ಕಿವಿಯಲ್ಲಿ ಕಾಸು!
ಹುಡುಗೀರು ಮೆಚ್ಚುವ ಓಲೆ
Team Udayavani, Nov 27, 2019, 4:00 AM IST
ಝಣಝಣ ಕಾಸು ಕಿಸೆಯಲ್ಲಿ ಇರಬೇಕು.. ಅಂತ ಜನ ಬಯಸಿದರೆ, ಹೆಣ್ಮಕ್ಕಳು, ಕಾಸು ಕಿವಿಯ ಮೇಲೂ ಇರಲಿ, ಅಂತ ಬಯಸುತ್ತಿದ್ದಾರೆ. ಕಾಸಿನ ಕಿವಿಯೋಲೆಗಳು ಈಗಿನ ಯುವತಿಯರ ನೆಚ್ಚಿನ ಫ್ಯಾಷನ್…
ಡಾಲರ್ ಅಥವಾ ಕಾಸಿನ ಮಾಲೆ, ಸರ, ಕಿವಿಯೋಲೆ ಇತ್ಯಾದಿಗಳನ್ನು ಮಹಿಳೆಯರು ಬಹಳ ಹಿಂದಿನಿಂದಲೂ ಧರಿಸುತ್ತಾ ಬಂದಿದ್ದಾರೆ. ಕೇವಲ ಭಾರತದಲ್ಲಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಮಹಿಳೆಯರು ಡಾಲರ್ ಮಾದರಿಯ ಆಭರಣಗಳನ್ನು ತೊಡುತ್ತಾರೆ. ಇದೇ ಕಾರಣಕ್ಕೆ ಲಕ್ಷ್ಮಿ ಪೆಂಡೆಂಟ್ ಅನ್ನೂ ಡಾಲರ್ ಎಂದು ಕರೆಯಲಾಗುತ್ತಿತ್ತು. ಈ ಶೈಲಿ ಪುನಃ ಫ್ಯಾಷನ್ ಲೋಕವನ್ನು ಪ್ರವೇಶಿಸಿದೆ. ಇವುಗಳನ್ನು ಲಂಗ, ಪ್ಯಾಂಟ್, ಸೀರೆ, ಶಾರ್ಟ್ಸ್, ಗೌನ್, ಚೂಡಿದಾರ್ ಯಾವುದರ ಜೊತೆಗೂ ತೊಡಬಹುದಾಗಿದೆ! ಇವುಗಳನ್ನು ಪೂಜೆ, ಮದುವೆ, ಹಬ್ಬ, ಆಫೀಸ್, ಕಾಲೇಜು, ಶಾಪಿಂಗ್, ಹಾಲಿಡೇ… ಎಲ್ಲಿಗೆ ಬೇಕಾದರೂ ಧರಿಸಬಹುದು. ಇವುಗಳನ್ನು ಆನ್‌ಲೈನ್ ಮೂಲಕ ತರಿಸುವುದಾದರೆ ಕಾಯಿನ್ ಇಯರ್ ರಿಂಗ್ಸ್ ಎಂದು ಹುಡುಕಿ.
ಕಾಸಿನದ್ದೇ ಸದ್ದು
ಗೆಜ್ಜೆಯಂಥ ಹ್ಯಾಂಗಿಂಗ್ಸ್ ಮತ್ತು ಟ್ಯಾಸೆಲ್ಸ… ಇರುವ ಕಾಸಿನ ಕಿವಿಯೋಲೆ ಈಗ ಹೆಚ್ಚು ಸದ್ದು ಮಾಡುತ್ತಿದೆ. ಬಣ್ಣ ಬಣ್ಣದ ದಾರಗಳಿಂದ ಈ ನಾಣ್ಯಗಳನ್ನು ಪೋಣಿಸಿ, ಉದ್ದನೆಯ ಶಾಂಡೆಲಿಯರ್ ಇಯರ್ ರಿಂಗ್‌ನಂತೆ, ಉಟ್ಟ ಉಡುಪಿಗೆ ತಕ್ಕಂತೆ ಮ್ಯಾಚ್ ಮಾಡಿಕೊಳ್ಳುವ ಆಯ್ಕೆಯೂ ಇದೆ. ನಾಣ್ಯಗಳ ಸುತ್ತ ಮರದ ತುಂಡು, ಗಾಜಿನ ಚೂರು, ಮಣಿ, ಕವಡೆ, ಮುತ್ತು, ಕನ್ನಡಿ ಮತ್ತು ಕಲ್ಲುಗಳನ್ನು ಅಂಟಿಸಿ ಪುಷ್ಪ, ಸೂರ್ಯ, ಚಂದ್ರ, ನಕ್ಷತ್ರದಂಥ ರೂಪ ನೀಡಬಹುದು.
ನಾಣ್ಯಕ್ಕೂ ಹೊಸರೂಪ
ನಾಣ್ಯಗಳು ವೃತ್ತಾಕಾರಕ್ಕೆ ಸೀಮಿತವಾಗದೆ ಚೌಕ, ಪಂಚಕೋನಾಕೃತಿ, ಷಟ್ಕೊನ, ಅಷ್ಟಭುಜ, ಹಾರ್ಟ್ ಶೇಪ್ (ಹೃದಯಾಕಾರ), ಮನೆಯ ಚಿತ್ರ, ಝೊಡಿಯಾಕ್ ಸೈನ್ (ರಾಶಿ ಚಿಹ್ನೆ), ಹಾವು, ಮಿಂಚಿನ ಆಕೃತಿ, ಬಲ್ಬ…, ಬಲೂನ್, ಬೀಗ ಅಥವಾ ಬೀಗದ ಕೈ, ಪಾದರಕ್ಷೆ, ಮುಂತಾದ ಆಕಾರಗಳಲ್ಲೂ ತಯಾರಿಸಲಾಗುತ್ತಿದೆ. ಚಿನ್ನ ಅಥವಾ ಬೆಳ್ಳಿಯ ಕಾಸಿನ ಕಿವಿಯೋಲೆ ಈಗಾಗಲೇ ಇದ್ದರೆ, ಅದಕ್ಕೆ ಬೇಕಾದ ಹೊಸ ವಿನ್ಯಾಸ, ಆಕೃತಿ ನೀಡಿ ಹೊಸ ಲುಕ್ ಪಡಿಯಬಹುದು.
ಡಾಲರ್ ಕಿವಿಯೋಲೆಗೆ ಹೋಲುವಂಥ ಸರ, ಬಳೆಗಳನ್ನು ಒಂದು ಸೆಟ್‌ನಂತೆಯೂ ತೊಡಬಹುದು. ಹಲವು ನಾಣ್ಯಗಳು ಅಥವಾ ನಾಣ್ಯಕ್ಕೆ ಹೋಲುವ ವೃತ್ತಾಕಾರದ ಲೋಹದ ವಸ್ತುಗಳನ್ನು ಜೋಡಿಸಿ ಹೂವಿನ ಆಕೃತಿಯ ಕಿವಿಯೋಲೆಯನ್ನೂ ಮಾಡಿಸಬಹುದು. ನಿಮಗೆ ಬೇಕಾದ ರೀತಿಯ, ವಿನ್ಯಾಸದ, ಆಕಾರದ, ಬಣ್ಣದ ಕಿವಿಯೋಲೆಗಳನ್ನು ಚಿನ್ನದ ಅಂಗಡಿಗಳಲ್ಲಿ ಹೇಳಿ, ಮಾಡಿಸಬಹುದು ಕೂಡ. ಇಲ್ಲವೇ ಆನ್‌ಲೈನ್ ಮೂಲಕ ಕಸ್ಟಮೈಸ್ಡ್ ಆಭರಣಗಳನ್ನು ಖರೀದಿಸಬಹುದು. ಆದರೆ ರೆಡಿಮೇಡ್ ಕಿವಿಯೋಲೆಗೆ ಹೋಲಿಸಿದರೆ ಈ ಕಸ್ಟಮೈಸ್ಡ್ ಕಿವಿಯೋಲೆಗಳು ಸ್ವಲ್ಪ ದುಬಾರಿ. ಜುಮುಕಿ, ಹೂ, ಚಾಂದ್ ಬಾಲಿ, ಅಫ್ಘಾನ್ ಕಿವಿಯೋಲೆ ಮುಂತಾದ ಪ್ರಕಾರದ ಕಿವಿಯೋಲೆಗಳಲ್ಲೂ ಈ ನಾಣ್ಯಗಳನ್ನು ಬಳಸಬಹುದು. ಇಂಥ ಡಾಲರ್ ಜುಮುಕಿಗಳಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯೂ ಇದೆ.
– ಅದಿತಿಮಾನಸ ಟಿ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.