ನೀ ಮುದ್ದಾದ ಮಾಯಾವಿ


Team Udayavani, Dec 26, 2018, 10:45 AM IST

materni.jpg

ಈ ಸಹನೆ, ಶಾಂತಿ, ಹೆಜ್ಜೆ ಮೇಲೆ ಹೆಜ್ಜೆ ಇಡುವ ಅವಸರವಿಲ್ಲದ ನಡಿಗೆ, ಯಾವುದನ್ನೂ ಬೀಳಿಸದೆ ಎತ್ತಿಡುವುದು, ತಕರಾರಿಲ್ಲದೆ ತರಕಾರಿ ತಿನ್ನುವುದು, ಜಂಕ್‌ಫ‌ುಡ್‌ ನೋಡಿದ್ರೆ ಮೈಲು ದೂರ ಹಾರೋದು, ಶ್ಲೋಕವನ್ನು ಕೇಳುವುದು, ಅದೂ ದೊಡ್ಡ ವಾಲ್ಯೂಮ್‌ನಲ್ಲಿ! ಹೀಗೆ ನನ್ನ ಜಾಯಮಾನದಲ್ಲೇ ಇಲ್ಲದ ಸದ್ಗುಣಗಳಾದಿಯಾಗಿ ಸಕಲವೂ ಕಳೆದ ಕೆಲ ತಿಂಗಳಲ್ಲಿ ನನ್ನನ್ನು ಆವರಿಸಿಕೊಂಡಿವೆ. ಹೊಟ್ಟೆಯೊಳಗೆ ಕುಳಿತು ನನ್ನನ್ನು ಇಷ್ಟೆಲ್ಲ ನಿಯಂತ್ರಿಸುವ ಸರ್ವಾಧಿಕಾರಿ ಈ ಕೂಸು, ಹುಟ್ಟಿದ ಮೇಲೆ ಇನ್ನೂ ಏನೇನು ಮಾಡಲಿದೆಯೋ…

ಯು ಮಸ್ಟ್‌ ಬಿ ಎ ಸೂಪರ್‌ ಕಿಡ್‌! ಇಲ್ಲವಾದಲ್ಲಿ ಬರೋಬ್ಬರಿ 26 ವರ್ಷಗಳಿಂದ ನನ್ನ ಅಪ್ಪ- ಅಮ್ಮನಿಂದ ನನಗೆ ಕಲಿಸಲಾಗದ ನಯನಾಜೂಕನ್ನು ಹೊಟ್ಟೆಗೆ ಬಂದ ಎಂಟೇ ತಿಂಗಳಲ್ಲಿ ನೀನು ಕಲಿಸಿದ್ದಾದರೂ ಹೇಗೆ? ನಂಬಿದ್ರೆ ನಂಬಿ, ಬಿಟ್ರೆ ಬಿಡಿ.. ಈ ಸಹನೆ, ಶಾಂತಿ, ಹೆಜ್ಜೆ ಮೇಲೆ ಹೆಜ್ಜೆ ಇಡುವ ಅವಸರವಿಲ್ಲದ ನಡಿಗೆ, ಯಾವುದನ್ನೂ ಬೀಳಿಸದೆ ಎತ್ತಿಡುವುದು, ತಕರಾರಿಲ್ಲದೆ ತರಕಾರಿ ತಿನ್ನುವುದು, ಜಂಕ್‌ಫ‌ುಡ್‌ ನೋಡಿದ್ರೆ ಮೈಲು ದೂರ ಹಾರೋದು, ಶ್ಲೋಕವನ್ನು ಕೇಳುವುದು, ಅದೂ ದೊಡ್ಡ ವಾಲ್ಯೂಮ್‌ನಲ್ಲಿ! ಹೀಗೆ ನನ್ನ ಜಾಯಮಾನದಲ್ಲೇ ಇಲ್ಲದ
ಸದ್ಗುಣಗಳಾದಿಯಾಗಿ ಸಕಲವೂ ಕಳೆದ ಕೆಲ ತಿಂಗಳಲ್ಲಿ ನನ್ನನ್ನು ಆವರಿಸಿಕೊಂಡು ಸ್ವತಃ ನನಗೇ ಅಚ್ಚರಿ ಹಾಗೂ ಆಘಾತ ತಂದಿವೆ. ಹೊಟ್ಟೆಯೊಳಗೆ ಕುಳಿತು ನನ್ನನ್ನು ಇಷ್ಟೆಲ್ಲನಿಯಂತ್ರಿಸುವ ಸರ್ವಾಧಿಕಾರಿ ಈ ಕೂಸು,
ಹುಟ್ಟಿದ ಮೇಲೆ ನನ್ನನ್ನಿನ್ನೂ ಏನೇನು ಮಾಡಲಿದೆಯೋ ಎಂಬ ಕುತೂಹಲ ಬೆರೆತ ಅಳುಕೊಂದು ಇಣುಕಿಣುಕಿ ಅಣಕಿಸುತ್ತಿದೆ. ಅದೇನೋ, ಅಕ್ಕಿಹುಳದಷ್ಟು ದೊಡ್ಡದಾಗಿಯೂ ಇಲ್ಲದಾಗಲೇ ನಿನ್ನ ಕೈಗೆ ನನ್ನ ಜುಟ್ಟು ಸಿಕ್ಕಿಬಿಟ್ಟಿದೆ. ಇದೀಗ ಕಂದನಾಗಿ ಕೈಗಿಳಿವ ಹೊತ್ತು…

ಈ ಬಡಪಾಯಿ ಅಮ್ಮನನ್ನು ಅದೆಷ್ಟು ಆಟವಾಡಿಸಿ ನೋಡಲಿದ್ದೀಯೋ ಗಮ್ಮತ್ತು! ಮೊಡವೆಯೊಂದು ಎದ್ದರೆ ಸಾಕು, ಅದಕ್ಕೆ ಗತಿ ಕಾಣಿಸುವವರೆಗೂ ಆಯುರ್ವೇದದಿಂದ ಅಲೋಪತಿವರೆಗೆ ನೂರೊಂದು ಕ್ರೀಮು
ಹಚ್ಚುತ್ತಿದ್ದ ನಾನು ಇದೀಗ ಮೊಡವೆಯ ಗೊಡವೆಗೆ ಹೋಗದೆ ಅದರ ಪಾಡಿಗೆ ಅದನ್ನು ಬಿಟ್ಟು ಬಿಟ್ಟಿದ್ದೇನೆ. ಈಗಷ್ಟೇ ಕತ್ತು ಸುತ್ತಿರುವ ಕಪ್ಪು ಕಲೆಗಳ್ಳೋ, ನಿನ್ನ ಇರುವನ್ನು ಸಾದರಪಡಿಸುತ್ತಿರುವ ಹಾರ್ಮೋನುಗಳ ಲೀಲೆ ಎಂದುಕೊಂಡು ಸುಮ್ಮನಾಗಿದ್ದೇನೆ. ಇನ್ನು ಹೊಟ್ಟೆಯಂಗಳದಿ ಹುಟ್ಟಿರುವ ಸ್ಟ್ರೆಚ್‌ ಮಾರ್ಕ್‌ಗಳು ನಿನ್ನ ಬೆಳವಣಿಗೆಯನ್ನು ಸಂಭ್ರಮಿಸಿ ಹಾಕಿರುವ ರಂಗೋಲಿಯಂತೆ ಕಾಣುತ್ತಿವೆ. ಗುಡುಗುಡು ಗುಜ್ಜಾರಿಯಂತೆ ಬೆಳೆವ ಹೊಟ್ಟೆಗೆ ಸಾಥ್‌ ನೀಡುತ್ತಾ, ದೊಣ್ಣೆ ಮೆಣಸಿನ ಕಾಯಿಯಂತಾದ ಮೂಗಿನ ಬಗ್ಗೆಯೂ ನನಗೀಗ ಚಿಂತೆ ಇಲ್ಲ.ಈ ಸಂಕಟ, ಎದೆಉರಿ, ಅಸಾಧ್ಯ ಹಸಿವು, ವಾಕರಿಕೆ, ಮೈಕೈ ನೋವು, ನಿದ್ದೆ ಬಾರದ ರಾತ್ರಿಗಳು, ಸುಖಾಸುಮ್ಮನೆ ಸತಾಯಿಸುವ ಸುಸ್ತು- ಎಲ್ಲವೂ ಸಹ್ಯದ ರೇಖೆಯೊಳಗೆ ನುಗ್ಗಿವೆ. ಅಮೂಲ್ಯವಾದುದು ಯಾವುದೂ
ಅನಾಯಾಸವಾಗಿ ಕೈ ಸೇರಲಾರದು. ಕಂದನೆಂಬೋ ಕನಸಿನ ಸಾಕಾರಕ್ಕಾಗಿ ಇಷ್ಟನ್ನೂ ಸಹಿಸದಿದ್ದರೆ ಹೇಗೆ? ನಿನ್ನ ಮುಖ ನೋಡುವ, ಎತ್ತಿ ಎದೆಗಪ್ಪುವ ಕಾತರತೆಯು ಹೆರಿಗೆ ನೋವೆಂಬ ದುಃಸ್ವಪ್ನಕ್ಕೆ ಮುಲಾಮಿನಂತೆ ಕೆಲಸ ಮಾಡುತ್ತಿದೆ. ಪುಣ್ಯ, ನೀನೇನೋ ಅಮ್ಮನ ಸ್ವಭಾವ ಬದಲಾಯಿಸಬಲ್ಲೆ. ಆದರೆ, ಅಮ್ಮನನ್ನು ಬದಲಾಯಿಸಲಾರೆ..! ಅದೆಲ್ಲಿಂದ ಈ ತಾಯ್ತನವೆಂಬ ಅಮ್ಮ ನನ್ನೊಳಗೆ ಬಂದಳ್ಳೋ?

ಬಹುಶಃ ಒಂದಿದ್ದ ಹೃದಯ ಎರಡಾಗಿ ಬಡಿದುಕೊಳ್ಳಲಾರಂಭಿಸಿದಾಗಲೇ ಇರಬೇಕು. ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತೆ ಮುಲುಕಾಡುವ ನಿನ್ನ ಮೈಮನ ನನ್ನೊಂದಿಗೆ ದೇಹಭಾಷೆಯಲ್ಲೇ ಮಾತಾಡುವ ಸುಖ- ಕೇವಲ ನಮ್ಮಿಬ್ಬರ ನಡುವೆ ಹಂಚಿಕೆಯಾಗುವ ವಿಶ್ವ ರಹಸ್ಯದಂತೆ ಆಪ್ತವೆನಿಸುತ್ತದೆ. ಬದುಕಿನುದ್ದಕ್ಕೂ ಬರುವ ಬಾಂಧವ್ಯವೊಂದು ಬಸಿರೊಳಗೇ ಬೆಸೆದು ಹೋಗಿದೆ. ಬಿಡಿಸಲಾಗದ ಬಂಧವೊಂದು ಮನದಂಗಳದಿ ಕಂದನಾಗಿ ಕದ ತಟ್ಟುತ್ತಿದೆ. ಕಂಡಿದ್ದ ಕನಸೊಂದು ನೂರೊಂದು ಕವಲೊಡೆದು ಭವಿಷ್ಯಕ್ಕೆ ಭರವಸೆ ನೀಡುತ್ತಿದೆ.

ಮಕ್ಕಳಾಟದಿಂದ ಬದಲಾಗಿ ಮಕ್ಕಳೊಂದಿಗೆ ಆಡುವ ಈ ಸನ್ನಿಹಿತಗಳಿಗೆ ನಿನ್ನಿಂದ ಎಲ್ಲವನ್ನೂ ಕಲಿಯಲು ನಾನು ಸಿದ್ಧಳಾಗಿದ್ದೇನೆ. ಏಕೆಂದರೆ, ಹೊಸ ಹುಟ್ಟು ನಿನಗೆ ಮಾತ್ರವಲ್ಲ, ಈ ಅಮ್ಮನಿಗೂ. ನಿನಗೆ ಈ ಜಗತ್ತು ಎಷ್ಟು ಹೊಸತೋ, ನನಗೂ ನಿನ್ನ ಜಗತ್ತು ಅಷ್ಟೇ ಹೊಸತು. ನೀನನಗೆ ನಿನ್ನ ಜಗಕೆ ಪರಿಚಯಿಸು, ನಾನು ನಿನ್ನನ್ನು ನನ್ನದಕ್ಕೆ ಪರಿಚಯಿಸುವೆ. ಇಬ್ಬರೂ ಸೇರಿ ಒಟ್ಟಿಗೆ  ಕಲಿಯೋಣ, ನಲಿಯೋಣ, ಬೆಳೆಯೋಣ .. ಏನಂತೀಯಾ?

 ರೇಶ್ಮಾ ರಾವ್‌ ಸೊನ್ಲ

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.