mask no risk
Team Udayavani, Feb 26, 2020, 4:29 AM IST
ಕೊರೊನಾ ವೈರಸ್ ಭಯಕ್ಕೆ ಇಡೀ ಜಗತ್ತು ತತ್ತರಿಸಿದೆ. ಕೆಮ್ಮು/ ಸೀನಿನಿಂದ ಈ ವೈರಸ್ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತದೆ ಎಂಬುದು ಈ ಆತಂಕಕ್ಕೆ ಕಾರಣ. ಜನರ ಸಂಪರ್ಕದಿಂದ ದೂರ ಉಳಿಯಲು ಅಸಾಧ್ಯವಾದ್ದರಿಂದ, ರಕ್ಷಣೆಗೆಂದು ಎಲ್ಲರೂ ಮಾಸ್ಕ್ನ ಮೊರೆ ಹೋಗಿದ್ದಾರೆ. ಹಾಗಾಗಿ ಎಲ್ಲೆಡೆ ಮಾಸ್ಕ್ಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ, ಎಲ್ಲ ಮಾಸ್ಕ್ಗಳಿಗೂ ವೈರಸ್ ಹರಡದಂತೆ ತಡೆಯಲು ಸಾಧ್ಯವಿಲ್ಲ ಎಂಬುದು ತಿಳಿದಿರಲಿ.
ತಜ್ಞರು ಹೇಳುವ ಪ್ರಕಾರ, ಎನ್ 95 ಸುರಕ್ಷಾ ಮಾಸ್ಕ್ಗಳನ್ನು ಬಳಸುವುದು ಉತ್ತಮ. ಇವುಗಳನ್ನು ಸಾಮಾನ್ಯವಾಗಿ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ವೈದ್ಯರು ಬಳಸುತ್ತಾರೆ. ಮೂರು ಮೈಕ್ರಾನ್‌ಗಿಂತ ದೊಡ್ಡ ಕಣಗಳು ಉಸಿರಿನ ಸಂಪರ್ಕಕ್ಕೆ ಬಾರದಂತೆ ತಡೆಯುವ ಸಾಮರ್ಥ್ಯ ಇದಕ್ಕಿದೆ. ಎನ್ 95 ಮಾಸ್ಕ್ ಶೇ.95ರಷ್ಟು ಸೂಕ್ಷ್ಮಾಣುಗಳನ್ನು ತಡೆಯಬಲ್ಲದು. ಹೀಗಾಗಿ ಇದು ದುಬಾರಿ. ಮೂರು ಪದರುಗಳನ್ನು ಹೊಂದಿದ ಈ ಮಾಸ್ಕ್ಗಳನ್ನು ರೋಗಿಗಳು, ರೋಗಿಗಳ ಸಂಪರ್ಕದಲ್ಲಿರುವವರು, ವೈದ್ಯರು ಧರಿಸಬೇಕೆಂದು ಜಾಗತಿಕ ಆರೋಗ್ಯ ಸಂಸ್ಥೆ ತಿಳಿಸಿದೆ.
ಗುಣಮಟ್ಟಕ್ಕೆ ಗಮನ
ಮಾಧ್ಯಮಗಳಲ್ಲಿ ಪೋಟೊ ನೋಡಿ, ಮುಖಕ್ಕೊಂದು ಮಾಸ್ಕ್ ಧರಿಸಿಬಿಟ್ಟರೆ, ರೋಗ ಹರಡುವುದಿಲ್ಲ ಅಂತ ಜನರು ತಪ್ಪಾಗಿ ಭಾವಿಸಿದ್ದಾರೆ. ಗುಣಮಟ್ಟಕ್ಕೆ ಗಮನ ಕೊಡದೆ, ಕಡಿಮೆ ಬೆಲೆಯ ಮಾಸ್ಕ್ ಅನ್ನು ಕೊಳ್ಳುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ಲಾಭವಷ್ಟೇ ಹೊರತು, ಇತರರಿಗೆ ಯಾವುದೇ ಪ್ರಯೋಜನವಿಲ್ಲ. ಎಫ್.ಡಿ.ಎ. ಮಾನ್ಯತೆ ಹೊಂದಿದ ಮಾಸ್ಕ್ಗಳು ಮಾತ್ರ ಸೂಕ್ಷ್ಮಾಣುಗಳಿಂದ ರಕ್ಷಿಸಬಲ್ಲವು. ಹಾಗಾಗಿ, ಬೆಲೆ ಸ್ವಲ್ಪ ಹೆಚ್ಚಾದರೂ ಪರವಾಗಿಲ್ಲ. ಎಫ್.ಡಿ.ಎ. ಮಾನ್ಯತೆ ಹೊಂದಿದ ಮಾಸ್ಕ್ಗಳನ್ನೇ ಖರೀದಿಸಿ.
ಜೊತೆಗೆ, ಕೆಲವೊಂದಷ್ಟು ಮುಂಜಾಗ್ರತೆಗಳನ್ನು ಪಾಲಿಸಿ. ಜನನಿಬಿಡ ಸ್ಥಳಗಳಲ್ಲಿ ಸಂಚರಿಸಿ ಮನೆಗೆ ಬಂದ ನಂತರ, ಸೋಪು, ಬಿಸಿನೀರಿನಿಂದ ಕೈ ತೊಳೆಯಿರಿ. ಹೊರಗಡೆ ಸಾಧ್ಯವಾದಷ್ಟು ಏನನ್ನೂ ಮುಟ್ಟಬೇಡಿ. ಮೂಗು, ಮುಖ ಮುಟ್ಟುವುದನ್ನು ಕಡೆಗಣಿಸಿ. ಕಣ್ಣು ಉಜ್ಜಿಕೊಳ್ಳಬೇಡಿ. ಅನಾರೋಗ್ಯ ಪೀಡಿತ ವ್ಯಕ್ತಿಗಳಿಂದ ದೂರವಿರಿ.
-ಡಾ. ಕರವೀರಪ್ರಭು ಕ್ಯಾಲಕೊಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.