ಲಾಕ್‌ಡೌನ್ ಲೋಕ : ಬಾಲ್ಯದ ದಿನಗಳ ನವಿಲುಗರಿ ಸಿಕ್ತು!
Team Udayavani, May 13, 2020, 12:08 PM IST
ಸಾಂದರ್ಭಿಕ ಚಿತ್ರ
ಲಾಕ್‌ಡೌನ್ ಘೋಷಣೆಯಾದಾಗ, ಸ್ವಲ್ಪ ಬೋರ್ ಆಗಿದ್ದು ನಿಜ. ಮನರಂಜನೆಗೆ ಹತ್ತಾರು ಮಾರ್ಗಗಳು ಇದ್ದರೂ, ದಿನ ಕಳೆಯುವುದು ಹೇಗಪ್ಪಾ ಅಂತ ಚಿಂತೆಯಾಯ್ತು. ಯಾವ
ಮನೋರಂಜನಾ ಸಾಧನವೂ, ಆಧುನಿಕ ಅನುಕೂಲಗಳೂ ಇಲ್ಲದೆ, ಅಜ್ಜಿ- ಮುತ್ತಜ್ಜಿಯರು ಮನೆಯೊಳಗೆ ಹೇಗೆ ಇರುತ್ತಿದ್ದರು ಎಂಬ ಪ್ರಶ್ನೆ ಕಾಡಿತು. ಆದರೆ, ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಿದ್ದ ಅವರಿಗೆ, ಬೇಸರವೇ ಆಗುತ್ತಿರಲಿಲ್ಲವೇನೋ. ಹಾಗಾಗಿ, ನಾನೂ ಅವರಂತೆ ಕೆಲಸ, ಹವ್ಯಾಸಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದೆ. ಮೊದಲಿಗೆ, ಅದು ಕಲಿಯಬೇಕು, ಇದು ಕಲಿಯಬೇಕು ಅಂದುಕೊಂಡು, ಸಮಯದ ಅಭಾವದಿಂದ ಮುಂದೂಡಿದ್ದ ಕೆಲಸಗಳ ಪಟ್ಟಿ ಮಾಡಿಕೊಂಡೆ. ಆ ಪ್ರಕಾರ, ಹೊಸ ಹೊಸ ಅಡುಗೆಗಳನ್ನು ಕಲಿತು, ಎಲ್ಲರ ಶಹಭಾಷ್‌ಗಿರಿ ಪಡೆದೆ. ಎಂಬ್ರಾಯ್ಡ್ ರಿಯ ಹೊಸ ವಿನ್ಯಾಸಗಳನ್ನು ಹಾಕಿದೆ. ಹಳೆಯ ಸ್ನೇಹಿತೆಯರ ದೂರವಾಣಿಯ ಸಂಖ್ಯೆಗಳನ್ನು ಹುಡುಕಿ, ಎಲ್ಲರಿಗೂ ಫೋನಾಯಿಸಿದೆ. ಅವರ ಜೊತೆ
ಹಳೆಯ ವಿಷಯಗಳನ್ನು ಹಂಚಿಕೊಂಡು, ಶಾಲಾ ದಿನಗಳನ್ನು ಮೆಲುಕು ಹಾಕಿದೆ. ಹಳೆ ಗೆಳೆಯರ ಬಳಿ ಇದ್ದ ಶಾಲೆ, ಕಾಲೇಜಿನ ಫೋಟೋಗಳನ್ನು ಕಲೆ ಹಾಕಿಕೊಂಡೆ. ನನ್ನ ಬಳಿ ಇದ್ದ ಫೋಟೋಗಳನ್ನು ಅವರಿಗೂ ಕಳಿಸಿದೆ. ಎಷ್ಟು ಖುಷಿ ಸಿಕ್ಕಿತೆಂದರೆ, ಛೇ, ಇಷ್ಟು ದಿನ ಇದಕ್ಕೆಲ್ಲ ಸಮಯ ಹೊಂದಿಸಲೇ ಇರಲಿಲ್ಲವಲ್ಲ ಅಂತ ಬೇಸರವಾಯ್ತು. ಲಾಕ್‌ಡೌನ್ ಇಲ್ಲದಿದ್ದರೆ, ಮರೆತು ಹೋಗಿದ್ದ ಬಾಲ್ಯದ ನೆನಪುಗಳು ದಕ್ಕುತ್ತಲೇ ಇರಲಿಲ್ಲ. ಹಾಂ, ಇಲ್ಲಿರುವ ಚಿತ್ರ ಇದೆಯಲ್ಲ, ಇದು ನಾನು ಮಾಡಿದ ಎಂಬ್ರಾಯ್ಡ್ ರಿ. ಹೇಗಿದೆ ಹೇಳಿ?
ಆಶಾ ನಾಯಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.