ಕೊರಗುವುದೇ ಬದುಕಾಗಬಾರದು…

Team Udayavani, Oct 28, 2020, 7:46 PM IST

avalu-tdy-4

ನಲವತ್ತು ವರ್ಷದ ಶಂಕರ್‌ಗೆ ಉಸಿರಾಟದ ಸಮಸ್ಯೆ ಎಷ್ಟು ತಿಂಗಳಾದರೂ ಬಗೆಹರಿದಿರಲಿಲ್ಲ. ಅಪೌಷ್ಟಿಕತೆ ಅವರನ್ನು ಕಾಡುತ್ತಿತ್ತು. ಚಿಕಿತ್ಸೆ ಆರಂಭಿಸಿದ ಮನೋವೈದ್ಯರು ಕೌನ್ಸೆಲಿಂಗ್‌ ತೆಗೆದುಕೊಳ್ಳಲು ಸಲಹೆ ನೀಡಿದ್ದರು.

ಶಂಕರ್‌ ಹತ್ತು ವರ್ಷದ ಮಗುವಾಗಿದ್ದಾಗ, ಮನೆಯಲ್ಲಿ ಶಾಲೆಗೆ ಫೀಸು ಕಟ್ಟಲಾಗದಷ್ಟು ಬಡತನವಿತ್ತು. ಅಸಹಾಯಕತೆಯಲ್ಲಿತಾಯಿ- ಫೀಸು ಕಟ್ಟಲು ಆಗೋಲ್ಲ ಅಂದರೆ ಹೇಗೆ? ಈ ಆರನೇ ಮಗು ಬೇಕಿತ್ತಾ? ಮುಂದೆ ದುಡ್ಡು ಸಾಕಾಗುವುದಿಲ್ಲ ಎಂದು ಯೋಚಿಸಿಯೇ ನಾನು ಈ ಕಡೆಯ ಮಗುವನ್ನು ತೆಗೆಸಿಬಿಡೋಣ ಅಂದರೆ, ನೀವು ಆವಾಗ ಕೇಳಲಿಲ್ಲ ಎಂದು ತಂದೆಗೆ ಹೇಳಿದ್ದನ್ನು ಅಚಾನಕ್‌ ಕೇಳಿಸಿಕೊಂಡಿದ್ದ ಶಂಕರ್‌ ಅವಾಕ್ಕಾಗಿದ್ದರಂತೆ. ಆ ಎಳೆಯ ವಯಸ್ಸಿನಲ್ಲಿ, ತಾಯಿಗೆ ನಾನೊಬ್ಬ ಬೇಡದ ಮಗು, ಅವರಿಗೆ ಹೊರೆಯಾಗಿಬಿಟ್ಟೆ ಎಂಬ ಭಾವನೆ ಅವರಲ್ಲಿ ಮನೆಮಾಡಿತ್ತು.

ಶಂಕರ್‌ಗೆ ಹದಿಮೂರು ವರ್ಷವಿದ್ದಾಗ, ಚೊಚ್ಚಲ ಹೆರಿಗೆಯಲ್ಲಿ ಅವರ ಅತ್ತಿಗೆ ಮತ್ತು ಮಗು ತೀರಿಕೊಂಡಿದ್ದರು. ಅತ್ತಿಗೆಯ ಮೃತ ದೇಹ ಮತ್ತು ಅಣ್ಣನ ಗೋಳು ನೋಡಿ ಶಂಕರ್‌ಗೆ ಮತ್ತೆಆಘಾತವಾಗಿತ್ತು. ವೈರಾಗ್ಯ ಮೂಡಿತು. ಬದುಕಿಗೆ ಏನೂ ಅರ್ಥವಿಲ್ಲ ಅನ್ನಿಸತೊಡಗಿತ್ತು. ಈಗ ಅವರು ಸಾಕಷ್ಟು ಹಣ ಸಂಪಾದಿಸಿದ್ದಾರೆ.

ದೇವಸ್ಥಾನವನ್ನು ಕಟ್ಟಿ ಭಕ್ತಿ ಮಾರ್ಗವನ್ನು ಬೋಧಿಸುತ್ತಿದ್ದಾರೆ. ಅನ್ನ ಸಂತರ್ಪಣೆ ಮತ್ತು ವಿದ್ಯಾ ದಾಸೋಹ ನಡೆಸಿದ್ದಾರೆಅನೇಕರಿಗೆ ಪ್ರೇರಣೆಯಾಗಿದ್ದಾರೆ. ಆದರೂ ಮನಸ್ಸು ಮಾತ್ರ ಜೀವನಕ್ಕೆ, ಹುಟ್ಟು- ಸಾವಿಗೆ ಅರ್ಥ ಸಿಗದೇ ಒದ್ದಾಡುತ್ತಿದೆ. ಶರೀರದ ಕುಪೋಷಣೆಮತ್ತು ಅಪೌಷ್ಟಿಕತೆಗೆ ಕಾರಣ, ತಾಯಿ ನನ್ನನ್ನು ಹೊಟ್ಟೆಯಲ್ಲಿಯೇ ತಿರಸ್ಕಾರ ಮಾಡಿದ್ದಳು ಎಂಬ ಚಿಂತೆ. ಜೊತೆಗೆ ಅತ್ತಿಗೆಯ ಮೃತ ದೇಹವನ್ನು ನೋಡಿದಾಗ ಹುಟ್ಟಿದ ವೈರಾಗ್ಯ ಭಾವ ಅವರನ್ನು ಮಾನಸಿಕವಾಗಿ ಕುಗ್ಗಿಸಿಬಿಟ್ಟಿದೆ. ಇದರಿಂದ ಅವರು ಹೊರಬಂದರೆ ಮಾತ್ರ ಉಸಿರಾಟದ ಸಮಸ್ಯೆಕಡಿಮೆಯಾಗುವುದು. ಆಘಾತಗಳುಘಟಿಸಿದಾಗ, ದಿಕ್ಸೂಚಿ ಇಲ್ಲದ ಹಡಗಿನಂತೆ ಮನಸ್ಸು ಹೊಯ್ದಾಡುತ್ತದೆ. ಹೀಗಾಗಿಬಿಟ್ಟರೆ ಆರೋಗ್ಯ ಎಲ್ಲಿಂದ ಬರಬೇಕು?

ಶೋಷಿತ ಭಾವದಲ್ಲಿ ಸಿಲುಕಿದ ಮನಸ್ಸು- “ನಾನು ಶೋಷಿತ, ನಾನು, ಏಕಾಂಗಿ, ಕಷ್ಟ ಕಾಲದಲ್ಲಿ ನನಗೆ ಯಾರೂ ಸಹಾಯಮಾಡಲಾರರು’ ಎಂಬ ಸಂಕಟದಲ್ಲೇ ಬದುಕುತ್ತದೆ. ಆಘಾತಗಳ ಕುರಿತೇ ಯೋಚಿಸುತ್ತಿದ್ದರೆ, ಮನೋದೈಹಿಕ ಬೇನೆ ಜೊತೆಯಾಗುತ್ತದೆ. ಈ ಚಕ್ರವ್ಯೂಹದಿಂದ ಹೊರಬರಲು ಸಹಾಯ ಮಾಡುವುದೇ ಸಲಹಾ ಮನೋವಿಜ್ಞಾನ. ಶಂಕರ್‌ ಅವರಿಗೆ ಚಿಕಿತ್ಸೆ ಮುಂದುವರೆದಿದೆ.

ಡಾ. ಶುಭಾ ಮಧುಸೂದನ್‌ ಚಿಕಿತ್ಸಾ ಮನೋ ವಿಜ್ಞಾನಿ

ಟಾಪ್ ನ್ಯೂಸ್

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4(1)

Mudbidri: ರಸ್ತೆಯಲ್ಲೆಲ್ಲ ಹೊಂಡಗಳು ಸಾರ್‌ ಹೊಂಡಗಳು!

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

Anthamthana Kannada Movie: ಶೂಟಿಂಗ್‌ನತ್ತ ಅಣ್ತಮ್ತನ

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

45 Movie: ಕರಾಟೆ ಗೊತ್ತುಂಟು, ಹತ್ತಿರ ಬಂದ್ರೆ ಜಾಗ್ರತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

3

Mangaluru: ಬೇಕು ಇಂದೋರ್‌ ಮಾದರಿ;ದೇಶದ ನಂ.1 ಸ್ವಚ್ಛ ನಗರ ಇಲ್ಲಿಗೆ ಹೇಗೆ ಅನ್ವಯವಾಗುತ್ತದೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.