ಪೋಷಕರೇ, ಈ ಕಿವಿಮಾತನ್ನು ಕೇಳಿಸಿಕೊಳ್ಳಿ : ಶಿಸ್ತಿನ ಪಾಠವನ್ನು ಹುಡುಗರಿಗೂ ಕಲಿಸಬೇಕು!


Team Udayavani, Apr 7, 2021, 5:07 PM IST

ಪೋಷಕರೇ, ಈ ಕಿವಿಮಾತನ್ನು ಕೇಳಿಸಿಕೊಳ್ಳಿ : ಶಿಸ್ತಿನ ಪಾಠವನ್ನು ಹುಡುಗರಿಗೂ ಕಲಿಸಬೇಕು!

ಎಂದಿನಂತೆ ಪಾರ್ಕಿನಲ್ಲಿ ವಾಕಿಂಗ್‌ ಮುಗಿಸಿ, ಗುಲ್‌ಮೊಹರ್‌ ಮರದ ಕೆಳಗೆ ಹಾಸಿದ್ದ ಕಲ್ಲು ಬೆಂಚಿನ ಮೇಲೆ ಕೂತಿದ್ದೆ. ಪಾರ್ಕಿನ ತುಂಬಾ ಜೋಡಿಯಾಗಿಯೋ, ಒಂಟಿಯಾಗಿಯೋ ವಾಕ್‌ ಮಾಡುತ್ತಿರುವವರ ಸಂಖ್ಯೆ ಸಾಕಷ್ಟಿತ್ತು.ಜೊತೆಗೆ ಕೊರೊನಾದ ಬಿಸಿ ಕೊಂಚ ಕಡಿಮೆಯಾದ್ದರಿಂದ ಪಾರ್ಕಿಗೆ ಲಗ್ಗೆ ಇಟ್ಟುಕಲರವ ಎಬ್ಬಿಸಿದ ಮಕ್ಕಳ ದಂಡು ಸಹ. ಆ ಸಂಜೆಯ ವಾತಾವರಣ ಸುಂದರವಾಗಿತ್ತು. ನಾನು ಕುಳಿತಲ್ಲಿಂದ ಕೊಂಚ ದೂರದಲ್ಲಿ ಹೆಂಗೆಳೆಯರ ಗುಂಪೊಂದು ಭಯಂಕರಹರಟೆಯಲ್ಲಿ ಮುಳುಗಿತ್ತು.

ಅವರ ಪಕ್ಕದಲ್ಲಿಯೇ ಪುಟ್ಟ ಮಕ್ಕಳಿಬ್ಬರು ಆಟವಾಡುತ್ತಿದ್ದ ಸೊಗಸನ್ನು ತಲ್ಲೀನತೆಯಿಂದ ನೋಡುತ್ತಿದ್ದೆ. ಒಂದೈದು ನಿಮಿಷ ಕಳೆದಿರಲಿಕ್ಕಿಲ್ಲ, ಮಕ್ಕಳಿಬ್ಬರಲ್ಲಿ ಕಿತ್ತಾಟ ಆರಂಭವಾಯಿತು ಎನ್ನಿಸುತ್ತದೆ. ಆ ಪುಟ್ಟ ಹುಡುಗ, ತನಗಿಂತ ಎರಡ್ಮೂರು ವರ್ಷ ದೊಡ್ಡವಳಿರಬಹುದಾದ ಹೆಣ್ಣು ಮಗುವಿನ ಕೂದಲೆಳೆದು ಬಗ್ಗಿಸಿ ಬೆನ್ನಿಗೆ ಒಂದೆರಡು ಗುದ್ದಿದ. ಒಂದೇ ಸಮಾ ಚೀರಿಕೊಂಡ ಆ ಹುಡುಗಿ ಹತ್ತಿರದಲ್ಲೇ ಮಾತಾಡುತ್ತಾ ನಿಂತಿದ್ದ ತಾಯಿಯ ಬಳಿ ದೂರು ಒಯ್ದಳು.  ಇವಳ ಅಳು ನೋಡಿ ಆಕೆ ಶ್ಮ್. ಬಾಯಿ ಮುಚ್ಚು.. ಎಂದು ಗದರಿ, ಆತಂಕದಿಂದ ನಿಂತಿದ್ದ ಮಗನನ್ನು ನೋಡಿ ಈ ಗಂಡು ಮಕ್ಕಳೇ ಹೀಗೆ ಕಣ್ರೀ..ಎಂದು ಹೆಮ್ಮೆಯಿಂದ ನಕ್ಕಳು!

ಹುಡುಗ್ರು ಇರೋದೇ ಹಾಗೆ…: ಹೀಗೆ ಮಾಡುವುದರ ಮೂಲಕ ಆ ಮಹಾತಾಯಿಗಂಡು ಮಕ್ಕಳು ಏನೇ ಮಾಡಿದರೂಸಹಿಸಿಕೊಂಡು ಸುಮ್ಮನಿರಬೇಕು ಎನ್ನುವುದನ್ನುಮಗಳಿಗೂ, ಗಂಡಾದ ತಾನು ಹೆಣ್ಣಿನ ಜೊತೆಹೇಗೆ ಬೇಕಾದರೂ ನಡೆದುಕೊಳ್ಳಬಹುದುಎಂದು ಮಗನಿಗೂ ಏಕಕಾಲಕ್ಕೆ ಬೋಧಿಸಿ ಪುಣ್ಯಕಟ್ಟಿಕೊಂಡಳು. ಬೇಸರದಿಂದ ಅಲ್ಲಿಂದ ಎದ್ದುಬಂದ ಎಷ್ಟೋ ಹೊತ್ತಿನ ನಂತರವೂ ಕಣ್ಣು ತುಂಬಿಕೊಂಡು ಅಸಹಾಯಕಳಾಗಿ ನಿಂತದ್ದ ಆಹುಡುಗಿಯ ಮುಖವೇ ನೆನಪಾಗುತ್ತಿತ್ತು.ಮತ್ತು ತಾನು ಮಾಡಿದ್ದು ತಪ್ಪಲ್ಲ ಎಂದರಿತ ಆ ಪುಟ್ಟ ಪೋರನ ಮುಂದಿನ ವರ್ತನೆಗಳು ಸಹ!!ಅರಿತೋ, ಅರಿಯದೆಯೋ ಬಹುತೇಕ ತಾಯಂದಿರು ಮಾಡಬಹುದಾದ ತಪ್ಪಿದು. ಈಗಂಡು ಮಕ್ಕಳೇ ಹೀಗೇ ಕಣ್ರೀ.. ಅಯ್ಯೋ,ಅವ್ರೇನು ಹುಡುಗ್ರು ದುನಿಯಾ ಮಾಡ್ತಾರೆ… ಹುಡುಗ್ರು ಇರೋದೇ ಹಾಗೆ… ಅವನೇನೋ ಗಂಡು ಹುಡುಗ ಇವಳಿಗೇನಾಗಿತ್ತು..

ಬಾಲ್ಯದಿಂದಲೂ ಮನೆಯಲ್ಲಿ ಕೇಳುವ ಇಂತಹ ಮಾತುಗಳಿಂದ, ಗಂಡು ಮಗ ಸರಿಯಾಗಿಬೆಳೆಯಲಿ ಎಂದು ಬೇಕಾದಷ್ಟು ಖರ್ಚು ಮಾಡಿಕೇಳಿದ್ದೆಲ್ಲ ಕೊಡಿಸುವುದರಿಂದ ಗಂಡು ಮಕ್ಕಳಲ್ಲಿ ಅನಗತ್ಯ ಅಹಂಕಾರವೊಂದು ತಲೆದೂರುತ್ತದೆ.

ಅಹಂಕಾರವೇ ಅನಾಹುತಕ್ಕೆ ಕಾರಣ!: ಆ ನಂತರದಲ್ಲಿ ಏನಾಗುತ್ತದೆ ಗೊತ್ತೇ? ತಾವುಹುಡುಗರಾದ್ದರಿಂದ ಸರ್ವಸ್ವತಂತ್ರರು, ಹೆಣ್ಣುಮಕ್ಕಳೆಂದರೆ ತಾವು ದುಡಿದು ತಂದು ಹಾಕಿದ್ದನ್ನುಬೇಯಿಸಿ ಹಾಕಿ ಹೇಳಿದಂತೆ ಕೇಳಿಕೊಂಡುಇರಬೇಕಾದವಳು ಎನ್ನುವಂತಹಅನಾಹುತಕಾರಿ ನಿರ್ಧಾರಗಳಿಗೆ ನಮ್‌ ಗಂಡುಮಕ್ಕಳು ಬಂದು ಬಿಡುತ್ತಾರೆ. ಈಮನಸ್ಥಿತಿಯೇ ಯೌವನದಲ್ಲಿಹೆಣ್ಣು ಮಕ್ಕಳನ್ನು ಛೇಡಿಸುವಿಕೆಗೆ ಮುಂದುವರೆದು ಲೈಂಗಿಕ ಕಿರುಕುಳ, ಬಲತ್ಕಾರದಂತಹ ಅಪಮಾನಕರ ಕೃತ್ಯ ಎಸಗುವುದಕ್ಕೆ ಕಾರಣವಾಗುತ್ತದೆ. ಇನ್ನು ಸಭ್ಯ ಕುಟುಂಬದಲ್ಲಿ ಬೆಳೆದು ಪುರುಷಅಹಂಕಾರದ ಪ್ರಜ್ಞೆಯೊಂದೇ ಜಾಗೃತವಾಗಿದ್ದರೆ ವಿವಾಹದ ನಂತರ ಸಂಗಾತಿಯ ವಿಷಯದಲ್ಲಿ ಕೆಟ್ಟದಾಗಿ ನಡೆದುಕೊಳ್ಳುವುದುಂಟು.

ಆಕೆಯನ್ನು ಹೀಗಳೆಯುವುದು, ಏನೇ ಮಾಡಿದರೂ ತಪ್ಪು ಹುಡುಕು ವುದು,ಮಾನಸಿಕವಾಗಿ ದೌರ್ಜನ್ಯ ನಡೆಸುವುದು,ಹೆಂಡತಿ ಎಂದರೆ ದೈಹಿಕ ಸುಖ ಕೊಡುತ್ತ,ಮಕ್ಕಳನ್ನು ಹೆರುತ್ತ ಅಡುಗೆ ಮನೆಯಲ್ಲಿಬಿದ್ದಿರಬೇಕಾದ ಜೀವಿ ಎಂಬ ವಿಚಾರಕ್ಕೆ ಪಕ್ಕಾಗಿ ಬಿಡಬಹುದು. ಇನ್ನು ಇಬ್ಬರೂ ಉದ್ಯೋಗಸ್ಥರಾದರೆ ಸರಿಯೇ ಸರಿ. ಸಂಗಾತಿಯ ಬಗ್ಗೆ ಅನಗತ್ಯವಾಗಿ ಗುಮಾನಿಗೊಳ್ಳುತ್ತ, ಎಲ್ಲ ವಿಚಾರಕ್ಕೂ ತಾನೇ ಸರಿ ಎಂದು ಕಿತ್ತಾಡುತ್ತಾ, ಅವಳ ಯಶಸ್ಸನ್ನು ಒಂದು ಬಗೆಯ ಹೊಟ್ಟೆ ಉರಿಯಲ್ಲಿಯೇ ನೋಡುತ್ತಾ ಕೊನೆಗೆ ಸಂಸಾರವನ್ನೇ ಮೂರಾಬಟ್ಟೆ ಮಾಡಿಕೊಳ್ಳುವುದುಂಟು! ಈ ಎಲ್ಲಾ ಸಾಧ್ಯತೆಗಳಿಗೆ ಕಾರಣವಾಗುವುದು ಮತ್ತದೇ ಗಂಡೆಂಬ ಅಹಂಕಾರ!.

ಹುಡುಗರಿಗೂ ಶಿಸ್ತಿನ ಪಾಠ ಅಗತ್ಯ: ಹೆಣ್ಣು ಮಗಳಿಗೆ ಬೇಗ ಮನೆಸೇರುವಂತೆ, ಹೊರಗೆ ಕಳಿಸುವಾಗಅಣ್ಣ- ತಮ್ಮಂದಿರ ಜೊತೆಮಾಡುವಂತೆ, ಮಾತುಮಾತಿಗೆ ಹೆಣ್ಣುಮಗಳು,ಹೆಣ್ಣು ಮಗಳ ಥರಾಇರು. ಆ ಬಟ್ಟೆ ಹಾಕಬೇಡ, ಅದು ಮಾಡಬೇಡ, ಇದು ಬೇಡ…. ಮುಂತಾಗಿ ಬೋಧಿಸುವುದರಜೊತೆಗೆ ಗಂಡು ಮಕ್ಕಳಿಗೆ ಬಾಲ್ಯದಿಂದಲೇಮನೆಯಲ್ಲಿರುವ ಸಹೋದರಿಯರ ಜೊತೆಗೆ,ಶಾಲೆಯ ಸ್ನೇಹಿತೆಯರ ಜೊತೆಗೆ, ಹಿರಿಯರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಮಾಡಲು ಸಾಧ್ಯವಿಲ್ಲವೇಕೆ?

ಹೆಣ್ಣಿನ ಬಗೆಗೆ ಕರುಣೆ ಇರುವಂತೆ ಬೆಳೆಸುವುದು ಬೇಡ. ಅವಳಿಗೂ ಒಂದು ವ್ಯಕ್ತಿತ್ವವಿದೆ,ಅವಳಿಗೂ ಅವಳದೇ ಆದ ಕನಸುಗಳಿವೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ದೈಹಿಕ ವ್ಯತ್ಯಾಸದಹೊರತು ಮಿಕ್ಕೆಲ್ಲ ಸಾಮರ್ಥ್ಯವೂ ಇವೆ ಎಂಬಸಮಾನತೆಯನ್ನು ಚಿಗುರುವಾಗಲೇ ಬಿತ್ತಿದರೆ ಆಗಂಡು ಮಕ್ಕಳು ಹೆಣ್ಣಿನ ಜೀವನಕ್ಕೆ ಮಾತ್ರವಲ್ಲ;ಇಡೀ ಸಮಾಜಕ್ಕೇ ತಂಪಾಗಿರುತ್ತಾರೆ. ಮಕ್ಕಳನ್ನುಬೆಳೆಸುವಲ್ಲಿ ಗಂಡು ಹೆತ್ತವರು ಅಗತ್ಯವಾಗಿ ಮಾಡಬೇಕಿರೋದು ಇದನ್ನೇ. ಹೆಣ್ಣಿನ ಬಗ್ಗೆಪೂಜ್ಯ ಭಾವ ಬೆಳೆಸುವುದರಲ್ಲಿ ಹೆತ್ತವರ ಪಾಲು ತುಂಬಾ ದೊಡ್ಡದು.­

 

– ಅಮೃತಾ

ಟಾಪ್ ನ್ಯೂಸ್

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

GST

Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ

fadnavis

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

BJP 2

BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Dinesh-Gundurao

Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್‌

CT-Ravi-BJP

Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

Mulki-kambala

Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ

IND-W vs WI: ವನಿತೆಯರ ಏಕದಿನ ಮುಖಾಮುಖಿ

IND-W vs WI: ವನಿತೆಯರ ಏಕದಿನ ಮುಖಾಮುಖಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.