ಮಾವಿನ ಬಗ್ಗೆ ಮನದ ಮಾತು…


Team Udayavani, Apr 21, 2021, 12:00 PM IST

ಮಾವಿನ ಬಗ್ಗೆ ಮನದ ಮಾತು…

ಮಾವಿನ ನಂಟು ಶುರುವಾಗೋದೇ ಬಾಲ್ಯದಿಂದ. ಹಣ್ಣಿನ ಚಿತ್ರಗಳಿಗೆ ಬಣ್ಣ ತುಂಬಿ ಎಂದು ಕೊಡುವ ನರ್ಸರಿ ಡ್ರಾಯಿಂಗ್‌ಪುಸ್ತಕದಲ್ಲಿ ಮಾವಿನ ಚಿತ್ರ ಇಲ್ಲದೆ ಇರಲುಸಾಧ್ಯವೇ? M ಅಕ್ಷರದಿಂದ ಹೇಳುವ ಪದಗಳಲ್ಲಿಮ್ಯಾಂಗೊ ಅನ್ನುವ ಪದ ಇಲ್ಲದೆ ಹೋಗುವುದೆ?ಇದು ಮಾವಿನ ಬಗೆಗಿನ ಬೀಜ ಮನಸ್ಸಿನಲ್ಲಿ ಮೊಳಕೆಯಾಗುವ ಪರಿ.

ಹೀಗೆ ಬೆಳೆಯುತ್ತಿದಂತೆ ಮುಂದೆ ಮರಗಳ ಹೆಸರಿನ ಪಟ್ಟಿ ಮಾಡುತ್ತಾ ಮಾವಿನ ಮರದ ಸೇರ್ಪಡೆ ಆಗುತ್ತದೆ. ಪದ್ಯಕ್ಕೆ ಬರುವುದಾದರೆ “ಹತ್ತು ಹತ್ತು ಇಪ್ಪತ್ತು, ತೋಟಕೆ ಹೋದನು ಸಂಪತ್ತು’ ಎಂಬ ಪದ್ಯದಲ್ಲಿ ಪುಟ್ಟ ಹುಡುಗ ತೋಟಕ್ಕೆ ನುಗ್ಗಿ ಮಾವಿನ ಹಣ್ಣ ನ್ನು ಕೀಳುವಸಾಹಸ ಮಾಡುವ ಪದ್ಯದಲ್ಲಿ ಸಂಖ್ಯೆಗಳ ಪರಿಚಯವು ಮಾವಿನ ಹಣ್ಣಿನ ಆಸೆಯೊಂದಿಗೆ ಸೇರಿ ಹೋಗಿದೆ.

ಇನ್ನು ಸತ್ಯದ ಕಥೆಯನ್ನು ಪುಣ್ಯ ಕೋಟಿ ಗೋವಿನ ಹಾಡಿನ ಮೂಲಕ ಹೇಳಲಾಗುವ “ಧರಣಿ ಮಂಡಲ ಮಧ್ಯದೊಳಗೆ’ ಎಂಬ ಗೀತೆಯಲ್ಲಿ ಗೊಲ್ಲನು ಕೊಳಲನೂದುತ ಕೂರುವುದು ಮಾವಿನ ಮರದ ಕೆಳಗೆ ತಾನೆ? ಇದನ್ನುಹೇಳುವ ಆ ಹಾಡಿನ ಸಾಲುಗಳು “ಎಳೆಯ ಮಾವಿನ ಮರದ ಕೆಳಗೆ, ಕೊಳಲನೂದುತ ಗೊಲ್ಲಗೌಡನು’ ಎಂಬ ಸಾಲುಗಳನ್ನು ಓದು ತ್ತಾ, “ವಸಂತ ಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೆ ಬೇಕು’ ಎಂಬ ಹಾಡುಗಳನ್ನು ಕೇಳುತ್ತಾ ಮಾವಿನ ಮರದ ಚಿತ್ರಣ ಮನದಲ್ಲಿ ಚಿಗುರೊಡೆಯುವುದು.

ಆಂಜನೇಯ ತಂದ ಹಣ್ಣು!? :

ಮಾವಿನ ಹಣ್ಣಿನ ಬಗೆಗಿನ ಕಥೆಗಳು, ಗಾದೆಗಳು ಅನೇಕ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಅಲೆಕ್ಸಾಂಡರ್‌ ನಮ್ಮ ದೇಶಕ್ಕೆ ಬಂದಾಗ ಅವನಿಗೆ ಈ ಹಣ್ಣು ತುಂಬ ಇಷ್ಟವಾಗಿತ್ತಂತೆ. ಇನ್ನೊಂದು ದಂತಕಥೆಯ ಪ್ರಕಾರ, ಮಾವಿನ ಹಣ್ಣನ್ನು ಲಂಕೆ ಯಿಂದ ನಮ್ಮ ದೇಶಕ್ಕೆ ತಂದದ್ದು ಆಂಜನೇಯನಂತೆ. ಅಶೋಕವನದಲ್ಲಿ ಸೀತೆ ಯನ್ನು ಕಂಡು ಉಂಗುರವನ್ನು ಕೊಟ್ಟ ಮೇಲೆ ಸಂತೋಷದಿಂದ ಮರದಿಂದ ಮರಕ್ಕೆ ಹಾರಿ ಸಿಕ್ಕ ಹಣ್ಣುಗಳನ್ನೆಲ್ಲಾ ತಿಂದನಂತೆ. ಎಲ್ಲಕ್ಕಿಂತ ಮಾವಿನಹಣ್ಣು ತುಂಬ ಪ್ರಿಯವಾಗಿದ್ದರಿಂದ ಅದರ ಬೀಜಗಳನ್ನು ನಮ್ಮ ದೇಶಕ್ಕೆ ತಂದುಹಾಕಿದನಂತೆ. ಹೀಗೆ, ಪುರಾಣ ಕಥೆಗಳಲ್ಲೂ ಹಲವು ಕಡೆ ಮಾವಿನ ಉಲ್ಲೇಖವಿದೆ.

ಬಯಕೆ ಹುಟ್ಟಿಸುವುದು ಇದೇ ಮಾವು! :  ಮಗುವಿಗೆ ಹಲ್ಲು ಬರುವ ಮುನ್ನವೇ, ಮಾವಿನ ಸವಿ ನಾಲಿಗೆಗೆ ತಲುಪಿರುತ್ತದೆ. ವಿಟಮಿನ್‌ ಎ, ಫೈಬರ್‌,ಪೊಟಾಸಿಯಂ ಹಾಗೂಇನ್ನೂ ಹಲವು ಪೌಷ್ಟಿಕಾಂಶಗಳು ಈ ಹಣ್ಣಿನಲ್ಲಿ ಹೇರಳವಾಗಿ ಇರುವುದರಿಂದ ವೈದ್ಯರು ಇದನ್ನು ಮಕ್ಕಳಿಗೆ ಚಿಕ್ಕವರಿರುವಾಗಲೇ ತಿನ್ನಿಸಬಹುದು ಎಂದು ಹೇಳುತ್ತಾರೆ. ಬೆಳೆಯುತ್ತಾ ಇದೇ ಹಣ್ಣಿನ ಸೀಕರ್ಣೆ, ಮಿಲ್ಕ್ ಶೇಕ್‌, ಬರ್ಫಿ ಹೀಗೆ ಹತ್ತು ಹಲವು ಮಾವಿನ ತಿನಿಸುಗಳು ಪ್ರಿಯವಾಗಿ ಬಿಡುತ್ತದೆ. ಪಾಯಸ, ಕೋಸಂಬರಿ, ಚಿತ್ರಾನ್ನದಿಂದ ಹಿಡಿದು ಐಸ್‌ಕ್ರೀಮ್‌ ತನಕ ಮಾವಿನಕಾಯಿ, ಹಣ್ಣಿನ ಬಳಕೆ ಮಾಡಬಹುದು. ಮಾವಿನ ಕಾಯಿಗೆ ಉಪ್ಪು, ಖಾರ ಹಚ್ಚಿ ಶಾಲಾ, ಕಾಲೇಜುಗಳ ಮುಂದೆ ಗಾಡಿಗಳಲ್ಲಿ ಮಾರುತ್ತಿದ್ದರೆ ನಮಗೆ ಬಾಯಲ್ಲಿ ನೀರೂರುವುದಂತೂ ಖಂಡಿತ. ಮಾವಿನ ಚಾಕಲೇಟ್‌, ಮ್ಯಾಂಗೋ ಟಾಫಿಸ್‌ ಚೀಪಿ ತಿನ್ನಲು ಚಂದ. ಬಸುರಿಯರಿಗೆ ಬಯಕೆ ಹುಟ್ಟಿಸುವುದು ಇದೇ ಮಾವಲ್ಲವೇ? ಉಪ್ಪಿನ ಕಾಯಿಗಳಲ್ಲೂ ಇದರದ್ದೇ ಕಾರುಬಾರು.

ಮಾವಿನ ಎಲೆಗಳು ಶುಭ ಸಮಾರಂಭಗಳಲ್ಲಿ ಕಳಶಕ್ಕೆ ಸೇರಿ, ಮನೆಯ ಮುಂದಿನ ತೋರಣವಾಗಿ, ಚಪ್ಪರದಲ್ಲಿಯೂ ಶೋಭಿಸುತ್ತವೆ. ಮಾವಿನ ಮರದ ತೊಗಟೆ, ಹೂ, ಎಲೆ, ಹಣ್ಣು, ಬೀಜ ಎಲ್ಲದರಲಿಯೂ ಔಷಧೀಯ ಗುಣಗಳಿದ್ದು ಆಯುರ್ವೇದ ಔಷಧಗಳಲ್ಲಿ ಬಳಕೆಯಾಗುತ್ತದೆ. ಬಾದಾಮಿ, ರಸಪುರಿ, ತೋತಾಪುರಿ, ಮಲ್ಲಿಕಾ, ಮಲಗೋವಾ, ನೀಲಂ, ಸಿಂಧು, ಆಮ್ರಪಾಲಿ..ಹೀಗೆ ಹಲವಾರು ಮಾವಿನ ಹಣ್ಣಿನ ತಳಿಗಳಿದ್ದು, ಪ್ರತಿಯೊಂದೂ ತನ್ನದೇ ಆದ ರುಚಿ ಹೊಂದಿರುತ್ತದೆ. ಒಟ್ಟಿನಲ್ಲಿ ಎರಡನೇ ಕಲ್ಪವೃಕ್ಷ ಮಾವಿನ ಮರ ಎಂದರೆ ಅತಿಶಯೋಕ್ತಿ ಆಗಲಾರದು. ­

 

-ಶ್ರೀಲಕ್ಷ್ಮೀ

ಟಾಪ್ ನ್ಯೂಸ್

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

1-russia

9/11-ಶೈಲಿಯಲ್ಲಿ ರಷ್ಯಾದ ವಸತಿ ಕಟ್ಟಡಗಳ ಮೇಲೆ ಉಕ್ರೇನ್ ನಿಂದ ಸರಣಿ ಡ್ರೋನ್ ದಾಳಿ!

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ತಾಯಿಯ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟ ಹಣದಲ್ಲೇ ರಮ್ಮಿ ಆಡಿದ ಮಗ.. ಕೊನೆಗೆ ಜೀವ ಕಳೆದುಕೊಂಡ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

ಸಿನೆಮಾ ಪೋಸ್ಟರ್‌ ಗಳ ಕೋಣೆಯಲ್ಲಿ-ಹಾಲಿವುಡ್‌ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ

1-wewqe

Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ

mumbai1

ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಯುಗಾದಿ ಮರಳಿ ಬರುತಿದೆ…

ಯುಗಾದಿ ಮರಳಿ ಬರುತಿದೆ…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Wadi-Pro

Wadi: ಡಾ.ಅಂಬೇಡ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆ; ಬೃಹತ್‌ ಪ್ರತಿಭಟನೆ, ವಾಡಿ ಬಂದ್

1-bharat

Bharatanatyam; ರಾಜ್ಯ ಮಟ್ಟದ ಶಿಷ್ಯವೇತನಕ್ಕೆ ಅದಿತಿ ಜಿ.ಮಂಡೀಚ,ಸ್ವಾತಿ ಆಯ್ಕೆ

9

Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ

kejriwal 2

Delhi excise policy; ಕೇಜ್ರಿವಾಲ್ ವಿಚಾರಣೆಗೆ ಲೆಫ್ಟಿನೆಂಟ್ ಗವರ್ನರ್ ಅನುಮತಿ ಪಡೆದ ಇಡಿ

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.