ಅಮ್ಮಾ, ಇಲ್ಕೇಳಮ್ಮಾ…
ಅಮ್ಮಂದಿರಿಗೆ ಅಮೂಲ್ಯ ಟಿಪ್ಸ್...
Team Udayavani, Sep 25, 2019, 5:00 AM IST
ಚಿತ್ರಪಟದಲ್ಲಿನ ದೇವರಿಗೆ ಎಂಟು ಕೈಗಳಾದರೆ, ಅಮ್ಮನಿಗೆ ಎರಡೇ ಕೈ. ಆದರೂ, ಅಮ್ಮ ಒಟ್ಟಿಗೇ ಹತ್ತಾರು ಕೆಲಸಗಳನ್ನು ನಿರ್ವಹಿಸಬಲ್ಲ ಚತುರೆ. ಅದಕ್ಕೇ ಅಲ್ವಾ ಅಮ್ಮನನ್ನು ದೇವರು ಅನ್ನೋದು? ಆದ್ರೆ, ನಾನು ಹೇಳ್ತಾ ಇದ್ದೀನಿ. ಅಮ್ಮ ದೇವರಲ್ಲ! ಯಾಕೆ ಗೊತ್ತಾ? ದೇವರನ್ನು ಕಾಡದ ಸುಸ್ತು, ನಿಶ್ಶಕ್ತಿ, ಚಿಂತೆ, ಖನ್ನತೆಗಳಿಂದ ಆಕೆ ಮುಕ್ತಳಲ್ಲ. ಈ ಎಲ್ಲ ಸಮಸ್ಯೆಗಳು ಕಾಡುತ್ತಿದ್ದರೂ, ಏನೂ ಆಗೇ ಇಲ್ಲ ಅನ್ನೋ ಆಕೆಯ ಗುಣವಿದೆಯಲ್ಲ, ಅದೇ ಅವಳನ್ನು ದೇವರಾಗಿಸಿರೋದು. ಅಮ್ಮ ಯಾವತ್ತೂ ಚೆನ್ನಾಗಿರಬೇಕು ಅನ್ನೋದು ಎಲ್ಲರ ಆಸೆ-ಆಶಯ. ಸದಾ ಖುಷ್ ಖುಷಿಯಾಗಿರು ಅನ್ನುತ್ತಲೇ, ಅಮ್ಮಂದಿರಿಗೆ ಹೇಳಬಹುದಾದ ಟಿಪ್ಸ್‌ಗಳು ಇಲ್ಲಿವೆ…
-ನಿನ್ನ ದಿನ ಪ್ರಶಾಂತವಾಗಿ ಶುರುವಾಗಲಿ. ಎದ್ದ ಕೂಡಲೇ, ಇದ್ದಬದ್ದ ಟೆನ್ಸ್ ನ್‌ಗಳನ್ನೆಲ್ಲ ತಲೆ ಮೇಲೆ ಎಳೆದುಕೊಳ್ಳಬೇಡ.
– ಬೆಳಗ್ಗೆ ಅರ್ಧ ಗಂಟೆಯನ್ನು ಧ್ಯಾನ-ವ್ಯಾಯಾಮಕ್ಕೆ ಮೀಸಲಿಡು.
– ಎಷ್ಟೇ ಕೆಲಸವಿದ್ದರೂ, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಿನ್ನುವುದನ್ನು ಮರೆಯಬೇಡ.
– ವಾರದಲ್ಲಿ ಎರಡು ಬಾರಿಯಾದರೂ ಮುಖಕ್ಕೆ ಮಸಾಜ್ ಮಾಡು. ಕಣ್ಣು, ಕೆನ್ನೆ, ಹಣೆಗೆ ಮಸಾಜ್ ಮಾಡಿದರೆ, ರಕ್ತ ಸಂಚಾರ ಸರಾಗವಾಗಿ ಒತ್ತಡವನ್ನು ತಗ್ಗಿಸುತ್ತದೆ.
– ದಿನಾ ಧೂಳಿನಲ್ಲಿ ಪ್ರಯಾಣಿಸಬೇಕಾದಾಗ, ತ್ವಚೆಯ ಕಡೆಗೆ ಗಮನ ಕೊಡು. ಆಗಾಗ ತಣ್ಣೀರಿನಲ್ಲಿ ಮುಖ ತೊಳೆದುಕೋ.
– ವಾರಕ್ಕೊಮ್ಮೆಯಾದರೂ, ನಿನ್ನ ಪಾದಗಳಿಗೆ ಆರಾಮ ನೀಡು. ಒಂದು ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರು ಮತ್ತು ಉಪ್ಪು ಹಾಕಿ, ಕಾಲನ್ನು ಅದ್ದಿ ಕುಳಿತುಕೋ.
– ಟಿ.ವಿ. ನೋಡುವ, ಓದುವ, ಹಾಡು ಕೇಳುವಂಥ ಹವ್ಯಾಸಗಳಿಗಾಗಿ ದಿನದ ಕೆಲ ಗಂಟೆಗಳನ್ನು ಮೀಸಲಿಡು.
-ಮುಂಗೈ ಮಣಿಕಟ್ಟು, ಬೆರಳಿನ ಗಂಟುಗಳಲ್ಲಿರುವ ಅಕ್ಯುಪ್ರಷರ್ ಬಿಂದುಗಳನ್ನು ಗುರುತಿಸಿ, ಒತ್ತಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ.
-ಬೆಳಗ್ಗೆಯಿಂದ ದುಡೀತೀಯ. ದೇಹ ದಣಿದಿರುತ್ತೆ. ಸಂಜೆ ಅರ್ಧಗಂಟೆಯಾದರೂ ನಿದ್ರೆ ಮಾಡು.
– ತಿಂಗಳಿನ ಆ ಮೂರು ದಿನಗಳಲ್ಲಾದರೂ ಕೆಲಸ ಕಡಿಮೆ ಮಾಡು.
-ನಿನ್ನ ಶಾಲೆ-ಕಾಲೇಜು ಗೆಳತಿಯರಿಗೆ ಆಗಾಗ್ಗೆ ಫೋನ್ ಮಾಡುತ್ತಿರು. ಮೂರ್ನಾಲ್ಕು ತಿಂಗಳಿಗೊಮ್ಮೆಯಾದರೂ ಅವರನ್ನು ಭೇಟಿಯಾಗು.
-ಆರು ತಿಂಗಳಿಗೊಮ್ಮೆ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೋ.
-ಜ್ಯೋತಿ ಪುರದ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್ ರಗಳೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.