ಕೋಪದ ಕೂಪದೊಳಗೆ ಮೆನೋಪಾಸ್‌!


Team Udayavani, Jul 25, 2018, 6:00 AM IST

3.jpg

ನಲವತ್ತೈದು ವರ್ಷದ ಶಿಲ್ಪಾ ಮುಂಚೆ ಹೀಗಿರಲಿಲ್ಲ! ಇತ್ತೀಚೆಗೆ ಬೆಳಗ್ಗೆ ಹಾಸಿಗೆಯಿಂದ ಏಳಬೇಕಾದರೆ ಯಮಯಾತನೆ. ಪಟಪಟ ಕೆಲಸ ಮಾಡುತ್ತಿದ್ದ ಈಕೆ, ಈಗ ಸಿಟಸಿಟ ಅಂತ ಎಲ್ಲರ ಮೇಲೂ ಸಿಡುಕುತ್ತಾರೆ. ಮಾತು ತೀಕ್ಷ್ಣ.  ಜೊತೆಗೆ ಎದೆ ಉರಿ, ಹೊಟ್ಟೆಯಲ್ಲಿ ಸಂಕಟ, ವಾಂತಿ ಬರೋಹಾಗೆ ಅನಿಸಿ ಊಟ ಸೇರುವುದೇ ಇಲ್ಲ, ಆದರೂ ಅಡುಗೆ ಮಾಡಬೇಕು. ಮೈಯೆಲ್ಲಾ ಬೆವರು, ಇಲ್ಲ ಚಳಿ ಚಳಿ ಎನಿಸಿ, ಎದೆ ಢವಢವ ಹೊಡೆದುಕೊಳ್ಳುತ್ತದೆ. ಭಾನುವಾರಗಳಂದು ಮಕ್ಕಳೊಡನೆ ನಾದಿನಿ ಬಂದುಬಿಡುತ್ತಾಳೆ. ಕಣ್ಣು ತುಂಬಾ ನಿದ್ದೆಮಾಡಿ ಯಾವ ಕಾಲವಾಯಿತು!

  ಅವತ್ತು, ಅತ್ತೆ, ನಾದಿನಿ ಮತ್ತು ಗಂಡ ರೂಮಿನಲ್ಲಿ ಮಾತಾಡುತ್ತಿದ್ದಾಗ, ಶಿಲ್ಪಾ ಕಾಫೀ ತೆಗೆದುಕೊಂಡು ಬಂದ ತಕ್ಷಣ ಮೂವರೂ ವಿಷಯ ಬದಲಾಯಿಸಿದ್ದಾರೆ. ಗುಟ್ಟು ಮಾತಾಡಿಕೊಳ್ಳಲು ಶಿಲ್ಪಾ ಹೊರಗಿನವಳೇ? ಮನೆ ಕೆಲಸದವಳೇ? ಅವರೆಲ್ಲಾ ಒಂದಾಗಿ ಶಿಲ್ಪಾಳನ್ನು ದಬಾಯಿಸಲು, ಅತ್ತುಬಿಟ್ಟಿದ್ದಾರೆ. ನಾದಿನಿ ಮತ್ತು ಗಂಡ ಮಾತುಬಿಟ್ಟಿದ್ದಾರೆ. ಅತ್ತೆಗೆ ಮುನಿಸು.

  ಕೌನ್ಸೆಲಿಂಗ್‌ ಮಾಡಿಸಲು ಪತಿ ಶಂಕರ್‌, ಶಿಲ್ಪಾರನ್ನು ನನ್ನ ಬಳಿ ಕರಕೊಂಡು ಬಂದಿದ್ದರು. “ಅನ್ಯಾಯಕ್ಕೆ ಪ್ರತಿಭಟಿಸಿದರೆ, ನನಗೆ ಮನೋರೋಗವೆಂಬ ಪಟ್ಟ ಕಟ್ಟುತ್ತಾರೆ?’ ಎಂಬುದು ಶಿಲ್ಪಾಳ ಪ್ರಶ್ನೆ. ಗಂಡನಿಗೆ ತನ್ನ ತಮ್ಮ- ತಂಗಿಯ ಮೇಲೆ ಇರುವ ವಾತ್ಸಲ್ಯ ಹೆಂಡತಿಯ ಮೇಲೇಕೆ ಇರುವುದಿಲ್ಲ?

  ಸೌಮ್ಯವಾಗಿದ್ದ ಶಿಲ್ಪಾ ಹಠಾತ್ತಾಗಿ ಗಡಸಾಗಲು ಕಾರಣ ಮನೋರೋಗವಲ್ಲ. ಕುಟುಂಬಕ್ಕೆಲ್ಲಾ ನಿರಂತರವಾಗಿ ದುಡಿಯುವ ಹೆಣ್ಣಿಗೆ ಕಿಂಚಿತ್‌ ಪ್ರೀತಿ ಅವಳಿಗೆ ಬೇಕಾದ ಹಾಗೆ ಸಿಗದಿದ್ದರೆ ಹತಾಶೆ ಮೈದಳೆಯುತ್ತದೆ. ಕಹಿಯಾದ  ಕೌಟುಂಬಿಕ ವರ್ತಮಾನಗಳು ಶಕ್ತಿಯನ್ನು ಉಡುಗಿಸುತ್ತದೆ. ಜೊತೆಗೆ, ವಯಸ್ಸು ನಲವತ್ತಾದ ಮೇಲೆ, ಮುಟ್ಟು ನಿಲ್ಲುವ ಪ್ರಕಿಯೆಯಲ್ಲಿ ಈಸ್ಟ್ರೊಜೆನ್‌ ಹಾರ್ಮೋನು ಕ್ರಮೇಣ ಕಡಿಮೆಯಾಗಿ ಅವಳಲ್ಲಿ ಸಿಟ್ಟು- ಕೋಪ ತರಿಸುತ್ತದೆ. (ಹೆಣ್ಣಿನ ವಾತ್ಸಲ್ಯಕ್ಕೆ ಈ ಹಾರ್ಮೋನುಗಳು ಕಾರಣ ಎಂದು ಅಧ್ಯಯನ ತಿಳಿಸುತ್ತದೆ). ಹಾಗೆಯೇ ಸಂಸಾರದಲ್ಲಿ, ಪ್ರತಿಭಟಿಸುವ ಮಗಳು, ಹೆದರುಪುಕ್ಕಲ ಮಗ, ತಮ್ಮಂದಿರಿಗೆ ಆಸ್ತಿ ಬರೆದುಕೊಡುವ ಗಂಡ, ಸರೀನೇ ಹೋಗದ ಅತ್ತೆಯ ಗೆಳೆತನ, ಮಾವನ ಅಧಿಕಾರಯುತ ವಾಣಿ, ಮತ್ತೆ ಬೇಡದಕ್ಕೆ ತಲೆ ಹಾಕುವ ನಾದಿನಿಯ ಮಧ್ಯೆ, ಜೀವನ ದಂಡ ಆಗೋಯ್ತಲ್ಲಾ ಎನಿಸುತ್ತದೆ. ಸಿಡುಕು ತಂತಾನೇ ಬರುತ್ತದೆ.

   ಮಹಿಳೆಯರು ಅನಗತ್ಯ ಕೌಟುಂಬಿಕ ಜವಾಬ್ದಾರಿಯನ್ನು ಹೊರುವ ಅಗತ್ಯವಿಲ್ಲ. ಅಡುಗೆ ಮನೆಯಿಂದ ಈಚೆ ಬರಬೇಕು. ಸಾಮಾಜಿಕ ಚಟುವಟಿಕೆಗೆ ಸಮಯ ಮೀಸಲಿಡಿ, ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಹೊರಗಿನ ಪ್ರಪಂಚದ ಜೊತೆಗೆ ಬೆರೆಯಿರಿ. ಅತಿಯಾಗಿ ಯಾರ ಸೇವೆಯನ್ನೂ ಮಾಡುವ ಅಗತ್ಯವಿಲ್ಲ. ಕುಟುಂಬದ ಸದಸ್ಯರನ್ನು ಸಬಲಗೊಳಿಸಿ. ಸ್ವಲ್ಪ ಮಟ್ಟಿಗೆ ಸ್ವಾರ್ಥ ಮೈಗೂಡಿಸಿಕೊಳ್ಳಿ. ಪತಿಗೆ ಅವರ ನಡವಳಿಕೆ ತಿದ್ದಿಕೊಳ್ಳುವ ಸಂಯಮವಿತ್ತು. ಇಬ್ಬರೂ ಸಮಾಧಾನಗೊಂಡರು. ಈಗ ಎಲ್ಲರೂ ಚೆನ್ನಾಗಿದ್ದಾರೆ.

(ವಿ.ಸೂ. ಮುಟ್ಟಿನ ಸಮಯದಲ್ಲಿ, ಗರ್ಭಿಣಿಯಾದಾಗ, ಹಾಲೂಡಿಸುವ ಸಂದರ್ಭದಲ್ಲಿ ಮತ್ತು ಮುಟ್ಟುನಿಲ್ಲುವ ಸಮಯದಲ್ಲಿ ಹಾರ್ಮೋನುಗಳ ಏರುಪೇರಾಗುತ್ತದೆ. ಇಂಥ ವೇಳೆ ಪ್ರೀತಿಯೇ ಮದ್ದು)

ಶುಭಾ ಮಧುಸೂದನ್‌

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.