ಹಲಸು ಸೊಗಸು
Team Udayavani, Apr 29, 2020, 8:02 AM IST
ಇದು ಹಲಸಿನ ಸೀಸನ್. ಹಲಸು ಕೇವಲ ಹಣ್ಣಷ್ಟೇ ಅಲ್ಲ. ಅದನ್ನು ತರಕಾರಿಯಂತೆಯೂ ಬಳಸಬಹುದು. (ಎಳೆ ಹಲಸಿನ ಕಾಯಿ ಪಲ್ಯದ ರುಚಿ ನೆನಪಾಯಿತೇ?) ಸ್ವಲ್ಪ ಫ್ರಿ ಟೈಮ್ ಇದ್ದರೆ, ಹಲಸಿನಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಬಹುದು. ಈಗಂತೂ ಟೈಮ್ ಇದ್ದೇ ಇದೆಯಲ್ಲ; ಮತ್ಯಾಕೆ ತಡ? ಈ ರೆಸಿಪಿಗಳನ್ನು ಟ್ರೈ ಮಾಡಿ.
ಪೋಡಿ
ಬೇಕಾಗುವ ಸಾಮಗ್ರಿ: ಎಳೆಯ ಹಲಸಿನಕಾಯಿ ತೊಳೆ, ಕೆಂಪು ಮೆಣಸಿನ ಕಾಯಿ – 10, ಅಕ್ಕಿ – 1 ಕಪ್, ಧನಿಯಾ- 1 ಚಮಚ, ಹುಣಸೆಹಣ್ಣಿನ ರಸ, ಎಣ್ಣೆ, ಇಂಗು, ಉಪ್ಪು.
ಮಾಡುವ ವಿಧಾನ: ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ನೀರು ಬಸಿದು ತರಿ ತರಿಯಾಗಿ ಪುಡಿ ಮಾಡಿಕೊಳ್ಳಿ. ಹಲಸಿನ ತೊಳೆಯ ಬೀಜ ತೆಗೆದು, ಸ್ವಲ್ಪ ದೊಡ್ಡ ಹೋಳು ಗಳನ್ನಾಗಿ ಹೆಚ್ಚಿ. ಧನಿಯಾ, ಕೆಂಪು ಮೆಣಸಿನಕಾಯಿ, ಹುಣಸೆ ರಸ, ಉಪ್ಪು, ಇಂಗನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ನಂತರ, ಅದಕ್ಕೆ ಅಕ್ಕಿ ಪುಡಿಯನ್ನು ಬೆರೆಸಿ, ಅಕ್ಕಿ ಹಿಟ್ಟಿನ ಹದದ ಪೇಸ್ಟ್ ತಯಾರಿಸಿ. ಈ ಮಸಾಲೆ ಯನ್ನು ಹಲಸಿನ ತೊಳೆಗೆ ಹಚ್ಚಿ ಎಣ್ಣೆಯಲ್ಲಿ ಗರಿಗರಿಯಾಗಿ ಕರಿಯಿರಿ.
ಚಿಪ್ಸ್
ಬೇಕಾಗುವ ಸಾಮಗ್ರಿ: ಬಲಿತ ಹಲಸಿನ ಕಾಯಿ, ಉಪ್ಪು, ಕೆಂಪು ಮೆಣಸಿನ ಪುಡಿ, ಅರಿಶಿನ, ಕರಿಯಲು ಎಣ್ಣೆ.
ಮಾಡುವ ವಿಧಾನ: ಹಲಸಿನಕಾಯಿಯ ತೊಳೆಗಳನ್ನು ಬಿಡಿಸಿ, (ಬೀಜ ಬೇರ್ಪಡಿಸಿಕೊಳ್ಳಿ) ತೆಳ್ಳಗೆ ಉದ್ದುದ್ದಕ್ಕೆ ಹೆಚ್ಚಿ, ಕಾದ ಎಣ್ಣೆಯಲ್ಲಿ ಗರಿ ಗರಿಯಾಗುವವರೆಗೆ (ಹೊಂಬಣ್ಣ ಬರುವವರೆಗೆ) ಕರಿಯಿರಿ. ಅನಂತರ ಅದನ್ನು ಎಣ್ಣೆಯಿಂದ ತೆಗೆದು ಒಂದು ಪಾತ್ರೆಯೊಳಗೆ ಹಾಕಿ, ಉಪ್ಪು ಮತ್ತು ಖಾರದ ಪುಡಿ (ಮೊದಲೇ ಎರಡನ್ನೂ ಮಿಶ್ರಣ ಮಾಡಿ ಇಡಿ) ಹಾಕಿ ಚೆನ್ನಾಗಿ ಕುಲುಕಿ. ತಣ್ಣಗಾದ ಮೇಲೆ ಇದನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಇಡಿ.
ಹಪ್ಪಳ
ಬೇಕಾಗುವ ಸಾಮಗ್ರಿ: ಬಲಿತ ಹಲಸಿನಕಾಯಿ ತೊಳೆ (ಬೀಜ ರಹಿತ), ಮೆಣಸಿನ ಪುಡಿ – 4 ಚಮಚ, ಉಪ್ಪು, ಅರಿಶಿನ, ಎಣ್ಣೆ.
ಮಾಡುವ ವಿಧಾನ: ಹಲಸಿನ ತೊಳೆಗಳನ್ನು ಹಬೆಯಲ್ಲಿ ಚೆನ್ನಾಗಿ ಬೇಯಿಸಿ, ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ. ನಂತರ, ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ, ಎರಡು ಪ್ಲಾಸ್ಟಿಕ್ ಹಾಳೆಗಳ ಮಧ್ಯ ಇಟ್ಟು ಹಪ್ಪಳದ ಮಷೀನ್‌ನಿಂದ ಒತ್ತಿ. (ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಹಚ್ಚಿದರೆ ಹಿಟ್ಟು ಅಂಟಿಕೊಳ್ಳುವುದಿಲ್ಲ) ಹೀಗೆ ಲಟ್ಟಿಸಿದ ಹಪ್ಪಳಗಳನ್ನು ತೆಳುವಾದ ಬಟ್ಟೆಯ ಮೇಲೆ ಹರಡಿ, ಬಿಸಿಲಿನಲ್ಲಿ 2-3 ದಿನ ಒಣಗಿಸಿರಿ. ಈ ಹಪ್ಪಳಗಳನ್ನು ಹಲವಾರು ತಿಂಗಳ ಕಾಲ ಕೆಡದಂತೆ ಇಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.