ಮಾತೃ ಹೃದಯಿ : ಮೇ 10 ಅಮ್ಮಂದಿರ ದಿನ
Team Udayavani, May 6, 2020, 10:41 AM IST
ಸಾಂದರ್ಭಿಕ ಚಿತ್ರ
ಮೇ ಎರಡನೇ ಭಾನುವಾರ, ಅಮ್ಮಂದಿರ ದಿನ. ನವಮಾಸ ಹೊತ್ತು, ಹೆತ್ತ ಅಮ್ಮನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆದರೆ, ಈ ಬಾರಿ ನಮ್ಮ ತಾಯಂದಿರಿಗೆ ಮಾತ್ರವಲ್ಲ, ಈ ಜಗತ್ತನ್ನು ಕೋವಿಡ್ ದಿಂದ ಕಾಯುತ್ತಿರುವ ಅಮ್ಮಂದಿರಿಗೂ ಧನ್ಯವಾದ ಹೇಳ್ಳೋಣ. ಈ ಸಂಕಷ್ಟದ ಸಮಯದಲ್ಲಿ, ಕುಟುಂಬಕ್ಕಿಂತ ದೇಶ ಮುಖ್ಯ ಅಂತ ಸೇವೆಗೆ ಇಳಿದಿರುವ ಎಲ್ಲ ತಾಯಂದಿರಿಗೆ ಈ ಅಮ್ಮಂದಿರ ದಿನಾಚರಣೆಯನ್ನು ಮುಡಿಪಾಗಿಡೋಣ.
1. ಮಿನಾಲ್ ದಾಖ್ವೆ ಭೋಸ್ಲೆ
ಭಾರತಕ್ಕೆ ಕೋವಿಡ್ ಕಾಲಿಟ್ಟಾಗ ಸಮಸ್ಯೆ ಎದುರಾಗಿದ್ದು, ಟೆಸ್ಟ್ ಕಿಟ್‌ಗಳದ್ದು. ರೋಗಿಗಳ ತಪಾಸಣೆಗೆ ಅಗತ್ಯವಿದ್ದ ಟೆಸ್ಟ್ ಕಿಟ್‌ಗಳಿಗಾಗಿ, ವಿದೇಶಗಳತ್ತ ನೋಡಬೇಕಾದ ಪರಿಸ್ಥಿತಿ ಇತ್ತು. ಆಗ, ವೈರಸ್ ಪರೀಕ್ಷೆಗೆ ಮೊದಲ ಸ್ವದೇಶಿ ಕಿಟ್ ತಯಾರಿಸಿದ್ದು ಒಬ್ಬ ಗರ್ಭಿಣಿ. ಅವರೇ, ಮಿನಾಲ್ ದಾಖ್ವೆ ಭೋಸ್ಲೆ. ಈಕೆ, ಪುಣೆಯಲ್ಲಿ ವೈರಾಲಜಿಸ್ಟ್ ಕೇವಲ 6 ವಾರದಲ್ಲಿ ಕಿಟ್ ತಯಾರಿಸುವ ಸವಾಲನ್ನ ಸ್ವೀಕರಿಸಿದಾಗ, ಅವರಿಗೆ ಹೆರಿಗೆ ಸಮಯ. ಯಾವುದೇ ಕ್ಷಣದಲ್ಲಿ ಹೆರಿಗೆ ನೋವು ಕಾಣಿಸಿಕೊಳ್ಳಬಹುದಾಗಿದ್ದರೂ, ತನ್ನ ತಂಡದೊಂದಿಗೆ ಹಗಲು ರಾತ್ರಿ ಕಷ್ಟಪಟ್ಟು, ಟೆಸ್ಟ್ ಕಿಟ್ ಸಿದ್ಧಪಡಿಸಿದರು. ಅದನ್ನು ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿದ ಮರುದಿನ ಮಿನಾಲ್ ಮುದ್ದಾದ ಮಗುವಿಗೆ ಜನ್ಮ ನೀಡಿದರು. ಆದರೆ, ನಿಜಾರ್ಥದಲ್ಲಿ ಒಂದು ದಿನ ಮುಂಚಿತವಾಗಿಯೇ ಅವರು ನಮಗೆಲ್ಲ ಅಮ್ಮನಾಗಿದ್ದರು ತಾನೇ?
2. ಮಹಿತಾ ನಾಗರಾಜ್
ಬೆಂಗಳೂರಿನ ಮಹಿತಾ ನಾಗರಾಜ್, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಅಶಕ್ತರ ಸಹಾಯಕ್ಕಾಗಿ ತಂಡವೊಂದನ್ನು ಕಟ್ಟಿದ್ದಾರೆ. “ಕೇರ್ ಮಾಂಗರ್’ ಎಂಬ ಫೇಸ್‌ಬುಕ್ ತಂಡದ
ರೂವಾರಿ ಆಗಿರುವ ಮಹಿತಾ, ಹಿರಿಯರಿಗೆ, ಅಶಕ್ತರಿಗೆ, ಬಾಣಂತಿ, ಗರ್ಭಿಣಿ, ದೈಹಿಕ ನ್ಯೂನತೆ ಹೊಂದಿದವರಿಗೆ ಅಗತ್ಯ ವಸ್ತುಗಳನ್ನು, ಔಷಧಿಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ, ವಿದೇಶದಲ್ಲಿರುವ ಸ್ನೇಹಿತರೊಬ್ಬರು, ಬೆಂಗಳೂರಿನಲ್ಲಿರುವ ತಮ್ಮ ವಯಸ್ಸಾದ ಹೆತ್ತವರಿಗೆ ಅಗತ್ಯ ವಸ್ತುಗಳನ್ನು ತಲುಪಿಸುವಂತೆ, ಮಹಿತಾರನ್ನು ಕೇಳಿಕೊಂಡರಂತೆ. ಆಗ ಅವರಿಗೆ, ಇದೇ ರೀತಿ ಸಂಕಷ್ಟದಲ್ಲಿರುವ ಎಲ್ಲರಿಗೂ ಸಹಾಯ ಮಾಡಬೇಕು ಅನ್ನಿಸಿತಂತೆ. ಈ ತಾಯಿ ಮನಸ್ಸಿಗೆ, ಒಂದು ಥ್ಯಾಂಕ್ಸ್ ಹೇಳದೇ ಇರಲು ಸಾಧ್ಯವೇ?
3. ಜಿ. ಶ್ರೀಜನಾ
ಹೆರಿಗೆಯ ನಂತರ, ತಾಯಿಗೆ ಹೆಚ್ಚಿನ ಆರೈಕೆ ಬೇಕಾಗುತ್ತೆ. ಒಂದು ಜೀವ ಎರಡಾದ ನೋವು, ಸುಸ್ತು ಮಾಯಲು ತಿಂಗಳು ಗಟ್ಟಲೆ ಸಮಯ ಬೇಕು. ಆದರೆ, ದೇಹದ ನೋವನ್ನು ಮರೆತು, ದೇಶದ ನೋವಿಗೆ ನೆರವಾಗಲು ಮುಂದಾದವರು ಐಎಎಸ್ ಅಧಿಕಾರಿ ಜಿ. ಶ್ರೀಜನಾ. ವಿಶಾಖಪಟ್ಟಣಂನ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಕಮಿಷನರ್ ಆಗಿರುವ ಶ್ರೀಜನಾ, ಹೆರಿಗೆಯಾದ 22ನೇ ದಿನಕ್ಕೆ ಕರ್ತವ್ಯಕ್ಕೆ ಮರಳುವ ಮೂಲಕ, ಕೋವಿಡ್ ವಿರುದಟಛಿದ ಹೋರಾಟಕ್ಕೆ ಧುಮುಕಿದ್ದಾರೆ. ಶ್ರೀಜನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಸ್ವಲ್ಪ ದಿನದಲ್ಲೇ, ದೇಶಾದ್ಯಂತ ಲಾಕ್ ಡೌನ್ ಘೋಷಣೆಯಾಯ್ತು. ಹೀಗಾಗಿ, ಸ್ಥಳೀಯ ಆಡಳಿತಗಳ ಮೇಲೆ ಹೆಚ್ಚಿನ ಜವಾಬ್ದಾರಿ ಬಿತ್ತು. ಇದನ್ನು ಅರಿತ ಶ್ರೀಜನಾ, ಮಡಿಲಿನಲ್ಲಿ ಕಂದನನ್ನು ಕಟ್ಟಿಕೊಂಡು
ಕರ್ತವ್ಯಕ್ಕೆ ಮರಳಿದ್ದಾರೆ. ಇದನ್ನೇ ತಾನೇ ತಾಯಿ ಹೃದಯ ಅನ್ನೋದು!
ವೈದ್ಯೆಯರು, ದಾದಿಯರು, ಪೊಲೀಸರು
ಹೆಸರು ಹೇಳಲಾಗದಷ್ಟು, ಲೆಕ್ಕ ಹಾಕಲಾಗದಷ್ಟು ವೈದ್ಯೆಯರು, ದಾದಿಯರು, ಪೊಲೀಸರು, ಆಶಾ ಕಾರ್ಯಕರ್ತೆಯರು ತಮ್ಮ ಮನೆ- ಮಕ್ಕಳನ್ನು ಮರೆತು, ವೈರಸ್ ವಿರುದ್ಧ ಸೆಣಸುತ್ತಿದ್ದಾರೆ. ಹಗಲು-ರಾತ್ರಿ ಎನ್ನದೆ ದುಡಿಯುತ್ತಿರುವ ಇವರ ತ್ಯಾಗ, ಸಹನೆಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ತಾಯಿ ತನ್ನ ಮಕ್ಕಳನ್ನು ಕಾಪಾಡುವಂತೆ, ಸಮಾಜದ ಶಾಂತಿ, ಸ್ವಾಸ್ಥ್ಯ ಕಾಪಾಡುವ ಇವರೆಲ್ಲರಿಗೂ ಋಣಿಗಳಾಗಿರೋಣ.
5. ಮಹಾಮಾತೆಯರು
ಯಾವುದೇ ಕಷ್ಟ ಎರಗಿ ಬಂದರೂ, ಸಹಾಯಕ್ಕೆ ಮುಂದಾಗುವ ಇನ್ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ, ಅದಮ್ಯ ಚೇತನದ ತೇಜಸ್ವಿನಿ ಅನಂತ್
ಕುಮಾರ್ ಅಂಥವರನ್ನು ನೆನೆಯದೇ ಇರಲು ಸಾಧ್ಯವೇ? ಕೈ ಚಾಚುವ ಮುನ್ನವೇ ಸಹಾಯಕ್ಕೆ ಧಾವಿಸುವ ಇವರದ್ದು ನಿಜಕ್ಕೂ ಮಾತೃ ಹೃದಯವೇ. ಇಂಥ ಮಹಾಮಾತೆಯರ ಸಂಖ್ಯೆ ಇನ್ನಷ್ಟು ಹೆಚ್ಚಲಿ. ಇವರಿಗೆ ದೇವರು ಒಳಿತು ಮಾಡಲಿ ಎಂದು ಹಾರೈಸೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.