ಅಮ್ಮನ ಸಂಶೋಧನೆ, ಸೋಯಾ ಮಂಚೂರಿ
Team Udayavani, May 30, 2018, 12:31 PM IST
“ಅಮ್ಮಾ, ಇವತ್ತೇನಾದ್ರು ಸ್ಪೆಷಲ್ ಮಾಡಮ್ಮ’ ಅಂತ ಗೋಗರೆದರೆ, ನಾನು ಲಗೋರಿ ಆಡಿ ಬರೋದೊÅಳಗೆ ಏನಾದ್ರೂ ಒಂದು ಹೊಸ ತಿಂಡಿ ರೆಡಿ ಇರುತ್ತಿತ್ತು. ಎಷ್ಟೋ ಸಲ, ಅಡಿಗೆಮನೆಯ ಘಮಘಮ ಪರಿಮಳಕ್ಕೆ ಆಟವನ್ನು ಅರ್ಧಕ್ಕೇ ಬಿಟ್ಟು ಬಂದದ್ದಿದೆ. ಏನೇ ಮಾಡಿ ಕೊಟ್ಟರೂ ಅದರಲ್ಲಿ ತರಕಾರಿ ಹುಡುಕಿ, ಹೆಕ್ಕಿ ಪಕ್ಕಕ್ಕಿಡುವ ನನಗೆ ಬೈದು ಹೈರಾಣಾಗಿದ್ದ ಅಮ್ಮ ಕೊನೆಗೆ, ತರಕಾರಿ ಹಾಕದೆ ಹೇಗೆ ಪೌಷ್ಟಿಕಾಂಶಗಳನ್ನು ನನ್ನ ದೇಹದೊಳಗೆ ತುಂಬಿಸೋದು ಅನ್ನೋ ಸಂಶೋಧನೆಯಲ್ಲಿ ತೊಡಗಿದ್ದಳು. ಕೊನೆಗೆ ಅಂಥಾ ಒಂದು ಅಡುಗೆಯನ್ನು ಮಾಡಿಯೂಬಿಟ್ಟಳು. ಅದುವೇ ಸೋಯಾ ಮಂಚೂರಿ.
ನನ್ನಮ್ಮ ಅಡಿಗೆ ಮಾಡುವ ಕ್ರಮವೇ ಒಂಥರಾ ಚಂದ. ಅಚ್ಚುಕಟ್ಟು ಹಾಗೂ ಫಟಾಫಟ್. ಮನೆಗೆ ಬಂದ ಅತಿಥಿಗಳೆÇÉಾ ಅಮ್ಮ ಮಾಡಿದ ಕಾಫಿಯಿಂದ ಹಿಡಿದು, ಬಿಸಿಬೇಳೆಬಾತಿನವರೆಗೆ ಎಲ್ಲವನ್ನೂ ಚಪ್ಪರಿಸಿ, “ಸತ್ಯವತೀದು ಅಡುಗೆಯಂದ್ರೆ ಅಡುಗೆ!’ ಅಂದಾಗ, ಸತ್ಯವತಿ ನನ್ನಮ್ಮ ಅಂತ ಬೀಗುತ್ತಿ¨ªೆ. ಈಗ, ರೂಮಿನಲ್ಲಿ ಗೆಳತಿಯರಿಗೆ ಮಾಡಿ ಕೊಡುವ ಸೋಯಾ ಮಂಚೂರಿಗೆ ಅಮ್ಮನ ಕೈರುಚಿಯೇ ಇದೆ.
ಸೋಯಾ ಮಂಚೂರಿ ಮಾಡುವ ವಿಧಾನ:
ಬೇಕಾಗುವ ಸಾಮಗ್ರಿ: ಸೋಯಾಬೀನ್, ಮೈದಾಹಿಟ್ಟು, ಖಾರದಪುಡಿ, ಉಪ್ಪು, ಹಸಿಮೆಣಸು, ಶುಂಠಿ, ಈರುಳ್ಳಿ, ಎಣ್ಣೆ, ಟೊಮೆಟೊ ಸಾಸ್, ಸೋಯಾ ಸಾಸ್.
ಮಾಡುವ ವಿಧಾನ: ಸೋಯಾಬೀನ್ ಅನ್ನು ಹತ್ತು ನಿಮಿಷ ನೀರಲ್ಲಿ ನೆನೆಸಿಡಿ. ಮೈದಾ ಹಿಟ್ಟಿಗೆ ನೀರು, ಖಾರದಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕದಡಿ (ದೋಸೆ ಹಿಟ್ಟಿನ ಹದಕ್ಕೆ). ಕತ್ತರಿಸಿದ ಹಸಿಮೆಣಸು, ಶುಂಠಿ ಹಾಗೂ ಈರುಳ್ಳಿಯನ್ನು ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ. ನೆನೆಸಿದ ಸೋಯಾಬೀನ್ ಅನ್ನು ಒಂದೊಂದಾಗಿ ಮೈದಾ ಹಿಟ್ಟಿನಲ್ಲಿ ಅದ್ದಿ, ಕಾದ ಎಣ್ಣೆಯಲ್ಲಿ ಕರಿಯಿರಿ. ನಂತರ, ಹುರಿದ ಹಸಿಮೆಣಸಿನ ಕಾಯಿ, ಶುಂಠಿ ಹಾಗೂ ಈರುಳ್ಳಿಯ ಜೊತೆ ಕರಿದ ಸೋಯಾಬೀನ್‌ಗೆ, ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಹಾಕಿ, ಬಾಣಲೆಯಲ್ಲಿ ಚೆನ್ನಾಗಿ ಮಗುಚಿ (ಖಾರ ಬೇಕಿದ್ದರೆ ಸ್ವಲ್ಪ ಖಾರದ ಪುಡಿಯನ್ನು ಸೇರಿಸಬಹುದು)
– ಸಹನಾ ಕಾರಂತ್, ಕೊಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.