“ಕಿವಿ’ಮಾತು ಕೇಳಿ
Team Udayavani, Jul 31, 2019, 5:00 AM IST
ಸಮೃದ್ಧ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ “ಕಿವಿ’ ಕೂಡಾ ಒಂದು. ಚೈನೀಸ್ ಗೂಸ್‌ಬೆರಿ ಹೆಸರಿನ ಈ ಹಣ್ಣು, ಹೆಚ್ಚು ಹೆಚ್ಚು ದೇಶಗಳಿಗೆ ರಫ್ತಾಗತೊಡಗಿದಂತೆ ಕಿವಿ ಎಂಬ ಹೆಸರು ಪಡೆಯಿತು. ಮೊದಲೆಲ್ಲ ಸೂಪರ್ ಮಾರ್ಕೆಟ್‌ನಲ್ಲಿ ಮಾತ್ರ ಸಿಗುತ್ತಿದ್ದ ಈ ಹಣ್ಣು, ಈಗ ಸಣ್ಣ ಅಂಗಡಿಗಳಲ್ಲೂ ಲಭ್ಯ. ಹುಳಿ-ಸಿಹಿ ರುಚಿಯ ಈ ಹಣ್ಣನ್ನು ತಿನ್ನುವುದರಿಂದ ಅನೇಕ ಲಾಭಗಳಿವೆ.
– ಕಿವಿ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಕೆ, ನಾರಿನ ಅಂಶ, ಪೊಟ್ಯಾಷಿಯಂ ಅಧಿಕವಾಗಿದೆ.
– ಒಂದೇ ಒಂದು ಕಿವಿ ಹಣ್ಣನ್ನು ಸೇವಿಸಿದರೆ ದಿನನಿತ್ಯ ನಮ್ಮ ದೇಹಕ್ಕೆ ಬೇಕಾದ ವಿಟಮಿನ್ ಸಿ ಸಿಗುತ್ತದೆ.
-ದೃಷ್ಟಿ ನರಗಳನ್ನು ಬಲಗೊಳಿಸಿ, ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಹಣ್ಣು ತಡೆಗಟ್ಟುತ್ತದೆ.
– ವಿಟಮಿನ್ ಸಿ ಸಮೃದ್ಧವಾಗಿರುವ ಕಿವಿಯನ್ನು ತಿಂದರೆ, ಉಬ್ಬಸದಿಂದ ಕೂಡಿದ ಆಸ್ತಮಾ ಮತ್ತು ಇತರೆ ಶ್ವಾಸ ಸಂಬಧಿ ರೋಗಗಳಿಂದ ರಕ್ಷಣೆ ಸಿಗುತ್ತದೆ.
-ಪ್ರತಿದಿನ ಕಿವಿ ಹಣ್ಣು ತಿನ್ನುವುದರಿಂದ, ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತದಲ್ಲಿನ ಕೊಬ್ಬಿನ ಪ್ರಮಾಣ(ಟ್ರೆಗ್ಲಿಸರೈಡ್ಸ್) ಕಡಿಮೆಯಾಗುತ್ತದೆ.
– ಅಧಿಕ ನಾರಿನಂಶ ಹೊಂದಿರುವ ಈ ಹಣ್ಣು, ದೇಹದ ಕೊಬ್ಬಿನಂಶವನ್ನು ತಗ್ಗಿಸುವುದರಿಂದ, ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.
– ಈ ಹಣ್ಣು ಸೇವನೆ ಜೀರ್ಣಕ್ರಿಯೆಗೆ ಸಹಕಾರಿ.
-ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
– ಚರ್ಮದ ಕಾಂತಿಯನ್ನು ಹೆಚ್ಚಿಸುವ ಕಿವಿ ಹಣ್ಣು, ಚರ್ಮ ಸುಕ್ಕುಗಟ್ಟದಂತೆ ತಡೆಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.