ಬಹು ಉಪಯೋಗಿ ಕಾಮ ಕಸ್ತೂರಿ
ಹಿತ್ತಲ ಮದ್ದು
Team Udayavani, Sep 18, 2019, 5:12 AM IST
ಹಳ್ಳಿ ಮನೆಯ ಹಿತ್ತಲಿನಲ್ಲಿ, ಹೂದೋಟದಲ್ಲಿ ಬೆಳೆಯುವ, ನೋಡಲು ತುಳಸಿಯಂತೆಯೇ ಕಾಣುವ ಸಸ್ಯ ಕಾಮಕಸ್ತೂರಿ. ಸುಗಂಧಭರಿತವಾಗಿರುವ ಇದರ ಎಲೆಗಳನ್ನು ದೇವರ ಪೂಜೆಗೆ, ಹೂವಿನೊಂದಿಗೆ ಸೇರಿಸಿ ಮುಡಿದುಕೊಳ್ಳಲು ಬಳಸುತ್ತಾರೆ. ತುಳಸಿಯಂತೆಯೇ ಹೂವು, ತೆನೆ ಬಿಡುವ ಕಾಮ ಕಸ್ತೂರಿಯ ಬೀಜಗಳನ್ನು ತಂಪು ಪಾನೀಯದಲ್ಲಿ ಬಳಸುತ್ತಾರೆ. ಅಷ್ಟೇ ಅಲ್ಲ, ಈ ಸಸ್ಯವನ್ನು ಮನೆಮದ್ದಾಗಿ, ಅನೇಕ ಸಣ್ಣ-ಪುಟ್ಟ ಆರೋಗ್ಯ ಬಾಧೆಗಳನ್ನು ದೂರ ಮಾಡಲೂ ಉಪಯೋಗಿಸಬಹುದು.
– ಕಾಮಕಸ್ತೂರಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.
– ಎಲೆಯನ್ನು ಕುದಿಸಿ ಕಷಾಯ ಮಾಡಿ, ಜೇನುತುಪ್ಪ ಬೆರೆಸಿ ಕುಡಿದರೆ ಶೀತಬಾಧೆ ಗುಣವಾಗುತ್ತದೆ.
-ಕಾಮಕಸ್ತೂರಿ ಬೀಜ ಮತ್ತು ಎಲೆಗಳನ್ನು ರಾತ್ರಿ ನೀರಲ್ಲಿ ನೆನೆಸಿ, ಬೆಳಗ್ಗೆ ಆ ನೀರನ್ನು ಸಕ್ಕರೆ ಜೊತೆ ಸೇವಿಸಿದರೆ ಮೂಲವ್ಯಾಧಿಯಿಂದ ಆಗುವ ರಕ್ತಸ್ರಾವ ನಿಲ್ಲುತ್ತದೆ.
-ಹೂವುಗಳನ್ನು ನೀರಿನಲ್ಲಿ ಅರೆದು, ಬೆಳಗ್ಗೆ ಮತ್ತು ರಾತ್ರಿ ಜೇನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಸಮಸ್ಯೆ ಗುಣವಾಗುತ್ತದೆ.
– ಕಾಮಕಸ್ತೂರಿ ಬೀಜಗಳನ್ನು 2-3 ಗಂಟೆ ನೆನೆಸಿ, 1 ಲೋಟ ಹಾಲು ಮತ್ತು 1 ಚಮಚ ಸಕ್ಕರೆ ಜೊತೆ ಸೇವಿಸಿದರೆ ಪಿತ್ತ ಶಮನವಾಗುತ್ತದೆ.
-ಬೀಜವನ್ನು ತಣ್ಣೀರಿನಲ್ಲಿ ನೆನೆಸಿ, ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ರಕ್ತ ಭೇದಿ ನಿಲ್ಲುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Bengaluru: ಭುವನೇಶ್ವರಿ ಪ್ರತಿಮೆಗೆ ಹಾನಿ: ಆಕ್ರೋಶ
Bengaluru: ಕದ್ದ ಮೊಬೈಲ್ ಕೊರಿಯರ್ ಮೂಲಕ ಕೇರಳಕ್ಕೆ ರವಾನೆ!
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.