“ಮ್ಯಾಟೇ’ ಬಂಡವಾಳ
Team Udayavani, Nov 21, 2018, 6:00 AM IST
ಟೈಲರ್ ಅಂಗಡಿಯಲ್ಲಿ ವೇಸ್ಟ್ ಎಂದು ಉಳಿಯುವ ಬಟ್ಟೆ ತಂದು ಅದರಿಂದ ಮ್ಯಾಟ್ ತಯಾರಿಸುತ್ತಾರೆ ಸುಲೋಚನಾ…
ಕಾಲೊರೆಸುವ ಮ್ಯಾಟ್‌ನಲ್ಲೂ ಅಂದಚಂದ ನೋಡುತ್ತೇವೆ ನಾವು. ಮನೆಗೆ ಬರುವವರು, ಮ್ಯಾಟ್‌ಗಳ ಅಂದವನ್ನೂ ಮೆಚ್ಚಲೆಂದು ಬಯಸಿ, ಕಲಾತ್ಮಕತೆಗೆ ಒತ್ತು ನೀಡುತ್ತೇವೆ. ಅಂಥ ಚಂದದ ಕಾಲೊರೆಸು (ಮ್ಯಾಟ್)ಗಳನ್ನು ತಯಾರಿಸುವಲ್ಲಿ ನಿಪುಣರು ನೀರ್ಚಾಲುವಿನ ಗೃಹಿಣಿ ಸುಲೋಚನಾ.
ವೈವಿಧ್ಯಮಯ ಮ್ಯಾಟ್ ಹೆಣೆಯುವಲ್ಲಿ ಪರಿಣತರಾಗಿರುವ ಇವರು, ಆ ಕಲೆಯನ್ನು ಇತರೆ ಗೃಹಿಣಿಯರಿಗೂ ಕಲಿಸಿ, ಅವರ ಆದಾಯ ಗಳಿಕೆಗೆ ನೆರವಾಗುತ್ತಿದ್ದಾರೆ. ಮ್ಯಾಟ್ ತಯಾರಿಕೆಗೆ ಸುಲೋಚನಾ ಹಳೆಯ ಸೀರೆಗಳನ್ನು ಬಳಸುವುದಿಲ್ಲ. ದರ್ಜಿಗಳ ಅಂಗಡಿಯಲ್ಲಿ ಕತ್ತರಿಸಿ ಎಸೆಯುವ ಬಟ್ಟೆಯನ್ನು ತಂದು, ಅದನ್ನು ಬೇಕಾದ ಅಳತೆಗೆ ಕತ್ತರಿಸಿ, ಬೇರೆ ಬೇರೆ ಬಣ್ಣದ ಚೂರುಗಳನ್ನು ಜೋಡಿಸಿ ಮ್ಯಾಟ್ ಹೆಣೆಯುತ್ತಾರೆ.
ಸುಲೋಚನಾರ ಬಳಿ, ಎರಡು ಅಡಿ ಉದ್ದ, ಒಂದಡಿ ಅಗಲದ ವಿಶಿಷ್ಟ ಚೌಕಟ್ಟು ಇದೆ. ಪೈಪುಗಳನ್ನು ಬಳಸಿ ಚೌಕಟ್ಟನ್ನು ಅವರೇ ತಯಾರಿಸಿದ್ದಾರೆ. ಅದರ ಸಹಾಯದಿಂದ ಚೌಕಾಕೃತಿಯ ಮ್ಯಾಟ್‌ಗಳನ್ನು ತಯಾರಿಸುತ್ತಾರೆ. ಮನೆಯ ಎಲ್ಲ ಕೆಲಸಗಳ ಜೊತೆಗೆ, ದಿನಕ್ಕೆ ಒಂದು ಮ್ಯಾಟ್ ತಯಾರಿಸಬಹುದು. ಎಷ್ಟು ತಯಾರಿಸಿದರೂ ಪೇಟೆಯ ಫ್ಯಾನ್ಸಿ ಅಂಗಡಿಗಳಲ್ಲಿ ಬೇಡಿಕೆಯಿದೆ.
ಸಣ್ಣ ವಯಸ್ಸಿಗೇ ಮದುವೆ
ಸುಲೋಚನಾ, ಕಾಸರಗೋಡಿನ ನೀರ್ಚಾಲುವಿನ ಶಿಕ್ಷಕ ಈಶ್ವರ ಭಟ್ಟರನ್ನು ಮದುವೆಯಾದಾಗ ಒಂಬತ್ತನೆಯ ತರಗತಿ ಮುಗಿಸಿದ್ದರಷ್ಟೆ. ಆದರೆ, ಅವರು ಅಡುಗೆಮನೆಗೆ ಸೀಮಿತರಾಗಿ ಉಳಿಯಲಿಲ್ಲ. ಅವರಿವರನ್ನು ನೋಡಿ ಬಟ್ಟೆ ಹೊಲಿಯುವುದನ್ನು ಕಲಿತು, ಹೊಲಿಗೆ ಯಂತ್ರ ತಂದು ಸಂಪಾದನೆಗೆ ತೊಡಗಿದರು. ನೈಟಿ, ರವಿಕೆ, ಚೂಡಿದಾರವನ್ನಷ್ಟೇ ಅಲ್ಲ, ವಯರಿನ ಚೀಲ, ವ್ಯಾನಿಟಿ ಬ್ಯಾಗ್‌ಗಳನ್ನೂ ಹೊಲೆಯುತ್ತಾರೆ.
ನನ್ನ ಬಗ್ಗೆ ಹೆಮ್ಮೆ ಇದೆ…
ಹತ್ತು ವರ್ಷಗಳಲ್ಲಿ 3.5 ಲಕ್ಷ ರೂ. ಉಳಿತಾಯ ಮಾಡಿದ್ದ ಇವರು ಆ ಹಣವನ್ನು, ಬ್ಯಾಂಕ್ ಸಾಲ ಮಾಡದೆ ಮನೆ ನಿರ್ಮಿಸಲು ಬಳಸಿದರಂತೆ. ಸ್ವಂತ ಸೂರಿಗೆ ನೆರವಾದ ತನ್ನ ದುಡಿಮೆಯ ಬಗ್ಗೆ ಹೆಮ್ಮೆ ಇದೆ ಅಂತಾರೆ ಸುಲೋಚನ. ಮ್ಯಾಟ್ ತಯಾರಿಕೆ ಕಲಿಯಲು ಆಸಕ್ತಿ ಇದ್ದವರು ಇವರನ್ನು (7012355875) ಸಂಪರ್ಕಿಸಬಹುದು.
ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.