ಲೈಫ್ ಈಸ್ “ಬುಟ್ಟಿ’ಫುಲ್!
Team Udayavani, Sep 27, 2017, 12:22 PM IST
ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ…
ರಸ್ತೆಯಲ್ಲಿ ನಡೆದು ಹೋಗುವಾಗ ಸುತ್ತಮುತ್ತಲಿನ ಘಟನೆಗಳು, ಚಿತ್ರಣಗಳು ಮನಸ್ಸಿನಲ್ಲಿ ಅನೇಕ ಭಾವನೆಗಳನ್ನು ಮೂಡಿಸುತ್ತವೆ. ಕೆಲವು ಸಂಗತಿಗಳು ಕಣ್ಣಿಗೆ ಆನಂದ ನೀಡಿದರೆ, ಇನ್ನು ಹಲವು ಮನಸ್ಸಿಗೆ ನಾಟುತ್ತವೆ. ದಾರಿಯಲ್ಲಿ ಸಿಗುವ ಅನೇಕರು ನೆನಪಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ, ಹಾಗೇ ಅವರು ಕಲಿಸುವ ಜೀವನಪಾಠವೂ.
ನಾನು ರಸ್ತೆಯಲ್ಲಿ ಸಾಗುತ್ತಿದ್ದಾಗ, ಹಣ್ಣಣ್ಣು ಮುದುಕಿಯೊಬ್ಬಳು ಬುಟ್ಟಿ ಹೆಣೆಯುತ್ತಾ ಕುಳಿತಿದ್ದನ್ನು ನೋಡಿದೆ. ಆಕೆಯ ಸ್ವಾಭಿಮಾನಕ್ಕೆ ತಲೆ ಬಾಗುತ್ತಾ, ಇಳಿವಯಸ್ಸಿನಲ್ಲೂ ಕಷ್ಟಪಡಬೇಕಾದ ಆಕೆಯ ಸ್ಥಿತಿಗೆ ಮರುಗುತ್ತಾ ಆ ಅಜ್ಜಿಯನ್ನು ಮಾತಾಡಿಸಿದೆ. “ಏನಜ್ಜಿ ನಿನ್ ಹೆಸರು? ಯಾವೂರು?’ ಅಂತೆಲ್ಲ ಕೇಳಿದಾಗ, ಆಕೆ ತನ್ನಿಡೀ ಕಥೆಯನ್ನು ಬಿಚ್ಚಿಟ್ಟಿದ್ದು ಹೀಗೆ …
ನನ್ನ ಹೆಸರು ಮರಿಯಮ್ಮ ಕಣಮ್ಮ. ನಾನು ಶಾಲೆಗೇನೂ ಹೋಗಿಲ್ಲ. ಆದ್ರೆ ಈ ಬುಟ್ಟಿ ಮಾರಿ ಬಂದ ಹಣಾನ ಎಣಿಸೋಷ್ಟು ಲೆಕ್ಕ ಗೊತ್ತೈತೆ ನಂಗೆ. ನನ್ನೂರು ಮೈಸೂರು. ನನಗೆ 13 ವರ್ಷಕ್ಕೇ ಮದುವೆ ಮಾಡಿದ್ರು. ಆಗ ನಂಗೆ ಗೊತ್ತಿದ್ದಿದ್ದು ಅಪ್ಪ- ಅಮ್ಮ ಕಲಿಸಿದ ಈ ಕೆಲಸ ಮಾತ್ರ. ಆವತ್ತಿಂದ ನಂದು ಇದೇ ಕಸುಬು. ನಂಗೀಗ 67 ವರ್ಷ. 48 ವರ್ಷದಿಂದ ಕೆ.ಆರ್. ರಸ್ತೆಯಲ್ಲೇ ಬುಟ್ಟಿ ಮಾರೋದು ನಾನು.
ಪಾರ್ವತಿಪುರದಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ನನಗೆ ಇಬ್ಬರು ಗಂಡು ಮಕ್ಕಳು, ಒಂದು ಹೆಣ್ಣು ಮಗು. ಎಲಿÅಗೂ ಮದುವೆಯಾಗಿದೆ. ನನ್ನೊಬ್ಬ ಮಗ ಸತ್ತೋದ. ಹಂಗಾಗಿ ನಾನು, ನನ್ನ ಯಜಮಾನ, ಸೊಸೆ, ಮೊಮ್ಮಕ್ಕಳೆಲ್ಲಾ ಜೊತ್ಯಾಗೇ ಇದೀವಿ. ನಮ್ಮವೂÅ ಕೂಲಿಗೆ ಹೋಗ್ತಾರೆ. ಮೊಮ್ಮಕ್ಕಳು ಓದಿ¤ದಾರೆ. ಸೊಸೆ ಮನೆ ಕೆಲಸಕ್ಕೆ ಹೋಗ್ತಾಳೆ. ಜೀವ° ನಡೀಬೇಕಲ್ಲ? ನಂಗೆ ಈ ಕೆಲ್ಸ ಬಿಟ್ಟು ಬೇರೆ ಏನೂ ಬರಾಕಿಲ್ಲ. ಮಾಡ್ತೀನಿ ಅಂದ್ರೂ, ನಂಗ್ಯಾರು ಕರೆದು ಕೆಲಸ ಕೊಡ್ತಾರೆ?
ಒಂದಿನಕ್ಕೆ ಹೆಚ್ಚಂದ್ರೆ ಮೂರ್‍ನಾಲ್ಕು ಬುಟ್ಟಿ ಹೆಣೀಬೋದು. ಹೂವಿನಬುಟ್ಟಿ, ತರಕಾರಿ ಬುಟ್ಟಿ… ಹಿಂಗೆ ಬೇರೆ ಬೇರೆ ಬುಟ್ಟಿಗೆ ಬೇರೆ ಬೇರೆ ರೇಟು. ಒಂದಕ್ಕೆ 50-100 ರೂಪಾಯ್ ಸಿಗುತ್ತೆ. ಯಾರಾದ್ರೂ ಆರ್ಡರ್ ಕೊಟ್ರೆ, ಹೆಣೆದು ಕೊಡ್ತೀನಿ. ಈಗ ಮೊದಲಿನಷ್ಟು ಕಡಿಮೆ ದರದಲ್ಲಿ ಬಿದಿರು ಸಿಗೋದಿಲ್ಲ. ಏನೂ ಗಿಟ್ಟಲ್ಲ ಅಂದ್ರೂ, ದುಡಿಲೇಬೇಕಾದ ಅನಿವಾರ್ಯತೆ. ಒಂದು ಬಿದಿರಿಗೆ 300 ರೂ. ಕೊಡ್ಬೇಕು ನನ್ನವ್ವಾ. ಅದು ಬೆಳಗಾವಿಯಿಂದ ಬಂಬೂ ಬಜಾರಕ್ಕೆ ಬರುತ್ತೆ, ಅಲ್ಲಿಂದ ತಗೊಂಡು ಬಂದು ನಾವಿಲ್ಲಿ ಬುಟ್ಟಿ ಹೆಣೆಯೋದು.
ಸಂಜೆ ಮನೆಗೆ ಹೋಗ್ತಾ ದುಡ್ಡು ತಗೊಂಡು ಹೋಗಿಲ್ಲ ಅಂದ್ರೆ, ಸೊಸೆ ಒಂದಿನ ಊಟ ಹಾಕ್ತಾಳೆ, ಎರಡು ದಿನ ಹಾಕ್ತಾಳೆ, ಮೂರನೇ ದಿನ ಮೂತಿ ತೀರ್ತಾಳೆ. ಅದ್ಕೆ ದೇಹ ದಣಿದ್ರೂ ಇಲ್ಲಿ ಬಂದು ಬುಟ್ಟಿ ಹೆಣೆಯೋದು. ಸ್ವಲ್ಪ ಸಾಲ ಬೇರೆ ಕುತೆ ಮೇಲಿದೆ. ಇದರಿಂದ ಬರೋ ದುಡ್ಡಲ್ಲಿ ಅದನ್ನಾ ತೀರಿಸಬೇಕು. ಜೀವ° ನಡೆಸೋಕೆ ಗೊತ್ತಿರೋದು ಇದೊಂದೇ ದಾರಿ. ಕಷ್ಟಾನೋ, ಸುಖಾನೋ, ಜೀವನ ನಡೀಬೇಕಲ. ಲಾಭ ಬಂದ್ರೆ ಖುಷಿ, ಇಲ್ಲ ಅಂದ್ರೆ ಬ್ಯಾಸ್ರ. ಇದ್ರಲ್ಲಿ ಇಷ್ಟೇ ಹಣ ಬರುತ್ತೆ ಅಂತ ಹೇಳಕಾಗಲ್ಲ. ಹೊಟ್ಟೆಪಾಡಿಗೆ ಏನಾದೊದು ಮಾಡ್ಲೆಬೇಕಲ್ಲ ತಾಯಿ. ಕಲಿತ ವಿದ್ಯೆನೆ ಕೈ ಹಿಡೀತಿರೋದು. ಮಳೆ ಬಂದ್ರೆ ವ್ಯಾಪಾರ ಮಾಡೋಕಾಗಲ್ಲ. ಹಂಗಂತ ಮನೇಲಿ ಬೆಚ್ಚಗೆ ಇರೋಕಾಗತ್ತಾ? ಜೀವನ ಬಂದಂಗೆ ಬಾಳ್ವೆ ನಡೆಸಬೇಕು ಕಣವ್ವಾ.
ಚೈತ್ರ ಹೆಚ್.ಜಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್ ಮತ್ತು ಬಾಬಾ ನಡುವಿನ ಹೋರಾಟ
Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ
Ullala Resort: ಮೃತ ಯುವತಿಯ ಕುಟುಂಬಸ್ಥರ ಆಕ್ರಂದನ
RSS ವಿರುದ್ಧ ಹೇಳಿಕೆ ಪ್ರಕರಣ: ಗೀತ ರಚನೆಕಾರ ಜಾವೇದ್ ಅಖ್ತರ್ ಖುಲಾಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.