ಬಾಳ ಸಂಜೆಯಲಿ ಸಿಹಿನೆನಪು ತುಂಬಿರಲಿ


Team Udayavani, Oct 16, 2019, 4:15 AM IST

u-6

ಸ್ವಾಮಿಯವರ ಪ್ರತಿದಿನದ ದಿನಚರಿಯು ಸಮರ್ಪಕವಾಗಿತ್ತು. ಮಕ್ಕಳಿಬ್ಬರೂ ಅಮೆರಿಕದಲ್ಲಿದ್ದು, ಆಗ್ಗಾಗ್ಗೆ ಬಂದು-ಹೋಗಿ ಮಾಡುತ್ತಾರೆ. ಇವರೂ ಅಮೆರಿಕಾಕ್ಕೆ ಹೋಗುತ್ತಿರುತ್ತಾರೆ. ಧರ್ಮಪತ್ನಿಯ ಬಗ್ಗೆ ವಿಚಾರಿಸಿದಾಗ ಮಾತ್ರ ಅವರ ಧ್ವನಿ ಕುಗ್ಗಿತು.

ಎಪ್ಪತ್ತು ವರ್ಷದ ಸ್ವಾಮಿ ಅವರು ನನ್ನ ಮುಂದೆ ಕುಳಿತಿದ್ದರು. ಕೀಲು ನೋವು, ತಲೆಸುತ್ತು, ಅಜೀರ್ಣ, ಬಾಯಿ ಒಣಗುವುದು, ಮೂಗು ಕಟ್ಟಿ ಉಸಿರಾಟದ ಸಮಸ್ಯೆ, ನಿದ್ರಾಹೀನತೆ… ಹೀಗೆ, ಅನೇಕ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಎದೆ ನೋವು ಅವರನ್ನು ಆಸ್ಪತ್ರೆಗೆ ಕರೆತಂದಿತ್ತು. ಎದೆನೋವಿಗೆ, ಮಾನಸಿಕ ಒತ್ತಡವೇ ಕಾರಣ ಎಂಬ ಅಭಿಪ್ರಾಯದೊಡನೆ, ಹೃದ್ರೋಗ ತಜ್ಞರು ಸಮಾಲೋಚನೆಗಾಗಿ ಅವರನ್ನು ನನ್ನ ಬಳಿ ಕಳಿಸಿದ್ದರು.

ಸ್ವಾಮಿಯವರ ಪ್ರತಿದಿನದ ದಿನಚರಿಯು ಸಮರ್ಪಕವಾಗಿತ್ತು. ಮಕ್ಕಳಿಬ್ಬರೂ ಅಮೆರಿಕದಲ್ಲಿದ್ದು, ಆಗ್ಗಾಗ್ಗೆ ಬಂದು-ಹೋಗಿ ಮಾಡುತ್ತಾರೆ. ಇವರೂ ಅಮೆರಿಕಾಕ್ಕೆ ಹೋಗುತ್ತಿರುತ್ತಾರೆ. ಧರ್ಮಪತ್ನಿಯ ಬಗ್ಗೆ ವಿಚಾರಿಸಿದಾಗ ಮಾತ್ರ ಅವರ ಧ್ವನಿ ಕುಗ್ಗಿತು. ಮೂರು ವರ್ಷಗಳ ಹಿಂದೆ ನನ್ನನ್ನ ಒಂಟಿಯಾಗಿ ಬಿಟ್ಟು ಹೊರಟುಹೋದುÉ ಎಂದು ಹೇಳುವಾಗ ಕಣ್ಣಾಲಿಗಳು ತುಂಬಿದವು. ಅರವತ್ತೆರಡು ಸಾಯುವ ವಯಸ್ಸಲ್ಲ, ಆದರೆ, ದೈವೇಚ್ಚೆ ಎಂದರು. ಅವರಲ್ಲಿ ಶೂನ್ಯಭಾವ ಮನೆಮಾಡಿತು.

ಪತ್ನಿ ತೀರಿಕೊಂಡ ಸಮಯದಿಂದ ಅವರಿಗೆ ಒಂದಲ್ಲಾ ಒಂದು ಸಮಸ್ಯೆ ಬಾಧಿಸುತ್ತಿರುವುದು ಖಚಿತವಾಯಿತು. ಪತ್ನಿಯ ನೆನಪು ಸ್ವಾಮಿಯವರನ್ನು ಪ್ರತಿಕ್ಷಣವೂ ಪಾಪಪ್ರಜ್ಞೆಯಿಂದ ನರಳುವಂತೆ ಮಾಡಿತ್ತು. ಮೊನ್ನೆ ಲಾಕರ್‌ ತೆಗೆದಾಗ, ಪತ್ನಿ ಬದುಕಿ¨ªಾಗ ಇವರೇ ಕೊಟ್ಟಿದ್ದ ಹೊಚ್ಚ ಹೊಸ ನೋಟಿನ ಕಂತೆ ಸಿಕ್ಕಿತಂತೆ. ಆಪತ್ಕಾಲಕ್ಕೆ ಬೇಕಾಗಬಹುದೆಂದು ಪತ್ನಿ ಆ ಹಣವನ್ನು ಖರ್ಚು ಮಾಡಿರಲಿಲ್ಲ. ಅವಳು ದುಂದುವೆಚ್ಚ ಮಾಡುತ್ತಾಳೆ ಎಂದು ತಪ್ಪು ತಿಳಿದಿದ್ದೆನಲ್ಲಾ ಎಂದು ಬೇಸರವಾಗಿ, ಇವರಿಗೆ ಎದೆನೋವು ಬಂದಿದೆ.

ಅನೇಕ ಪುರುಷರಿಗೆ, ಸಂಸಾರದಲ್ಲಿ ಸಂಗಾತಿಯ ಮಹತ್ವ ಅರಿವಾಗುವುದು, ಪತ್ನಿ ತೀರಿಹೋದ ಮೇಲೆಯೇ. ಒಂದು ಮೊಳ ಹೂವು ಕೊಡಿಸಲು ಜಗಳವಾಡಿರುತ್ತಾರೆ. ಆಕೆ ದುಂಡು ಮಲ್ಲಿಗೆಯನ್ನು ಕೈಯಲ್ಲಿ ಹಿಡಿದು, ಇನ್ನೇನು ಮುಡಿಗೇರಿಸಿದೆ ಎನ್ನುವ ಸಂಭ್ರಮದಲ್ಲಿ¨ªಾಗ, “ದುಡ್ಡಿನ ಬೆಲೆ ಗೊತ್ತಿಲ್ಲವಾ?’ ಎಂದು ಸಿಡುಕಿರುತ್ತಾರೆ. ಕೈಗೆ ಬಂದ ಮಲ್ಲಿಗೆ ಮುಡಿಗೇರುವುದಿಲ್ಲ. ಅಂದು ಅವಳ ಕಣ್ಣಾಲಿಗಳು ತುಂಬಿರುತ್ತವೆ. ಇಂದು ಮಾರುಕಟ್ಟೆಗೆ ಹೋದಾಗ ಹಳೆಯ ನೆನಪುಗಳು ಇವರನ್ನು ಕಾಡಿ, ಹಿಂಸಿಸುತ್ತವೆ.

ಅಂದು ಸೀಗೆಪುಡಿಯ ಘಾಟು ಎಂದು ಜಗಳವಾದರೆ, ಇಂದು ಸ್ನಾನದ ಮನೆ ನಿರ್ಜೀವ. ಅಡುಗೆ ಮನೆಯಲ್ಲಿ ತೆಂಗಿನಕಾಯಿ ತುರಿಯುವ ಸದ್ದೇ ಇಲ್ಲ. ಅವಳ ಕೈ ರುಚಿ ಈಗೆಲ್ಲಿ? ಅಡುಗೆ ಕಟ್ಟೆಯನ್ನು ಸವರುತ್ತಾರೆ. ದೇವರ ಮನೆಗೆ ರಂಗೋಲಿ ಕಳೆಯೇ ಇಲ್ಲ.

ಇಂದು ಹೆಜ್ಜೆ ಹೆಜ್ಜೆಗೂ ಹೆಂಡತಿ ನೆನಪಾಗುತ್ತಾಳೆ. ಅಂದು, ಕಾಫಿ ಕೊಡಲು ತಡವಾದರೆ ಸಿಟ್ಟಿನಿಂದ ಕೂಗಾಡುತ್ತಿದ್ದರಂತೆ. ಈಗ ಕಾಫಿ ತಂದು ಕೊಡುವವರೇ ಇಲ್ಲ.

ವಯಸ್ಸಾದ ಮೇಲೆ ಒಂಟಿತನ, ಮಾನಸಿಕ ವ್ಯಥೆ ಒಂದೆಡೆಯಾದರೆ, ಶಾರೀರಕ ಸಮಸ್ಯೆಗಳು ಇನ್ನೊಂದೆಡೆ. ನಾನು ಅವಳನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎನ್ನುವ ದುಃಖ, ಪಾಪಪ್ರಜ್ಞೆಯಿಂದ ಶರೀರ ಮತ್ತಷ್ಟು ಕುಸಿಯುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫ‌ಲವಿಲ್ಲ ಎನ್ನುವಂತೆ, ಬದುಕಿದ್ದಾಗ ಹೆಂಡತಿಯನ್ನು ನೋಯಿಸಿ, ನಂತರ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ. ಹಾಗಾಗಿ, ಗಂಡಸರೇ ನೆನಪಿಡಿ, ಮೃದು ಹೃದಯಿ ಮಡದಿಯನ್ನು ಪೌರುಷದಲ್ಲಿ ಜಗ್ಗಬೇಡಿ. ಆಕೆಯೊಡನೆ ಅಕ್ಕರೆಯಿಂದ ಮಾತನಾಡಿ. ಸಂಸಾರದ ನೊಗ ಹೊತ್ತವಳ ಬದುಕಿಗೆ ಸಂಭ್ರಮ ತುಂಬಿ. ಅವಳನ್ನು ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ. ಮನಸಿನ ಮಂದಿರದಲ್ಲಿ ಮಧುರ ನೆನಪುಗಳೇ ತುಂಬಿಕೊಳ್ಳಲಿ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

10-bantwala

Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

10-bantwala

Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.