“ಲತಾ’ ವೈಭವ: ಅತಿರಥ’ನ ಮುಂದೆ ಬಳುಕುವ ಬಳ್ಳಿ


Team Udayavani, Sep 27, 2017, 12:50 PM IST

27-STATE-38.jpg

ಲತಾ ಹೆಗಡೆ ಕನ್ನಡ ಚಿತ್ರರಂಗಕ್ಕೆ ಈಗಷ್ಟೇ ಆಗಮನವಾಗಿರುವ ದಂತದ ಗೊಂಬೆ. ನೋಡಿದ ತಕ್ಷಣ ಫಾರಿನ್‌ ಹುಡುಗಿಯಾ ಈಕೆ? ಎಂಬ ಗುಮಾನಿ ಯಾರಿಗಾದರೂ ಬಂದೇ ಬರುತ್ತದೆ. ಅದು ನಿಜವೂ ಹೌದು. ಲತಾ ಹುಟ್ಟಿದ್ದು ಹೊನ್ನಾವರದಲ್ಲಾದರೂ, ಈಕೆಗೆ 6 ವರ್ಷವಿದ್ದಾಗಲೇ ಇವರ ಕುಟುಂಬ ನ್ಯೂಜಿಲೆಂಡ್‌ಗೆ ಹೋಗಿ ನಲೆಸಿತ್ತು. ಹಾಗಾಗಿ, ಇವರು ಬೆಳೆದಿದ್ದೆಲ್ಲಾ ಅಲ್ಲಿಯೇ. ಕಳೆದ ವರ್ಷ ತೆಲುಗು ಚಿತ್ರ “ತುಂತಾರಿ’ ಮೂಲಕ ಚಿತ್ರರಂಗ ಪ್ರವೇಶಿಸಿದರು. ಈಗ ಚೇತನ್‌ ಜೊತೆ “ಅತಿರಥ’, ವಿನಯ್‌ ರಾಜ್‌ಕುಮಾರ್‌ ಜೊತೆ “ಅನಂತು ವರ್ಸಸ್‌ ನುಸ್ರತ್‌’ ಚಿತ್ರೀಕರಣಗಳಲ್ಲಿ ಬ್ಯುಸಿ. ನನಗೆ ಪ್ರಾಣಿಗಳೆಂದರೆ ಇಷ್ಟ ಎನ್ನುವ ಈಕೆ, ನಾವು ಕರೆ ಮಾಡಿದಾಗ ಬೀದಿ ನಾಯಿಯೊಂದಕ್ಕೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಎಡತಾಕುತ್ತಿದ್ದರು. “ಪೆಟಾ’ ಸಂಘಟನೆಯ ಸದಸ್ಯೆಯೂ ಆಗಿರುವ ಲತಾಳ ಪುಟ್ಟ ಬಯೋಗ್ರಫಿ ಇಲ್ಲಿದೆ… 

ನ್ಯೂಜಿಲೆಂಡ್‌ನ‌ಲ್ಲಿದ್ದ ನಿಮ್ಮನ್ನು ಭಾರತೀಯ ಚಿತ್ರರಂಗ ಸೆಳೆದಿದ್ದು ಹೇಗೆ?
ನಾನು ನಟಿ ಆಗುತ್ತೇನೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ. ನಟನೆ, ಮಾಡೆಲಿಂಗ್‌ ಇಂಥದರಲ್ಲಿ ನನಗೆ ಚೂರೂ ಆಸಕ್ತಿ ಇರಲಿಲ್ಲ. ಸ್ನೇಹಿತರು ಹೇಳಿದರು ಅಂತ ಮಿಸ್‌ ಇಂಡಿಯಾ ನ್ಯೂಜಿಲೆಂಡ್‌ನ‌ಲ್ಲಿ ಭಾಗವಹಿಸಿದ್ದೆ. ಅದರಿಂದ ನನಗೆ ತೆಲುಗು ಚಿತ್ರ “ತುಂತಾರಿ’ಯಲ್ಲಿ ಅವಕಾಶ ಸಿಕ್ಕಿತು. ನನ್ನ ಪೋಷಕರು, ಸಿಕ್ಕ ಅವಕಾಶ ಮಿಸ್‌ ಮಾಡ್ಕೊàಬೇಡ. ಭಾರತಕ್ಕೆ ಹೋಗಿ ಸಿನಿಮಾದಲ್ಲಿ ನಟಿಸು ಎಂದರು. ಅಲ್ಲಿಂದ ಸಿನಿಮಾ ಪ್ರಯಾಣ ಆರಂಭವಾಯಿತು. ಈಗ ಇದನ್ನೇ ನನ್ನ ವೃತ್ತಿಯಾಗಿ ಸ್ವೀಕರಿಸಿದ್ದೇನೆ. 

ನಿಮ್ಮ ಪೋಷಕರು ಬೆಂಗಳೂರಿಗೇ ಶಿಫ್ಟ್ ಆಗಿದ್ದಾರ?
ಇಲ್ಲ. ಅವರು ನ್ಯೂಜಿಲೆಂಡ್‌ನ‌ಲ್ಲೇ ಇದ್ದಾರೆ. ನಾನು ಇಲ್ಲಿ ನನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದೇನೆ. ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡ್ಕೊàತಾರೆ, ಆದರೂ ಅಪ್ಪ, ಅಮ್ಮ, ತಂಗಿ ತುಂಬಾ ಮಿಸ್‌ ಆಗ್ತಾರೆ. ಜೊತೆಗೆ ನಾನು ಬೆಳೆದ ಅಕ್ಲೆಂಡ್‌ ಮತ್ತು ಅಲ್ಲಿಯ ಸ್ನೇಹಿತರನ್ನು ತುಂಬಾ ಮಿಸ್‌ ಮಾಡ್ಕೊತೀನಿ.

ಸಿನಿಮಾಗಳು ಮುಗಿದ ಬಳಿಕ ವಾಪಸು ನ್ಯೂಜಿಲೆಂಡ್‌ಗೆ ಹೋಗುವ ಯೋಚನೆ ಇದೆಯಾ?
ನನಗೆ ಆಗಾಗ ಆ ಯೋಚನೆ ಬರುತ್ತದೆ. ಆದರೆ ಅಪ್ಪ, ಅಮ್ಮ ಧೈರ್ಯ ತುಂಬುತ್ತಾರೆ. “ಎಲ್ಲರಿಗೂ ನಟಿಯಾಗುವ ಅವಕಾಶ ಸಿಗುವುದಿಲ್ಲ. ನಿನಗೆ ಅದು ಸ್ಪಲ್ಪವೂ ಪ್ರಯತ್ನಿಸದೇ ಸಿಕ್ಕಿದೆ. ಅಲ್ಲೇ ಇದ್ದು ನಟನಾ ವೃತ್ತಿಯಲ್ಲಿ ಏನಾದರೂ ಸಾಧಿಸು’ ಅಂದಿದ್ದಾರೆ. ಅವರಿಗೆ ಕನ್ನಡ, ಕಲೆ, ಸಂಸ್ಕೃತಿ ಬಗ್ಗೆ ಬಹಳ ಪ್ರೀತಿ. ಮಗಳು ಅದರಲ್ಲೇ ಮುಂದುವರಿಯಲಿ ಎಂಬ ಆಸೆ ಅವರದ್ದು.

ನೀವು ಅಮ್ಮನ ಮಗಳೊ ಅಥವಾ ಅಪ್ಪನ ಮಗಳ್ಳೋ? 
ನಾನು ಅಮ್ಮನ ಮಗಳು. ಅಮ್ಮನಿಗೆ ನನ್ನ ಎಲ್ಲಾ ಸೀಕ್ರೆಟ್‌ಗಳೂ ತಿಳಿದಿರುತ್ತದೆ. ಯಾರಾದರೂ ಹುಡುಗ ನನಗೆ ಪ್ರೊಪೋಸ್‌ ಮಾಡಿದರೆ ಅಥವಾ ಯಾವುದಾದರೂ ಹುಡುಗನ ಮೇಲೆ ಕ್ರಶ್‌ ಆದರೆ ಮೊದಲು ನಾನು ಹೇಳುವುದು ಅಮ್ಮನಿಗೇ.  

ಬೆಂಗಳೂರಿಗೆ ನೀವು ಹೊಂದಿಕೊಂಡಿದ್ದೀರಾ? ಅಥವಾ ಇಲ್ಲಿರಲು ಕಷ್ಟ ಆಗ್ತಾ ಇದೆಯಾ?
ಬೆಂಗಳೂರು ವೈಬ್ರೆಂಟ್‌ ಸಿಟಿ. ನ್ಯೂಜಿಲೆಂಡ್‌ ತುಂಬಾ ಬೋರಿಂಗ್‌. ಸಂಜೆ 6 ಗಂಟೆ ಮೇಲೆ ಅಲ್ಲಿ ಜನರ ಓಡಾಟ ಕಡಿಮೆ. ದಿನನಿತ್ಯದ ಎಲ್ಲಾ ವ್ಯವಹಾರಗಳೂ ಸಂಜೆ ಆಗುತ್ತಲೇ ಬಂದ್‌ ಆಗುತ್ತವೆ. ಆದರೆ, ಇಲ್ಲಿ ಹಾಗಲ್ಲ. ರಾತ್ರಿ 10 ಗಂಟೆ ವರೆಗೂ ಅಂಗಡಿಗಳು ತೆರೆದಿರುತ್ತವೆ. 12ರ ವರೆಗೂ ಜನರು ಓಡಾಡುತ್ತಿರುತ್ತಾರೆ. ಜೊತೆಗೆ ಇಲ್ಲಿಯ ಜನ ಎಲ್ಲರನ್ನೂ ಪ್ರೀತಿಯಿಂದ ಆದರಿಸುತ್ತಾರೆ. ಅದು ನನಗೆ ತುಂಬಾ ಹಿಡಿಸಿತು.

ಮನೇಲೆ ಕನ್ನಡ ಮಾತನಾಡ್ತಾ ಇದ್ರಾ ಅಥವಾ ಇಲ್ಲಿಗೆ ಬಂದ ಮೇಲೆ ಕಲಿತದ್ದಾ?
ನನ್ನ ಅಪ್ಪ ಕನ್ನಡಾಭಿಮಾನಿ. ಮಕ್ಕಳಿಗೆ ಕನ್ನಡ, ಕರ್ನಾಟಕದ ಸಂಸ್ಕೃತಿ ತಿಳಿದಿರಲಿ ಅಂತ ಮನೆಯಲ್ಲಿ ಕನ್ನಡದಲ್ಲೇ ಮಾತನಾಡಿಸ್ತಾ ಇದ್ರು. ಕನ್ನಡ ಓದಲು, ಬರೆಯಲು ಕಲಿಯಲಿ ಎಂದು ಕನ್ನಡ ಕ್ಲಾಸಿಗೆ ಕಳಿಸುತ್ತಿದ್ರು. ಆದರೆ, ನಾನು ಬೆರೆಯುವುದನ್ನು ಕಲಿಯಲಿಲ್ಲ. ನಾವು ನ್ಯೂಜಿಲೆಂಡ್‌ ಕನ್ನಡ ಕೂಟದ ಸದಸ್ಯರು. ನಮ್ಮ ಕೂಟದಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನಾನು ಕನ್ನಡ ಹಾಡಿಗೆ ನೃತ್ಯ ಮಾಡಬೇಕಿತ್ತು. ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ ನಾನು ಕನ್ನಡ ಹಾಡಿಗೆ ಕಡ್ಡಾಯವಾಗಿ ಡ್ಯಾನ್ಸ್‌ ಮಾಡುತ್ತಿದ್ದೆ. 

ಪುನೀತ್‌ ರಾಜ್‌ಕುಮಾರ್‌ ಮೇಲೆ ಯಾಕಷ್ಟು ಅಭಿಮಾನ? 
ಅವರಂಥ ಸಹಜ ನಟರು ಅಪರೂಪ. ಅವರು ಅಭಿನಯಿಸುತ್ತಿದ್ದಾರೆ ಅಂತ ಅನ್ನಿಸುವುದೇ ಇಲ್ಲ. ಪಾತ್ರವೇ ಅವರಾಗಿಬಿಡುತ್ತಾರೆ.  ನಾನು ನೋಡುತ್ತಿರುವುದು ಒಂದು ಸಿನಿಮಾವಲ್ಲ, ನಿಜವಾಗಿಯೂ ನಮ್ಮ ಕಣ್ಣ ಮುಂದೆ ಏನೋ ನಡೆಯುತ್ತಿದೆ ಅನ್ನಿಸುವಷ್ಟು ಸಹಜವಾಗಿರುತ್ತದೆ ಅವರ ಅಭಿನಯ. ಬೇಗ ನಮ್ಮನ್ನು ಅವರ ಪಾತ್ರದ ಜೊತೆ ಕನೆಕ್ಟ್ ಮಾಡಿಬಿಡುತ್ತಾರೆ.

ಅವರ ಯಾವ ಸಿನಿಮಾ ನಿಮಗೆ ಫೇವರಿಟ್‌? ಅವರ ಸಿನಿಮಾದಲ್ಲಿ ನಟಿಸುವ ಇರಾದೆ ಇದೆಯಾ? 
ಅರಸು, ಆಕಾಶ್‌ ಮತ್ತು ಮಿಲನ ನನ್ನ ಫೇವರೆಟ್‌ ಸಿನಿಮಾಗಳು. ಪುನೀತ್‌ ಜೊತೆ ನಟಿಸುವುದು ನನ್ನ ಕನಸು.

ಈವರೆಗೂ ನಿಮ್ಮ ಸಹನಟರಲ್ಲಿ ನೀವು ತುಂಬಾ ಮೆಚ್ಚಿದ ಸಹನಟ ಯಾರು?
ಚೇತನ್‌. “ಅತಿರಥ’ ಚಿತ್ರದಲ್ಲಿ ಚೇತನ್‌ ಜೊತೆ ನಟಿಸಿದ್ದು ಒಂದು ಅಮೂಲ್ಯವಾದ ಅನುಭವ. ಚೇತನ್‌ ಕೂಡ ನನ್ನಂತೆಯೇ ವಿದೇಶದಲ್ಲಿ ಬೆಳೆದವರು. ಅವರು ಕರ್ನಾಟಕಕ್ಕೆ ಕೇವಲ ನಟನಾಗುವ ಆಸೆ ಇರಿಸಿಕೊಂಡು ಬಂದವರಲ್ಲ ಎಂಬುದು ಅವರ ಜೊತೆ ಮಾತನಾಡಿದರೆ ನಿಮಗೆ ತಿಳಿಯುತ್ತದೆ. ದೇಶ ಮತ್ತು ಇಲ್ಲಿಯ ಜನಜೀವನ ಸುಧಾರಿಸುವ ಬಗ್ಗೆ ಅವರಲ್ಲಿ ಸಾಕಷ್ಟು ಕನಸುಗಳಿವೆ. ನನಗೆ ಕಾರ್ನಾಟಕ ಅಥವಾ ಭಾರತವನ್ನು ಅವರಷ್ಟು ಚೆನ್ನಾಗಿ ಯಾರೂ ಈವರೆಗೂ ವಿವರಿಸಿರಲಿಲ್ಲ. ಜೊತೆಗೆ ಸಹನಟನಾಗಿಯೂ ಅವರು ತುಂಬಾ ಸಹಕಾರ ನೀಡುತ್ತಾರೆ.  

“ಅತಿರಥ’ ಮತ್ತು “ಅನಂತು ವರ್ಸಸ್‌ ನುಸ್ರತ್‌’ನಂಥ ದೊಡ್ಡ ಚಿತ್ರಗಳು ವೃತ್ತಿಯ ಆರಂಭದಲ್ಲೇ ಸಕ್ಕಿದ್ದು ಬಗ್ಗೆ ಏನನ್ನಿಸುತ್ತದೆ?
“ಅತಿರಥ’ದಲ್ಲಿ ಅವಕಾಶ ಸಿಕ್ಕಿದ್ದರ ಬಗ್ಗೆ ತುಂಬಾ ಖುಷಿ ಇದೆ. ಏಕೆಂದರೆ ನಾನು ಮಹೇಶ್‌ ಬಾಬು ಅವರ “ಆಕಾಶ್‌’, “ಅರಸು’ ಚಿತ್ರಗಳನ್ನು ತುಂಬಾ ಇಷ್ಟ ಪಟ್ಟದ್ದೆ. ಜೊತೆಗೆ “ಚಿರು’ ಚಿತ್ರದ “ಇಲ್ಲೆ ಇಲ್ಲೆ ಎಲ್ಲೋ…’ ನನ್ನ ಫೇವರೆಟ್‌ ಹಾಡು. ಅವರ ಚಿತ್ರವೊಂದು ನನ್ನ ಮೊದಲ ಕನ್ನಡ ಚಿತ್ರ ಆಗುತ್ತದೆ ಎಂದು ನಾನು ಎಣಿಸಿಯೇ ಇರಲಿಲ್ಲ. ಇದೊಂಥರಾ ಬಯಸದೇ ಬಂದ ಭಾಗ್ಯ. ಇನ್ನು ಅನಂತು ಚಿತ್ರವೂ ನನಗೆ ವಿಶೇಷವೇ, ಕಾರಣ ನಾನು ಮೊದಲೇ ಹೇಳಿದಂತೆ ನನ್ನ ಕುಟುಂಬ ರಾಜ್‌ ಕುಟುಂಬದ ಅಭಿಮಾನಿಗಳು ಅಂತ. ವಿನಯ್‌ ಅವರದ್ದೇ ಕುಟುಂಬದ ನಟ. ಹೀಗಾಗಿ ಈ ಬಗ್ಗೆಯೂ ಹೆಮ್ಮೆ ಇದೆ. 

ನಿಮ್ಮ ಆಹಾರಾಭ್ಯಾಸ ಹೇಗಿದೆ? ಬೆಂಗಳೂರು ಆಹಾರ ಅಡೆjಸ್ಟ್‌ ಆಗಿದೆಯಾ? 
ನಮ್ಮ ಮನೆಯಲ್ಲಿ ಕರ್ನಾಟಕದ ಆಹಾರ ಮಾತ್ರ ಮಾಡ್ತಾ ಇದ್ರು. ಇಡ್ಲಿ, ದೋಸೆ, ಪಾಯಸ ಇಂಥದ್ದೆಲ್ಲಾ ನನಗೆ ಮೊದಲೇ ಅಭ್ಯಾಸವಿದೆ. ಇಲ್ಲಿಗೆ ಬಂದ ಬಳಿಕ ಪುಳಿಯೊಗರೆ, ವಾಂಗಿ ಬಾತ್‌ ಮುಂತಾದ ಆಹಾರ ಅಭ್ಯಾಸ ಮಾಡ್ಕೊàತಾ ಇದ್ದೀನಿ. ನನಗೆ ಕರ್ನಾಟಕದ ಆಹಾರ ಇಷ್ಟ. ಮನೆಯಲ್ಲಿ ಮಾಡುವ ಅನ್ನ ಮತ್ತು ತಂಬುಳಿ ನನ್ನ ಫೇವರಿಟ್‌ ಆಹಾರ.

ಶೂಟಿಂಗ್‌ ಸ್ಥಳದಲ್ಲಿ ನಡೆದ ಒಂದು ಹಾಸ್ಯ ಪ್ರಸಂಗ  ನೆನಪಿಸಿಕೊಳ್ಳುವುದಾರೆ?
“ಅತಿರಥ’ ಶೂಟಿಂಗ್‌ ನಡೆಯುವಾಗ ನಡೆದ ಒಂದು ಪ್ರಸಂಗ ಯಾವಾಗಲೂ ನೆನಪಾಗುತ್ತದೆ. ನಾನು ನನ್ನ ಸಹಾಯಕನಿಗೆ “ಸಬ್‌ ವೇ’ ಮಳಿಗೆಯಿಂದ “ವೆಜ್‌ ಸಬ್‌’ ತರಲು ಹೇಳಿದ್ದೆ.  ಅದು ಗೋದಿ ಬ್ರೆಡ್‌ನ‌ಲ್ಲಿ ಮಾಡಿದ್ದಾಗಿರಬೇಕು, ಅದರಲ್ಲಿ ಕ್ಯಾಪ್ಸಿಕಂ ಮತ್ತು ಟೊಮ್ಯಾಟೊ ಹೆಚ್ಚಿರಬೇಕು ಎಂದೆಲ್ಲಾ ಹೇಳಿದ್ದೆ. ಪಾಪ ಆತ ಅದೇನು ಅರ್ಥ ಮಾಡಿಕೊಂಡನೋ ಗೊತ್ತಿಲ್ಲ. ನಾ ಹೇಳಿ 5 ಗಂಟೆಗಳ ಬಳಿಕ ಬಂದ. ದೊಡ್ಡ ಬ್ಯಾಗ್‌ನಲ್ಲಿ ನಾನಾ ರೀತಿಯ ಬ್ರೆಡ್‌ಗಳು ಮತ್ತು ತರಕಾರಿಯನ್ನು ತಂದಿದ್ದ. ತರಕಾರಿ ಹೆಚ್ಚಲು ಕಡೇ ಪಕ್ಷ ಚಾಕುವನ್ನೂ ತಂದಿರಲಿಲ್ಲ. ಆ ದಿನ ನಾನು ಊಟವನ್ನೇ ಮಾಡಲಿಲ್ಲ. 

ನೀವು ಹೆಚ್ಚಾಗಿ ಶಾಪಿಂಗ್‌ ಮಾಡುವ ವಸ್ತುಗಳು ಯಾವುವು? 
ನನಗೆ ಚರ್ಮ ರಕ್ಷಣೆ ಮಾಡುವುದರಲ್ಲಿ ಎಲ್ಲಿಲ್ಲದ ಆಸಕ್ತಿ. ನನ್ನ ಸ್ನೇಹಿತರ ಹೊರದೇಶಗಳಿಗೆ ಹೋದರೆ ಅವರಿಗೆ ನಾನು ಸ್ಕಿನ್‌ ಕೇರ್‌ ಉತ್ಪನ್ನಗಳ ದೊಡ್ಡ ಪಟ್ಟಿಯನ್ನೇ ಕೊಡ್ತೀನಿ. ನಾನು ಶಾಪಿಂಗ್‌ ಹೋದಾಗಲೂ ನಾನು ಖರೀದಿಸುವುದು ಶಾಂಪು, ಬಾಡಿ ಲೋಷನ್‌, ಮಾಯಿಶ್ಚರೈಸರ್‌ ಇಂಥವೇ. ಬಟ್ಟೆ ಕೊಳ್ಳುವುದು ಬಹಳ ಅಪರೂಪ. 

ಕರ್ನಾಟಕದಲ್ಲಿ ನಿಮಗೆ ಮತ್ತೆ ಮತ್ತೆ ಹೋಗಬೇಕೆನಿಸುವ ತಾಣ?
ಚಿಕ್ಕಮಗಳೂರಿನ “ಬಾಬಾ ಬುಡನ್‌ಗಿರಿ’.

ನಾನು ಮೊದಲಿಂದ್ಲು ಪುನೀತ್‌ ಫ್ಯಾನ್‌!
ಕನ್ನಡ ಚಿತ್ರರಂಗ ಎಂದ ಕೂಡಲೇ ನನಗೆ ನೆನಪಾಗುವುದು ಡಾ. ರಾಜಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌. ನನ್ನ ಅಪ್ಪ, ಅಮ್ಮ ರಾಜ್‌ಕುಮಾರ್‌ ಅಭಿಮಾನಿಗಳು. ನಾನು ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ. ಉತ್ತಮ ಕನ್ನಡ ಚಿತ್ರಗಳು ಬಿಡುಗಡೆಯಾದರೆ ನ್ಯೂಜಿಲೆಂಡ್‌ ಕನ್ನಡ ಕೂಟದವರು ಅಲ್ಲಿಯ ಚಿತ್ರಮಂದಿರಗಳಲ್ಲಿ ಪ್ರದರ್ಶಿಸುತ್ತಾರೆ. ಅಲ್ಲಿ ಪುನೀತ್‌ ಸಿನಿಮಾಗಳು ಒಂದೂ ಮಿಸ್‌ ಆಗ್ತಾ ಇರಲಿಲ್ಲ. ಪುನೀತ್‌ ಸಿನಿಮಾಗಳಿಗೆ ತಪ್ಪದೇ ಕುಟುಂಬ ಸಮೇತ ಹೋಗ್ತಾ ಇದ್ವಿ. 

ಫಾರಿನ್‌ ಹುಡುಗಿ ಥರಾ ಟ್ರೀಟ್‌ ಮಾಡ್ತಿದ್ರು!
ನಾನು ಒಂಥರಾ ಫಾರಿನ್‌ ಹುಡುಗಿಯೇ. ಆದರೆ, ನಾನು ಕನ್ನಡತಿ. ನನಗೆ ಕನ್ನಡ ಮಾತಾಡಲು ಬರುತ್ತದೆ. ಇಲ್ಲಿನ ಸಂಸ್ಕೃತಿ ಪರಿಚಯ ಕೂಡ ಸ್ವಲ್ಪ ಮಟ್ಟಿಗೆ ಇದೆ. ಆದರೆ, ಮೊದಮೊದಲಿಗೆ ನನ್ನನ್ನು ಪಕ್ಕಾ ಫಾರಿನ್‌ ಹುಡುಗಿ ರೀತಿಯೇ ಎಲ್ಲರೂ ನೋಡುತ್ತಿದ್ದರು. ನನ್ನ ಜೊತೆ ಇಂಗ್ಲಿಷ್‌ನಲ್ಲಿಯೇ ಮಾತಾಡುತ್ತಿದ್ದರು. ನನಗೆ ಇಲ್ಲಿಯ ಊಟ- ತಿಂಡಿಗಳನ್ನು ಪರಿಚಯಿಸುತ್ತಿದ್ದರು. 

ಚೇತನ ಜೆ.ಕೆ. 

ಟಾಪ್ ನ್ಯೂಸ್

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

ಮೀನಿನ ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

10

Nayanthara: ʼರಕ್ಕಯಿʼ ಆಗಿ ದುಷ್ಟರ ಪಾಲಿಗೆ ದುಸ್ವಪ್ನವಾದ ಲೇಡಿ ಸೂಪರ್‌ ಸ್ಟಾರ್

BGT 2024-25: Virat Kohli returns to form in Aussies

BGT 2024-25: ಆಸೀಸ್‌ ನಲ್ಲಿ ಲಯಕ್ಕೆ ಮರಳಿದ ವಿರಾಟ್‌ ಕೊಹ್ಲಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರು ಪಾಲು

Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

IPL Mega Auction: 13-year-old boy in mega auction: Who is Vaibhav Suryavanshi?

IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್‌ ಸೂರ್ಯವಂಶಿ

2

Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಸಾ*ವು

1

Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್‌

ಮೀನಿನ ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.