ನಿಮ್ ಮನೆ ಅಡ್ರೆಸ್‌ಗೇ ಲವ್ ಲೆಟರ್ ಬರ್ಧು ಬಿಡ್ಲಾ?
Team Udayavani, Sep 6, 2017, 11:58 AM IST
ಏನ್ ಗೊತ್ತಾ? ಇವತ್ತಿಗೆ ನನ್ನ ನಿನ್ನ ಪ್ರೀತಿಯ ಶುಭಾರಂಭವಾಗಿ ಒಂದ್ ವರ್ಷ ಆಯ್ತು! ಬಟ್ಟೆ ಕೊಟ್ರೆ ಟೈಟೂ ಅಂತೀಯ, ಶೂ ಕೊಟ್ರೆ ಲೂಸು ಅಂತೀಯಾ. ಇನ್ನು ಜಾಕೆಟ್ ಕೊಡ್ಸಿದ್ರೆ… ಕಲರ್ ಇಷ್ಟ ಆಗ್ಲಿಲ್ಲ ಅಂತೀಯ.. ಇನ್ನೇನ್ ಕೊಡ್ಲಿ ನಾನು?
ಈ ಲೆಟರ್ ಯಾಕ್ ಬರಿತಿದೀನಿ ಗೊತ್ತಾ? ಮೊನ್ನೆ ನಿನ್ಗೆ ಹದ್ನಾರು ಮೆಸೇಜ್, ನಾಲ್ಕ್ ಸೆಲ್ಫಿ ಕಳ್ಸಿದೀನಿ.. ಯಾವªಕ್ಕಾದ್ರೂ ರಿಪ್ಲೆ„ ಮಾಡಿದ್ದೀಯ ನೀನು? ಯಾವ್ ಫೋಟೊನ ಫೇಸ್‌ಬುಕ್ ಪ್ರೊಫೈಲ್ ಪಿಕ್ ಮಾಡ್ಕೊಬೇಕು ಅಂತ ಹೆವ್ವಿ ಕನ್ಫ್ಯೂಶನ್ ಆಗಿತ್ತು. ಅದಕ್ಕೆ ನಿನ್ಗೆ ಫೋಟೋಸ್ ಕಳ್ಸಿದ್ದೆ. ಆದ್ರೆ ನೀನು? ಆನ್‌ಲೈನ್‌ನಲ್ಲಿ ಇದ್ರೂ ರಿಪ್ಲೆ ಮಾಡ್ಲಿಲ್ಲ. ಈ ಥರ ನನ್ನ ಅವಾಯ್ಡ್ ಮಾಡಿದ್ರೆ, ಮತ್ತೆ ಮತ್ತೆ ನಿನ್ನೇ ಆವರಿಸಿಕೊಳ್ತೀನಿ ಹುಷಾರು! ನಿನ್ನ ಬಿಟ್ ಹೋಗೋದೇ ಆಗಿದ್ರೆ, ಆರ್ ತಿಂಗ್ಳು ಮುಂಚೆ ನೀನು ಹಳೇ ಗರ್ಲ್ ಫ್ರೆಂಡ್ ಬರ್ತ್‌ಡೇ ಪಾರ್ಟಿಗ್ ಹೋಗಿದ್ಯಲ್ವಾ? ಆಗ್ಲೆ ಬಿಟ್ ಹೋಗ್ತಿದ್ದೆ. ನನ್ ಪ್ರೀತಿ ನಿಂತಿರೋದೇ ನಂಬಿಕೆ ಅನ್ನೋ ಸಣ್ಣ ಸ್ಪ್ರಿಂಗ್ ಮೇಲೆ. ಆ ನಂಬಿಕೆ ಅನ್ನೋ ಸ್ಪ್ರಿಂಗ್ ಕಟ್ಟಾದ್ರೆ ಷ್ಟ್ ದೂರಕ್ ಹಾರ್ತೀನೋ ನಂಗೇ ಗೊತ್ತಿಲ್ಲ.
ನೀನು, ನನ್ನ ಮನೆಗ್ ಡ್ರಾಪ್ ಮಾಡ್ವಾಗ, “ಅಪ್ಪ ನೋಡಿದ್ರೆ ಕಷ್ಟ, ಹಿಂದಿನ್ ರೋಡ್‌ಲ್ಲೇ ಬಿಡು’ ಅಂದ್ರೆ, ಈ ಕಾಲದ್ ಯುವಜನತೆ ಬೋಲ್ಡಾಗ್ ಇಬೇìಕು ಅಂತ ಡೈಲಾಗ್ ಹೊಡೀತಿಯಲ್ಲ! ನಿಜ ಹೇಳು, ನನ್ ಫೋನ್ ಬಂದಾಗ ಯಾವತ್ತಾದ್ರು ಮನೆ ಒಳ್ಗೆ ಇದ್ಕೊಂಡ್ ಮಾತಾಡಿದ್ದೀಯ? ಗುಡುಗುಡು ಅಂತ ಟೆರೇಸಿಗೆ ಓಡ್ ಬರ್ತೀಯ! ಹೋಗ್ಲಿ, ನಮ… ಪ್ರೀತಿ ವಿಷ್ಯ ನಿಮ್ಮನೇಲಿ ಹೇಳಿದ್ದೀಯ? ನನಗೆ ನಿಮ… ಏರಿಯಾ ಕಡೇನೇ ಕಾಲಿಡೋಕ್ ಬಿಡೋಲ್ಲ, ಇನ್ನೆಲ… ಹೇಳಿರ್ತೀಯ ಬಿಡು!
ನೇ ಕಾಲಿಡೋಕ್ ಬಿಡೋಲ್ಲ, ಇನ್ನೆಲ… ಹೇಳಿರ್ತೀಯ ಬಿಡು! ನೀನ್ ಮೆಸೇಜ್‌ಗೆ ರಿಪ್ಲೆ„ ಮಾಡಿಲ್ಲ ಅಂತ ಸಿಟ್ ಮಾಡ್ಕೊಂಡು, ನಿನ್ ಆಫಿಸ್ ಅಡ್ರೆಸ್‌ಗೆ ಲವ್ ಲೆಟರ್ ಬರೀತಿದೀನಿ. ಇನ್ನೊಂದ್ ಸಲ ನನ್ನ ನೆಗ್ಲೆಕ್ಟ್ ಮಾಡಿದ್ರೆ ನಿಮ್ಮನೆ ಅಡ್ರೆಸ್‌ಗೇ ಬರಿತೀನಿ ತಿಳ್ಕೊ. ಅದೂ ದಿನಾ ಬೇರೆ ಬೇರೆ ಹುಡ್ಗಿ ಹೆಸ್ರಲ್ಲಿ! ಈಗೇನ್ ಇದೆಲ್ಲ ಓದಿºಟ್ಟು ನಗ್ತಾ ಇದ್ದೀಯಾ ಅಥಾÌ ಭಯ ಪಟ್ಯ? ನಂಗೊತ್ತು, ನೀವ್ ಹುಡುಗ್ರು ಯಾವಾಗ್ಲೂ ಮಿಶ್ರ ಸ್ವಭಾವದವ್ರು!ಎರ್ಡೂ ಒಟ್ಟೊಟ್ಟಿಗೇ ಆಗ್ತಿದೆ ಅಲ್ವಾ? ನಗ್ತಾ ಇದ್ರೆ ಧೈರ್ಯವಾಗ್ ಇನ್ನೊಂಚೂರ್ ಜೋರಾಗ್ ನಕಿºಡು!
ಈ ಲೆಟರ್ ಬರಿತಿರೋದ್ ಯಾಕ್ ಗೊತ್ತಾ? ನೆನಪಿಗೆ! ಏನ್ ಗೊತ್ತಾ? ಇವತ್ತಿಗೆ ನನ್ನ ನಿನ್ನ ಪ್ರೀತಿಯ ಶುಭಾರಂಭವಾಗಿ ಒಂದ್ ವರ್ಷ ಆಯ್ತು! ಬಟ್ಟೆ ಕೊಟ್ರೆ ಟೈಟೂ ಅಂತೀಯ, ಶೂ ಕೊಟ್ರೆ ಲೂಸು ಅಂತೀಯಾ.. ಇನ್ನು ಜಾಕೆಟ್ ಕೊಡ್ಸಿದ್ರೆ. ಕಲರ್ ಇಷ್ಟ ಆಗ್ಲಿಲ್ಲ ಅಂತೀಯ.. ಇನ್ನೇನ್ ಕೊಡ್ಲಿ ನಾನು? ಈ ಲೆಟರ್ ಬಿಟ್ಟು! ನಂದೂ ನಿಂದು ಟೇಸ್ಟೇ ಮ್ಯಾಚ್ ಆಗಲ್ವಲ್ವೋ. ಮತ್ತ್ ಹೇಗೋ ನನ್ ನೀನ್ ಇಷ್ಟ ಆದೆ? ಹ್ಹ….. ನೀನೇ ಹೇಳ್ತಿದ್ಯಲ್ಲ, ಇಬ್ರಿಗೂ ಬಿಸಿಬೇಳೇ ಬಾತ್ ಇಷ್ಟ ಅನ್ನೋ ಕಾರಣಕ್ಕೆ ಆಗೋದ್ ಲವ್ವಲ್ಲ.. ಇಬ್ರೂ ಸೇರಿ ಒಟ್ಟಿಗೆ ಬಿಸಿಬೇಳೆ ಬಾತ್ ಮಾಡೋದ್ ಲವ್ವು! ನೋಡೂ ನನ್ಗೆ… ಅಡುಗೆ ಬರಲ್ಲ ಅಂತ ಸೈಲೆಂಟ್ ಮೆಸೇಜ್ ಕೊಡ್ತಾ ಇದ್ದೀನಿ. ನಿಮ… ಅಮ್ಮನ ಮುಂದೆ ನನ್ ಮರ್ಯಾದೆ ಕಾಪಾಡು ಪ್ಲೀಸ್!
ಪತ್ರದಲ್ಲಿ ಏನೂ ವಿಷ್ಯ ಇಲ್ಲ ಅಂತ ಸಿಟ್ ಮಾಡ್ಕೊಂಡ್ಯಾ? ನಿನ್ ಕಣ್ ಚೆಂದ, ಮೂಗ್ ಚೆಂದ, ಹೇರ್ ಸ್ಟೈಲ… ಚೆಂದ ಅಂತೆಲ್ಲ ಡವ್ ಮಾಡೋದ್ ನನ್ಗೆ… ಇಷ್ಟ ಆಗಲ್ಲ. ಹೇಗಿದ್ರೂ ನೀನೇ ಚೆಂದ. ಇದು ಸತ್ಯ ಅಂತ ನಾನ್ ಹೇಳ್ತಿದೀನಿ. ನೀನ್ ನನ್ನ ನಂಬಿ¤àಯ ಅಂತ ನನ್ಗೆ… ಗೊತು!
ಈ ಒಂದ್ ವರ್ಷದ್ ಪ್ರೀತೀಲಿ, ನಾವಿಬ್ರು ವ್ಯಾಲಿಡ್ ಆಗಿರೋದೇನನ್ನೂ ಮಾತಾಡ್ಕೊಂಡೇ ಇಲ್ಲ. ಮಾತಾಡಿದ್ದು ನಮ್ ಕಣಳಷ್ಟೇ.. ಅದ್ರಲ್ಲೇ ತಾನೆ ನಿಷ್ಕಳಂಕ ಪ್ರೀತಿ ತುಂಬಿರೋದು? ಈಗ್ ಹೇಳು, ಪತ್ರದಲ್ಲಿ ಪದಗಳು ಬೇಕ? ಮತ್ಯಾಕ್ ತಡ? ತಕ್ಷಣ ಬಂದು ನನ್ನ ಕಾಣು!
ನಂದಿನಿ ನಂಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.