ಸ್ನಿಗ್ಧ ಸುಂದರಿ ನೀವೇನೇ…
Team Udayavani, Aug 15, 2018, 6:00 AM IST
ಸ್ವಾತಂತ್ರ್ಯ ಅಂದರೆ ಏನು?.. ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ಕೊಡುತ್ತಾರೆ. ಅನಿಸಿದ್ದನ್ನು ಮಾಡುವುದು, ಇಷ್ಟ ಬಂದದ್ದನ್ನು ತಿನ್ನುವುದು, ಬೇಕಾದಲ್ಲಿ ತಿರುಗಾಡುವುದು, ಮನಸ್ಸಿಗೊಪ್ಪುವ ಬಟ್ಟೆ ಧರಿಸುವುದು… ಹೀಗೆ ಎಲ್ಲವೂ ಸ್ವಾತಂತ್ರ್ಯದ ಪರಿಧಿಯೊಳಗೇ ಬರುತ್ತದೆ. ಒಟ್ಟಿನಲ್ಲಿ, ಹೇಳ್ಳೋದಾದರೆ ಬಂಧನ ಮುಕ್ತವಾಗುವುದೇ ಸ್ವಾತಂತ್ರ್ಯ. ಹಾಗಿದ್ದ ಮೇಲೆ ನಿಮ್ಮ ಮುಖಕ್ಕೆ ಮೇಕ್‌ಅಪ್‌ನ ಬಂಧನವೇಕೆ? ಕಣ್ಣಿಗೆ ಮಸ್ಕರಾದ ಲೇಪನವೇಕೆ?.. ಈ ಸ್ವಾತಂತ್ರ್ಯ ದಿನದಂದು ಮೇಕ್‌ಅಪ್‌ಗೆ ಬೈ ಬೈ ಹೇಳಿ, ಬಿಂದಾಸ್ ಆಗಿ ಇರಿ.
ಅಯ್ಯೋ, ಮೇಕಪ್ ಇಲ್ಲದೆ ಹೊರಗೆ ಹೋಗೋದಾ? ಅಂತ ಕೇಳಬೇಡಿ. ಯಾಕಂದ್ರೆ ಕೃತಕ ಬಣ್ಣವಿಲ್ಲದೆಯೂ ನೀವು ಸುಂದರವಾಗಿ ಕಾಣಬಲ್ಲಿರಿ. ಹಣೆಗೊಂದು ಸಣ್ಣ ಬಿಂದಿ, ತ್ವಚೆಯ ರಕ್ಷಣೆಗೆ ಸನ್‌ಸ್ಕ್ರೀನ್ ಲೋಷನ್.. ಇಷ್ಟಿದ್ದರೂ ಸಾಕು! ಸೆಲೆಬ್ರಿಟಿಗಳು ಕೂಡ ಟ್ವಿಟರ್‌ನಲ್ಲಿ ನೋ ಮೇಕ್‌ಅಪ್ ಟ್ರೆಂಡ್ ಸೃಷ್ಟಿಸಿದ್ದು ಗೊತ್ತೇ ಇದೆ. ಹಾಗಾದ್ರೆ ನೋ ಮೇಕ್‌ಅಪ್‌ನ ಲಾಭಗಳೇನು ಗೊತ್ತಾ?
1. ಆಫೀಸಿಗೆ/ ಕಾಲೇಜಿಗೆ ಹೊರಡೋ ಮುನ್ನ ಕನ್ನಡಿಯ ಮುಂದೆ ನೀವು ಕಳೆಯುವ ಸಮಯವನ್ನು ಉಳಿಸಬಹುದು. ಅಷ್ಟು ಸಮಯದಲ್ಲಿ ಬೇಕಾದ್ರೆ ನೀವು ಎಕ್ಸ್‌ಟ್ರಾ ನಿದ್ದೆ ಮಾಡಬಹುದು.
2. ಕ್ರೀಂ, ಫೌಂಡೇಶನ್‌ಗಳಿಂದ ಉಸಿರುಗಟ್ಟಿರುವ ಚರ್ಮ ಒಂದು ದಿನದ ಮಟ್ಟಿಗಾದರೂ ನಿರಾಳವಾಗುತ್ತದೆ
3. ಮೇಕ್‌ಅಪ್ ಅಳಿಸಿ ಹೋಯ್ತಾ, ಮತ್ತೂಮ್ಮೆ ಟಚ್‌ಅಪ್ ಕೊಡಬೇಕಾ? ಅಂತೆಲ್ಲಾ ದಿನವಿಡೀ ಟೆನÒನ್ ಮಾಡಿಕೊಳ್ಳುವ ಅಗತ್ಯವೇ ಇರುವುದಿಲ್ಲ.
4. ಯಾರಾದರೂ ನಿಮ್ಮ ಅಂದವನ್ನು ಹೊಗಳಿದರೆ, ಅದರ ಕ್ರೆಡಿಟ್‌ಅನ್ನು ನೀವು ಪೂರ್ತಿಯಾಗಿ ತೆಗೆದುಕೊಳ್ಳಬಹುದು!
5. ನಗಬೇಕು/ ಅಳಬೇಕು ಅನ್ನಿಸಿದಾಗ ಮಸ್ಕಾರ ಅಳಿಸಿ ಹೋಗುವ ಚಿಂತೆಯೇ ಬೇಡ
6. ಮೊಡವೆ ಕಲೆ, ಕಣ್ಣಿನ ಸುತ್ತಲಿನ ಕಪ್ಪು, ತುಟಿಯ ಬಣ್ಣ… ಹೀಗೆ ಯಾವುದನ್ನೂ ಮರೆಮಾಚದೆ, ನಮ್ಮನ್ನು ನಾವು ಸಂಪೂರ್ಣವಾಗಿ ಒಪ್ಪಿಕೊಂಡಾಗ ಆತ್ಮವಿಶ್ವಾಸವೂ ವೃದ್ಧಿಸುತ್ತದೆ.
7. ಬ್ಯಾಗ್‌ನಿಂದ ಕದ್ದುಮುಚ್ಚಿ ಕನ್ನಡಿ ತೆಗೆದು ಮುಖ ನೋಡಿಕೊಳ್ಳುವ ತಾಪತ್ರಯವೇ ಇಲ್ಲ.
8. ಊಟದ ನಂತರ ತುಟಿಗೆ ಮತ್ತೂಮ್ಮೆ ಲಿಪ್‌ಸ್ಟಿಕ್ ಲೇಪಿಸಿಕೊಳ್ಳುವ ಅಗತ್ಯವೇ ಇಲ್ಲ
9. ಕನ್ನಡಿ, ಲಿಪ್‌ಸ್ಟಿಕ್, ಲಿಪ್‌ಲೈನರ್, ಮಸ್ಕಾರ, ಐ ಲೈನರ್, ಫೌಂಡೇಶನ್ ಕ್ರೀಂ.. ಎಲ್ಲವನ್ನೂ ವ್ಯಾನಿಟಿ ಬ್ಯಾಗ್‌ನಿಂದ ತೆಗೆದರೆ, ಹೆಗಲಿನ ಭಾರವೂ ಕುಗ್ಗುತ್ತದೆ.
10. ಆಫೀಸಿನಿಂದ ಮನೆಗೆ ಬಂದ ಮೇಲೆ ಮುಖದ ಮೇಕ್‌ಅಪ್ ತೆಗೆಯಲು ಸಮಯ ವ್ಯರ್ಥವಾಗುವುದೇ ಇಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.