“ಲೈಮ್‌’ ಲೈಟ್‌

ನನ್ನ ಒಲವಿನ ಸುಣ್ಣ...

Team Udayavani, May 22, 2019, 6:00 AM IST

z-4

ಲಾಭ ಮಾಡುವುದೇ ವ್ಯಾಪಾರದ ಮೂಲ ಉದ್ದೇಶ ಎಂಬ ಮಾತಿದೆ. ಆದ್ರೆ, ಕೆಲವರಿಗೆ ವ್ಯಾಪಾರವೇ ಬದುಕಿನ ಮೂಲಾಧಾರ. ಸಂಸಾರದ ತಕ್ಕಡಿ ತೂಗಿಸಲು, ತಕ್ಕಡಿ ಹಿಡಿಯಲೇಬೇಕಾದ ಅನಿವಾರ್ಯಕ್ಕೆ ಬಿದ್ದವರು ಲಕ್ಷ್ಮೀಬಾಯಿ. ಗಂಡ ತೀರಿಕೊಂಡ ನಂತರ ಹಿಡಿದ ತಕ್ಕಡಿಯನ್ನು ಇಂದಿಗೂ ಇಳಿಸಿಲ್ಲ ಈ ಮಹಾತಾಯಿ…

ವಿಜಯಪುರ ನಗರದ ಮೀನಾಕ್ಷಿ ಚೌಕ್‌ನ ಬಳಿ ನೀವು ಓಡಾಡಿದ್ದರೆ, ಲಕ್ಷ್ಮೀಬಾಯಿಯನ್ನು ನೋಡಿರುತ್ತೀರಿ. ಬೆಳಗ್ಗೆ 9ರಿಂದ ರಾತ್ರಿ 8 ರವರೆಗೆ, ಮಳೆ- ಬಿಸಿಲೆನ್ನದೆ ರಸ್ತೆ ಬದಿಯಲ್ಲಿ ಕುಳಿತು ಸುಣ್ಣ ಮಾರುವ ಆಕೆಯ ವಯಸ್ಸು 70 ವರ್ಷ! ವಯಸ್ಸು ನೋಡ್ಕೊಂಡು ಕೂತರೆ, ಹೊಟ್ಟೆ ತುಂಬೋದು ಬೇಡವೇ ಅಂತ ಕೇಳುವ ಲಕ್ಷ್ಮೀಬಾಯಿ, ಕಡು ಬಡ ಕುಟುಂಬದಿಂದ ಬಂದವರು. ಬಾಲ್ಯ ವಿವಾಹವಾಗಿ ಗಂಡನ ಮನೆ ಸೇರಿದ ಆಕೆ, ಸಣ್ಣ ವಯಸ್ಸಿನಲ್ಲೇ ಸಂಸಾರದ ನೊಗ ಹೊರಬೇಕಾಯ್ತು.

ಆಕೆಯ ಗಂಡ, ಮನೆಗೆ ಹಚ್ಚುವ ಸುಣ್ಣವನ್ನು ಮಾರುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳು ಜನಿಸಿದ ನಂತರ, ಅನಾರೋಗ್ಯದಿಂದಾಗಿ ಲಕ್ಷ್ಮೀಬಾಯಿಯ ಗಂಡ ತೀರಿಕೊಂಡುಬಿಟ್ಟರು. ಸಂಸಾರದ ಬಂಡಿ ಸಾಗಿಸಲು ಆಕೆಗಿದ್ದ ಒಂದೇ ಒಂದು ದಾರಿಯೆಂದರೆ ಸುಣ್ಣದ ವ್ಯಾಪಾರ. 50 ವರ್ಷಗಳ ಹಿಂದೆ ಸುಣ್ಣದ ತಕ್ಕಡಿ ಹಿಡಿದ ಲಕ್ಷ್ಮೀಬಾಯಿ, ಇಂದಿಗೂ ಅದನ್ನೇ ನಂಬಿ ಬದುಕುತ್ತಿದ್ದಾರೆ.

ಹಿಂದೆಲ್ಲಾ ಸುಣ್ಣದ ಮನೆಗಳು ಜಾಸ್ತಿಯಿದ್ದ ಕಾರಣ, ಸುಣ್ಣದ ಚೀಲಗಳೂ ಹೆಚ್ಚಾಗಿ ಮಾರಾಟವಾಗುತ್ತಿದ್ದವು. ದೀಪಾವಳಿ, ಶ್ರಾವಣ ಮಾಸ, ಹೋಳಿ ಹುಣ್ಣಿಮೆ, ದಸರಾ ಹಬ್ಬದ ಸಮಯದಲ್ಲಿ, ಲಕ್ಷ್ಮೀಬಾಯಿಗೂ ಹಬ್ಬ. ಆದರೀಗ, ಸಿಮೆಂಟಿನ ಕಟ್ಟಡಗಳೇ ಹೆಚ್ಚಿದ್ದು, ಮಾರ್ಕೆಟ್‌ಗೆ ಲಗ್ಗೆಯಿಟ್ಟಿರುವ ಬಣ್ಣ ಬಣ್ಣದ ಪೇಂಟ್‌ಗಳು ಇವರ ವ್ಯಾಪಾರಕ್ಕೆ ಬಲವಾದ ಹೊಡೆತ ನೀಡಿವೆ.

ಈಗ ಒಂದು ಚೀಲ ಸುಣ್ಣಕ್ಕೆ 150 ರೂ. ಇದ್ದು, ದಿನಕ್ಕೆ ಹೆಚ್ಚೆಂದರೆ ನಾಲ್ಕು ಚೀಲ ಮಾರಾಟವಾಗುತ್ತದೆ. ಆ ಹಣದಿಂದ ಸಂಸಾರ ತೂಗಿಸುವುದು ಬಹಳ ಕಷ್ಟ. ಹಬ್ಬದ ದಿನಗಳಲ್ಲಿ ವ್ಯಾಪಾರ ಸ್ವಲ್ಪ ಚೇತರಿಸಿಕೊಳ್ಳುತ್ತದಷ್ಟೆ. ಹಾಗಾಗಿ, ಉಳಿದ ಸಮಯದಲ್ಲಿ ಮನೆಗೆಲಸಕ್ಕೂ ಹೋಗುತ್ತೇನೆ ಎನ್ನುತ್ತಾರೆ ಲಕ್ಷ್ಮೀಬಾಯಿ.

ಐವತ್ತು ವರ್ಷದಿಂದ ನನ್ನ ಕೈ ಹಿಡಿದಿರೋದೇ ಸುಣ್ಣದ ವ್ಯಾಪಾರ. ಇದರಲ್ಲಿ ಗಳಿಸಿದ ಹಣದಿಂದಲೇ ಇಬ್ಬರು ಹೆಣ್ಣುಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದೇನೆ. ಮೂವರು ಮೊಮ್ಮಕ್ಕಳಿದ್ದಾರೆ. ಮುಪ್ಪಿನಲ್ಲಿ ಯಾರಿಗೂ ಭಾರವಾಗಬಾರದೆಂದು ಈ ಕೆಲಸ ಮುಂದುವರಿಸುತ್ತಿದ್ದೇನೆ. ನನ್ನ ಹೊಟ್ಟೆ ತುಂಬುವಷ್ಟು ವ್ಯಾಪಾರವಾದರೆ ಸಾಕು.
– ಲಕ್ಷ್ಮೀಬಾಯಿ

– ವಿದ್ಯಾಶ್ರೀ ಗಾಣಿಗೇರ

ಟಾಪ್ ನ್ಯೂಸ್

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತEducation Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Education Co operation: ಶೈಕ್ಷಣಿಕ ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಅಮೇರಿಕ ಮತ್ತು ಭಾರತ

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!

Kerala: ಆ್ಯಂಬುಲೆನ್ಸ್‌ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್‌ ರದ್ದು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

2

Mulki: ವ್ಯಕ್ತಿ ನಾಪತ್ತೆ; ಸೂಚನೆ; ದೂರು ದಾಖಲು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Missile Strike: ಉಕ್ರೇನ್‌ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Gaviyappa-MLA

Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್‌ ಶಾಸಕ

missing

Mangaluru: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.