ಅಮೂಲ್ಯ ಗಣಿಕೆ
Team Udayavani, Oct 9, 2019, 4:01 AM IST
ಗಣಿಕೆ, ಕಾಕಿ, ಕರಿಕಾಚಿ, ಕಾಶೀ ಸೊಪ್ಪು ಎಂಬೆಲ್ಲಾ ಹೆಸರಿನಿಂದ ಕರೆಸಿಕೊಳ್ಳುವ ಈ ಗಿಡ, ಹಿತ್ತಲಿನಲ್ಲಿ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಪೊದೆಯಂತೆ ಬೆಳೆಯುವ ಈ ಸಸ್ಯವನ್ನು ಮಳೆಗಾಲದಲ್ಲಿ ಹೇರಳವಾಗಿ ಕಾಣಬಹುದು. ಈ ಗಿಡದಲ್ಲಿ ಕಪ್ಪು ಮತ್ತು ಕೆಂಪು ಗಣಿಕೆ ಎಂಬ ಎರಡು ವಿಧಗಳಿವೆ.
ಎರಡೂ ಬಗೆಯ ಹಣ್ಣುಗಳು ರುಚಿಕರ. ಆದರೆ, ಕೆಂಪು ಗಣಿಕೆಯಲ್ಲಿ ಹೆಚ್ಚು ಔಷಧೀಯ ಗುಣವಿದೆ. ಬಿತ್ತದೆ ಬೆಳೆಯುವ ಈ ಸಸ್ಯ, ಜಾನುವಾರುಗಳಿಗೂ ಇಷ್ಟದ ಮೇವು. ಇದನ್ನು ಕಳೆ ಅಂತ ನಿರ್ಲಕ್ಷಿಸುವುದು ಸರಿಯಲ್ಲ. ಯಾಕಂದ್ರೆ, ಈ ಸೊಪ್ಪಿಗೆ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ.
-ಗಣಿಕೆ ಸೊಪ್ಪನ್ನು ಪಲ್ಯ ಮಾಡಿ ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.
-ಗಣಿಕೆಯ ಎಲೆಗಳು ಪಿತ್ತಹರವಷ್ಟೇ ಅಲ್ಲ, ರಕ್ತಶುದ್ಧಿಗೂ ಸಹಕಾರಿ. ದೇಹದಲ್ಲಿ ಪದೇಪದೆ ಕುರು ಆಗುತ್ತಿದ್ದರೆ, ಈ ಸೊಪ್ಪನ್ನು ಸೇವಿಸಿ.
-ಗಣಿಕೆ ಸೊಪ್ಪನ್ನು ಬೇಯಿಸಿ ತೆಗೆದ ರಸಕ್ಕೆ, ಅರಿಶಿನ ಬೆರೆಸಿ ಕುರುವಿಗೆ ಹಚ್ಚಿ. ಸೊಪ್ಪಿನ ರಸಕ್ಕೆ, ಶುಂಠಿ ರಸ ಹಾಗೂ ಜೇನುತುಪ್ಪ ಬೆರೆಸಿ ಕುಡಿದರೆ, ಶೀತ-ಕೆಮ್ಮು ಗುಣವಾಗುತ್ತದೆ
-ಚರ್ಮರೋಗಗಳಾದ ಇಸುಬು, ಕಜ್ಜಿ, ಸೋರಿಯಾಸಿಸ್‌ನಿಂದ ಬಳಲುತ್ತಿದ್ದರೆ ಗಣಿಕೆ ಹೂವಿನ ಕಷಾಯ ಕುಡಿಯಿರಿ.
-ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿದರೆ ಉರಿಮೂತ್ರ ನಿಲ್ಲುತ್ತದೆ.
-ಸರ್ಪಸುತ್ತು ಆಗಿದ್ದಲ್ಲಿ ಗಣಿಕೆ ಸೊಪ್ಪನ್ನು ಅರೆದು ಅರಿಸಿನ ಬೆರೆಸಿ ಹಚ್ಚಿ.
-ಕಪ್ಪು ಬಣ್ಣದ ಗಣಿಕೆ ಹಣ್ಣಿನ ಸೇವನೆಯೂ ಆರೋಗ್ಯಕ್ಕೆ ಒಳ್ಳೆಯದು.
-ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿ.
(ಆಕರ: “ಸೊಪ್ಪೇ ಸಂಪತ್ತು’ ಪುಸ್ತಕ. ಸಂಪಾದಕಿ: ಪಿ.ಚಂದ್ರಿಕಾ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.