ಮ್ಯಾರೇಜ್‌ ಫೋಬಿಯಾ

Team Udayavani, Oct 11, 2017, 12:16 PM IST

11-28.jpg

ಹುಡುಗ- ಹುಡುಗಿಯೂ ನಾಚಿಕೆಯಿಂದ ಬೇಡ, ಬೇಡ ಅನ್ನುತ್ತಲೇ ಮದುವೆಗೆ ಒಪ್ಪಿಬಿಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ.  ವಯಸ್ಸು ಮೂವತ್ತು ದಾಟಿದರೂ “ನಂಗೇನ್‌ ಮಹಾ ವಯಸ್ಸಾಗಿದೆ. ನಂಗೀಗ್ಲೆ ಮ ದ್ವೆ ಬೇಡ’ ಅಂದು ಎಲ್ಲರ ಬಾಯಿ ಮುಚ್ಚಿಸಿ ಬಿಡುತ್ತಾರೆ. ಯಾಕೆ ಹೀಗೆ?

“ಅಮ್ಮಾ ನಂಗೀಗ್ಲೆ ಮದ್ವೆ ಬೇಡ… ನಾನು ಸೆಟ್ಲ ಆಗ್ಬೇಕು. ಆಮೇಲೆ ಮದ್ವೆ- ಮಕ್ಳು ಎಲ್ಲಾ…’ ಮಗಳು ಫೈನಲ್ಲಾಗಿ ಘೋಷಿಸಿಬಿಟ್ಟಳು. ವಯಸ್ಸು ಇಪ್ಪತ್ತೆಂಟಾದರೂ  ಮದ್ವೆ ಬೇಡ ಅಂತಿದ್ದಾಳಲ್ಲ, ಅವಳ ಓರಗೆಯವರೆಲ್ಲ ಮದ್ವೆಯಾಗಿದ್ದಾರೆ. ಇವಳಿಗೆ ಹ್ಯಾಗಪ್ಪಾ ಹೇಳ್ಳೋದು ಅನ್ನೋ ಚಿಂತೆ ಅಮ್ಮನದು. ಇದು ನಮ್ಮ ಯುವ ಪೀಳಿಗೆಯವರ ಕಥೆ.

ಆದರೆ, ಹಿಂದೆ ಮಗನಿಗಾಗಲಿ, ಮಗಳಿಗಾಗಲಿ ಹದಿನೆಂಟು ತುಂಬಿದರೆ ಮನೆಯವರ ತಲೆ ತುಂಬಾ ಮದ್ವೆಯದ್ದೇ ಯೋಚನೆ. ಹುಡುಗ- ಹುಡುಗಿಯೂ ನಾಚಿಕೆಯಿಂದ ಬೇಡ, ಬೇಡ ಅನ್ನುತ್ತಲೇ ಮದುವೆಗೆ ಒಪ್ಪಿಬಿಡುತ್ತಿದ್ದರು. ಆದರೀಗ ಕಾಲ ಬದಲಾಗಿದೆ.  ವಯಸ್ಸು ಮೂವತ್ತು ದಾಟಿದರೂ “ನಂಗೇನ್‌ ಮಹಾ ವಯಸ್ಸಾಗಿದೆ. ನಂಗೀಗ್ಲೆ ಮದ್ವೆ ಬೇಡ’ ಅಂದು ಎಲ್ಲರ ಬಾಯಿ ಮುಚ್ಚಿಸಿ ಬಿಡುತ್ತಾರೆ.

ಹಾಗಾದರೆ, ಮದ್ವೆ ಬಗ್ಗೆ ಫೋಬಿಯಾ, ಅಪನಂಬಿಕೆ ಸೃಷ್ಟಿಯಾಗಲು ಕಾರಣವೇನೆಂದು ಯೋಚಿಸಿದಾಗ ಹಲವಾರು ಅಂಶಗಳು ಕಾಣುತ್ತವೆ.

1. ಕೆರಿಯರ್‌, ಕೆರಿಯರ್‌, ಕೆರಿಯರ್‌
ಮದ್ವೆ ಎಂಬುದು ಪವಿತ್ರ ಬಂಧವಲ್ಲ, ಅದೊಂದು “ಬಂಧನ’ ಎಂಬ ಭಾವನೆ ಈಗಿನವರದ್ದು. ಮೊದಲು, ಉದ್ಯೋಗ ಬರೀ ಪುರುಷರ ಲಕ್ಷಣವಾಗಿತ್ತು. ಆದರೀಗ ಹುಡುಗಿಯೂ ದುಡಿಯುತ್ತಿದ್ದಾಳೆ. ನಾನು ಉದ್ಯೋಗದಲ್ಲಿ ಮೇಲಕ್ಕೆ ಏರಬೇಕು, ವಿದೇಶಕ್ಕೆ ಹಾರಬೇಕು. ಮದುವೆಯಾಗಿ ಬಿಟ್ಟರೆ ನನ್ನ ರೆಕ್ಕೆಗಳು ಮುರಿಯುತ್ತವೆ. ಇನ್ಯಾರೋ ನನ್ನನ್ನು ಕಂಟ್ರೋಲ್‌ ಮಾಡುತ್ತಾರೆ. ಸಂಗಾತಿಯ ಜೊತೆಗೆ ಹೊಂದಾಣಿಕೆ ಮಾಡಿಕೋಬೇಕು. ಆಗ ನನ್ನ ಕೆರಿಯರ್‌ ಹಾಳಾಗುತ್ತದೆ; ಹೀಗೆ ಯೋಚಿಸಿ ಮ ದ್ವೆ ಯಿಂದ ದೂರ ಉಳಿಯುವ ಹುಡುಗ-ಹುಡುಗಿಯರ ಸಂಖ್ಯೆ ಹೆಚ್ಚುತ್ತಿದೆ.

2. ಯಾರ್ರೀ ಹೊಂದಿಕೊಳ್ತಾರೆ?
ಮದ್ವೆಗೆ ಇನ್ನೊಂದು ಹೆಸರೇ ಹೊಂದಾಣಿಕೆ. ಗಂಡು- ಹೆಣ್ಣು ಪರಸ್ಪರ ಅರ್ಥ ಮಾಡಿಕೊಂಡು ಒಂದೇ ಸೂರಿನಡಿ ಬದುಕಬೇಕು. ಆದರೆ, ಇಂದಿನವರಿಗೆ ಅದು ಹಿಂಸೆಯಂತೆ ಕಾಣುತ್ತದೆ.  ಡೈವೋರ್ಸ್‌ಗೆ ಅರ್ಜಿ ಹಾಕುವ ಜೋಡಿಗಳು ನೀಡುವ ಕಾರಣಗಳನ್ನು ನೋಡಿದರೆ, ಹೊಂದಾಣಿಕೆ ಎಂಬುದು ಇಂದಿನವರಿಗೆ ಎಷ್ಟು ಕಷ್ಟ ಎಂಬುದು ಅರ್ಥವಾಗುತ್ತದೆ. ಗಂಡ- ಹೆಂಡತಿ ಒಂದೇ ಟಾಯ್ಲೆಟ್‌ ಬಳಸುವ ವಿಷಯಕ್ಕೆ ಜಗಳವಾಡಿ, ಡೈವೋರ್ಸ್‌ ಪಡೆದ ಉದಾಹರಣೆಯೂ ಇದೆ ಎಂದರೆ ಯೋಚಿಸಿ ನೋಡಿ!

3. ಒಂಟಿಯಾಗಿರುವುದೇ ಲೇಸು!
ಜಗತ್ತಿನಲ್ಲಿ ಎಲ್ಲರೂ ಒಂಟಿ, ಯಾವ ಸಂಬಂಧವೂ ಶಾಶ್ವತವಲ್ಲ ಎಂಬ ಸಿನಿಕತನ ನಮ್ಮೊಳಗೆ ಮೂಡುತ್ತಿದೆ. ಅಯ್ಯೋ, ನಾನು ಒಂಟಿಯಾಗಿಯೇ ಖುಷಿಯಾಗಿದ್ದೇನೆ. ಸಂಬಂಧಗಳ ಗೊಡವೆಯೇ ಬೇಡ ಎಂದು ಯುವ ಪೀಳಿಗೆ ಮದ್ವೆಯನ್ನು ನಿರಾಕರಿಸುತ್ತಿದೆ. ಹೀಗೆ ನಾನು, ನಾನು ಎಂದು ಯೋಚಿಸಿದರೆ ಇನ್ನೊಬ್ಬರನ್ನು ಸುಲಭವಾಗಿ ಒಪ್ಪಿಕೊಳ್ಳಲು, ಸಂಬಂಧ ಬೆಸೆಯಲು ಕಷ್ಟವಾಗುತ್ತದೆ. ಪ್ರೇಮ ವೈಫ‌ಲ್ಯಗಳು ಕೂಡ ಈ ಮನಃಸ್ಥಿತಿ ಮೂಡಲು ಕಾರಣ ಎನ್ನುತ್ತಾರೆ ಮನೋವೈದ್ಯರು.

4. ಜವಾಬ್ದಾರಿ ಹೊರಲಾಗದ ಮನಃಸ್ಥಿತಿ
ಇಂದಿನವರದ್ದು ಕೇರ್‌ ಫ್ರೀ ಮನಃಸ್ಥಿತಿ. ಮದ್ವೆಯ ತಲೆನೋವು ಯಾರಿಗೆ ಬೇಕು ಎಂದು ಯೋಚಿಸಿ ಸಂಸಾರ ಸಾಗರಕ್ಕಿಳಿಯಲು ಹಿಂದೇಟು ಹಾಕುತ್ತಿದ್ದಾರೆ ಈಗಿನವರು. ಒಬ್ಬ ಸಂಗಾತಿಯ ಜೊತೆಗೆ ಜೀವಿಸುವುದು, ಅವರ ಇಷ್ಟ-ಕಷ್ಟಗಳಿಗೆ ಹೊಂದಿಕೊಳ್ಳುವುದು ಇಂದಿನವರಿಗೆ ಒಗ್ಗದ ಸಂಗತಿ. ಹಾಗಾಗಿ ಹೆಚ್ಚಿನವರು ಲಿವ್‌ ಇನ್‌ ರಿಲೇಶನ್‌ನಲ್ಲಿದ್ದಾರೆಯೇ ಹೊರತು, ಅದನ್ನು ಮದ್ವೆಯವರೆಗೆ ತೆಗೆದುಕೊಂಡು ಹೋಗುವುದಿಲ್ಲ.

5. ನಾನು ಯಾರಿಗೂ ಕಮ್ಮಿಯಿಲ್ಲ!
ಹೆಣ್ಣು ಮಕ್ಕಳು ಇಂದು ತಮಗೆ ಸಿಕ್ಕಿರುವ ಸ್ವಾತಂತ್ರ್ಯ ಮತ್ತು ಅವಕಾಶಗಳಿಂದ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದಾರೆ.  ಮದ್ವೆಯಾಗಿ, ಮಕ್ಕಳನ್ನು ಹೆತ್ತು, ಮಾದರಿ ಸೊಸೆಯಾಗಿರುತ್ತೇನೆ ಎಂದು ಯಾವ ಹುಡುಗಿಯೂ ಹೇಳುವುದಿಲ್ಲ. ಆರ್ಥಿಕವಾಗಿಯೂ ಸ್ವಾವಲಂಬಿಯಾಗಿರುವ ಆಕೆ ಗಂಡಿನ ಆಶ್ರಯವನ್ನು ನಂಬಿಕೊಂಡಿಲ್ಲ. ಈ ಕಾರಣದಿಂದ ಹೆಣ್ಣು ಮಕ್ಕಳು ಕೂಡ ಮ ದ್ವೆ ಎಂದರೆ ಮೂಗು ಮುರಿಯುತ್ತಿದ್ದಾರೆ. 

6. ಹೆಚ್ಚುತ್ತಿರುವ ವಿಚ್ಛೇದನ
ಇತ್ತೀಚೆಗೆ ಎಲ್ಲ ಮದ್ವೆಗಳೂ  ಡೈವೋರ್ಸ್‌ನಲ್ಲಿ ಅಂತ್ಯ ಕಾಣುತ್ತಿವೆ. ಹಿರಿಯರು ನಿಶ್ಚಯಿಸಿದ ಮ ದ್ವೆಯಷ್ಟೇ ಅಲ್ಲ, ಪ್ರೀತಿಸಿ ಮ ದ್ವೆಯಾದವರೂ ವಿಚ್ಛೇದನ ಪಡೆಯುತ್ತಿದ್ದಾರೆ. ಇದು ಸಮಾಜದ ಮೇಲೆ ಎಂಥ ಪರಿಣಾಮ ಬೀರುತ್ತಿದೆಯೆಂದರೆ, ಇಂದಿನ ಪೀಳಿಗೆ ಮದ್ವೆಯ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದೆ.

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.