್ಮ ಇಷ್ಟಪಟ್ಟಳು ಅಂತ ಕಷ್ಟದ ಸಮಯದಲ್ಲೂ ಮೊರದಗಲದ ಚಂದ್ರ ಬೆಂಡೋಲೆ ಮಾಡಿಸಿ ಅಮ್ಮನ ಮೊಗದಲ್ಲಿ ನಗು ಮೂಡಿಸಿದವರು. ಅದೀಗಲೂ ಅಪ್ಪ ಅಮ್ಮನ ಪ್ರೀತಿಯ ದ್ಯೋತಕವಾಗಿ ಬಣ್ಣ ಕಳಕೊಳ್ಳದೆ ಅಮ್ಮನ ಕಿವಿಯನ್ನು ಅಲಂಕರಿಸಿದೆ. ಅದು ಒಂದಿನ ಕಿವಿಯಿಂದ ಮಿಸ್ ಆದ್ರೂ ಅಪ್ಪ ಅದನ್ನು ಧರಿಸುವಂತೆ ಆದೇಶ ನೀಡೋದುಂಟು.
ನಾನು ಸಣ್ಣವಳಿ¨ªಾಗಿನ ಕಥೆ… ಕ್ಲಾಸಲ್ಲಿ ನನ್ನ ಪಕ್ಕ ಕೂರುತ್ತಿದ್ದ ಹುಡುಗನಿಗೆ ನನ್ನ ಕಿವಿಯ ಜುಮುಕಿ ಅಂದ್ರೆ ಏನೋ ಕುತೂಹಲ. ಅದೇನೋ ಸೆಳೆತ. ದಿನಕ್ಕೆ ಹತ್ತು ಸಲವಾದ್ರೂ ಕೈಯ್ಯಿಂದ ಮುಟ್ಟಿ ಅದನ್ನು ತೂಗಿಸೋದು ಅವನ ತರಲೆಗಳಲ್ಲೊಂದು. ನನಗೆ ತುಂಬಾ ಕಿರಿಕಿರಿಯಾದರೂ, ಅದೇ ಜುಮುಕಿಯನ್ನು ಪ್ರತಿನಿತ್ಯ ಧರಿಸುತ್ತಿ¨ªೆ. ಯಾಕಂದ್ರೆ ಮಾತಾಡ್ತಾ ಮಾತಾಡ್ತಾ ಅವನ ಕಣ್ಣು ಮತ್ತೆ ಅÇÉೇ ಹೋಗ್ತಿತ್ತು. ಜುಮುಕಿ ಮೇಲಿನ ಇದೇ ಆಸೆ ಅವನನ್ನು ನನ್ನ ಜುಮುಕಿ ಕದಿಯುವಂತೆ ಮಾಡಿದ್ದು, ಅದನ್ನ ನೋಡ್ತಾ ಏನೋ ಸಂತೋಷಪಡ್ತಿದ್ದ. ಅದಕ್ಕೇ ಇರಬೇಕು; ಅದೊಂದು ದಿನ ಮನೆಗೆ ಬಂದಿದ್ದವ, ನಾನು ಸ್ನಾನಕ್ಕೆಂದು ಹೋಗಿ¨ªಾಗ ಅವನಿಷ್ಟದ ಜುಮುಕಿಯನ್ನು ಕದ್ದುಬಿಟ್ಟಿದ್ದ. ನಾನು ಹೊರಬಂದಾಗ ಅಲ್ಲಿಂದ ನನ್ನ ಒಂದು ಜುಮುಕಿ ಕಾಣೆಯಾಗಿತ್ತು. ಮತ್ತೆ ಒಂದು ವಾರದ ನಂತರ ಅವನ ಬ್ಯಾಗಲ್ಲಿ ನನ್ನ ಪುಟ್ಟ ಜುಮುಕಿ ಬೆಚ್ಚಗೆ ಕೂತಿತ್ತು. ಮುಂದೆ ಹತ್ತನೇ ಕ್ಲಾಸ್‌ವರೆಗೂ ನಾವಿಬ್ಬರೂ ಒಟ್ಟಿಗೆ ಓದಿದೆವು. ಕೊನೆಗೆ, ಆಟೋಗ್ರಾಫ್ ಕೊಡುವಾಗ ಇನ್ನೊಂದು ಜುಮುಕಿಯನ್ನು ಅವನಿಗೆ ಪ್ರಸೆಂಟ್ ಮಾಡಿದ್ದೆ… ಅವೆಲ್ಲ ಈಗ ಸಿಹಿನೆನಪುಗಳು.
ಆಮೇಲೆ ದೊಡ್ಡವಳಾದಾಗ ಜುಮುಕಿ ಮತ್ತೆ ಔಟ್‌ಡೇಟ್ ಫ್ಯಾಶನ್ ಅನ್ನಿಸಿಕೊಂಡಿತು. ಆದ್ರೂ ಜಾತ್ರೆಗೆ ಹೋದಾಗ ದೊಡ್ಡಪ್ಪ, ಒಂದು ಜೋಡಿ ಜುಮುಕಿಯನ್ನು ಎÇÉಾ ಹೆಣ್ಮಕ್ಕಳಿಗೂ ತಂದುಕೊಡ್ತಿದ್ರು. ಅದನ್ನು ನೋಡಿದ್ರೆ ಮೂಗು ಮುರೀತಿ¨ªೆವು. ಅದರ ಹಿಂದಿರುವ ದೊಡ್ಡಪ್ಪನ ಆಸೆ ಮತ್ತು ಪ್ರೀತಿ ಮಾತ್ರ ಆಗ ನಮಗರ್ಥಾನೇ ಆಗ್ತಿರಲಿಲ್ಲ. ಈಗಲೂ ಬಣ್ಣ ಕಳಕೊಂಡ, ಮಸುಕಾದ ಜೊತೆಯಿಲ್ಲದ ಹಳೆಯ ಜುಮುಕಿಗಳನ್ನು ಕಂಡಾಗ ದೊಡ್ಡಪ್ಪನದೇ ನೆನಪು. ಅಪರೂಪಕ್ಕೊಮ್ಮೆ ಅದನ್ನು ಕನ್ನಡಿ ಮುಂದೆ ಧರಿಸಿ ಭಾವುಕಳಾಗುತ್ತೇನೆ.
ಅಣ್ಣ ಮಾಡಿಸಿದ ಜುಮುಕಿಯನ್ನು ಅಕ್ಕನ ಮದುವೆಯಲ್ಲಿ ಅವಳಿಗೆ ಉಡುಗೊರೆಯಾಗಿ ಕೊಟ್ಟಾಗ, ತುಂಬಾ ದುಃಖ ಆಗಿತ್ತು. ಯಾಕಂದ್ರೆ, ಹಬ್ಬ ಹರಿದಿನಗಳಲ್ಲಿ ನಾನೂ- ಅಕ್ಕನೂ ಆ ಜುಮುಕಿ ಧರಿಸುವುದಕ್ಕಾಗಿ ಕಿತ್ತಾಡುತ್ತಿ¨ªೆವು. ಕೊನೆಗೆ ಒಂದು ತೀರ್ಮಾನಕ್ಕೂ ಬಂದುಬಿಟ್ಟೆವು; ಒಂದು ಹಬ್ಬಕ್ಕೆ ಅವಳು, ಮತ್ತೂಂದು ಹಬ್ಬಕ್ಕೆ ನಾನು ಧರಿಸುವುದು ಅಂತ.
ಇನ್ನು ಅವನ ಬಗ್ಗೆ ಹೇಳದೇ ಹೋದರೆ ಈ ಕಥೆ ಮುಗಿಯೋದೇ ಇಲ್ಲ. ಅವನು… ನನ್ನಿಷ್ಟದ ಅವನು… ಅವನ ಮನಸ್ಸನ್ನು ಕಟ್ಟಿಹಾಕಲು ಸಾಧ್ಯವಾಗೋದಾದ್ರೆ ಅದು ಜುಮುಕಿಯಿಂದ ಮಾತ್ರ. ಅವನ ಹಿಂದೆ ಅದೆಷ್ಟೋ ಹುಡ್ಗಿàರು ಬಿದ್ದರೂ ಅವರ್ಯಾರಿಗೂ ತಲೆಕೆಡಿಸಿಕೊಳ್ಳದ ಅವನು ಜಾರಿ ಹೋಗೋದು ನನ್ನ ಕಿವಿ ಜುಮುಕಿಯ ಮೋಡಿಗೆ. ಜುಮುಕಿ ನೋಡ್ತಾನೇ ಕವಿಯಾಗುವ ರೊಮ್ಯಾಂಟಿಕ್ ಮೂಡ್‌ಗೆ ಹೋಗುವ ಅವನ ಮುಖದ ಭಾವಗಳಂತೂ ನನಗೆ ತುಂಬಾ ಆಪ್ತ. ಅವನೆದೆಗೆ ಒರಗಿದಾಗ, ಅವನ ಮೈಗೆ ಅಂಟಿಕೊಳ್ಳುವ ಜುಮುಕಿ ಇದು.
ಆಗವನು ಹೇಳುವ ಮಾತು; “ಈ ಜುಮುಕಿ ಮತ್ತು ನೀನು ಹೀಗೆ ಒರಗಿಕೊಂಡ್ರೆ ನನ್ನ ಹೃದಯದಲ್ಲಿ ನಗಾರಿ ಬಾರಿಸಿದ ಹಾಗಾಗುತ್ತೆ ಕಣೇ’ ಅಂತ. ಅದರಲ್ಲೂ ಅವನು ಕೊಟ್ಟ ಜುಮುಕಿ ಧರಿಸಿದಾಗ, ಜಗತ್ತನ್ನೇ ಗೆದ್ದ ಖುಷಿ ಅವನದ್ದು. ಆ ದಿನ ಅವನು ಮುದ್ದುಗರೆಯೋಪರಿ.. ಆಹ್…! ಅದಕ್ಕಾಗಿಯೇ ಅವನಿಷ್ಟದ ಜುಮುಕಿ ಧರಿಸುತ್ತಿ¨ªೆ. ಒಮ್ಮೊಮ್ಮೆ ಅಸೂಯೆಯೂ ಆಗೋದುಂಟು; ನನ್ನ ಮೇಲಿಲ್ಲದ ಪ್ರೀತಿ ಆ ಜುಮುಕಿ ಮೇಲೇನು ಅಂತ. ಈಗ ಅವನಿಲ್ಲ ನನ್ನ ಜೊತೆ. ಆದರೆ, ಅವನು ಪ್ರತೀ ಸ್ಪೆಷಲ್ ಡೇಗೂ ನೀಡುತ್ತಿದ್ದ ಜುಮುಕಿ ಸೆಟ್‌ಗಳಿವೆ. ಅದೇ ರೀತಿ ಮತ್ತೂಂದು ಸೆಟ್ ಜುಮುಕಿ ನೀಡಲು ಬಂದಾನೆಂಬ ನಿರೀಕ್ಷೆಯೂ ಇದೆ. ನನ್ನ ಬದುಕಿನ ದಾರಿಯಿಂದ ಅವನೆಷ್ಟೇ ದೂರ ಜಾರಿ ಹೋದರೂ, ಜುಮುಕಿ ಹಾಕ್ಕೊಂಡಾಗ ಅವನು ಮುಖ ಸಮೀಪ ತಂದು ಗಾಳಿ ಊದಿ ಅದನ್ನು ತೂಗಾಡಿಸ್ತಾನೆ ಅನ್ನೋದೇ ನಿರೀಕ್ಷೆ. ಅದಕ್ಕಾಗಿಯೇ ಏನೋ, ನನ್ನ ಕಲೆಕ್ಷನ್ನಿನಲ್ಲಿ ತುಂಬಾ ಜುಮುಕಿ ಸೆಟ್‌ಗಳಿವೆ.
ವರ್ಷದ ಹಿಂದೆಯಷ್ಟೇ ಮದುವೆಯಾದ ಬಾಲ್ಯದ ಗೆಳೆಯನನ್ನು ಭೇಟಿಯಾಗಿ¨ªೆ. ಈಗವನು ಒಂದು ಮಗುವಿನ ಅಪ್ಪ. ಅವನ ಪುಟ್ಟ ಪೋರನಿಗೂ ನನ್ನ ಜುಮುಕಿ ಮೇಲೇ ಕಣ್ಣು. ಆ ರಾಜಕುಮಾರ ನನ್ನ ಕಿವಿ ಜುಮುಕಿ ಎಳೆದಾಗ ನೂರು ನೆನಪುಗಳು ಒತ್ತರಿಸಿ ಬಂದವು.
– ಶುಭಾಶಯ ಜೈನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.