ಮೈಕ್ರೋ ಪರ್ಸ್
Team Udayavani, Jan 16, 2019, 12:30 AM IST
ತನ್ನ ಹೆಸರಿನಂತೆ ನೋಡಲು ಪುಟ್ಟದಾಗಿರುವ ಮೈಕ್ರೋಪರ್ಸ್ ಅನ್ನು ಬ್ರ್ಯಾಂಡ್ ಮಾಡಿದ್ದೇ, ಚಿತ್ರನಟಿಯರು. ಇಷ್ಟು ಚಿಕ್ಕ ಪರ್ಸ್‌ನಲ್ಲಿ ಅದೇನೇನು ತೆಗೆದುಕೊಂಡು ಹೋಗಬಹುದು ಎಂದು ಯೋಚಿಸುತ್ತಿದ್ದೀರಾ? ಮೊಬೈಲ್ ಫೋನ್, ಮನೆ ಅಥವಾ ಗಾಡಿ ಕೀ, ದುಡ್ಡು ಮತ್ತು ಐಡಿ ಕಾರ್ಡ್‌ಗಳನ್ನು ಖಂಡಿತಾ ಇಡಬಹುದು…
2019ರ ಫ್ಯಾಷನ್ ಬ್ರ್ಯಾಂಡ್‌ಗಳಲ್ಲಿ ಬಹಳ ಸುದ್ದಿ ಮಾಡುತ್ತಿರುವ ಟ್ರೆಂಡ್ ಎಂದರೆ ಮೈಕ್ರೋಬ್ಯಾಗ್ ಅಥವಾ ಮೈಕ್ರೋಪರ್ಸ್. ಕ್ಲಚ್‌ಗಿಂತ ದೊಡ್ಡದಾದ ಮತ್ತು ಹ್ಯಾಂಡ್ ಬ್ಯಾಗ್‌ಗಿಂತ ಚಿಕ್ಕದಾದ ಈ ಮೈಕ್ರೋ ಬ್ಯಾಗ್ ಅನ್ನು ಕ್ಲಚ್‌ನಂತೆಯೇ ಅಂಗೈಯಲ್ಲಿ ಹಿಡಿದುಕೊಂಡು ಹೋಗಬಹುದು. ಅಥವಾ ಉದ್ದನೆಯ ಸ್ಟ್ರಾಪ್ ಬಳಸಿ, ಶೋಲ್ಡರ್ ರಿಂಗ್‌ನಂತೆಯೂ ನೇತಾಡಿಸಿಕೊಂಡು ಹೋಗಬಹುದು. ಈ ಆಕ್ಸೆಸರಿ ಈ ಪರಿ ಟ್ರೆಂಡ್ ಆಗುವುದಕ್ಕೆ ನಟಿ ಪ್ರಿಯಾಂಕಾ ಚೋಪ್ರಾ ಕಾರಣ ಎಂದರೆ ತಪ್ಪಾಗಲಾರದು. ಏಕೆಂದರೆ, ಒಂದೇ ವಾರದಲ್ಲಿ ತನ್ನ ಬಗೆ- ಬಗೆಯ ಉಡುಪಿಗೆ ಹೋಲುವಂಥ 4 ಬೇರೆ- ಬೇರೆ ತರಹದ ಮೈಕ್ರೋ ಬ್ಯಾಗ್‌ಗಳನ್ನು ಹಿಡಿದುಕೊಂಡು, ಓಡಾಡಿದ್ದನ್ನು ಕ್ಯಾಮೆರಾಮನ್‌ಗಳು ಕ್ಲಿಕ್ಕಿಸಿ, ಮಾಧ್ಯಮದವರು ಮುದ್ರಿಸಿದ್ದೇ ತಡ, ಅಭಿಮಾನಿಗಳೂ ಅದೇ ರೀತಿ ಚಿಕ್ಕದಾದ – ಚೊಕ್ಕದಾದ ಬ್ಯಾಗ್‌ಗಳನ್ನು ಖರೀದಿಸಲು ಮುಂದಾದರು. ಗಾಯಕಿ ಡುವಾ ಲಿಪ ಸೇರಿದಂತೆ ಕೆಂಡಾಲ್ ಜೆನ್ನರ್, ಸಾರಾ ಪಿಂಟೋ, ಬೆಲ್ಲಾಹದೀದ್, ಜೀಜೀ ಹದೀದ್‌ನಂಥ ಹೆಸರಾಂತ ಮಾಡೆಲ್‌ಗಳು, ಹೋದಲ್ಲೆಲ್ಲ ಈ ಮೈಕ್ರೋ ಬ್ಯಾಗ್‌ಗಳನ್ನು ಕೊಂಡೊಯ್ಯುತ್ತಿದ್ದರು. ಹಾಗಾಗಿ, ಈ ಮೈಕ್ರೋಬ್ಯಾಗ್‌ಗೆ ಬೇಡಿಕೆ ಹೆಚ್ಚೇ ಆಯಿತು.
ಹಾಲಿವುಡ್ ನಟಿಯರು, ಗಾಯಕಿಯರು ಮತ್ತು ಮಾಡೆಲ್‌ಗಳು ಈ ಫ್ಯಾಷನ್ ಟ್ರೆಂಡ್ ಅನ್ನು ಫಾಲೋ ಮಾಡುತ್ತಿರುವಾಗ ಬಾಲಿವುಡ್ ನಟಿಯರು ಹಿಂದೆ ಉಳಿಯಲು ಹೇಗೆ ಸಾಧ್ಯ? ನಟಿಯರಾದ ಕಂಗನಾ ರಣಾವತ್ ಮತ್ತು ಸೋನಂ ಕಪೂರ್ ಕೂಡ ಮೈಕ್ರೋ ಬ್ಯಾಗ್‌ಗಳು ಭಾರತದಲ್ಲಿ ಟ್ರೆಂಡ್ ಆಗಲು ಕಾರಣರಾದರು.
ಏನನ್ನು ಇಟ್ಕೊಳ್ಳಬಹುದು?
ಇಷ್ಟು ಚಿಕ್ಕ ಪರ್ಸ್‌ನಲ್ಲಿ ಅದೇನೇನು ತೆಗೆದುಕೊಂಡು ಹೋಗಬಹುದು ಎಂದು ಯೋಚಿಸುತ್ತಿದ್ದೀರಾ? ಮೊಬೈಲ್ ಫೋನ್, ಮನೆ ಅಥವಾ ಗಾಡಿ ಕೀ, ದುಡ್ಡು ಮತ್ತು ಐಡಿ ಕಾರ್ಡ್‌ಗಳನ್ನು ಖಂಡಿತಾ ಇಡಬಹುದು. ಮೇಕಪ್ ಬಳಸಲು ಇಷ್ಟಪಡುವವರು ಲಿಪ್‌ಸ್ಟಿಕ್, ಕಣ್‌ಕಪ್ಪು, ನೈಲ್ ಪಾಲಿಶ್ ಅಥವಾ ಚಿಕ್ಕ ಪರ್ಫ್ಯೂಮ… ಅನ್ನು ಇಟ್ಟುಕೊಳ್ಳಬಹುದು. ದೊಡ್ಡ ಗಾತ್ರದ ಬ್ಯಾಗಿನಲ್ಲಿ ಇವುಗಳನ್ನು ಹುಡುಕುವುದು ಕೆಲವೊಮ್ಮೆ ಕಷ್ಟವಾಗುತ್ತದೆ. ಬೇಕೆಂದಾಗ ಕೈಗೆ ಸಿಗದ ಪೆನ್, ಬೀಗದ ಕೈ ಮತ್ತು ಇನ್ನಿತರ ಚಿಕ್ಕಪುಟ್ಟ ವಸ್ತುಗಳನ್ನು ಈ ಮೈಕ್ರೋಪರ್ಸ್‌ನಲ್ಲಿ ಸುಲಭವಾಗಿ ಹುಡುಕಬಹುದು.
ಇನ್ನು ಕೆಲವರು ಈ ಮೈಕ್ರೋಪರ್ಸ್‌ನಲ್ಲಿ ಕೇವಲ ನಾಣ್ಯಗಳನ್ನು ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಮತ್ತದನ್ನು, ತಮ್ಮ ದೊಡ್ಡ ಹ್ಯಾಂಡ್ ಬ್ಯಾಗ್‌ಗೆ ಜೋತು ಹಾಕಿಕೊಳ್ಳುತ್ತಾರೆ. ಅಮ್ಮ ಮತ್ತು ಮಗುವಿನಂತೆ ದೊಡ್ಡ ಬ್ಯಾಗ್ ಹಾಗೂ ಮೈಕ್ರೋ ಪರ್ಸ್ ಅನ್ನು ಜೊತೆಗೆ ಕೊಂಡು ಹೋಗುತ್ತಾರೆ. ಬಹಳಷ್ಟು ಫ್ಯಾಷನ್ ವಿನ್ಯಾಸಕರು ಇದಕ್ಕೆಂದೇ ತಾವು ತಯಾರಿಸುವ ಹ್ಯಾಂಡ್‌ಬ್ಯಾಗ್ ಜೊತೆ ಚಿಕ್ಕದೊಂದು ಬ್ಯಾಗ್ ಕೂಡ ನೀಡುತ್ತಾರೆ.
ಬ್ರ್ಯಾಂಡ್‌ಗಳಿಗೇ ಬೇಡಿಕೆ
ಲೂಯಿವಿಟಾನ್, ಶಾನಾಲ…, ಗುಚ್ಚಿ, ರಿಬೆಕಾ ಮಿಂಕಾಫ್, ಡೋಲ್ಚೆ ಆ್ಯಂಡ್ ಗಬ್ಟಾನದಂಥ ಅನೇಕ ಪ್ರಸಿದ್ಧ ಬ್ರ್ಯಾಂಡ್‌ಗಳ ಮೈಕ್ರೋ ಪರ್ಸ್‌ಗಳು ಬಹಳಷ್ಟು ದುಬಾರಿಯಾಗಿದ್ದರೂ ಅವುಗಳಿಗೆ ತುಂಬಾನೇ ಬೇಡಿಕೆ ಇವೆ. ವೃತ್ತಾಕಾರ, ಚೌಕಾಕಾರ, ತ್ರಿಕೋನ ಆಕಾರದ ಮೈಕ್ರೋಪರ್ಸ್‌ಗಳು, ಬಟ್ಟೆಗಳ ಚಿಕ್ಕ ಮೂಟೆಯಂತೆ ಕಾಣುವ ಮೈಕ್ರೋಪರ್ಸ್‌ಗಳು, ಬಟ್ಟೆಗಳ ಚಿಕ್ಕ ಮೂಟೆಯಂತೆ ಕಾಣುವ ಮೈಕ್ರೋಪರ್ಸ್‌ಗಳು, ಬುಟ್ಟಿ, ಡಬ್ಬ, ಜೇಬು ಹಾಗೂ ಲೋಹದ ಚಿಕ್ಕ ಪೆಟ್ಟಿಗೆಯಂತೆ ಕಾಣುವ ಮೈಕ್ರೋ ಪರ್ಸ್‌ಗಳು… ಹೀಗೆ ಬಗೆ- ಬಗೆಯ ಬಣ್ಣದ, ಆಕಾರದ, ವಿನ್ಯಾಸದ ಮೈಕ್ರೋಪರ್ಸ್‌ಗಳು ಮಾರುಕಟ್ಟೆಗೆ ಬರುತ್ತಲೇ ಇವೆ. ಜನರು ಅವುಗಳನ್ನು ಖರೀದಿಸುತ್ತಲೇ ಇದ್ದಾರೆ.
ನೀವೂ ಮೈಕ್ರೋಪರ್ಸ್ ಜೊತೆ ಹೊಸ ವರ್ಷಕೆ ಹೊಸ ಸ್ಟೈಲ್ ಮಾಡಿ ನೋಡಿ.
ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.