ಮೇಕಪ್ ರಿಮೂವರ್
Team Udayavani, Sep 4, 2019, 5:00 AM IST
ತಾನು ಚಂದ ಕಾಣಿಸಬೇಕು ಎಂಬ ಆಸೆಯಿಂದಲೇ ಎಲ್ಲ ಹುಡುಗಿಯರೂ ಮೇಕಪ್ ಇಷ್ಟಪಡುತ್ತಾರೆ. ಕಾಲೇಜಿಗೋ, ಆಫೀಸಿಗೋ ಹೊರಡುವ ಮುನ್ನ ಗಂಟೆಗಟ್ಟಲೆ ತಿದ್ದಿ ತೀಡಿ ಮೇಕಪ್ ಮಾಡಿದರೆ ಸಾಲದು, ಸಂಜೆ ಮನೆಗೆ ಬಂದಮೇಲೆ ಅದನ್ನು ತೊಳೆದು ತೆಗೆಯಬೇಕು. ಆದರೆ, ಈ ವಿಷಯದಲ್ಲಿ ಕೆಲವರು ಚೂರು ಉದಾಸೀನ ಮಾಡುತ್ತಾರೆ. ಅಬ್ಟಾ, ಸುಸ್ತಾಗಿದೆ ಅಂತ ಮುಖ ತೊಳೆಯದೆ ಮಲಗುವುದು, ಚರ್ಮವನ್ನು ಉಜ್ಜಿ ಮೇಕಪ್ ತೆಗೆಯುವುದು… ಹೀಗೆಲ್ಲಾ ಮಾಡುತ್ತಾರೆ. ಅಂಥವರಿಗಾಗಿ ಕೆಲವು ಸಲಹೆಗಳು.
– ಮೇಕಪ್ ಎಷ್ಟೇ ಗಾಢವಾಗಿದ್ದರೂ, ನೇರವಾಗಿ ಚರ್ಮವನ್ನು ಉಜ್ಜಬೇಡಿ. ಮೊದಲು ಕೊಬ್ಬರಿ ಎಣ್ಣೆ ಅಥವಾ ಮೇಕಪ್ ರಿಮೂವರ್ ಬಳಸಿ.
– ಮೇಕಪ್ ರಿಮೂವ್ ಮಾಡಿದ ನಂತರ ಎರಡೆರಡು ಬಾರಿ ಮುಖ ತೊಳೆಯಬೇಕು. ಮೊದಲು ಮಾಯಿಶ್ಚರೈಸರ್ ಅಂಶವಿರುವ ಕ್ಲೆನ್ಸರ್‌ನಿಂದ ತೊಳೆದು, ಆಮೇಲೆ ಸೋಪ್/ಫೇಸ್‌ವಾಶ್ ಉಪಯೋಗಿಸಿ.
-ದಿನವೂ ಗಾಢವಾಗಿ ಮೇಕ್‌ಅಪ್ ಮಾಡುವವರಾದರೆ, ರಾಸಾಯನಿಕಗಳಿಂದ ಚರ್ಮ ಬೇಗ ಕಳೆಗುಂದುವ ಅಪಾಯ ಇರುತ್ತದೆ. ಹಾಗಾಗಿ ನಿತ್ಯವೂ ಒಳ್ಳೆಯ ಮಾಯಿಶ್ಚರೈಸರ್‌ನಿಂದ ತ್ವಚೆಗೆ ಆರೈಕೆ ಮಾಡಿ.
-ಮೇಕ್‌ಅಪ್ ತೆಗೆದ ನಂತರ ಕೊಬ್ಬರಿ ಎಣ್ಣೆ ಸವರಿದರೆ ಉತ್ತಮ.
-ಮೇಕ್‌ಅಪ್ ನಂತರ ಮುಖವನ್ನಷ್ಟೇ ಅಲ್ಲ, ಮೇಕ್‌ಅಪ್‌ಗೆ ಬಳಸುವ ಬ್ರಷ್ ಅನ್ನು ಕೂಡಾ ತೊಳೆದು ಸ್ವತ್ಛವಾಗಿಡಬೇಕು. ಆ ಬ್ರಷ್‌ಗಳನ್ನು ದೀರ್ಘಕಾಲ ತೊಳೆಯದೇ ಇದ್ದರೆ ಚರ್ಮದ ಅಲರ್ಜಿ ಉಂಟಾಗಬಹುದು.
-ಅವಧಿ ಮೀರಿದ (ಎಕ್ಸ್‌ಪೈರ್ ಆದ) ಸೌಂದರ್ಯವರ್ಧಕಗಳನ್ನು ಯಾವುದೇ ಕಾರಣಕ್ಕೂ ಬಳಸಬೇಡಿ.
-ಮೇಕ್‌ಅಪ್ ಮಾಡಿಕೊಂಡಾಗ ಮುಖದ ಮೇಲೆ ಗುಳ್ಳೆ, ಕಜ್ಜಿ, ಉರಿ ಕಂಡುಬಂದರೆ ಆ ಉತ್ಪನ್ನದ ಬಳಕೆ ನಿಲ್ಲಿಸಿ.
-ನಿಮ್ಮ ಮೇಕ್‌ಅಪ್ ವಸ್ತುಗಳನ್ನು ಬೇರೆಯವರೊಂದಿಗೆ ಶೇರ್ ಮಾಡಬೇಡಿ. ಇಲ್ಲದಿದ್ದರೆ, ಚರ್ಮ ಸಂಬಂಧಿ ರೋಗಗಳು ಹರಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ex-US President: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.