“ಕುಚ್ಚು’ ಹುಡುಗಿ
Team Udayavani, Oct 10, 2018, 6:00 AM IST
ಕುಚ್ಚು ಇಲ್ಲದ ಸೀರೆಗಳು ಅಷ್ಟೊಂದು ವ್ಯಾಮೋಹ ಹುಟ್ಟಿಸುವುದಿಲ್ಲ. ನವಿಲುಗರಿಯಂತೆ ಮುದ ನೀಡುವ ಕುಚ್ಚು ಸೀರೆಗೆ ಜೊತೆಯಾಗಿದ್ದರೆ ಅದೇ ಒಂದು ವಿಶೇಷ ಆಕರ್ಷಣೆ. ಈವರೆಗೂ ತೀರಾ ಸಾಂಪ್ರದಾಯಿಕವಾಗಿ ಸೆಳೆಯುತ್ತಿದ್ದ ಕುಚ್ಚು, ಈಗ ಮಾಡರ್ನ್ ಆಗಿದೆ ಗೊತ್ತೇ?
ಸೀರೆಗೆ ಕುಚ್ಚು ಇದ್ದರೇನೇ ಆಕರ್ಷಣೆ ಎನ್ನುವುದನ್ನು ಫ್ಯಾಶನ್‌ಲೋಕ ಅರಿತುಕೊಂಡಿದೆ. ಸಾಂಪ್ರದಾಯಿಕ ರೇಷ್ಮೆ ಸೀರೆಯೋ, ಹೊಸ ವಿನ್ಯಾಸದ ಮಾಡರ್ನ್ ಸೀರೆಯೋ ಅಥವಾ ಒಂದು ಕಾಟನ್ ಸೀರೆಯೋ… ಯಾವುದೋ ಒಂದು, ಇದಕ್ಕೆ ಕಲಾತ್ಮಕ ಕುಚ್ಚೊಂದು ಇರಲೇಬೇಕು ಎನ್ನುವುದೀಗ ಹೆಂಗಳೆಯರ ಗಟ್ಟಿ ನಂಬಿಕೆ. ಈಗಂತೂ, ರೇಷ್ಮೆ ಸೀರೆಯ ಸೆರಗಿಗೆ; ಬಣ್ಣ ಬಣ್ಣದ ರೇಷ್ಮೆ ದಾರದ ಕುಚ್ಚು, ಟ್ಯಾಸೆಲ್, ಗೊಂಡೆ ಎಂದೆಲ್ಲಾ ಕರೆಸಿಕೊಳ್ಳುವ ಈ ಅದ್ಭುತ ಕಲಾಕೃತಿ ಇದ್ದರೆ ಮಾತ್ರ ಸೀರೆಯ ಸೆರಗಿನ ಅಂದ ಹೆಚ್ಚುವುದು ಎನ್ನುವ ಭಾವನೆ ಆವರಿಸಿದೆ.
ಮೊದಲೆಲ್ಲ ಸೀರೆಗೆ ಸಾಧಾರಣವಾಗಿ ಒಂದು ಬಣ್ಣದ ರೇಷ್ಮೆ ದಾರದಲ್ಲಿ ಕುಚ್ಚು ಹಾಕುತ್ತಿದ್ದರು. ಈಗ ಬೇರೆ ಬೇರೆ ಬಣ್ಣದ ದಾರಗಳಿಂದ, ಸೀರೆಯಲ್ಲಿರುವ ಬಣ್ಣಗಳ ಜೊತೆ ಹೊಂದಿಸಿ ಕಲಾತ್ಮಕವಾಗಿ ಹೆಣೆಯುವುದು, ಕ್ರೋಶಾದಲ್ಲಿ ವಿಧವಿಧ ವಿನ್ಯಾಸದಲ್ಲಿ ಹೊಲೆಯುವುದು ಚಾಲ್ತಿಯಲ್ಲಿದೆ. ಸೀರೆಗೆ ಹೊಂದುವ ಕ್ರಿಸ್ಟಲ್ ಮಣಿಗಳು, ಬೆಳ್ಳಿ, ಬಂಗಾರದ ಬಣ್ಣದ ಮಣಿಗಳು, ಬಣ್ಣದ ಪುಟ್ಟ ಪುಟ್ಟ ಕೊಳವೆಗಳು, ಮುತ್ತುಗಳು, ಕೊಳವೆಯಾಕಾರದ ಮಣಿ, ಹೂವಿನ ಆಕಾರದ ಬಿಲ್ಲೆಗಳು… ಹೀಗೆ ವಿಧವಿಧದ ಅಲಂಕಾರಿಕ ವಸ್ತುಗಳನ್ನು ಅವರವರ ಅಭಿರುಚಿಗೆ ತಕ್ಕಂತೆ ಕಲಾತ್ಮಕವಾಗಿ ಹೆಣೆದ ಕುಚ್ಚುಗಳನ್ನು ನೋಡುವುದೇ ಕಣ್ಣಿಗಾನಂದ.
ಸೀರೆಗೆ ಹೊಂದುವ ಬಣ್ಣ ಬಣ್ಣದ ದಾರ, ಅದಕ್ಕೆ ಹೊಂದುವ ಮಣಿಗಳನ್ನು ಹೊಂದಿಸಿಕೊಂಡು ಹೆಣೆಯುವ ಕಲೆ ಅನನ್ಯ. ಎಲ್ಲರಿಗೂ ಸುಲಭದಲ್ಲಿ ಒಲಿಯದು ಈ ಕಲೆ. ತಾಳ್ಮೆ, ಪರಿಶ್ರಮ, ತಪ್ಪಿಲ್ಲದಂತೆ ಕೆಲಸ ಮಾಡುವ ಉತ್ಸಾಹ ಇದ್ದರಷ್ಟೇ ಈ ಕಲೆ ಒಲಿಯುವುದು. ಪ್ರತಿ ಸೀರೆಯಲ್ಲೂ ವಿಭಿನ್ನತೆ ಮೆರೆಯುವ ಕಲಾತ್ಮಕತೆ, ಸೃಜನಶೀಲತೆ ಮೆಚ್ಚುಗೆಗೆ ಪಾತ್ರವಾಗುತ್ತದೆ. ಸ್ವಲ್ಪ ಶ್ರಮ ವಹಿಸಿ ಮಾಡುವ ಕಲೆಯಿಂದ ಆತ್ಮತೃಪ್ತಿ, ಸಾಕಷ್ಟು ಗಳಿಕೆ ಎರಡೂ ಸಿಗುತ್ತದೆ.
ಕುಚ್ಚಿನ ಆಭರಣ
ಕುಚ್ಚು ಅಥವಾ ಟ್ಯಾಸಲ್ ಎಂಬ ನೇತಾಡುವ ರೇಶಿಮೆ ದಾರಗಳ ಗುಂಪು, ಹಿಂದೆಲ್ಲಾ ನಾರೀಮಣಿಯರ ಸೀರೆಯ ಸೆರಗನ್ನು ಅಲಂಕರಿಸುತ್ತಿತ್ತು. ಅದೀಗ ಆಧುನಿಕ ಫ್ಯಾಷನ್ ಜಗತ್ತಿಗೂ ಲಗ್ಗೆ ಇಟ್ಟು, ಎಲ್ಲಾ ವಸ್ತುಗಳ ಮೇಲೂ ಮೋಡಿ ಮಾಡಿದೆ. ಹೇಗೆನ್ನುವಿರಾ? ಹಗುರಾದ ತಂತಿಯೊಂದಿಗೆ ಹೆಣೆದುಕೊಂಡ ಬಣ್ಣ ಬಣ್ಣದ ಕುಚ್ಚು ಕಿವಿಯ ಆಭರಣವಾಗುತ್ತದೆ. ಕೈಬಳೆಯಲ್ಲಿ ನೇತಾಡುವ ಕುಚ್ಚುಗಳು ಬಳೆಯ ಅಂದ ಹೆಚ್ಚಿಸುತ್ತವೆ. ಉದ್ದದ ಸರಕ್ಕೆ ಕುಚ್ಚುಗಳ ಪದಕ, ಸಿಲ್ಕ್ ದಾರವನ್ನು ದಪ್ಪನಾಗಿ ಸುತ್ತಿ ಮಣಿಗಳಿಂದ ಅಲಂಕರಿಸಿ, ಅದಕ್ಕೆ ಕುಚ್ಚುಗಳ ಪೆಂಡೆಂಟ್‌ನ ನೆಕ್ಲೇಸ್… ಹೀಗೆ ಒಡವೆಗಳ ಲೋಕದಲ್ಲೂ ಕುಚ್ಚು ರಾರಾಜಿಸುತ್ತಿದೆ.
ಸೀರೆಯ ನಂತರದ ಮಹಿಳೆಯರ ಅಚ್ಚುಮೆಚ್ಚಿನ ಉಡುಗೆಯಾದ ಚೂಡಿದಾರ್‌ನಲ್ಲಿಯೂ ಅಲಂಕಾರಿಕವಾಗಿ ಡಿಸೈನ್ ಮಾಡಿ ಕುಚ್ಚು ಸೇರಿಸಿದರೆ ಆಕರ್ಷಣೀಯ. ಕುರ್ತಾ, ಜೀನ್ಸ್ ಪ್ಯಾಂಟ್, ಡಿಸೈನರ್ ಬ್ಲೌಸ್‌ನ ಹಿಂಭಾಗದಲ್ಲಿ, ಕೈ ತೋಳಿನಲ್ಲಿ… ಹೀಗೆ ಅವರವರ ಅಭಿರುಚಿಗೆ ತಕ್ಕಂತೆ ಅಲಂಕಾರಿಕವಾಗಿ ಹೆಣೆದ ಕುಚ್ಚು ಹೊಸತನಕ್ಕೆ ನಾಂದಿ ಹಾಡಿದೆ.
ಕುಚ್ಚು ಮನಸ್ಸಿನ ಹತ್ತು ಮುಖಗಳು
ಜಂಬದ ಚೀಲವೆಂದು ಕರೆಸಿಕೊಳ್ಳುವ ಹ್ಯಾಂಡ್ ಬ್ಯಾಗ್‌ನಲ್ಲೂ ಕುಚ್ಚುಗಳ ವಿನ್ಯಾಸ ಮಿಂಚುತ್ತಿದೆ. ಬಣ್ಣದ ಕುಚ್ಚಿರುವ ಪಾದರಕ್ಷೆಗಳೂ ಮಾರ್ಕೆಟ್‌ಗೆ ಕಾಲಿಟ್ಟಿವೆ. ಸೀರೆ, ಸಲ್ವಾರ್, ಜೀನ್ಸ್ ಹೀಗೆ ಎಲ್ಲದಕ್ಕೂ ಹೊಂದುವ ಕುಚ್ಚು ಇರುವ ಚಪ್ಪಲಿಗಳು ಸದ್ಯಕ್ಕೆ ಚಾಲ್ತಿಯಲ್ಲಿರುವ ಫ್ಯಾಷನ್. ಮನೆಯ ಪರದೆಗಳಿಗೆ, ಒರಗು ದಿಂಬುಗಳಿಗೆ ಕುಚ್ಚು ಸೇರಿಸಿ ಹೊಲಿದರೆ ಮತ್ತಷ್ಟು ಸೊಬಗು.
ಶಾರದಾ ಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.